ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Drone Prathap: ಕೇಸ್​ನಿಂದ ಮುಕ್ತಗೊಂಡು ಕಣ್ಣೀರಿಟ್ಟ ಡ್ರೋನ್​ ಪ್ರತಾಪ್!​

Drone Prathap: ಡ್ರೋನ್‌ ಪ್ರತಾಪ್‌ ವಿರುದ್ಧ ಹಲವು ಕೇಸ್‌ಗಳು ದಾಖಲಾಗಿದ್ದವು. ಅದರಲ್ಲಿ ನೀರಿನಲ್ಲಿ ಸೋಡಿಯಂನ ರಾಸಾಯನಿಕ ಕ್ರಿಯೆಯನ್ನು ಪ್ರದರ್ಶಿಸಿದ ವೀಡಿಯೊ ಕೂಡ ಒಳಗೊಂಡಿತ್ತು. ಪೊಲೀಸರು ಡಿಸೆಂಬರ್ 12, 2024ರಲ್ಲಿ ಎಫ್‌ಐಆರ್ ದಾಖಲಿಸಿ ಬಂಧಿಸಿದ್ದರು. ನೀರಿನೊಂದಿಗೆ ಸೋಡಿಯಂನ ರಾಸಾಯನಿಕ ಕ್ರಿಯೆಯನ್ನು ಪ್ರದರ್ಶಿಸುವ ವೀಡಿಯೊವೊಂದಕ್ಕೆ ಸಂಬಂಧಿಸಿದಂತೆ ಡ್ರೋನ್ ಪ್ರತಾಪ್ ಅವರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ಅನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.

ಕೇಸ್​ನಿಂದ ಮುಕ್ತಗೊಂಡು ಕಣ್ಣೀರಿಟ್ಟ ಡ್ರೋನ್​ ಪ್ರತಾಪ್!​

ಡ್ರೋನ್‌ ಪ್ರತಾಪ್‌ -

Yashaswi Devadiga
Yashaswi Devadiga Sep 29, 2026 10:51 AM

ಬಿಗ್ ಬಾಸ್‌ ಸೀಸನ್‌-10’ರ ಸ್ಪರ್ಧಿಯಾಗಿದ್ದ ಡ್ರೋನ್‌ ಪ್ರತಾಪ್‌ (Droe prathap) ಭಾರಿ ಸದ್ದು ಮಾಡಿದ ಹೆಸರು. ಡ್ರೋನ್​ ತಯಾರಿಸುವುದಾಗಿ ಹೇಳಿ ತಾವೊಬ್ಬ ಸೈಂಟಿಸ್ಟ್​ ಎಂದು ಹೇಳಿ, ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಛಾನ್ಸ್​ ಗಿಟ್ಟಿಸಿಕೊಂಡು, ಜೈಲಿಗೂ ಹೋಗಿ ಬಂದರು. ಡ್ರೋನ್‌ ಪ್ರತಾಪ್‌ ವಿರುದ್ಧ ಹಲವು ಕೇಸ್‌ಗಳು ದಾಖಲಾಗಿದ್ದವು. ಅದರಲ್ಲಿ ನೀರಿನಲ್ಲಿ ಸೋಡಿಯಂನ ರಾಸಾಯನಿಕ ಕ್ರಿಯೆಯನ್ನು ಪ್ರದರ್ಶಿಸಿದ ವೀಡಿಯೊ ಕೂಡ ಒಳಗೊಂಡಿತ್ತು. ಪೊಲೀಸರು ಡಿಸೆಂಬರ್ 12, 2024ರಲ್ಲಿ ಎಫ್‌ಐಆರ್ (FIR) ದಾಖಲಿಸಿ ಬಂಧಿಸಿದ್ದರು. ನೀರಿನೊಂದಿಗೆ ಸೋಡಿಯಂನ ರಾಸಾಯನಿಕ ಕ್ರಿಯೆಯನ್ನು ಪ್ರದರ್ಶಿಸುವ ವೀಡಿಯೊವೊಂದಕ್ಕೆ ಸಂಬಂಧಿಸಿದಂತೆ ಡ್ರೋನ್ ಪ್ರತಾಪ್ ಅವರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ಅನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.

ಡ್ರೋನ್​ ಪ್ರತಾಪ್​ ಯಾವುದೇ ರೀತಿ ದುರುದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿರಲಿಲ್ಲ ಎಂದು ಕೋರ್ಟ್​ ಹೇಳಿದೆ. ತೀರ್ಪು ಬಂದ ಬಳಿಕ ವಿಡಿಯೋ ಮಾಡಿ ಕಣ್ಣೀರಿಟ್ಟಿದ್ದಾರೆ ಪ್ರತಾಪ್‌. ಕೊನೆಗೂ ದೇವರು ಕಣ್ಣುಬಿಟ್ಟ. ಕೋರ್ಟ್‌ನಿಂದ ಎಲ್ಲಾ ಪ್ರಕರಣಗಳ ರದ್ದು ಮಾಡಿ ನಿರಪರಾಧಿ ಅಂತ ನಾನು ನಿಂತಿದ್ದೀನಿ. ಒಬ್ಬ ವ್ಯಕ್ತಿ ಇದ್ದಾರೆ ಲಾಯರ್ ಸಾಗರ್ ಅವರು ಹಾಗೂ ಅವರ ತಂಡದವರು. ಗೌರವಾನ್ವಿತ ಕೋರ್ಟ್‌ಗೆ ತಲೆಬಾಗಿ ನಮಸ್ಕರಿಸ್ತೀನಿ. ನಿಜವಾಗ್ಲೂ ಥ್ಯಾಂಕ್ ಯು.ಇದು ಸತ್ಯಕ್ಕೆ ಸಿಕ್ಕಂತ ಜಯ ಎಂದು ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ: Bigg Boss Kannada 13: ಮಗಳೇ ಪ್ರಪಂಚ, ತಾಯಿ ಬಿಟ್ಟರೇ ಯಾರು ಇಲ್ಲ; ಜಗ್ಗಮಮ್ಮಿ ಕಣ್ಣೀರು

ಏನಿದು ಕೇಸ್‌?

ತುಮಕೂರಿನ ಮಧುಗಿರಿ ತಾಲೂಕಿನ ಜನಕಲೋಟಿ ಗ್ರಾಮದ ಕೃಷಿ ಹೊಂಡದಲ್ಲಿ ಡ್ರೋನ್ ಪ್ರತಾಪ್ ಹಾಗೂ ಅವರ ಸ್ನೇಹಿತರು ಸೋಡಿಯಂ ಮೆಟಲ್ ಬಳಸಿ ಸ್ಫೋಟದ ವಿಜ್ಞಾನ ಪ್ರಯೋಗ ನಡೆಸಿದ್ದರು. ಈ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ ನಂತರ ಅದು ಭಾರಿ ವೈರಲ್ ಆಗಿತ್ತು. ಡ್ರೋನ್‌ ಪ್ರತಾಪ್‌ ಬಂಧನದ ಬಳಿಕ ಪೊಲೀಸರು ಅವರ ಇಬ್ಬರು ಸ್ನೇಹಿತರನ್ನು ಕೂಡ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು.

ಇದನ್ನೂ ಓದಿ: Bigg Boss Kannada 13: ನಿಯಮ ಮುರಿದ ಯಶಸ್; ಚಪ್ಪಾಳೆ ಗಿಟ್ಟಿಸಿಕೊಂಡ ಆಸಿಯಾ ಇದಕ್ಕೆ ಸಾಥ್‌!

ಬಳಿಕ ಡ್ರೋನ್‌ ಪ್ರತಾಪ್‌ಗೆ ಡಿ.26ರವರೆಗೆ 10 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್‌ ಆದೇಶ ಹೊರಡಿಸಿತ್ತು. ಇತ್ತೀಚೆಗೆ ಈ ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರ ಪೀಠವು, ಪ್ರತಾಪ್ ಅವರ ಮೇಲಿದ್ದ ಎಫ್‌ಐಆರ್ (FIR) ಅನ್ನು ರದ್ದುಗೊಳಿಸಿದೆ.