ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರಾಜ್ಯದಲ್ಲಿ ಗೃಹ ಇಲಾಖೆ ಸತ್ತಿದೆ; ಸಚಿವ ಪರಮೇಶ್ವರ್‌ ವಿರುದ್ಧ ಅಶ್ವತ್ಥನಾರಾಯಣ್ ಟೀಕೆ

Ashwathnarayan: ರಾಜ್ಯದ ಗೃಹ ಸಚಿವರಿಗೆ ತಮ್ಮ ಜವಾಬ್ದಾರಿ ಏನೆಂದೇ ಅರ್ಥ ಆಗಿಲ್ಲ. ಕೇವಲ ಝೀರೊ ಟ್ರಾಫಿಕ್‍ನಲ್ಲಿ ಓಡಾಡುವುದೇ ಗೃಹ ಸಚಿವರ ಜವಾಬ್ದಾರಿ ಅಂದುಕೊಂಡಿದ್ದಾರೆ. ಗೃಹ ಸಚಿವರಿಗೆ ತಮ್ಮ ಸ್ಥಾನದಲ್ಲಿ ಮುಂದುವರಿಯಲು ನೈತಿಕತೆ ಇಲ್ಲ. ತಕ್ಷಣವೇ ಕೇಂದ್ರದ ವರಿಷ್ಠರು ಆ ಸ್ಥಾನದಿಂದ ಅವರನ್ನು ತೆಗೆಯಬೇಕು ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಗೃಹ ಇಲಾಖೆ ಸತ್ತಿದೆ; ಅಶ್ವತ್ಥನಾರಾಯಣ್ ಟೀಕೆ

ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ (ಸಂಗ್ರಹ ಚಿತ್ರ) -

Profile
Siddalinga Swamy Jan 20, 2026 5:26 PM

ಬೆಂಗಳೂರು, ಜ.20: ರಾಜ್ಯದಲ್ಲಿ ಗೃಹ ಇಲಾಖೆ ಒಂದು ರೀತಿ ಸತ್ತಿದೆ. ಇವತ್ತು ಪೊಲೀಸ್ ಇಲಾಖೆಯು ರಿಯಲ್ ಎಸ್ಟೇಟ್‍ನ ಕಚೇರಿಯಂತಾಗಿದೆ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ (Ashwathnarayan) ಟೀಕಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಂಗಳವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಜ್ಯದ ಗೃಹ ಸಚಿವರಿಗೆ ತಮ್ಮ ಜವಾಬ್ದಾರಿ ಏನೆಂದೇ ಅರ್ಥ ಆಗಿಲ್ಲ. ಕೇವಲ ಝೀರೊ ಟ್ರಾಫಿಕ್‍ನಲ್ಲಿ ಓಡಾಡುವುದೇ ಗೃಹ ಸಚಿವರ ಜವಾಬ್ದಾರಿ ಅಂದುಕೊಂಡಿದ್ದಾರೆ ಎಂದು ಆರೋಪಿಸಿದರು.

ಒಬ್ಬರ ಮೇಲೆ ಇನ್ನೊಬ್ಬರು ಸಿ.ಡಿ. ಮಾಡುವುದು, ಸಿ.ಡಿ. ಬಿಡುಗಡೆ ಮಾಡುವುದು, ಸಿ.ಡಿ. ಇದೆ ಎಂದು ಹೆದರಿಸುವುದು, ಮಂತ್ರಿಗಳ ರಾಜೀನಾಮೆ ಪಡೆಯುವುದು, ಅಧಿಕಾರಿ ವಿರುದ್ಧ ಮಹಿಳೆ ಮೂಲಕ ಸಿ.ಡಿ. ಮಾಡಿಸಿ ರಿಲೀಸ್ ಮಾಡಿಸುವುದು ನಡೆದಿದೆ. ಈ ಸರ್ಕಾರದ ಜವಾಬ್ದಾರಿ ಏನೆಂದೇ ಅರ್ಥ ಆಗುತ್ತಿಲ್ಲ ಎಂದು ಟೀಕಿಸಿದರು.

ಮುಖ್ಯಮಂತ್ರಿ ಸೇರಿ ಎಲ್ಲರೂ ತಮ್ಮ ಜವಾಬ್ದಾರಿ ಮರೆತಿದ್ದಾರೆ. ಇದರಿಂದ ಇಲಾಖೆಗಳಲ್ಲಿ ಭ್ರಷ್ಟಾಚಾರ ಮತ್ತು ವೈಫಲ್ಯಗಳು ಎದ್ದು ಕಾಣುತ್ತಿದೆ. ಸ್ವತಃ ಮುಖ್ಯಮಂತ್ರಿಗಳ ಮೇಲೆ ಮುಡಾ ಹಗರಣದ ಕಾರಣಕ್ಕೆ ತನಿಖೆ ನಡೆದಿದೆ. ಅಬಕಾರಿ ಇಲಾಖೆ ಮೂಲಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ದೂರಿದ ಅವರು, ರಾಜಣ್ಣನವರ ರಾಜೀನಾಮೆ ತೆಗೆದುಕೊಳ್ಳಲು ಸಿ.ಡಿ. ಭಯ ಹುಟ್ಟಿಸಿದ್ದರು ಎಂದು ಆರೋಪಿಸಿದರು.

ವಿಶ್ವ ಆರ್ಥಿಕ ವೇದಿಕೆ ಸಭೆಗೆ ಪ್ರಲ್ಹಾದ್‌ ಜೋಶಿ; ಹೂಡಿಕೆಗೆ ಆಕರ್ಷಣೆಗೆ ವಿವಿಧ ರಾಷ್ಟ್ರಗಳ ಪ್ರಮುಖರೊಂದಿಗೆ ಮಾತುಕತೆ

ಕೇಂದ್ರದಿಂದ ಬರುವ ಕಾಂಗ್ರೆಸ್ ವರಿಷ್ಠರು ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದ್ದಾರೆ. ಸಚಿವರು ಜವಾಬ್ದಾರಿಯಿಂದ ಕೆಲಸ ಮಾಡುತ್ತಿಲ್ಲ. ಗೃಹ ಸಚಿವರಿಗೆ ತಮ್ಮ ಸ್ಥಾನದಲ್ಲಿ ಮುಂದುವರಿಯಲು ನೈತಿಕತೆ ಇಲ್ಲ ಎಂದ ಅವರು, ತಕ್ಷಣವೇ ಕೇಂದ್ರದ ವರಿಷ್ಠರು ಆ ಸ್ಥಾನದಿಂದ ಅವರನ್ನು ತೆಗೆಯಬೇಕು ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಆಗ್ರಹಿಸಿದರು.