ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pralhad Joshi: ವಕ್ಫ್‌ ತಿದ್ದುಪಡಿ ಕಾಯ್ದೆ ಜಾರಿ ತಂದಿರುವುದು ಮುಸ್ಲಿಂರ ವಿರುದ್ಧವಾಗಿ ಅಲ್ಲ, ವಕ್ಫ್‌ ಆಸ್ತಿ ಸಂರಕ್ಷಣೆಗೆ: ಜೋಶಿ ಸ್ಪಷ್ಟನೆ

Pralhad Joshi: ವಕ್ಫ್‌ ತಿದ್ದುಪಡಿ ಕಾಯ್ದೆ ಜಾರಿ ತಂದಿರುವುದು ಮುಸ್ಲಿಂರ ವಿರುದ್ಧವಾಗಿ ಅಲ್ಲ. ವಕ್ಫ್‌ ಆಸ್ತಿ ಸಂರಕ್ಷಣೆಗಾಗಿಯೇ ಎಂಬುದನ್ನು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರು ಸ್ಪಷ್ಟಪಡಿಸಿದ್ದಾರೆ. ಮುಸ್ಲಿಂ ಸಮುದಾಯದಲ್ಲಿ ಸಾಮಾಜಿಕ ನ್ಯಾಯ ಕಲ್ಪಿಸಲೆಂದೇ ಜಾರಿ ತಂದಿದ್ದಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಜನರ ದಿಕ್ಕು ತಪ್ಪಿಸೋ ಕೆಲಸ ಮಾಡುತ್ತಿದೆ ಕಾಂಗ್ರೆಸ್‌: ಜೋಶಿ ಆರೋಪ

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ.

Profile Siddalinga Swamy Apr 14, 2025 10:43 PM

ಹುಬ್ಬಳ್ಳಿ: ವಕ್ಫ್‌ ತಿದ್ದುಪಡಿ ಮಸೂದೆ ‘ಉಮೀದ್‌’ ಮುಸ್ಲಿಂರ ವಿರುದ್ಧ ತಂದಂಥ ಕಾಯ್ದೆಯಲ್ಲ. ವಕ್ಫ್‌ನಲ್ಲಿ ಸಾಮಾಜಿಕ ನ್ಯಾಯ ಮತ್ತು ಪಾರದರ್ಶಕತೆಗಾಗಿ ಸಂಸತ್‌ನಲ್ಲಿ ಮಂಡಿಸಿ, ಅಂಗೀಕರಿಸಿದ ಮತ್ತು ರಾಷ್ಟ್ರಪತಿ ಅನುಮೋದಿಸಿದ ಕಾಯ್ದೆಯಾಗಿದ್ದು, ಎಲ್ಲರೂ ಗೌರವಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಹೇಳಿದರು. ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರ ಜತೆ ಅವರು ಮಾತನಾಡಿದರು. ಕರ್ನಾಟಕದಲ್ಲಿ ವಕ್ಫ್‌ ತಿದ್ದುಪಡಿ ಮಸೂದೆ ಜಾರಿ ತರುವುದಿಲ್ಲ ಎಂಬ ಸಚಿವ ಜಮೀರ್‌ ಅಹಮದ್‌ ಹೇಳಿಕೆಗೆ ಪ್ರತಿಕ್ರಿಯಿಸಿ ಜಮೀರ್‌ ಒಬ್ಬರೇ ಅಲ್ಲ, ಸಿದ್ದರಾಮಯ್ಯ, ರಾಹುಲ್‌ ಗಾಂಧಿ ಯಾರೇ ಹೇಳಿದರೂ ಸರಿ ಅನುಷ್ಠಾನಕ್ಕೆ ತರುವ ಅಗತ್ಯತೆಯಿದೆ ಎಂದು ಹೇಳಿದರು.

ವಕ್ಫ್‌ ತಿದ್ದುಪಡಿ ಕಾಯ್ದೆ ಜಾರಿ ತಂದಿರುವುದು ಮುಸ್ಲಿಂರ ವಿರುದ್ಧವಾಗಿ ಅಲ್ಲ. ವಕ್ಫ್‌ ಆಸ್ತಿ ಸಂರಕ್ಷಣೆಗಾಗಿಯೇ ಎಂಬುದನ್ನು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರು ಸ್ಪಷ್ಟಪಡಿಸಿದ್ದಾರೆ. ಮುಸ್ಲಿಂ ಸಮುದಾಯದಲ್ಲಿ ಸಾಮಾಜಿಕ ನ್ಯಾಯ ಕಲ್ಪಿಸಲೆಂದೇ ಜಾರಿ ತಂದಿದ್ದಾಗಿದೆ ಎಂದು ಹೇಳಿದರು. ಅದರಂತೆ ಇದು ವಕ್ಫ್‌ ಆಡಳಿತದಲ್ಲಿ ಪಾರದರ್ಶಕತೆ ತರುತ್ತದೆ. ವಕ್ಫ್‌ ಆದಾಯವನ್ನು ವೃದ್ಧಿಸುತ್ತದೆ ಮತ್ತು ಬಡ ಮುಸಲ್ಮಾನರ ಸೇವೆಗೇ ಸಲ್ಲುತ್ತದೆ. ಈ ಮೂಲಕ ಮುಸ್ಲಿಂ ಮಹಿಳೆಯರು ಮತ್ತು ಸಮುದಾಯದ ಸೇವೆಗೆ ಬಲ ತುಂಬುವ ಧ್ಯೇಯದಿಂದ ಉಮೀದ್‌ ಜಾರಿ ತರಲಾಗಿದೆ ಎಂದು ಹೇಳಿದರು.

ಯುಪಿಎ ಸಹ ಸಂಸತ್‌ ಕಾಯ್ದೆ ಜಾರಿ ತಂದಿತ್ತು

ವಕ್ಫ್‌ ತಿದ್ದುಪಡಿ ಕಾಯ್ದೆ 1995ರಲ್ಲೂ ಸಂಸತ್‌ ಕಾಯ್ದೆಯಾಗಿತ್ತು. 2013ರಲ್ಲಿ ಯುಪಿಎ ಸರ್ಕಾರ ತಂದದ್ದೂ ಸಹ ಸಂಸತ್‌ ಕಾಯ್ದೆಯೇ ಆಗಿತ್ತು. ಈಗ 2025ರಲ್ಲಿ ಎನ್‌ಡಿಎ ಸರ್ಕಾರ ತಂದಿರುವುದೂ ಸಹ ಸಂಸತ್‌ ಕಾಯ್ದೆಯೇ ಆಗಿದೆ. ಯುಪಿಎಗಿಂತ ಹೆಚ್ಚು ಪಾರದರ್ಶಕವಾಗಿದೆ ಎಂದರು.

ಸಂಸತ್‌ ಮತ್ತು ರಾಷ್ಟ್ರಪತಿ ಅನುಮೋದಿಸಿದ ಕಾಯ್ದೆ

ಎನ್‌ಡಿಎ ಸರ್ಕಾರ ವಕ್ಫ್‌ ಸಚಿವಾಲಯದಲ್ಲಿ ಸಹ ಹಲವು ಸಭೆ, ಸಮಾಲೋಚನೆ ನಡೆಸಿ, ಸದನದಲ್ಲಿ ಸುದೀರ್ಘ ಅವಧಿ ಚರ್ಚಿಸಿ ಮಂಡಿಸಿ ಅಂಗೀಕರಿಸಿದಂತಹ ತಿದ್ದುಪಡಿ ಕಾಯ್ದೆಯಾಗಿದೆ. ಮಾತ್ರವಲ್ಲ ರಾಷ್ಟ್ರಪತಿ ಅವರೂ ಸಹ ಅನುಮೋದಿಸಿ ಜಾರಿಗೊಳಿಸಿದಂತಹ ಕಾಯ್ದೆಯಾಗಿದೆ. ಹಾಗಾಗಿ ಹಿಂದಿನಂತೆ ಈಗಲೂ ಅನುಷ್ಠಾನಕ್ಕೆ ತರಲೇಬೇಕಾಗುತ್ತದೆ ಎಂದರು.

ಈ ಸುದ್ದಿಯನ್ನೂ ಓದಿ | Pralhad Joshi: ವಾಜಪೇಯಿ, ನರೇಂದ್ರ ಮೋದಿ ಕಾಲಘಟ್ಟದಲ್ಲಿ ಡಾ.ಅಂಬೇಡ್ಕರ್‌ ಅವರಿಗೆ ಅತ್ಯುನ್ನತ ಗೌರವ ಅರ್ಪಿಸಲಾಗಿದೆ: ಜೋಶಿ

ವೋಟ್‌ ಬ್ಯಾಂಕ್‌ಗಾಗಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ

ವಕ್ಫ್‌ ತಿದ್ದುಪಡಿ ಮಸೂದೆ ಬಗ್ಗೆ ವೋಟ್‌ ಬ್ಯಾಂಕ್‌ಗಾಗಿ ಜನರ ದಿಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಜನರೇನು ಮೂರ್ಖರಲ್ಲ ಪ್ರಜ್ಞಾವಂತರಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು.