Dhanalakshmi Pooje: ಮನೆಯಲ್ಲಿಯೇ ಸರಳವಾಗಿ ಲಕ್ಷ್ಮೀ ಪೂಜೆಗೆ ಕಲಶಕ್ಕೆ ಅಲಂಕಾರ ಹೀಗೆ ಮಾಡಿ
Dhanalakshmi Pooje Decoration: ದೀಪಾವಳಿ ಹಬ್ಬದ ವೇಳೆ ಧನಲಕ್ಷ್ಮಿ ಹಬ್ಬವನ್ನು ಮಾಡಲಾಗುತ್ತದೆ. ಕಲಶಕ್ಕೆ ಲಕ್ಷ್ಮಿ ದೇವಿಯ ಅಲಂಕಾರ ಮಾಡಿ ಪೂಜಿಸುವ ಶುಭ ದಿನ. ಧನಲಕ್ಷ್ಮಿ ಹಬ್ಬದಂದು ಲಕ್ಷ್ಮಿ ದೇವಿಯನ್ನು ಅಲಂಕಾರ ಮಾಡುವುದು ಹೇಗೆ..? ಕಲಶಕ್ಕೆ ಸೀರೆ ಉಡಿಸಿ, ಅಲಂಕಾರ ಮಾಡುವ ವಿಧಿ - ವಿಧಾನ ಹೀಗಿದೆ.

ಲಕ್ಷ್ಮೀ ಪೂಜೆ -

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ(deepavali) ಯಂದು ಧನಲಕ್ಷ್ಮೀ ಹಾಗೂ ಗಣೇಶನಿಗೆ ವಿಶೇಷ ಅಲಂಕಾರಗಳೊಂದಿಗೆ ಪೂಜೆ ಮಾಡುವ ಸಂಪ್ರದಾವಿದೆ. ಮಾತೆ ಲಕ್ಷ್ಮೀಯನ್ನು ಒಲಿಸಿಕೊಂಡರೆ ಅಷ್ಟೈಶ್ವರ್ಯ, ಸಂಪತ್ತು, ನೆಮ್ಮದಿ ವೃದ್ಧಿಯಾಗುವುದೆಂಬ ನಂಬಿಕೆ. ದೀಪಾವಳಿಯಂದು ಲಕ್ಷ್ಮೀ ದೇವಿಯ ಪೂಜೆ ಎಲ್ಲರೂ ಮಾಡುವುದು ಸಾಮಾನ್ಯ. ಆದರೆ, ಪೂಜೆಯ ವೇಳೆ ಯಾವ ರೀತಿಯಾಗಿ ಆಕರ್ಷಕವಾಗಿ ಅಲಂಕಾರ ಮಾಡಬಹುದೆಂದು ಬಹುತೇಕರಿಗೆ ತಿಳಿದೇ ಇರುವುದಿಲ್ಲ.
ಹೌದು.. ಲಕ್ಷ್ಮೀ ಪೂಜೆ ವೇಳೆ ತಾಯಿಯ ಫೋಟೋ ಅಥವಾ ಮೂರ್ತಿ ಬಳಿ ಕಲಶವನ್ನಿಟ್ಟು ಪೂಜೆ ಸಲ್ಲಿಸುವುದುಂಟು. ಈ ಕಲಶವನ್ನು ಹೇಗೆ ಸಿದ್ಧಪಡಿಸಿಕೊಳ್ಳಬೇಕು? ಯಾವ ಲೋಹದ ಕಲಶ ಬಳಸಬೇಕು? ಯಾವ ತೆರನಾಗಿ ಅಲಂಕಾರ ಮಾಡಬೇಕು ಎಂಬುದರ ಬಗ್ಗೆ ತಿಳಿದೇ ಇರುವುದಿಲ್ಲ. ಹಾಗಿದ್ದರೆ ಬನ್ನಿ ಕಲಶದ ಅಲಂಕಾರದ ಬಗ್ಗೆ ತಿಳಿಯೋಣ..
ಲಕ್ಷ್ಮೀ ಪೂಜೆಯ ವಿಧಿ-ವಿಧಾನಗಳು, ಕಲಶದ ಅಲಂಕಾರ ಹೀಗಿರಲಿ
- ಲಕ್ಷ್ಮೀ ಕಳಸವಿಡಲು ಬೆಳ್ಳಿ, ಪಂಚ ಲೋಹ ಅಥವಾ ಹಿತ್ತಾಳೆಯ ಕಳಸವನ್ನು ಆಯ್ಕೆ ಮಾಡಿ
- ಕಲಶ ಸ್ಥಾಪನೆಗೆ ಬೆಳ್ಳಿ ಲೇಪನದ ಮಣೆ ಅಥವಾ ಸಧಾರಣ ಮಣೆಯನ್ನು ಬಳಸಿ
- ಮಣೆಯ ಮಲೆ ಶುಭ್ರವಾದ ಬಟ್ಟೆಯನ್ನು ಹಾಸಿ, ಅದರ ಮೇಲೆ ಸ್ವಲ್ಪ ಅಕ್ಷತೆಯನ್ನು ಹಾಕಿ
- ಕಲಶಕ್ಕೆ ನೂಲಿನ ದಾರ ಸುದ್ದಿ, ನೀರು ತುಂಬಿಸಿ ಮಣೆಯ ಮೇಲೆ ಇರಿಸಿ
ಈ ಸುದ್ದಿಯನ್ನು ಓದಿ:Deepavali Pooje: ಅಮಾವಾಸ್ಯೆಯಂದೇ ಧನಲಕ್ಷ್ಮೀ ಪೂಜೆ ಏಕೆ ಮಾಡಬೇಕು?
- ನೀರು ತುಂಬಿದ ಕಲಶಕ್ಕೆ ಐದು ಮಾವಿನ ಎಲೆಗಳನ್ನು ಹೊರ ಮುಖ ಮಾಡಿ ಇರಿಸಿ, ಬಳಿಕ ಅದರ ಮೇಲೆ ತೆಂಗಿನ ಕಾಯಿಯನ್ನು ಜುಟ್ಟು ಮೇಲ್ಮುಖ ಮಾಡಿ ಇಡಿ
- ತೆಂಗಿನ ಕಾಯಿಗೆ ಅರಿಶಿಣದ ಲೇಪನ ಮಾಡಿ, ತಿಲಕವನ್ನಿಟ್ಟು ಕಾಡಿಗೆಯಿಂದ ಕಣ್ಣು ಬರೆಯಿರಿ
- ಕಲಶಕ್ಕೆ ಅರಿಶಿನ ಕೊಂಬು ಅಥವಾ ಆಭರಣಗಳನ್ನು ತೊಡಿಸಿ
- ಕಲಸದ ಕಂಠ ಹಾಗೂ ಅದರ ಮೇಲಿರಿಸಿರುವ ತೆಂಗಿನ ಕಾಯಿತಿಗೆ ಹೂವಿನ ಅಲಂಕಾರ ಮಾಡಿ
- ಸೀರೆಯನ್ನು ಅಂದವಾಗಿ ಮಡಿಕೆ ಮಾಡಿ ಕಲಶಕ್ಕೆ ಸುತ್ತಲೂಬಹುದು, ಇದಿರಿಂದ ಕಲಶದ ಅಂದ ಮತ್ತಷ್ಟು ಹೆಚ್ಚುತ್ತದೆ
- ಮಾರುಕಟ್ಟೆಯಲ್ಲಿ ದೊರೆಯುವ ಲಕ್ಷ್ಮೀ ದೇವಿಯ ಮುಖವಾಡವನ್ನು ಕಲಶಕ್ಕೆ ತೊಡಿಸಬಹುದು
ಹೀಗೆ ಧನಲಕ್ಷ್ಮಿ ಕಲಶವನ್ನು ಆಕರ್ಷಕವಾಗಿ ಅಲಂಕಾರ ಮಾಡಿ, ದೇವಿಯ ಕೃಪಾಶೀರ್ವಾದಕ್ಕೆ ಪಾತ್ರರಾಗಿ. ತಾಯಿ ಲಕ್ಷ್ಮೀ ದೇವಿ ನಿಮ್ಮೆಲರಿಗೂ ಅಷ್ಟೈಶ್ವರ್ಯ ಸಂಪತ್ತು ನೆಮ್ಮದಿ ನೀಡಲಿ.