Zohran Mamdani: ಜೋಹ್ರಾನ್ ಮಮ್ದಾನಿಯ ಪ್ರಚಾರ ವ್ಯವಸ್ಥಾಪಕಿ ಭಾರತೀಯ ಮೂಲದ ಮಾಯಾ ಯಾರು ಗೊತ್ತೇ?
ನ್ಯೂಯಾರ್ಕ್ ಮೇಯರ್ ಆಗಿ ನೇಮಕಗೊಂಡ ಜೋಹ್ರಾನ್ ಮಮ್ದಾನಿ ಅವರ ಪ್ರಚಾರ ವ್ಯವಸ್ಥಾಪಕಿಯಾಗಿ ಮಾಯಾ ಹಂಡಾ ಅವರನ್ನು ನೇಮಕ ಮಾಡಲಾಗಿದೆ. ಪ್ರಚಾರ ಕಾರ್ಯವನ್ನು ನಿರ್ವಹಿಸುವಲ್ಲಿ ದಾಖಲೆಯನ್ನು ಹೊಂದಿರುವ ಮಾಯಾ ಹಂಡಾ ಅವರ ನೇಮಕಕ್ಕೆ ಕಾರಣ ಏನು ಎಂಬುದರ ಕುರಿತು ಜೋಹ್ರಾನ್ ಮಮ್ದಾನಿ ಹೇಳುವುದು ಹೀಗೆ..
ನ್ಯೂಯಾರ್ಕ್ ನಗರದ ನೂತನ ಮೇಯರ್ ಜೋಹ್ರಾನ್ ಮಮ್ದಾನಿ ಅವರ ಪ್ರಚಾರ ವ್ಯವಸ್ಥಾಪಕಿಯಾಗಿರುವ ಮಾಯಾ ಹಂಡಾ. (ಸಂಗ್ರಹ ಚಿತ್ರ) -
ನ್ಯೂಯಾರ್ಕ್: ವಿಶ್ವದ ಗಮನ ಸೆಳೆದಿದ್ದ ನ್ಯೂಯಾರ್ಕ್ ಮೇಯರ್ (New York’s youngest mayor) ಸ್ಥಾನಕ್ಕೆ ಮೊದಲ ಭಾರತೀಯ ಮೂಲದ ಮುಸ್ಲಿಂ ಜೋಹ್ರಾನ್ ಮಮ್ದಾನಿ (Zohran Mamdani) ಆಯ್ಕೆಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಪ್ರಜಾಪ್ರಭುತ್ವ, ಸಮಾಜವಾದಿಯಾಗಿರುವ ಮಮ್ದಾನಿ ಅವರು ಮಾಜಿ ಗವರ್ನರ್ ಆಂಡ್ರ್ಯೂ ಕ್ಯುಮೊ ಮತ್ತು ರಿಪಬ್ಲಿಕನ್ ಕರ್ಟಿಸ್ ಸ್ಲಿವಾ ಅವರನ್ನು ಹಿಂದಿಕ್ಕಿ ನ್ಯೂಯಾರ್ಕ್ ನಗರದ ಮೇಯರ್ ಆಗಿ ನೇಮಕಗೊಂಡಿದ್ದಾರೆ. ಇವರನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದವರು (Maya Handa) ಮಾಯಾ ಹಂಡಾ.
ಜೋಹ್ರಾನ್ ಮಮ್ದಾನಿ ಅವರ ಪ್ರಚಾರ ವ್ಯವಸ್ಥಾಪಕಿಯಾಗಿ ಮಾಯಾ ಹಂಡಾ ಅವರನ್ನು ಈ ವರ್ಷದ ಆರಂಭದಲ್ಲಿ ನೇಮಿಸಲಾಗಿತ್ತು. ಜೋಹ್ರಾನ್ ಮಮ್ದಾನಿ ಅವರು ಮುಂದಿನ ಜನವರಿ 1ರಂದು ಅಧಿಕಾರ ವಹಿಸಿಕೊಳ್ಳಲಿರುವ ನ್ಯೂಯಾರ್ಕ್ ನಗರದ ಅತ್ಯಂತ ಕಿರಿಯ ಮೇಯರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಇದನ್ನೂ ಓದಿ: Viral Video: ಚುನಾವಣೆಗೂ ಮೊದಲೇ ಭೇಟಿಯಾದ್ರು ಯಾದವ್ ಸಹೋದರರು;ಮಾತಿಲ್ಲ ಕತೆಯಿಲ್ಲ...... ವಿಡಿಯೋ ನೋಡಿ
ನ್ಯೂಯಾರ್ಕ್ ಮೇಯರ್ ಹುದ್ದೆಗೆ ನಡೆದ ಚುನಾವಣೆಯಲ್ಲಿ ಶೇ. 80ರಷ್ಟು ಮತಗಳಲ್ಲಿ ಮಮ್ದಾನಿ ಅವರು ಶೇ. 50.3ರಷ್ಟು ಮತ ಗಳಿಸಿದ್ದರು. ಇವರ ಪ್ರತಿಸ್ಪರ್ಧಿ ಆಂಡ್ರ್ಯೂ ಕ್ಯುಮೊ ಅವರು ಶೇ. 41.6 ಮತ್ತು ರಿಪಬ್ಲಿಕನ್ ಅಭ್ಯರ್ಥಿ ಕರ್ಟಿಸ್ ಸಿಲ್ವಾ ಅವರು ಶೇ. 7.2ರಷ್ಟು ಮತಗಳಿಸಿದ್ದರು.
ಶತಮಾನಗಳ ಇತಿಹಾಸವಿರುವ ನ್ಯೂಯಾರ್ಕ್ ಮೇಯರ್ ಸ್ಥಾನದಲ್ಲಿ ಅತ್ಯಂತ ಕಿರಿಯ ಮೇಯರ್ ಆಗಿ ಗುರುತಿಸಿಕೊಂಡ ಜೋಹ್ರಾನ್ ಮಮ್ದಾನಿ ಅವರು ತಮ್ಮ ಪ್ರಚಾರ ಭಾಷಣದಲ್ಲಿ ನಾನು ಪರಿಪೂರ್ಣ ರಾಜಕಾರಣಿ ಅಲ್ಲ. ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ ನಾನು ಅತ್ಯಂತ ಸಣ್ಣವನು. ನಾನು ಮುಸ್ಲಿಂ, ಪ್ರಜಾಪ್ರಭುತ್ವವಾದಿ , ಸಮಾಜವಾದಿ. ಇದಕ್ಕಾಗಿ ನಾನು ಯಾರ ಬಳಿಯೂ ಕ್ಷಮೆ ಕೇಳುವುದಿಲ್ಲ ಎಂದು ತಿಳಿಸಿದ್ದಾರೆ.
ಪ್ರಚಾರ ಅಭಿಯಾನದಲ್ಲಿ ಮಮ್ದಾನಿಯವರಿಗೆ ಸಾಥ್ ನೀಡಿದವರಲ್ಲಿ ಮಾಯಾ ಹಂಡಾ ಕೂಡ ಒಬ್ಬರು. ಅವರನ್ನು ಈ ವರ್ಷದ ಆರಂಭದಲ್ಲಿ ಪ್ರಚಾರ ವ್ಯವಸ್ಥಾಪಕರನ್ನಾಗಿ ನೇಮಕ ಮಾಡಲಾಗಿತ್ತು. ಕಳೆದ ಜುಲೈನಲ್ಲಿ ಜೋಹ್ರಾನ್ ಮಮ್ದಾನಿ ಅವರ ಹೊಸ ಪ್ರಚಾರ ವ್ಯವಸ್ಥಾಪಕರನ್ನಾಗಿ ನೇಮಕಗೊಂಡ ಮಾಯಾ ಹಂಡಾ ಅವರು ಎಲ್ಲೆ ಬಿಸ್ಗಾರ್ಡ್ ಚರ್ಚ್ ಅವರ ಉತ್ತರಾಧಿಕಾರಿಯಾಗಿದ್ದಾರೆ.
ಪ್ರಗತಿಪರ ಪ್ರಚಾರಗಳನ್ನು ನಿರ್ವಹಿಸುವ ದಾಖಲೆಯನ್ನು ಹೊಂದಿರುವ ಹಂಡಾ ವಿಧಾನಸಭೆಯಲ್ಲಿ ಮಮ್ದಾನಿ ಅವರೊಂದಿಗೆ ಕೆಲಸ ಮಾಡಿದ್ದಾರೆ ನ್ಯೂಯಾರ್ಕ್‌ನ ಮಾಜಿ ಪ್ರತಿನಿಧಿ ಜಮಾಲ್ ಬೌಮನ್ ಮತ್ತು ಮ್ಯಾಸಚೂಸೆಟ್ಸ್ ಸೆನೆಟರ್ ಎಲಿಜಬೆತ್ ವಾರೆನ್‌ರಂತಹ ಪ್ರಮುಖ ಸ್ಥಳೀಯ ಮತ್ತು ರಾಷ್ಟ್ರೀಯ ಪ್ರಗತಿಪರ ವ್ಯಕ್ತಿಗಳೊಂದಿಗೂ ಹಂಡಾ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: Viral Video: ತಾಜ್ ಮಹಲ್ ಎದುರು ಶಿವ ಸ್ತೋತ್ರ ಪಠಿಸಿದ ಯುವತಿ; ವಿಡಿಯೋ ನೋಡಿ
ಹಂಡಾ ಅವರು ಈ ಹಿಂದೆ ಕ್ವೀನ್ಸ್ ಅಸೆಂಬ್ಲಿ ಸದಸ್ಯೆ ಕ್ಲೇರ್ ವಾಲ್ಡೆಜ್ ಮತ್ತು ಬ್ರೂಕ್ಲಿನ್ ಕೌನ್ಸಿಲ್ ಸದಸ್ಯೆ ಶಹಾನಾ ಹನೀಫ್ ಅವರಿಗೂ ಕಾರ್ಯ ನಿರ್ವಹಿಸಿರುವುದನ್ನು ಮಮ್ದಾನಿಯವರ ಪ್ರಚಾರ ತಂಡ ಗಮನಿಸಿದೆ.