ಚುನಾವಣೆಯಲ್ಲಿ ಜಯಗಳಿಸಲು ಡಿಎಂಕೆ ಮತದಾರರಿಗೆ ಉಚಿತ ಪತ್ನಿಯರನ್ನೂ ಘೋಷಿಸಲಿದೆ; ವಿವಾದ ಹುಟ್ಟುಹಾಕಿದ ಎಐಎಡಿಎಂಕೆ ನಾಯಕ
CV Shanmugam: ತಮಿಳುನಾಡಿನಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈಗಾಗಲೇ ರಾಜಕೀಯ ಚಟುವಟಿಕೆ ಆರಂಭವಾಗಿದೆ. ಈ ಮಧ್ಯೆ ಎಐಎಡಿಎಂಕೆಯ ಮಾಜಿ ಸಚಿವ ಮತ್ತು ರಾಜ್ಯಸಭಾ ಸಂಸದ ಸಿ.ವಿ. ಷಣ್ಮುಗಂ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಬಗ್ಗೆ ಆಡಿರುವ ಮಾತು ವಿವಾದ ಹುಟ್ಟು ಹಾಕಿದೆ. ಡಿಎಂಕೆ ಚುನಾವಣೆಯಲ್ಲಿ ಗೆಲ್ಲಲು ಪ್ರತಿ ಮತದಾರನಿಗೆ ಪತ್ನಿ ಒದಗಿಸುವುದಾಗಿ ಭರವಸೆ ನೀಡಬಹುದು ಎಂದಿದ್ದಾರೆ.

ಸಿ.ವಿ. ಷಣ್ಮುಗಂ -

ಚೆನ್ನೈ: ತಮಿಳುನಾಡಿನಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈಗಾಗಲೇ ರಾಜಕೀಯ ಚಟುವಟಿಕೆ ನಿಧಾನವಾಗಿ ಗರಿಗೆದರತೊಡಗಿದೆ. ಪ್ರಬಲ ಪ್ರಾದೇಶಿಕ ಪಕ್ಷಗಳಾದ ಎಐಎಡಿಎಂಕೆ (AIADMK) ಮತ್ತು ಆಡಳಿತರೂಢ ಡಿಎಂಕೆ (DMK) ಗದ್ದುಗೆಗೆ ಏರಲು ಸಿದ್ಧತೆ ನಡೆಸುತ್ತಿದ್ದು, ಈ ಮಧ್ಯೆ ರಾಜಕೀಯಕ್ಕೆ ಧುಮುಕಿರುವ ದಳಪತಿ ವಿಜಯ್ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಹುಟ್ಟು ಹಾಕಿ ಪ್ರಬಲ ಸ್ಪರ್ಧೆಯ ಸೂಚನೆ ನೀಡಿದ್ದಾರೆ. ಈ ಮಧ್ಯೆ ಎಐಎಡಿಎಂಕೆಯ ಮಾಜಿ ಸಚಿವ ಮತ್ತು ರಾಜ್ಯಸಭಾ ಸಂಸದ ಸಿ.ವಿ. ಷಣ್ಮುಗಂ (CV Shanmugam) ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಬಗ್ಗೆ ಆಡಿರುವ ಮಾತು ವಿವಾದ ಹುಟ್ಟು ಹಾಕಿದೆ. ಡಿಎಂಕೆ ಚುನಾವಣೆಯಲ್ಲಿ ಗೆಲ್ಲಲು ಪ್ರತಿ ಮತದಾರನಿಗೆ ಪತ್ನಿ ಒದಗಿಸುವುದಾಗಿ ಭರವಸೆ ನೀಡಬಹುದು ಎಂದು ನಾಲಗೆ ಹರಿಯಬಿಟ್ಟಿದ್ದಾರೆ. ಸದ್ಯ ಅವರ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ಎಐಎಡಿಎಂಕೆ ಬೂತ್ ಸಮಿತಿ ತರಬೇತಿ ಸಭೆಯಲ್ಲಿ ಮಾತನಾಡಿದ ಷಣ್ಮುಗಂ ಮಹಿಳೆಯರನ್ನು ಸರ್ಕಾರದ ಉಚಿತ ಕೊಡುಗೆಗಳಿಗೆ ಹೋಲಿಸಿದ್ದಾರೆ. "ಚುನಾವಣೆಯ ಹಿನ್ನೆಲೆಯಲ್ಲಿ ಹಲವು ಘೋಷಣೆಗಳು ಹೊರ ಬರಲಿವೆ. ಡಿಎಂಕೆ ಮಿಕ್ಸರ್, ಗ್ರೈಂಡರ್, ಮೇಕೆ, ಹಸುಗಳನ್ನು ಉಚಿತವಾಗಿ ನೀಡುವ ವಾಗ್ದಾನ ಪ್ರಕಟಿಸಲಿದೆ ಮತ್ತು ಪ್ರತಿಯೊಬ್ಬ ವ್ಯಕ್ತಿಗೂ ಪತ್ನಿಯನ್ನೂ ನೀಡಬಹುದು" ಎಂದು ವ್ಯಂಗ್ಯವಾಡಿದ್ದಾರೆ.
ʼʼತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರುಣಾನಿಧಿ ಅವರ ಮಗನಾಗಿರುವುದರಿಂದ ಅಂತಹ ಭರವಸೆಗಳನ್ನು ನೀಡುವ ಸಾಮರ್ಥ್ಯ ಹೊಂದಿದ್ದಾರೆʼʼ ಎಂದೂ ಅವರು ಹೇಳಿದ್ದಾರೆ.
ಸಚಿವೆ ತಿರುಮಿಗು ಗೀತಾ ಜೀವನ್ ಅವರ ಎಕ್ಸ್ ಪೋಸ್ಟ್:
அதிமுகவுக்குப் பெண்கள் மீது இருக்கும் வக்கிரமும் வன்மமும் வெளிப்பட்டிருக்கிறது!
— DMK (@arivalayam) October 14, 2025
பழனிசாமி வீட்டிலும் பெண்கள் இருக்கத்தானே செய்வார்கள். அவர்களுக்கும் சேர்த்துத்தானே சேற்றை வாரி வீசியிருக்கிறார் சி.வி.சண்முகம்!
விடியல் பயணப் பேருந்துகளை லிப் ஸ்டிக் பூசிய பேருந்துகள் எனக் கேவலமாகப்… pic.twitter.com/p4wFJ4cheN
ಈ ಸುದ್ದಿಯನ್ನೂ ಓದಿ: Physical Assault: ಅಣ್ಣಾ ವಿವಿ ಅತ್ಯಾಚಾರ ಪ್ರಕರಣ; ಉದಯ್ ನಿಧಿ ಸ್ಟಾಲಿನ್ ಜತೆ ಆರೋಪಿ ಫೋಟೊ! ಬಿಜೆಪಿ ಕಿಡಿ
ವ್ಯಾಪಕ ವಿರೋಧ
ಸದ್ಯ ಈ ಹೇಳಿಕ ಭಾರಿ ಚರ್ಚೆಗೆ ಗ್ರಾಸವಾಗಿದೆ. ಹಲವರು ಷಣ್ಮುಗಂ ನಿಲುವಿಗೆ ಕಿಡಿ ಕಾರಿದ್ದಾರೆ. ಅವರು ಮಹಿಳೆಯನ್ನು ಅವಮಾನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಸಚಿವೆ ತಿರುಮಿಗು ಗೀತಾ ಜೀವನ್ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಮಾತನಾಡಿ, ಷಣ್ಮುಗಂ ಮಹಿಳೆಯರನ್ನು ಕೀಳಾಗಿ ನೋಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅವರ ಹೇಳಿಕೆಗಳು ಎಐಎಡಿಎಂಕೆ ಮಹಿಳೆಯರ ಬಗ್ಗೆ ಹೊಂದಿರುವ ವಿಕೃತ ಮನೋಭಾವವನ್ನು ಬಹಿರಂಗಪಡಿಸಿದೆ ಎಂದು ಹೇಳಿದ್ದಾರೆ.
ಮಹಿಳಾ ಸಬಲೀಕರಣವನ್ನು ಗುರಿಯಾಗಿಟ್ಟುಕೊಂಡು ಜಾರಿಗೆ ಬಂದಿರುವ ಡಿಎಂಕೆಯ ಹಲವು ಯೋಜನೆಗಳನ್ನು ಗೀತಾ ಉಲ್ಲೇಖಿಸಿದ್ದಾರೆ. ಅವುಗಳಲ್ಲಿ ವಿಧಿಯಲ್ ಪಯಣಂ, ಕಲೈನಾರ್ ಮಹಿಳಾ ಹಕ್ಕುಗಳ ಯೋಜನೆ, ಪುದುಮೈ ಪೆನ್ ಯೋಜನೆ, ಕೆಲಸ ಮಾಡುವ ಮಹಿಳೆಯರಿಗಾಗಿ ತೋಝಿ ಹಾಸ್ಟೆಲ್‌ಗಳು ಮತ್ತು ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಾಲ ಮಿತಿಗಳನ್ನು ಹೆಚ್ಚಿಸುವ ಮತ್ತು ಮಹಿಳಾ ಉದ್ಯಮಿಗಳನ್ನು ಉತ್ತೇಜಿಸುವ ಕಾರ್ಯಕ್ರಮಗಳು ಸೇರಿವೆ.
ಎಐಡಿಎಂಕೆ ನಾಯಕ, ಮಾಜಿ ಮುಖ್ಯಮಂತ್ರಿ ಪಳನಿಸಾಮಿ ಈ ಹಿಂದೆ ವಿಧಿಯಲ್ ಪಯಣಂ ಬಸ್‌ಗಳನ್ನು ʼಲಿಪ್‌ಸ್ಟಿಕ್ ಲೇಪಿತ ಬಸ್‌ಗಳುʼ ಎಂದು ಕರೆದಿದ್ದು, ನಟಿ ಖುಷ್ಬು ಮಹಿಳಾ ಹಕ್ಕುಗಳ ಯೋಜನೆಯ ಮೊತ್ತವನ್ನು ʼಭಿಕ್ಷೆʼ ಎಂದು ಉಲ್ಲೇಖಿಸಿದ್ದು ಮತ್ತು ಪಿಎಂಕೆಯ ಸೌಮ್ಯ ಅನ್ಬುಮಣಿ ಮಹಿಳೆಯರಿಗೆ ನೀಡಲಾಗುವ 1,000 ರೂ. ಮೊತ್ತವನ್ನು ಅಪಹಾಸ್ಯ ಮಾಡಿರುವುದನ್ನು ತಿರುಮಿಗು ಗೀತಾ ನೆನಪಿಸಿಕೊಂಡಿದ್ದಾರೆ.
ಸ್ಟಾಲಿನ್ ನಾಯಕತ್ವದಲ್ಲಿ ತಮಿಳುನಾಡು ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ, ಶಿಕ್ಷಣಕ್ಕೆ ಒತ್ತು ನೀಡುತ್ತಿದೆ ಎಂದು ಡಿಎಂಕೆ ಒತ್ತಿ ಹೇಳಿದೆ. ಅಂತಹ ಅಭಿವೃದ್ಧಿ ಎಐಎಡಿಎಂಕೆಗೆ ಇಷ್ಟವಿಲ್ಲ ಎಂದೂ ಟೀಕಿಸಿದೆ.