Chanakya Niti: ಈ 5 ವಿಷಯಗಳನ್ನು ಎಂದಿಗೂ ನಂಬಬಾರದು; ಚಾಣಕ್ಯನ ಕಟ್ಟೆಚ್ಚರ ಇದು
ಚಾಣಕ್ಯನು ತನ್ನ ನೀತಿಯಲ್ಲಿ ಜೀವನದಲ್ಲಿ ಯಶಸ್ಸು ಪಡೆಯಲು ಎಚ್ಚರಿಕೆಯಿಂದ ವರ್ತಿಸುವ ಮಹತ್ವವನ್ನು ವಿವರಿಸಿದ್ದಾನೆ. ಸಂಪತ್ತು, ವಿದ್ಯಾಭ್ಯಾಸ, ವೈವಾಹಿಕ ಜೀವನ, ಸ್ನೇಹ–ಶತ್ರು, ರಾಜಕೀಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಲಹೆಗಳನ್ನು ನೀಡಿದ್ದಾನೆ. ಅದರಲ್ಲೇ, ಕೆಲವು ವಿಷಯಗಳನ್ನು ಎಂದಿಗೂ ನಂಬಬಾರದು ಎಂದು ಎಚ್ಚರಿಕೆ ನೀಡಿದ್ದಾನೆ
ಚಾಣಕ್ಯ ನೀತಿ -
ಬೆಂಗಳೂರು: ಚಾಣಕ್ಯ ನೀತಿಯನ್ನು, ಜೀವನವನ್ನು ಸರಿಯಾದ ದಾರಿಯಲ್ಲಿ ನಡೆಸುವ ಮಾರ್ಗದರ್ಶಿಯಂತೆ ಪರಿಗಣಿಸಲಾಗುತ್ತದೆ. ಸಂಪತ್ತು, ವಿದ್ಯೆ, ವೈವಾಹಿಕ ಜೀವನ, ಸ್ನೇಹ–ಶತ್ರು, ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತು ಚಾಣಕ್ಯನು ಸ್ಪಷ್ಟ ಸಲಹೆಗಳನ್ನು ನೀಡಿದ್ದಾನೆ. ಅವುಗಳನ್ನು ಅರಿತು ಅನುಸರಿಸುವವನು ದುಃಖಗಳಿಂದ ದೂರಾಗಿ ಯಶಸ್ಸಿನತ್ತ ಸಾಗಬಹುದು ಎಂದು ಹೇಳಲಾಗಿದೆ.
ಇದೇ ವೇಳೆ ಕೆಲ ವಿಷಯಗಳ ಬಗ್ಗೆ ಚಾಣಕ್ಯ ಜಾಗರೂಕತೆಯಿಂದ ಇರುವಂತೆ ಸೂಚಿಸಿದ್ದು ಕೆಲವನ್ನು ಯಾವತ್ತೂ ಅತಿಯಾಗಿ ನಂಬಬಾರದು ಎಂಬ ಎಚ್ಚರಿಕೆಯನ್ನು ಕೂಡ ಚಾಣಕ್ಯ ನೀಡಿದ್ದಾನೆ.
ಹಾಗಾದ್ರೆ ಚಾಣಕ್ಯನ ಪ್ರಕಾರ ನಂಬಿಕೆಗೆ ಅರ್ಹವಲ್ಲದ ಆ ಗುಣಗಳು ಅಥವಾ ಆ ವಿಷಯಗಳು ಯಾವುವು..? ಎಂಬ ಮಾಹಿತಿ ಇಲ್ಲಿದೆ
ನದಿಯ ಮೇಲೆ ಅತಿಯಾದ ನಂಬಿಕೆ ಬೇಡ
ಹೊರಗಿನಿಂದ ಶಾಂತವಾಗಿ ಕಾಣಿಸುವ ನದಿ ಒಳಗೆ ಅಪಾಯವನ್ನು ಮರೆಮಾಚಿರಬಹುದು. ಹರಿವು ಏಕಾಏಕಿ ಹೆಚ್ಚಾದರೆ ಜೀವಕ್ಕೆ ಹಾನಿ ಉಂಟಾಗಬಹುದು. ಆದ್ದರಿಂದ ಮೇಲ್ನೋಟಕ್ಕೆ ಕಂಡಂತೆ ಎಲ್ಲವನ್ನೂ ನಂಬುವುದು ಸರಿಯಲ್ಲ ಎಂಬ ಸಂದೇಶವನ್ನು ಚಾಣಕ್ಯ ನೀಡುತ್ತಾನೆ.
ಸ್ವಾರ್ಥಿ ಮತ್ತು ದುರಾಸೆಯ ಜನರು
ತಮ್ಮ ಲಾಭಕ್ಕಾಗಿ ಏನನ್ನಾದರೂ ಮಾಡುವ ಸ್ವಭಾವದವರಿಂದ ಎಚ್ಚರಿಕೆಯಿಂದ ಇರಬೇಕು. ಅವರು ತಮ್ಮ ಉದ್ದೇಶ ಸಾಧಿಸಲು ಇತರರ ಹಿತವನ್ನೂ ಹಾಳು ಮಾಡಬಹುದು.
ಭಯಾನಕ ಪ್ರಾಣಿಗಳ ವಿಶ್ವಾಸ
ಕ್ರೂರ ಸ್ವಭಾವದ ಪ್ರಾಣಿಗಳನ್ನು ಸಾಕುವುದು ಅಪಾಯಕಾರಿಯಾಗಿದೆ. ಅವು ಯಾವಾಗ ದಾಳಿ ಮಾಡುತ್ತವೆ ಎನ್ನುವುದು ಊಹಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ತಮ್ಮ ಮಾಲೀಕರ ಮೇಲೆಯೇ ಹಾನಿ ಮಾಡುವ ಸಾಧ್ಯತೆ ಇದೆ.
Chanakya Niti: ಪುರುಷರ ಈ ಕೆಟ್ಟ ಅಭ್ಯಾಸಗಳು ಮನೆಯ ನೆಮ್ಮದಿಯನ್ನು ಹಾಳುಮಾಡುತ್ತವೆ!
ಕೋಪಿಷ್ಠ ವ್ಯಕ್ತಿ ಮತ್ತು ಆಯುಧ
ಕೋಪವು ಮನಸ್ಸಿನ ವಿವೇಕವನ್ನು ಕಳೆಸುತ್ತದೆ. ವಿಶೇಷವಾಗಿ ಕೋಪಗೊಂಡ ವ್ಯಕ್ತಿಯ ಕೈಯಲ್ಲಿ ಆಯುಧವಿದ್ದರೆ, ಅವನಿಂದ ದೂರವಿರುವುದು ಸೂಕ್ತ. ಏಕೆಂದರೆ ಆ ಕ್ಷಣದಲ್ಲಿ ಅವನು ಯೋಚಿಸದೇ ಹಾನಿ ಮಾಡಬಹುದು.
ಅಧಿಕಾರಿಗಳ ಸಮೀಪವರ್ತಿಗಳ ಮೇಲೆ ಅತಿನಂಬಿಕೆ ಬೇಡ
ಹಿರಿಯ ಅಧಿಕಾರಿಗಳ ಸೇವಕರು ಅಥವಾ ಸ್ನೇಹಿತರಿಗೆ ವೈಯಕ್ತಿಕ ರಹಸ್ಯಗಳನ್ನು ಹೇಳುವುದು ಅಪಾಯಕಾರಿ. ಅವರು ತಮ್ಮ ಲಾಭಕ್ಕಾಗಿ ಆ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ.
ಒಟ್ಟಿನಲ್ಲಿ, ಚಾಣಕ್ಯನ ನೀತಿ ನಮಗೆ ತಿಳಿಸುವುದು ಏನೆಂದರೆ — ಜೀವನದಲ್ಲಿ ಯಶಸ್ಸು ಪಡೆಯಲು ವಿವೇಕ, ಎಚ್ಚರಿಕೆ ಮತ್ತು ಸರಿಯಾದ ನಿರ್ಧಾರ ಅತ್ಯಗತ್ಯ. ಮೇಲ್ನೋಟಕ್ಕೆ ಕಾಣಿಸುವುದನ್ನೇ ನಂಬದೇ, ಪರಿಸ್ಥಿತಿಯನ್ನು ಅರಿತು ನಡೆದುಕೊಂಡರೆ ದುಃಖಗಳನ್ನು ದೂರವಿಟ್ಟು ಸುಖಮಯ ಜೀವನ ಸಾಗಿಸಬಹುದು.