Land Records: ಭೂದಾಖಲೆಗಳ ನಕಲು ವಿತರಣೆ ಶುಲ್ಕ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ
ಭೂಮಾಪನ ಇಲಾಖೆಯಲ್ಲಿ ನೀಡಲಾಗುವ ದಾಖಲೆಗಳ ನಕಲುಗಳಿಗೆ ಏಕರೂಪದ ನಕಲು ಶುಲ್ಕ ಪಾವತಿ ಮಾಡಿಸಿಕೊಳ್ಳಲು ದರ ಪರಿಷ್ಕರಣೆ ಮಾಡಲಾಗಿದೆ ಎಂದು ಇಲಾಖೆಯ ಆಯುಕ್ತರ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಪರಿಷ್ಕೃತ ದರಗಳಂತೆ ಯಾವ ನಮೂನೆಗೆ ಎಷ್ಟು ದರ ವಸೂಲು ಮಾಡಲಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.
-
Prabhakara R
May 11, 2026 11:24 PM
ಬೆಂಗಳೂರು: ಭೂಮಾಪನ ಇಲಾಖೆಯಲ್ಲಿ ಮೂಲ ದಾಖಲೆಯ ನಕಲುಗಳ ವಿತರಣೆಯ ಶುಲ್ಕಗಳನ್ನು ರಾಜ್ಯ ಸರ್ಕಾರ ಪರಿಷ್ಕರಣೆ ಮಾಡಿದೆ. ಈ ಬಗ್ಗೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಆಯುಕ್ತರಿಂದ ಸೂತ್ತೋಲೆ ಹೊರಡಿಸಲಾಗಿದೆ.
ಇಲಾಖೆಯಲ್ಲಿ ವಿತರಿಸಲಾಗುತ್ತಿರುವ ವಿವಿಧ ನಮೂನೆಯ ನಕಲುಗಳನ್ನು ಪರಿಷ್ಕೃತ ದರಗಳಂತೆ ಯಾವ ನಮೂನೆಗೆ ಎಷ್ಟು ದರ ವಸೂಲು ಮಾಡಬೇಕು ಎಂಬ ಬಗ್ಗೆ ಅಧೀನ ಕಚೇರಿಗಳಲ್ಲಿ ಗೊಂದಲ ಉಂಟಾಗಿದೆ ಎಂಬುದು ಈ ಕಚೇರಿಯ ಗಮನಕ್ಕೆ ಬಂದಿದೆ. ಆದ್ದರಿಂದ ಇಲಾಖೆಯಲ್ಲಿ ನೀಡಲಾಗುವ ದಾಖಲೆಗಳ ನಕಲುಗಳಿಗೆ ಏಕರೂಪದ ನಕಲು ಶುಲ್ಕ ಪಾವತಿ ಮಾಡಿಸಿಕೊಳ್ಳಲು ದರ ಪರಿಷ್ಕರಣೆ ಮಾಡಲಾಗಿದೆ ಎಂದು ಆಯುಕ್ತರ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಭೂದಾಖಲೆಗಳ ನಕಲು ವಿತರಣೆಯ ಪರಿಷ್ಕೃತ ಶುಲ್ಕ ಪಟ್ಟಿ
