ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರಾಜ್ಯ ರಾಜಕಾರಣಕ್ಕೆ ಕುಮಾರಸ್ವಾಮಿ ರೀ ಎಂಟ್ರಿ?; ಟಾಕ್ಸಿಕ್‌ ಸ್ಟೈಲ್‌ನಲ್ಲಿ ಎಚ್‌ಡಿಕೆ ವಿಡಿಯೋ ರಿಲೀಸ್‌!

HD Kumaraswamy: ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾದ ಬಳಿಕ ರಾಜ್ಯ ರಾಜಕಾರಣದಲ್ಲಿ ಮೊದಲಿನಂತೆ ಸಕ್ರಿಯವಾಗಿಲ್ಲ. ಇದೀಗ ಜೆಡಿಎಸ್ ಟಾಕ್ಸಿಕ್ ಸಿನಿಮಾದ ಟೀಸರ್ ರೀತಿಯಲ್ಲೇ ಎಐ ವಿಡಿಯೋವೊಂದನ್ನು ಹಂಚಿಕೊಂಡು ಕುಮಾರಸ್ವಾಮಿ ಅವರು 2028ಕ್ಕೆ ಮತ್ತೆ ರಾಜ್ಯ ರಾಜಕೀಯಕ್ಕೆ ಬರಲಿದ್ದಾರೆ ಎಂದು ಜೆಡಿಎಸ್‌ ಅಭಿಮಾನಿಗಳು ಸುಳಿವು ನೀಡಿದ್ದಾರೆ.

ರಾಜ್ಯ ರಾಜಕಾರಣಕ್ಕೆ ಎಚ್‌ಡಿಕೆ; ಟಾಕ್ಸಿಕ್‌ ಸ್ಟೈಲ್‌ನಲ್ಲಿ ವಿಡಿಯೋ!

ಟಾಕ್ಸಿಕ್‌ ಸ್ಟೈಲ್‌ ಎಐ ವಿಡಿಯೋದಲ್ಲಿ ಎಚ್‌.ಡಿ.ಕುಮಾರಸ್ವಾಮಿ. -

Prabhakara R
Prabhakara R Jan 10, 2026 3:14 PM

ಬೆಂಗಳೂರು: ನಟ ಯಶ್ ಅಭಿನಯದ ಟಾಕ್ಸಿಕ್ ಚಿತ್ರದ (Toxic Movie) ಟೀಸರ್ ಸದ್ಯ ಯೂಟ್ಯೂಬ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸುತ್ತಿದೆ. ಇನ್ನು ರಾಕಿಂಗ್‌ ಸ್ಟಾರ್‌ ಸ್ಟೈಲ್‌ಗೆ ಫಿದಾ ಆಗಿರುವ ಫ್ಯಾನ್ಸ್‌ ವಿವಿಧ ರೀತಿಯಲ್ಲಿ ಈ ವಿಡಿಯೋವನ್ನು ಎಡಿಟ್‌ ಮಾಡಿ ಹಂಚಿಕೊಳ್ಳುತ್ತಿದ್ದಾರೆ. ಈ ನಡುವೆ ಟಾಕ್ಸಿಕ್‌ ಸ್ಟೈಲ್‌ನಲ್ಲಿ ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಅವರ ವಿಡಿಯೋವನ್ನು ಅಭಿಮಾನಿಗಳು ಹರಿಬಿಟ್ಟಿದ್ದು, ಅವರು ರಾಜ್ಯ ರಾಜಕಾರಣಕ್ಕೆ ವಾಪಸ್‌ ಆಗಲಿದ್ದಾರೆ ಎಂಬ ಸುಳಿವು ನೀಡಲಾಗಿದೆ.

ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾದ ಬಳಿಕ ರಾಜ್ಯ ರಾಜಕಾರಣದಲ್ಲಿ ಮೊದಲಿನಂತೆ ಸಕ್ರಿಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಅವರು ಮತ್ತೆ ರಾಜ್ಯ ರಾಜಕೀಯಕ್ಕೆ ಬರಬೇಕು ಎಂದು ಅಭಿಮಾನಿಗಳು, ಕಾರ್ಯಕರ್ತರು ಬಯಸುತ್ತಿದ್ದಾರೆ. ಅದರಂತೆ ಟಾಕ್ಸಿಕ್ ಸಿನಿಮಾದ ಟೀಸರ್ ರೀತಿಯಲ್ಲೇ ಎಐ ವಿಡಿಯೋವೊಂದನ್ನು ಜೆಡಿಎಸ್‌ ಕಾರ್ಯಕರ್ತರು ಹಂಚಿಕೊಂಡು, ಕುಮಾರಸ್ವಾಮಿ ಅವರು 2028ಕ್ಕೆ ಮತ್ತೆ ರಾಜ್ಯ ರಾಜಕೀಯಕ್ಕೆ ಬರುವ ಸುಳಿವನ್ನು ರಿವೀಲ್ ಮಾಡಲಾಗಿದೆ.

ಟಾಕ್ಸಿಕ್‌ ಸ್ಟೈಲ್‌ ಕುಮಾರಸ್ವಾಮಿ ವಿಡಿಯೋ



ವಿಡಿಯೋದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ನಾವು ಈ ರಾಜ್ಯವನ್ನು ಸೈಲೆಂಟ್‌ ಆಗಿ ಲೂಟಿ ಮಾಡಲು ಬಯಸುತ್ತೇವೆ ಎನ್ನುತ್ತಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು, ಆತ (ಎಚ್‌ಡಿಕೆ) ರಾಜ್ಯ ರಾಜಕಾರಣಕ್ಕೆ ಬರುವ ಬಗ್ಗೆ ನೀವು ಯೋಚಿಸಿದ್ದೀರಾ ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಡಿಕೆಶಿ, ಇಲ್ಲಾ ಎನ್ನುತ್ತಾರೆ. ಈ ವೇಳೆ ಎಚ್‌ಡಿಕೆ ರಾಯಲ್‌ ಎಂಟ್ರಿ ನೀಡುತ್ತಾರೆ. ಆಗ ಇವರು ಇಲ್ಲಿಗೆ ಬರಬಾರದಿತ್ತು ಎಂದು ಡಿಕೆ ಶಿವಕುಮಾರ್ ಹೇಳುತ್ತಾರೆ. ಕೊನೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಡ್ಯಾಡಿ ಈಸ್ ಹೋಂ ಎಂದು ಡೈಲಾಗ್ ಹೇಳುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಈ ವಿಡಿಯೋವನ್ನು ಹಂಚಿಕೊಂಡು ರಾಜ್ಯ ಕಾಂಗ್ರೆಸ್‌ ನಾಯಕರಿಗೆ ಜೆಡಿಎಸ್‌ ಕಾರ್ಯಕರ್ತರು ಟಾಂಗ್ ನೀಡಿದ್ದಾರೆ.

Toxic: ರಾಯನ ಮುಂದೆ ಅಬ್ಬರಿಸಿದ ಆ ಹಾಲಿವುಡ್‌ ವಿಲನ್‌ ಯಾರು ಗೊತ್ತಾ? ಯಶ್‌ಗೆ ಥ್ಯಾಂಕ್ಸ್‌ ಹೇಳಿದ್ದೇಕೆ ಈ ನಟ?

ಮುಂದಿನ ವಿಧಾನಸಭೆ ವೇಳೆ ಎಚ್‌.ಡಿ.ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗಿದ್ದು, ಇದರಿಂದ ಅವರ ಬೆಂಬಲಿಗರು ಖುಷಿಯಾಗಿದ್ದಾರೆ.