Winter Fashion 2025: ಚಳಿಗಾಲಕ್ಕೆ ಜತೆಯಾದ ಸ್ಟೈಲಿಶ್ ಟ್ರೆಂಚ್ ಕೋಟ್ಗಳಿವು
Winter Fashion: ಈ ಮೊದಲು ವಿದೇಶಿ ಫ್ಯಾಷನ್ನಲ್ಲಿ ಸೀಮಿತವಾಗಿದ್ದ ವೈವಿಧ್ಯಮಯ ಟ್ರೆಂಚ್ ಕೋಟ್ಗಳು, ಇದೀಗ ನಮ್ಮಲ್ಲೂ ಟ್ರೆಂಡಿಯಾಗಿವೆ. ಟ್ರೆಂಚ್ ಕೋಟ್ಗಳು ನೋಡಲು ಒಂದೇ ಬಗೆಯದ್ದಾಗಿ ಕಾಣುತ್ತವಾದರೂ ಸ್ಟಿಚ್ಚಿಂಗ್ ನಾನಾ ಶೈಲಿಯಲ್ಲಿರುತ್ತವೆ. ಸ್ಲೀಕ್ ಲುಕ್, ಫಾರ್ಮಲ್ ಬ್ಲೇಜರ್ ಸ್ಟೈಲ್ನಲ್ಲೂ ದೊರಕುತ್ತವೆ. ವಿಂಟರ್ಗೆ ಹೊಸ ಲುಕ್ ಮೂಡಿಸುತ್ತವೆ. ಸಿಂಪಲ್ ಟಾಪ್ ಧರಿಸಿದರೇ ಸಾಕು, ಇನ್ನು, ವಿಂಟೇಜ್ ಹಾಗೂ ರಾಯಲ್ ಕಲರ್ಗಳ ಟ್ರೆಂಚ್ ಕೋಟ್ಗಳು ಎಂತಹವರಿಗೂ ಕ್ಲಾಸಿ ಲುಕ್ ನೀಡುತ್ತವೆ. ಯಾವ್ಯಾವ ಬಗೆಯವು ಚಾಲ್ತಿಯಲ್ಲಿವೆ. ಸ್ಟೈಲಿಂಗ್ ಹೇಗೆ? ಎಂಬುದರ ಬಗ್ಗೆ ಫ್ಯಾಷನಿಸ್ಟಾಗಳು ವಿವರಿಸಿದ್ದಾರೆ.
                                ಚಿತ್ರ ಕೃಪೆ: ಪಿಕ್ಸೆಲ್ -
                                
                                ಶೀಲಾ ಸಿ ಶೆಟ್ಟಿ
                            
                                Nov 4, 2025 6:00 AM
                            
                    ಚಳಿಗಾಲಕ್ಕೆ ಸ್ಟೈಲಿಶ್ ಟ್ರೆಂಟ್ ಕೋಟ್ಗಳು ಟ್ರೆಂಡಿಯಾಗಿವೆ. ಧರಿಸಿದರೆ ಬೆಚ್ಚಗಿನ ಅನುಭವ. ನೋಡಲು ಕೋಟ್ನಂತಿದ್ದರೂ ಅದು ಸಾಮಾನ್ಯವಾದ ಕೋಟ್ ಅಲ್ಲ. ಕೆಲವು ಫರ್ನಿಂದ ಕಾಲರ್ ಆವೃತಗೊಂಡಿದ್ದರೆ, ಕೆಲವು ಸದಾ ಡಿಸೈನ್ನಲ್ಲೆ ರೆಡಿಯಾಗಿರುತ್ತವೆ. ಇನ್ನು ಕೆಲವು ರೆಕ್ಕೆ ಪುಕ್ಕದಂತಹ ವಿನ್ಯಾಸವನ್ನೊಳಗೊಂಡಿರುತ್ತವೆ. ಇನ್ನು ವಿಂಟೇಜ್ ಬಟನ್ಗಳು ಇಡೀ ಕೋಟ್ನ ಲುಕ್ಗೆ ಮಾಡರ್ನ್ ಟಚ್ ನೀಡಿರುತ್ತವೆ. ಇನ್ನು ಕೆಲವು ಸೊಂಟದ ಭಾಗದಲ್ಲಿ ಬೆಲ್ಟ್ ಹೊಂದಿರುತ್ತವೆ. ಸದ್ಯ ಸೆಲೆಬ್ರೆಟಿಗಳ ಮೆಚ್ಚಿನ ವಿಂಟರ್ ಫ್ಯಾಷನ್ ಟಾಪ್ ಲಿಸ್ಟ್ಗೆ ಸೇರಿವೆ ಎನ್ನುತ್ತಾರೆ ಸ್ಟೈಲಿಸ್ಟ್ಸ್.
                    ಟ್ರೆಂಚ್ ಕೋಟ್ ವೆರೈಟಿ
ಟ್ರೆಂಚ್ ಕೋಟ್ಗಳು ನೋಡಲು ಒಂದೇ ಬಗೆಯದ್ದಾಗಿ ಕಾಣುತ್ತವಾದರೂ ಸ್ಟಿಚ್ಚಿಂಗ್ ನಾನಾ ಶೈಲಿಯಲ್ಲಿರುತ್ತವೆ. ಸ್ಲೀಕ್ ಲುಕ್, ಫಾರ್ಮಲ್ ಬ್ಲೇಜರ್ ಸ್ಟೈಲ್ನಲ್ಲೂ ದೊರಕುತ್ತವೆ. ವಿಂಟರ್ಗೆ ಹೊಸ ಲುಕ್ ಮೂಡಿಸುತ್ತವೆ. ಸಿಂಪಲ್ ಟಾಪ್ ಧರಿಸಿದರೇ ಸಾಕು, ಇನ್ನು, ವಿಂಟೇಜ್ ಹಾಗೂ ರಾಯಲ್ ಕಲರ್ಗಳ ಟ್ರೆಂಚ್ ಕೋಟ್ಗಳು ಎಂತಹವರಿಗೂ ಕ್ಲಾಸಿ ಲುಕ್ ನೀಡುತ್ತವೆ.
                    ಸ್ಟೈಲಿಶ್ ಆಗಿ ಬಿಂಬಿಸುವ ಟ್ರೆಂಚ್ಕೋಟ್ಸ್
ಟ್ರೆಂಚ್ ಕೋಟ್ಗಳನ್ನು ಧರಿಸುವವರು ಆದಷ್ಟೂ ಬ್ರಿಥಬಲ್ ಅಥವಾ ತೆಳುವಾದ ಇನ್ನರ್ ಟಾಪ್ ಆಯ್ಕೆ ಮಾಡಿಕೊಳ್ಳಬೇಕು. ಪ್ಯಾಂಟ್ ಕೋಟ್ಗೆ ಹೊಂದುವಂತಿರಬೇಕು. ಬಣ್ಣವಷ್ಟೇ ಅಲ್ಲ, ಮೆಟೀರಿಯಲ್ ಕೂಡ ಮ್ಯಾಚ್ ಆಗಬೇಕು. ಇವುಗಳೊಂದಿಗೆ ಆದಷ್ಟು ಹೈ ಹೀಲ್ಸ್ ಹಾಗೂ ಶೂಗಳನ್ನು ಧರಿಸುವುದು ಉತ್ತಮ ಎಂದು ಸಲಹೆ ನೀಡುತ್ತಾರೆ ಮಾಡೆಲ್ ದೀಪ್ತಿ.
                    ದೇಸಿ ಲುಕ್ ಜತೆ ಟ್ರೆಂಚ್ ಕೋಟ್ ಸ್ಟೈಲಿಂಗ್
ಸೀರೆ ಜತೆಗಾದಲ್ಲಿ ಟ್ರೆಂಚ್ ಕೋಟ್ ಸಿಂಪಲ್ ಆಗಿರಬೇಕು. ಸೆಲ್ವಾರ್ ಜತೆಗಾದಲ್ಲಿ ಮ್ಯಾಚ್ ಆಗಬೇಕು. ದುಪಟ್ಟಾ ಬೇಡ. ಸ್ಟೋಲ್ ಬಳಸುವುದು ಉತ್ತಮ.
                    ಟ್ರೆಂಚ್ ಕೋಟ್ ಸೀಕ್ರೇಟ್ಸ್
* ಉದ್ದಗಿರುವವರಿಗೆ ಯಾವುದೇ ಬಗೆಯ ಟ್ರೆಂಚ್ ಕೋಟ್ ಆದರೂ ಸೂಟ್ ಆಗುತ್ತವೆ.
* ಪ್ಲಂಪಿಯಾಗಿರುವವರು ಡಿಸೈನರ್ ಕೋಟ್ ಧರಿಸುವುದು ಉತ್ತಮ. ಇಲ್ಲವಾದಲ್ಲಿ ಮತ್ತಷ್ಟು ಗುಂಡುಗುಂಡಾಗಿ ಕಾಣಿಸುವ ಸಾಧ್ಯತೆಯೇ ಹೆಚ್ಚು.
* ಚಳಿಗಾಲದಲ್ಲಿಹೊರಗಡೆ ಹೋಗುವಾಗ ಬೆಸ್ಟ್ ಅಪ್ಷನ್.
* ಇವುಗಳ ಜೊತೆ ತೀರಾ ಸಿಂಪಲ್ ಆಕ್ಸೆಸರೀಸ್ ಧರಿಸಿ.
* ಪ್ರಿಂಟೆಡ್ ಕೋಟ್ಗಳು ಟ್ರೆಂಡಿಯಾಗಿಲ್ಲ.
* ಫಿಟ್ಟಿಂಗ್ ಇದ್ದರೇ ಮಾತ್ರ ಎಲ್ಲರಿಗೂ ಸೂಟ್ ಆಗುತ್ತವೆ.