ಹೊಸ ಮನೆಗೆ ಕಾಲಿಟ್ಟ ಪ್ರತಿಭಾನ್ವಿತ ನಟಿ ಅಕ್ಷತಾ ಪಾಂಡವಪುರ; ಗೃಹಪ್ರವೇಶದ ಫೋಟೋಗಳು ಇಲ್ಲಿವೆ ನೋಡಿ
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ ಅಕ್ಷತಾ ಪಾಂಡವಪುರ ಒಂದು ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅದೇನಪ್ಪ ಅಂದರೆ, ಅವರು ಬೆಂಗಳೂರಿನಲ್ಲಿ ಒಂದು ಸ್ವಂತ ಗೂಡೊಂದನ್ನು ಕಟ್ಟಿಕೊಂಡಿದ್ದಾರೆ. ಅರ್ಥಾತ್ ಹೊಸ ಮನೆಯನ್ನು ಖರೀದಿ ಮಾಡಿದ್ದು, ಅದರ ಗೃಹಪ್ರವೇಶವನ್ನು ಈಚೆಗೆ ಮಾಡಿದ್ದಾರೆ. ರಂಗಭೂಮಿ ಮತ್ತು ಚಿತ್ರರಂಗ ಎರಡರಲ್ಲೂ ಸಕ್ರಿಯವಾಗಿರುವ ಅಕ್ಷತಾ, ಮೂಲತಃ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನವವರು. ಹೆಗ್ಗೋಡಿನ ನೀನಾಸಂನಲ್ಲಿ ತರಬೇತಿ ಪಡೆದು ನಂತರ, ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲೂ ಕಲಿತು ಬಂದಿರುವ ಅಕ್ಷತಾ, ಗಮನಾರ್ಹ ಸಿನಿಮಾಗಳಿಂದ ಗುರುತಿಸಿಕೊಂಡಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಸ್ವಂತ ಸೂರು ಮಾಡಿಕೊಂಡ ಖುಷಿಯಲ್ಲಿದ್ದಾರೆ ಅಕ್ಷತಾ ಮತ್ತು ಪ್ರಸನ್ನ ದಂಪತಿ. ಇಲ್ಲಿವೆ ನೋಡಿ ಗೃಹಪ್ರವೇಶ ಸಮಾರಂಭದ ಫೋಟೋಗಳು.
-
Avinash GR
Mar 31, 2026 5:36 PM
1/5
‘ಕೋಳಿ ಎಸ್ರು’ ಸಿನಿಮಾಗೆ ಪ್ರತಿಷ್ಠಿತ ‘ಫಿಲ್ಮ್ ಫೇರ್ʼ ಪ್ರಶಸ್ತಿಯನ್ನು ಈಚೆಗೆ ಅಕ್ಷತಾ ಪಡೆದುಕೊಂಡಿದ್ದಾರೆ
2/5
ತಮ್ಮ ಪತಿ ಪ್ರಸನ್ನ ಮತ್ತು ಮಗಳು ಗೀಯಾ ಜೊತೆ ನಟಿ ಅಕ್ಷತಾ ಪಾಂಡವಪುರ ಹೊಸ ಮನೆ ಪ್ರವೇಶ ಮಾಡಿದ ಕ್ಷಣ.
3/5
‘ಪಿಂಕಿ ಎಲ್ಲಿ’ ಮತ್ತು ‘ಪಲ್ಲಟ’ ಚಿತ್ರಗಳಲ್ಲಿನ ನಟನೆಗಾಗಿ ಅವರು ಎರಡು ಬಾರಿ ‘ರಾಜ್ಯ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ ಅಕ್ಷತಾ.
4/5
ಬೆಂಗಳೂರಿನಲ್ಲಿ ತಮ್ಮ ಕನಸಿನ ಸ್ವಂತ ಮನೆಯನ್ನು ನಿರ್ಮಿಸಿಕೊಳ್ಳುವ ಮೂಲಕ ವೈಯಕ್ತಿಕ ಬದುಕಿನಲ್ಲೂ ದೊಡ್ಡ ಸಾಧನೆ ಮಾಡಿದ್ದಾರೆ. ಹಳ್ಳಿಯಿಂದ ಬಂದ ಪ್ರತಿಭೆಯೊಂದು ತನ್ನ ಪರಿಶ್ರಮ ಮತ್ತು ಕಲೆಯ ಮೂಲಕ ಇಷ್ಟೆಲ್ಲಾ ಸಾಧಿಸಿರುವುದು ಅನೇಕರಿಗೆ ಸ್ಫೂರ್ತಿಯಾಗಿದೆ.
5/5
ಸೋಶಿಯಲ್ ಮೀಡಿಯಾದಲ್ಲಿ ‘ಬೆಂಗಳೂರಿನಲ್ಲೊಂದು ಪುಟ್ಟಗೂಡು’ ಎಂದು ಕ್ಯಾಪ್ಶನ್ ಬರೆದು ಶೇರ್ ಮಾಡಿರುವ ಅಕ್ಷತಾ, ತಮ್ಮ ಮನೆಗೆ ಸಂಕ್ರಾಂತಿ ಎಂದು ಹೆಸರನ್ನು ಇಟ್ಟಿದ್ದಾರೆ.