ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಏಷ್ಯನ್‌ ಗೇಮ್ಸ್‌ ಬಾಕ್ಸಿಂಗ್‌; ಫೈನಲ್‌ ಪ್ರವೇಶಿಸಿ ಬೆಳ್ಳಿ ಖಚಿತಪಡಿಸಿದ ಪರ್ವೀನ್, ಅಂಕುಶ್

Asian Games 2026: 26 ವರ್ಷದ ಭಾರತೀಯ ಬಾಕ್ಸರ್‌ ಪರ್ವೀನ್‌ ಕ್ವಾರ್ಟರ್-ಫೈನಲ್‌ನಲ್ಲಿ ಉಜ್ಬೇಕಿಸ್ತಾನದ ನವ್ಬಖೋರ್ ಖಮಿಡೋವಾ ಅವರನ್ನು 5-0 ಅಂತರದಿಂದ ಸೋಲಿಸಿದ್ದರು. ಆ ಪಂದ್ಯದಲ್ಲಿ ಅವರು ತಮ್ಮ ಕೈಗಳ ವ್ಯಾಪ್ತಿ (ರೀಚ್) ಮತ್ತು ಪ್ರತಿದಾಳಿಗಳ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು.

ಏಷ್ಯನ್‌ ಗೇಮ್ಸ್‌ ಬಾಕ್ಸಿಂಗ್‌; ಫೈನಲ್‌ ಪ್ರವೇಶಿಸಿದ ಪರ್ವೀನ್

Parveen Hooda boxing -

Abhilash BC
Abhilash BC Sep 29, 2026 11:12 AM

ನಗೋಯಾ, ಸೆ. 29: ಏಷ್ಯನ್‌ ಗೇಮ್ಸ್‌ ಬಾಕ್ಸಿಂಗ್‌ ಮಹಿಳೆಯರ 65 ಕೆಜಿ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಚೀನಾದ ಲಿ ಶು ಅವರನ್ನು 5-0 ಅಂತರದಿಂದ ಸೋಲಿಸುವ ಮೂಲಕ ಪರ್ವೀನ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಈಗಾಗಲೇ ಪದಕವನ್ನು ಖಚಿತಪಡಿಸಿಕೊಂಡಿರುವ ಈ ಭಾರತೀಯ ಬಾಕ್ಸರ್ ಈಗ ಶುಕ್ರವಾರ ನಡೆಯಲಿರುವ ಚಿನ್ನದ ಪದಕದ ಪಂದ್ಯದಲ್ಲಿ ಅವರು ಚೈನೀಸ್ ತೈಪೆಯ ಚೆನ್ ನಿಯೆನ್-ಚಿನ್ ಅವರನ್ನು ಎದುರಿಸಲಿದ್ದಾರೆ.

26 ವರ್ಷದ ಭಾರತೀಯ ಬಾಕ್ಸರ್‌ ಕ್ವಾರ್ಟರ್-ಫೈನಲ್‌ನಲ್ಲಿ ಉಜ್ಬೇಕಿಸ್ತಾನದ ನವ್ಬಖೋರ್ ಖಮಿಡೋವಾ ಅವರನ್ನು 5-0 ಅಂತರದಿಂದ ಸೋಲಿಸಿದ್ದರು. ಆ ಪಂದ್ಯದಲ್ಲಿ ಅವರು ತಮ್ಮ ಕೈಗಳ ವ್ಯಾಪ್ತಿ (ರೀಚ್) ಮತ್ತು ಪ್ರತಿದಾಳಿಗಳ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು. ಕ್ವಾರ್ಟರ್-ಫೈನಲ್ ಹಂತದಲ್ಲಿ ಕಜಕಿಸ್ತಾನದ ಐಡಾ ಅಬಿಕೆಯೇವಾ ಅವರನ್ನು ಕಠಿಣ ಹೋರಾಟದ ಮೂಲಕ ಮಣಿಸಿದ್ದ ಲಿ ಶು ಅವರಿಗೆ, ಈ ಸವಾಲನ್ನು ಎದುರಿಸಲು ಸಾಧ್ಯವಾಗಲಿಲ್ಲ.

ಇದೇ ದಿನ ನಡೆದ ಪುರುಷರ 80 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ವಿಶ್ವ ಚಾಂಪಿಯನ್ ಫಜ್ಲಿದ್ದಿನ್ ಅವರನ್ನು ಸೋಲಿಸುವ ಮೂಲಕ ಅಂಕುಶ್ ಫೈನಲ್‌ಗೆ ಲಗ್ಗೆಯಿಟ್ಟರು. ಮೊದಲ ಸುತ್ತಿನಲ್ಲಿ 4-1 ಅಂತರದಿಂದ ಹಿನ್ನಡೆ ಅನುಭವಿಸಿದ ನಂತರ, ಭಾರತೀಯ ಬಾಕ್ಸರ್ ಎರಡನೇ ಸುತ್ತನ್ನು 3-2 ಅಂತರದಿಂದ ಗೆದ್ದುಕೊಂಡರು ಮತ್ತು ಅಂತಿಮ ಸುತ್ತಿನಲ್ಲಿ 5-0 ಅಂತರದ ಸಂಪೂರ್ಣ ಪ್ರಾಬಲ್ಯ ಮೆರೆದರು. ಅಂತಿಮವಾಗಿ ತೀರ್ಪುಗಾರರ ಅಂಕಗಳ ಆಧಾರದ ಮೇಲೆ ಪಂದ್ಯವನ್ನು ಗೆದ್ದ ಅಂಕುಶ್, ಸ್ವರ್ಣ ಪದಕಕ್ಕಾಗಿ ನಡೆಯುವ ಹಣಾಹಣಿಗೆ ಅರ್ಹತೆ ಪಡೆದರು.



ತಮ್ಮ ಇರುವಿಕೆಯ ಮಾಹಿತಿಯನ್ನು ಒದಗಿಸುವಲ್ಲಿನ (whereabouts) ಲೋಪದಿಂದಾಗಿ ಹಾಂಗ್‌ಝೌ ಏಷ್ಯನ್ ಗೇಮ್ಸ್‌ನ ಕಂಚಿನ ಪದಕವನ್ನು ಕಳೆದುಕೊಂಡಿದ್ದ ಪರ್ವೀನ್ ಪಾಲಿಗೆ, ಈ ಪಯಣವು ಒಂದು ರೀತಿಯ ಪ್ರಾಯಶ್ಚಿತ್ತದಂತಿದೆ. ಈಗ ಅವರು ಚಿನ್ನದ ಪದಕಕ್ಕಾಗಿ ಸೆಣಸುತ್ತಿದ್ದಾರೆ. ಈ ಬಾರಿ ಭಾರತಕ್ಕೆ ಬಾಕ್ಸಿಂಗ್‌ನಲ್ಲಿ 6 ಪದಕ ಈಗಾಗಲೇ ಖಚಿತವಾಗಿದೆ.

ಅ. 1 ರಂದು 2027ರ ಏಕದಿನ ವಿಶ್ವಕಪ್ ವೇಳಾಪಟ್ಟಿ ಬಿಡುಗಡೆ

ಸೋಮವಾರ ನಡೆದಿದ್ದ 75 ಕೆಜಿ ಮಿಡಲ್‌ವೇಯ್ಟ ಕ್ವಾರ್ಟರ್‌ಫೈನಲ್‌ನಲ್ಲಿ ಲವ್ಲಿನಾ 5-0 ಅಂತರದಿಂದ ಕೊರಿಯಾದ ಸಿಯೋಂಗ್ ಸುಯಿಯೊನ್ ಎದುರು ಗೆಲುವು ದಾಖಲಿಸಿ ಸೆಮಿಫೈನಲ್‌ ಪ್ರವೇಶಿಸಿದ್ದರು.

60 ಕೆಜಿ ವಿಭಾಗದಲ್ಲಿ ಪ್ರಿಯಾ ಘಂಘಾಸ್, ತಜಿಕಿಸ್ತಾನದ ಮಿಗೊನಾ ಸಮ್ದೊವಾ ಎದುರು ಗೆಲುವು ಒಲಿಸಿಕೊಂಡರೆ, ಗ್ಲಾಸ್ಗೋ ಕಾಮನ್ವೆಲ್ಸ್ ಗೇಮ್ಸ್‌ನಲ್ಲಿ ಪೋಡಿಯಂಗೇರಲು ವಿಲವಾಗಿದ್ದ ಕಪಿಲ್ ಪೋಖರಿಯಾ ಪುರುಷರ 90ಕೆಜಿ ವಿಭಾಗದಲ್ಲಿ 5-0ಯಿಂದ ದ.ಕೊರಿಯಾದ ಕಿಮ್ ಗಿಚೆ ಎದುರು ಜಯ ಸಾಧಿಸಿ, ಅಂತಿಮ 4ರ ಘಟ್ಟಕ್ಕೇರಿದರು.