ಕಾಕ್ರೋಚ್ ಜನತಾ ಪಕ್ಷಕ್ಕೆ ಬೆಂಬಲ ಸೂಚಿಸಿದ ಬಿಜೆಪಿ ನಾಯಕರ ಮಕ್ಕಳು
ಹಲವು ಬಿಜೆಪಿ ನಾಯಕರ ಮಕ್ಕಳು ಕಾಕ್ರೋಚ್ ಜನತಾ ಪಕ್ಷಕ್ಕೆ ಬಹಿರಂಗವಾಗಿಯೇ ಬೆಂಬಲ ಸೂಚಿಸಿದ್ದಾರೆ. ದೆಹಲಿಯ ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಿಜೆಪಿ ನಾಯಕ ವಿಕ್ರಮ್ ಸಿಂಗ್ ಅವರ ಪುತ್ರಿ ಯಶಸ್ವಿನಿ ರಾಜೇ ಸಿಂಗ್, ಸಿಜೆಪಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು. ಧಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಸಂಭ್ರಮಿಸಿದ್ದರು.
ಸಂಗ್ರಹ ಚಿತ್ರ -
ನವದೆಹಲಿ: ಕಾಕ್ರೋಚ್ ಜನತಾ ಪಕ್ಷದ (Cockroach Janata Party) ಪ್ರತಿಭಟನೆಗೆ ಹಲವು ಬಿಜೆಪಿ ನಾಯಕರ (BJP leaders daughters) ಮಕ್ಕಳು ಬಹಿರಂಗವಾಗಿಯೇ ಬೆಂಬಲ ಸೂಚಿಸಿದ್ದಾರೆ. ಬಿಜೆಪಿ ನಾಯಕ (BJP Leaders) ವಿಕ್ರಮ್ ಸಿಂಗ್ ಅವರ ಪುತ್ರಿ ಯಶಸ್ವಿನಿ ರಾಜೇ ಸಿಂಗ್ ಅವರು ಇತ್ತೀಚೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ (Delhi's Jantar Mantar) ನಡೆದ ಸಿಜೆಪಿ ವಿದ್ಯಾರ್ಥಿ (CJP Protest) ಪ್ರತಿಭಟನೆಯಲ್ಲಿ ಭಾಗವಹಿಸಿ, ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರ ರಾಜಿನಾಮೆಯನ್ನು ಸಂಭ್ರಮಿಸಿದ್ದರು. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಧಮೇಂದ್ರ ಪ್ರಧಾನ್ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಪ್ರತಿಭಟನಾಕಾರರ ಬಗ್ಗೆ ಬಳಸಿರುವ ಪದಗಳನ್ನು ಟೀಕಿಸಿದರು.
ಹಲವಾರು ಬಿಜೆಪಿ ನಾಯಕರ ಮಕ್ಕಳು ಕಾಕ್ರೋಚ್ ಜನತಾ ಪಕ್ಷದ ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು. ಇದರಲ್ಲಿ ಭಾಗವಹಿಸಿರುವ ಯಶಸ್ವಿನಿ ರಾಜೇ ಸಿಂಗ್ ಅವರು ಉತ್ತರ ಪ್ರದೇಶದ ಫತೇಪುರ್ ಸದರ್‌ನ ಮಾಜಿ ಶಾಸಕ, ಬಿಜೆಪಿ ನಾಯಕ ವಿಕ್ರಮ್ ಸಿಂಗ್ ಅವರ ಪುತ್ರಿ.
ನಿಂದನೀಯ ಭಾಷೆ ಬಳಸಿದ್ರೆ ಜೈಲು ಶಿಕ್ಷೆಯಾಗುತ್ತಾ? ಬಿಎನ್ಎಸ್ ನಿಯಮಗಳು ಏನು ಹೇಳುತ್ತವೆ?
ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಸಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅವರು ಮಾಧ್ಯಮವೊಂದರ ಜೊತೆ ಮಾತನಾಡಿ, ಹೊಸ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಬಗ್ಗೆಯೂ ಟೀಕಿಸಿದರು. ಅವರೊಂದು ಹಾಸ್ಯ ಎಂದಿರುವ ಅವರು, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪತ್ರದ ಬಗ್ಗೆ ಉಲ್ಲೇಖಿಸಿ ಅವರು ರಾಷ್ಟ್ರವಿರೋಧಿ ಶಕ್ತಿಗಳು ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳದಂತೆ ನೋಡಿಕೊಳ್ಳದೇ ಇರಲು ತಾವು ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ. ಈ ರೀತಿಯ ರಾಜಿನಾಮೆಯನ್ನು ನಿರ್ಣಾಯಕ ಕ್ಷಣವೆಂದು ನೋಡುವುದು ನಿಜಕ್ಕೂ ದೂರದೃಷ್ಟಿಯಿಲ್ಲದ ಕೆಲಸ ಎಂದರು.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಖಂಡಿಸಿ, ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ರಾಜಿನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. 36 ದಿನಗಳ ಈ ಪ್ರತಿಭಟನೆಯು ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯೊಂದಿಗೆ ಸರ್ಕಾರ ಹಲವು ಭರವಸೆ ನೀಡುವುದರೊಂದಿಗೆ ಕೊನೆಗೊಂಡಿತು.
ಈ ಚಳವಳಿಗೆ ಯಶಸ್ವಿನಿ ಕೂಡ ಬೆಂಬಲ ನೀಡಿದ್ದರು. ಇನ್‌ಸ್ಟಾಗ್ರಾಮ್ ಮೂಲಕ ಸಾಕಷ್ಟು ಅನುಯಾಯಿಗಳನ್ನು ಹೊಂದಿರುವ ಯಶಸ್ವಿನಿ, ರಾಜಕೀಯೇತರರನ್ನು ಹುರಿದುಂಬಿಸುವಲ್ಲಿ ಸಿಜೆಪಿ ಉತ್ತಮ ಕೆಲಸ ಮಾಡಿದೆ ಎಂದು ಹೇಳಿದ್ದಾರೆ.
Al Jazeera didn't pick this interview by chance. It picked a voice that perfectly fit its narrative.
— The Gray Operator (@TheGrayOperator) July 30, 2026
The question isn't what she said. It's why the same foreign platforms repeatedly amplify only one side of India's story.pic.twitter.com/mriatf46Su
ನಾನು ನನ್ನ ತಂದೆಯೊಂದಿಗೆ ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ. ನಾನು ಆರ್ಥಿಕವಾಗಿ ಸ್ವತಂತ್ರಳು, ಒಬ್ಬಂಟಿಯಾಗಿ ವಾಸಿಸುತ್ತಿದ್ದೇನೆ. ಹಲವಾರು ವರ್ಷಗಳಿಂದ ಫತೇಪುರ್ ಸದರ್‌ಗೆ ಹೋಗಿಲ್ಲ. ನಾನು ತಂದೆ ಇರುವಂತಹ ವಾತಾವರಣದಲ್ಲಿರಲು ಬಯಸುವುದಿಲ್ಲ. ಅದರಿಂದ ದೊಡ್ಡ ಅಂತರವನ್ನು ಕಾಯ್ದುಕೊಳ್ಳಲು ಬಯಸುತ್ತೇನೆ ಏನು ಹೇಳಿದ್ದಾರೆ.
ಯಶಸ್ವಿನಿಗಿಂತ ಮೊದಲು ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಅವರ ಪುತ್ರಿ ಅರ್ಚಿತಾ ಸಚಿನ್ ರಹರ್ ಅವರು ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಸಂಭ್ರಮಿಸಿ ಎಲ್ಲರ ಗಮನ ಸೆಳೆದಿದ್ದರು. ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಸಂದೇಶ ಹಂಚಿಕೊಂಡಿದ್ದ ಅವರ ಪೋಸ್ಟ್ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಸೆಳೆಯಿತು.
ಬಿಜೆಪಿ ನಾಯಕ, ಅಸ್ಸಾಂನ ಕಂದಾಯ ಸಚಿವ ಕೇಶಬ್ ಮಹಾಂತ ಅವರ ಮಗಳು ದಿಬಿಸಾ ಮಹಾಂತ ಅವರು ಕೂಡ ಕಾಕ್ರೋಚ್ ಜನತಾ ಪಕ್ಷದ ಪ್ರತಿಭಟನೆಯನ್ನು ಬೆಂಬಲಿಸಿದರು. ಇದರ ಬಳಿಕ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ, ಮಕ್ಕಳು ಮಾಡುವ ವಿಷಯಗಳಿಗೆ ಅವರ ಪೋಷಕರನ್ನು ಜೋಡಿಸಬಾರದು ಎಂದು ಹೇಳಿದರು.