ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪೆಟ್ರೋಲ್, ಡೀಸೆಲ್, ಗ್ಯಾಸ್‌ ಕೊರತೆ ಇಲ್ಲ; ಜನರನ್ನು ಕಾಂಗ್ರೆಸ್ ದಾರಿ ತಪ್ಪಿಸುತ್ತಿದೆ ಎಂದು ಜೋಶಿ ಕಿಡಿ

Pralhad Joshi: ಗ್ಯಾಸ್ ಸಿಲಿಂಡರ್ ಸಂಬಂಧ ಜನರನ್ನು ಗೊಂದಲಕ್ಕೀಡು ಮಾಡುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಸಹ ಆಗುತ್ತದೆ ಎಂದು ರಾಹುಲ್ ಗಾಂಧಿ ಅವರು ನಿನ್ನೆ ಹೇಳಿದ್ದಾರೆ. ಇದು ಸುಳ್ಳು. ಇಡೀ ದೇಶದಲ್ಲಿ ಈಗಲೂ ಮತ್ತು ಮುಂದೆಯೂ ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ಆಗುವುದಿಲ್ಲ. ಕೊರತೆ ಆಗದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ಪೆಟ್ರೋಲ್, ಡೀಸೆಲ್, ಗ್ಯಾಸ್‌ ಕೊರತೆ ಇಲ್ಲ: ಸಚಿವ ಪ್ರಲ್ಹಾದ್‌ ಜೋಶಿ

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (ಸಂಗ್ರಹ ಚಿತ್ರ) -

Profile
Siddalinga Swamy Mar 13, 2026 6:52 PM

ಬೆಂಗಳೂರು, ಮಾ.13: ಅಡುಗೆ ಹಾಗೂ ವಾಣಿಜ್ಯ ಸಿಲಿಂಡರ್‌ಗೆ ದೇಶದಲ್ಲಿ ಯಾವುದೇ ಕೊರತೆ ಇಲ್ಲ. ಆದರೆ ಸಿಲಿಂಡರ್ ಪೂರೈಕೆ ವಿಷಯದಲ್ಲಿ ಕಾಂಗ್ರೆಸ್, ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಾ ಇದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಆರೋಪಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶುಕ್ರವಾರ ಮಾಧ್ಯಮಗಳ ಜತೆ ಅವರು ಮಾತನಾಡಿದರು.

ಗ್ಯಾಸ್ ಸಿಲಿಂಡರ್ ಸಂಬಂಧ ಜನರನ್ನು ಗೊಂದಲಕ್ಕೀಡು ಮಾಡುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಸಹ ಆಗುತ್ತದೆ ಎಂದು ರಾಹುಲ್ ಗಾಂಧಿ ಅವರು ನಿನ್ನೆ ಹೇಳಿದ್ದಾರೆ. ಇದು ಸುಳ್ಳು. ಇಡೀ ದೇಶದಲ್ಲಿ ಈಗಲೂ ಮತ್ತು ಮುಂದೆಯೂ ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ಆಗುವುದಿಲ್ಲ. ಕೊರತೆ ಆಗದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದರು.

ಅಡುಗೆ ಮತ್ತು ವಾಣಿಜ್ಯ ಸಿಲಿಂಡರ್ ಪೂರೈಕೆಗೆ ಹಲವು ಮೂಲಗಳಿಂದ ಪ್ರಯತ್ನ ಮಾಡಲಾಗಿದೆ. ಈ ಮೊದಲು 20 ರಿಂದ 22 ದೇಶಗಳಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ಭಾರತ ಆಮದು ಮಾಡಿಕೊಳ್ತಿತ್ತು. ಈಗ ಇದು 40 ದೇಶಗಳಿಗೆ ಹೆಚ್ಚಿದೆ ಎಂದು ತಿಳಿಸಿದರು.

ಅಡುವೆ ಅನಿಲ ಸಿಲಿಂಡರ್ ಕೊರತೆ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ರಾಹುಲ್ ಗಾಂಧಿ ಅಪ್ರಬುದ್ಧ ಮತ್ತು ಪ್ರೌಢತೆ ಇಲ್ಲದ ನಾಯಕ. ಅಡುಗೆ ಸಿಲಿಂಡರ್ ಕೊರತೆಗೆ ಮುಷ್ಕರ ಮಾಡಿ ಎಂದು ಆಡಳಿತಾರೂಢ ಪಕ್ಷದ ಮುಖ್ಯಮಂತ್ರಿಗಳು ಕರೆ ನೀಡುವುದು ದುರ್ದೈವ. ಅದು ಅವರ ಬೇಜವಬ್ದಾರಿತನದ ಪರಮಾವಧಿ ತೋರಿಸುತ್ತದೆ ಎಂದು ದೂರಿದರು.

BJP Karnataka: ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆ

ಅಡುಗೆ ಮತ್ತು ವಾಣಿಜ್ಯ ಸಿಲಿಂಡರ್‌ಗೆ ಬುಕಿಂಗ್ ರಶ್ ಇದೆ. ಹಾಗಾಗಿ ಕೆಲವು ನಿರ್ಬಂಧ ಇದೆ. ಬುಕ್ ಮಾಡಿದ ನಂತರ ಈ ಮೊದಲಿನಂತೆ ಪೂರೈಕೆ ಆಗ್ತಾ ಇದೆ. ಆದು ಬಿಟ್ಟರೆ ದೇಶದಲ್ಲಿ ಸಿಲಿಂಡರ್ ಕೊರತೆ ಇಲ್ಲ. ಜಾಗತಿಕ ಸರಕು ಸಾಗಣೆಯ ಪ್ರಮುಖ ಜಲಮಾರ್ಗ ಹರ್ಮುಜ್ ಜಲಸಂಧಿ ಮೂಲಕ ಈಗಾಗಲೇ ಒಂದು ಹಡಗು ಬಂದಿದೆ. ಇನ್ನೂ ಹಲವು ಹಡಗು ಬರಲಿವೆ. ಇದು ಎಲ್ಲ ದೇಶಗಳ ಜತೆಗೆ ಭಾರತದ ಸಂಬಂಧ ಚೆನ್ನಾಗಿದೆ ಎಂಬುದನ್ನು ತೋರಿಸಿದೆ ಎಂದರು.

ಎಲ್‍ಪಿಜಿ ಪೂರೈಕೆ ಕೊರತೆ ಆಗಲಿದೆ ಎಂಬ ಭಯದಿಂದ ಅಗತ್ಯವಿಲ್ಲದಿದ್ದರೂ ಹೆಚ್ಚು ಹೆಚ್ಚು ಬುಕಿಂಗ್ ಮಾಡಬೇಡಿ ಎಂದು ಈಗಾಗಲೇ ಕೇಂದ್ರ ಸಚಿವ ಹರ್ದಿಪ್ ಪುರಿ ಅವರು ಹೇಳಿದ್ದಾರೆ. ದೇಶದಲ್ಲಿ 5 ದಿನದಲ್ಲಿ ಶೇ.28̇ ರಷ್ಟು ಎಲ್‍ಪಿಜಿ ಉತ್ಪಾದನೆ ಹೆಚ್ಚಳ ಮಾಡಿದ್ದೇವೆ. ಇನ್ನೂ ಅಗತ್ಯ ಬಿದ್ದರೆ ಹೆಚ್ಚು ಮಾಡ್ತೇವೆ. ಆ ಸಾಮರ್ಥ್ಯ ಭಾರತಕ್ಕೆ ಇದೆ ಎಂದು ತಿಳಿಸಿದರು.‌ ಈಗ ಈ ರೀತಿ ಕೊರತೆ ಆಗುವುದಕ್ಕಿಂತ ಮೊದಲೇ ದೇಶದಲ್ಲಿ 25 ಲಕ್ಷ ಡೀಸೆಲ್ ಪಂಪ್‍ಗಳನ್ನು ಸೋಲಾರ್ ಪಂಪ್‍ಗಳಾಗಿ ಪರಿವರ್ತಿಸಿದ್ದೇವೆ. ಕಲ್ಲಿದ್ದಲು ಉತ್ಪಾದನೆ ಆಗುತ್ತಿದೆ. ನವೀಕರಿಸಬಹುದಾದ ಇಂಧನ ಮೂಲಗಳನ್ನು ಹೆಚ್ಚು ಮಾಡಿದ್ದೇವೆ. ಇದೆಲ್ಲ ಬಿಜೆಪಿ ಕಾಲದಲ್ಲಿ, ನರೇಂದ್ರ ಮೋದಿಯವರ ಆಡಳಿತದಲ್ಲಿ ಆಗಿರೋದು ಎಂದರು.

ರೈತರ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರದಿಂದ ಪಿಎಂ ಕುಸುಮ್ 2.0 ಯೋಜನೆ

ಸಿಲಿಂಡರ್ ಕೊರತೆಯ ಆತಂಕ ಸೃಷ್ಟಿಸಿ ಕೇಂದ್ರ ಸರ್ಕಾರದ ವಿರುದ್ಧ ಭಾವನೆಯನ್ನು ಕೆರಳಿಸುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ. ನಮಗೆ ಮುಖ್ಯವಾಗಿ ಮಧ್ಯಪ್ರಾಚ್ಯದಿಂದ ಪೆಟ್ರೋಲಿಯಂ ಉತ್ಪನ್ನಗಳು ಬರುತ್ತಿದ್ದವು. ಬಹುತೇಕ ಕಡೆ ತೈಲ ತೆಗೆಯುವ ಸಮಸ್ಯೆ ಆಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಮೊದಲು ಎಲ್‍ಪಿಜಿ ನಂತರ ಫರ್ಟಿಲೈಜರ್‌ಗೆ ಆದ್ಯತೆ ನೀಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದರು.