ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vote Chori: ಹರಿಯಾಣ ಮತದಾರರ ಪಟ್ಟಿಯಲ್ಲಿರುವ ಸೀಮಾ, ಸ್ವೀಟಿ ನಾನೇ! ಬ್ರೆಜಿಲ್ ಮಾಡೆಲ್ ಫಸ್ಟ್‌ ರಿಯಾಕ್ಷನ್‌

Brazilian model: ಹರಿಯಾಣದಲ್ಲಿ ಬುಧವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಉಲ್ಲೇಖಿಸಿರುವ ಸೀಮಾ, ಸ್ವೀಟಿ ಚಿತ್ರ ಬ್ರೆಜಿಲ್ ಮಾಡೆಲ್ ನದ್ದು ಎಂದು ತಿಳಿದು ಬಂದಿದೆ. ಈ ಮಹಿಳೆಯ ಗುರುತನ್ನು 22 ಬಾರಿ ಹರಿಯಾಣದ ಮತದಾರರ ಪಟ್ಟಿಯಲ್ಲಿ ಬಳಸಲಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದು, ಇದಕ್ಕೆ ಪ್ರತಿಯಾಗಿ ಈಗ ಬ್ರೆಜಿಲ್ ಮಾಡೆಲ್ ಲಾರಿಸಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಹರಿಯಾಣ ಮತದಾರರ ಪಟ್ಟಿಯಲ್ಲಿರುವ ಸೀಮಾ, ಸ್ವೀಟಿ ಸಿಕ್ಕಿಬಿದ್ಳು!

ಹರಿಯಾಣ ಮತದಾರರ ಪಟ್ಟಿಯಲ್ಲಿರುವ ಬ್ರೆಜಿಲಿಯನ್ ಮಾಡೆಲ್ ಲಾರಿಸಾ -

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (congress leader Rahul Gandhi) ಅವರು ಬುಧವಾರ ಹರಿಯಾಣದ ಮತದಾರರ ಪಟ್ಟಿಯಲ್ಲಿ (Haryana voter list) ಸೀಮಾ, ಸ್ವೀಟಿ ಮತ್ತು ಸರಸ್ವತಿ ಮೊದಲಾದ ಬೇರೆಬೇರೆ ಹೆಸರುಗಳಲ್ಲಿ ಒಬ್ಬ ಮಹಿಳೆಯ ಗುರುತನ್ನು 22 ಬಾರಿ ಬಳಸಲಾಗಿದೆ ಎಂದು ಆರೋಪಿಸಿದ್ದು, ಅವರು ಇದಕ್ಕೆ ತೋರಿಸಿದ ಚಿತ್ರ ಬ್ರೆಜಿಲ್ ಮಾಡೆಲ್ (Brazilian model) ನದ್ದು ಎಂದು ತಿಳಿದು ಬಂದಿದೆ. ರಾಹುಲ್ ಗಾಂಧಿಯವರ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆದ ಬಳಿಕ ಬ್ರೆಜಿಲಿಯನ್ ಮಾಡೆಲ್ ಲಾರಿಸಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದರಿಂದ ರಾಹುಲ್ ಗಾಂಧಿಯವರ ಪತ್ರಿಕಾ ಪ್ರತಿನಿಧಿ ದಿಗ್ಭ್ರಮೆಗೊಂಡಿದ್ದಾರೆ.

ಬ್ರೆಜಿಲಿಯನ್ ಮಾಡೆಲ್ ಫೋಟೋ ತೋರಿಸಿ ಹರಿಯಾಣ ಮತದಾರರ ಪಟ್ಟಿಯಲ್ಲಿ ಇವರ ಹೆಸರಿದೆ ಎಂಬುದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ ಬಳಿಕ ಬ್ರೆಜಿಲ್ ಮಾಡೆಲ್ ಲಾರಿಸಾ ಅವರನ್ನು ಹಲವಾರು ಮಂದಿ ಪತ್ರಿಕಾ ವರದಿಗಾರರು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ ಎಂದು ಲಾರಿಸಾ ಹೇಳಿದ್ದಾರೆ.

ಇದನ್ನೂ ಓದಿ: Anunay Sood passes away: ಖ್ಯಾತ ಯೂಟ್ಯೂಬರ್‌ ಅನುನಯ್ ಸೂದ್ ಅಮೆರಿಕದಲ್ಲಿ ನಿಗೂಢ ಸಾವು

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಬುಧವಾರ ಹರಿಯಾಣದಲ್ಲಿ "ವೋಟ್ ಚೋರಿ" ಎಂಬ ಹೇಳಿಕೆ ನೀಡಿದ್ದು, ಇದು ಎಲ್ಲರ ಗಮನವನ್ನು ಬ್ರೆಜಿಲ್ ಮಾಡೆಲ್ ಕಡೆ ತಿರುಗಿಸಿದೆ. ಯಾಕೆಂದರೆ ರಾಹುಲ್ ಗಾಂಧಿ ಅವರು ತಮ್ಮ ಹೇಳಿಕೆಗೆ ಪೂರಕವಾಗಿ ತೋರಿಸಿದ ಚಿತ್ರ ಬ್ರೆಜಿಲಿಯನ್ ಮಾಡೆಲ್ ನದ್ದು. ಹರಿಯಾಣದ ಮತದಾರರ ಪಟ್ಟಿಯಲ್ಲಿ ಸೀಮಾ, ಸ್ವೀಟಿ ಮತ್ತು ಸರಸ್ವತಿ ಮೊದಲಾದ ಹೆಸರುಗಳಲ್ಲಿರುವ 22 ಬಾರಿ ಬಳಸಿರುವ ಚಿತ್ರ ಬ್ರೆಜಿಲ್ ಮಾಡೆಲ್ ನದ್ದು ಎಂದು ತಿಳಿದು ಬಂದಿದೆ.

ರಾಹುಲ್ ಗಾಂಧಿಯವರ ಹೇಳಿಕೆಯ ಬಳಿಕ ಬ್ರೆಜಿಲ್ ಮಾಡೆಲ್ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಹುಡುಕಾಟ ಪ್ರಾರಂಭಿಸಲಾಗಿದೆ. ಈ ಕುರಿತು ಪತ್ರಿಕಾ ವರದಿಗಳು ಪ್ರಕಟವಾದವು. ಈ ಚಿತ್ರವು ದೊಡ್ಡ ಪ್ರಮಾಣದ ಚುನಾವಣಾ ವಂಚನೆಗೆ "ಪುರಾವೆ" ಎಂದು ಅನೇಕರು ಹೇಳಿದರು.

ರಾಹುಲ್ ಗಾಂಧಿ ಅವರು ತೋರಿಸಿರುವ ಚಿತ್ರವನ್ನು ಆನ್‌ಲೈನ್‌ನಲ್ಲಿ "ಮ್ಯಾಥಿಯಸ್ ಫೆರೆರೊ" ಎಂದು ಗುರುತಿಸಲಾಗಿದೆ. ಇವರು ಒಬ್ಬ ಬ್ರೆಜಿಲಿಯನ್ ಛಾಯಾಗ್ರಾಹಕರಾಗಿದ್ದಾರೆ. ರಾಹುಲ್ ಗಾಂಧಿ ಹೇಳಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಕೆಲವೇ ಗಂಟೆಗಳ ಬಳಿಕ ಬ್ರೆಜಿಲಿಯನ್ ಮಾಡೆಲ್‌ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇದಕ್ಕೆ ವಿಡಿಯೊ ಸಂದೇಶ ಕಳುಹಿಸಿರುವ ಲಾರಿಸಾ ನೆರಿ, ಇದು ತಾವು ಸುಮಾರು 20 ವರ್ಷ ವಯಸ್ಸಿನವಳಾಗಿದ್ದಾಗ ತೆಗೆದ ಚಿತ್ರ ಎಂದು ಅವರು ಹೇಳಿದ್ದಾರೆ.

ಕೆಲವರು ಇದನ್ನು ಎಐ ರಚಿತಾ ಎಂದು ಅರೋಪಿಸಿದ್ದಾರೆ. ಮಹಿಳೆ ಪೋರ್ಚುಗೀಸ್ ಭಾಷೆಯಲ್ಲಿ ಮಾತನಾಡುತ್ತಿದ್ದು, ತಮ್ಮ ಹೆಸರು, ಚಿತ್ರಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಆಘಾತಕ್ಕೊಳಗಾಗಿರುವುದಾಗಿ ಹೇಳಿದರು. ಅವರು ತಮ್ಮ ಮಾತನ್ನು ಮುಂದುವರಿಸುತ್ತಾ, ಜನರೇ ನಾನು ನಿಮಗೆ ಗಾಸಿಪ್ ಅನ್ನು ಹೇಳುತ್ತೇನೆ. ನೀವು ತುಂಬಾ ನಗುತ್ತಿದ್ದೀರಿ ಅಲ್ಲವೇ? ನನ್ನ ಹಳೆಯ ಫೋಟೋವನ್ನು ಅವರು ಬಳಸುತ್ತಿದ್ದಾರೆ. ಇದು ಸರಿಯೇ? ಆಗ ನನಗೆ ಸುಮಾರು 20 ವರ್ಷ ಆಗಿರಬೇಕು ಎಂದು ತಿಳಿಸಿದ್ದಾರೆ.

ಅವರು ಚುನಾವಣೆಗಾಗಿ ನನ್ನ ಫೋಟೋವನ್ನು ಬಳಸುತ್ತಿದ್ದಾರೆ. ಇದು ಚುನಾವಣೆಯೋ ಅಥವಾ ನೀವು ಮತ ​​ಚಲಾಯಿಸಬೇಕಾದ ಸ್ಥಳವೋ ಎಂದು ತಿಳಿದಿಲ್ಲ. ಭಾರತದಲ್ಲಿ ಅವರು ನನ್ನನ್ನು ಇತರರನ್ನು ವಂಚಿಸಲು ಭಾರತೀಯ ಮಹಿಳೆ ಎಂದು ಚಿತ್ರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Prabhas: ವದಂತಿಗಳಿಗೆ ತೆರೆ ಎಳೆದ ಚಿತ್ರತಂಡ; ಪ್ರಭಾಸ್‌ ‘ದಿ ರಾಜಾಸಾಬ್’ ಬಿಗ್‌ ಅಪ್‌ಡೇಟ್‌

ಲಾರಿಸಾ ಚಿತ್ರದ ಕುರಿತು ವಿವಾದ ಉಂಟಾದ ಬಳಿಕ ಅನೇಕರು ಅವರನ್ನು ಸಂಪರ್ಕಿಸಿ ಸಂದರ್ಶನ ಮಾಡಲು ಬಯಸುತ್ತಿದ್ದಾರೆ ಎಂದು ಹೇಳಿರುವ ಅವರು, ಓ ದೇವರೇ ಇದು ಎಂತಹ ಹುಚ್ಚು. ನಾವು ಯಾವ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಕೆಲವರು ನನ್ನ ಸಲೂನ್‌ಗೆ ಕರೆ ಮಾಡಿ ನನ್ನೊಂದಿಗೆ ಸಂದರ್ಶನಕ್ಕಾಗಿ ಮಾತನಾಡಲು ಬಯಸುತ್ತಿದ್ದಾರೆ. ಆದರೆ ನಾನು ಉತ್ತರಿಸಲಿಲ್ಲ ಎಂದು ಅವರು ತಿಳಿಸಿದ್ದಾರೆ. ಬ್ರೆಜಿಲಿಯನ್ ಛಾಯಾಗ್ರಾಹಕ ಮ್ಯಾಥ್ಯೂಸ್ ಫೆರೆರೊ ತೆಗೆದಿರುವ ಅನೇಕ ಭಾವಚಿತ್ರಗಳಲ್ಲಿ ಲಾರಿಸಾ ಅವರ ಫೋಟೋ ಕೂಡ ಒಂದಾಗಿದೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಕೂಡ ಆಗಿದೆ.