Winter Fashion 2025: ಬ್ಲ್ಯಾಕ್ ಕೋ ಆರ್ಡ್ ಸ್ಕರ್ಟ್ ಜತೆಯಾದ ಸೂಟ್ ಲುಕ್
Latest Fashion Trends: ಇತ್ತ ಸೂಟ್ ಅಲ್ಲ, ಅತ್ತ ಕಂಪ್ಲೀಟ್ ಸ್ಕರ್ಟ್ ಸೆಟ್ಟೂ ಅಲ್ಲ! ಆ ರೀತಿಯ ಕೋ ಆರ್ಡ್ ಸ್ಕರ್ಟ್ ಜತೆ ಸೂಟ್ ಲುಕ್ನಲ್ಲಿ ಕಾಣಿಸಿಕೊಂಡಿರುವ ನಟಿ ಶೆಫಾಲಿ ಷಾ ಫ್ಯಾಷನ್ ಸ್ಟೇಟ್ಮೆಂಟ್ ಈಗಾಗಲೇ ಕಾರ್ಪೋರೇಟ್ ಕ್ಷೇತ್ರದಲ್ಲಿ ಟ್ರೆಂಡಿಯಾಗಿದೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.
ಬ್ಲ್ಯಾಕ್ ಕೋ ಆರ್ಡ್ ಸ್ಕರ್ಟ್ನಲ್ಲಿ ನಟಿ ಶೆಫಾಲಿ ಷಾ, ಫೋಟೋಗ್ರಾಫಿ: ನೂಪುರ್ ಅಗರ್ವಾಲ್ -
ಕೋ ಆರ್ಡ್ ಸ್ಕರ್ಟ್ ಜತೆ ಸೂಟ್ ಲುಕ್ ಜತೆಯಾಗುವ ಫ್ಯಾಷನ್ ಇತ್ತೀಚೆಗೆ ಸಾಮಾನ್ಯವಾಗತೊಡಗಿದೆ. ಹೌದು, ಇತ್ತ ಕಂಪ್ಲೀಟ್ ಸೂಟ್ ಲುಕ್ಕು ಅಲ್ಲ, ಅತ್ತ ಕಂಪ್ಲೀಟ್ ಸ್ಕರ್ಟ್ ಸೆಟ್ಟೂ ಅಲ್ಲ! ಆ ರೀತಿಯ ಕೋ ಆರ್ಡ್ ಸ್ಕರ್ಟ್ ಜತೆ ಸೂಟ್ ಲುಕ್ ಅಥವಾ ಬ್ಲೇಜರ್/ಜಾಕೆಟ್ ಮ್ಯಾಚ್ ಮಾಡುವಂತಹ ಫ್ಯಾಷನ್ ಇತ್ತೀಚೆಗೆ ಕಾರ್ಪೋರೇಟ್ ಕ್ಷೇತ್ರದ ಮಾನಿನಿಯರ ಡ್ರೆಸ್ಕೋಡ್ಗೆ ಸೇರಿದೆ. ಟ್ರೆಂಡಿಯಾಗಿದೆ.
ಶೆಫಾಲಿ ಷಾ ಕೋ ಆರ್ಡ್ ಸ್ಕರ್ಟ್ ಸೂಟ್ ಲುಕ್
ಇದಕ್ಕೆ ನಿದರ್ಶನ ಎಂಬಂತೆ, ನಟಿ ಶೆಫಾಲಿ ಷಾ ಇವೆಂಟ್ವೊಂದರಲ್ಲಿ ಧರಿಸಿರುವ ಬ್ಲ್ಯಾಕ್ ಶೇಡ್ನ ಕೋ ಆರ್ಡ್ ಸ್ಕರ್ಟ್ ಸೂಟ್ ಫ್ಯಾಷನ್ ಕಾರ್ಪೋರೇಟ್ ಮಾನಿನಿಯರ ಡ್ರೆಸ್ಕೋಡನ್ನು ಪ್ರತಿಬಿಂಬಿಸಿದೆ. ಅಂದಹಾಗೆ, ಶೆಫಾಲಿ ಷಾ, ಒಂದೇ ಶೇಡ್ನ ಡ್ರೆಸ್ಕೋಡನ್ನು ಮಿಕ್ಸ್ ಮ್ಯಾಚ್ ಮಾಡಿ ಧರಿಸಿರುವುದು ಥೇಟ್ ಕೋ ಆರ್ಡ್ ಸ್ಕರ್ಟ್ ಸೂಟ್ ಲುಕ್ಗೆ ಸಾಥ್ ನೀಡಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಸ್ಯಾಟಿನ್ ಸ್ಕರ್ಟ್ಗೆ ಬ್ಲೇಜರ್/ಜಾಕೆಟ್
ಶೆಫಾಲಿ ಷಾ ತಮ್ಮ ಬ್ಲ್ಯಾಕ್ ಇನ್ನರ್ಟಾಪ್ ಹಾಗೂ ಸ್ಯಾಟಿನ್ ಸ್ಕರ್ಟ್ಗೆ ಬ್ಲೇಜರ್ ಮ್ಯಾಚ್ ಮಾಡಿರುವುದು ಕಾರ್ಪೋರೇಟ್ ಲುಕ್ ನೀಡಿದೆ. ಬ್ಲೇಜರ್ಗೆ ಪ್ಯಾಂಟ್ ಮ್ಯಾಚ್ ಮಾಡುವ ಬದಲು ಸ್ಕರ್ಟ್ ಧರಿಸಿರುವುದು ರೆಗ್ಯುಲರ್ ಸೂಟ್ ಲುಕ್ಗೆ ಬದಲಾಗಿ ಸ್ಕರ್ಟ್ ಸೂಟ್ ಲುಕ್ ಕಲ್ಪಿಸಿದೆ ಎಂದಿದ್ದಾರೆ ಫ್ಯಾಷನ್ ವಿಮರ್ಶಕರು.
ಕೋ ಆರ್ಡ್ ಸ್ಕರ್ಟ್ ಜತೆ ಸೂಟ್ ಲುಕ್ ಜತೆಯಾಗುವ ಫ್ಯಾಷನ್ ಇತ್ತೀಚೆಗೆ ಸಾಮಾನ್ಯವಾಗತೊಡಗಿದೆ. ಇತ್ತ ಸೂಟ್ ಅಲ್ಲ, ಅತ್ತ ಕಂಪ್ಲೀಟ್ ಸ್ಕರ್ಟ್ ಸೆಟ್ಟೂ ಅಲ್ಲ. ಆ ರೀತಿಯ ಕೋ ಆರ್ಡ್ ಸ್ಕರ್ಟ್ ಜತೆ ಸೂಟ್ ಲುಕ್ನಲ್ಲಿ ಕಾಣಿಸಿಕೊಂಡಿರುವ ನಟಿ ಶಫಾಲಿ ಷಾ ಫ್ಯಾಷನ್ ಸ್ಟೇಟ್ಮೆಂಟ್ ಈಗಾಗಲೇ ಕಾರ್ಪೋರೇಟ್ ಕ್ಷೇತ್ರದಲ್ಲಿ ಟ್ರೆಂಡಿಯಾಗಿದೆ.
ನೀವೂ ಈ ರೀತಿ ಸ್ಟೈಲಿಂಗ್ ಮಾಡಬಹುದು
ಇನ್ನು, ಶೆಫಾಲಿ ಷಾ ಮಾಡಿರುವ ಈ ಸ್ಟೈಲಿಂಗನ್ನು ನೀವೂ ಕೂಡ ಮಾಡಬಹುದು. ಅದಕ್ಕೆ ಬ್ಲ್ಯಾಕ್ ಶೇಡ್ ಆಗಬೇಕು ಎಂದೇನಿಲ್ಲ! ಬದಲಿಗೆ ವೈಬ್ರೆಂಟ್ ಶೇಡ್ ಆಯ್ಕೆ ಮಾಡಿಕೊಳ್ಳಬಹುದು. ಇಲ್ಲವೇ ಮಿಕ್ಸ್ ಮ್ಯಾಚ್ ಕಲರ್ನದ್ದನ್ನೂ ಚೂಸ್ ಮಾಡಬಹುದು. ಕೋ ಆರ್ಡ್ ಸೂಟ್ ಲುಕ್ಗೆ ಮಾತ್ರ ಎಲ್ಲವೂ ಒಂದೇ ಬಣ್ಣದ್ದಾಗಿರಬೇಕು ಎನ್ನುತ್ತಾರೆ ಫ್ಯಾಷನ್ ಸಲಹೆಗಾರರು.