Daily Horoscope: ದಿನ ಭವಿಷ್ಯ-ಇಂದು ದೀಪಾವಳಿ ಅಮಾವಾಸ್ಯೆ.. ಈ ರಾಶಿಗೆ ಭಾರೀ ಒಳಿತು!
ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಕೃಷ್ಣ ಪಕ್ಷದ, ದೀಪಾವಳಿ ಅಮಾವಾಸ್ಯೆ, ಚಿತ್ತ ನಕ್ಷತ್ರ, ಅಕ್ಟೋಬರ್ 21 ನೇ ತಾರೀಖಿನ ಮಂಗಳವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ.

Horoscope -

ಬೆಂಗಳೂರು: ಇಂದು ವಿಶ್ವವಸುನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಕೃಷ್ಣ ಪಕ್ಷದ, ಅಕ್ಟೋಬರ್ 21 ನೇ ತಾರೀಖಿನ ಮಂಗಳವಾರದ ಈ ದಿನ ದೀಪಾವಳಿ ಅಮಾವಾಸ್ಯೆ ಯಾಗಿದೆ. ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಚಿತ್ತ ನಕ್ಷತ್ರ ಇದ್ದು ಇದರ ಅಧಿಪತಿ ಕುಜನಾಗಿದ್ದಾನೆ. ಹೀಗಾಗಿ ಹೆಚ್ಚಿನವರಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಅತ್ಯುತ್ತಮವಾದ ದಿನವಾಗಿದ್ದು ಮನಸ್ಸಿಗೆ ಬಹಳಷ್ಟು ನೆಮ್ಮದಿ ಇದ್ದು ಸಾಮಾಜಿಕ ಚಟುವಟಿಕೆಗಳಲ್ಲಿ ಯಶಸ್ಸು ಗಳಿಸುತ್ತೀರಿ.
ವೃಷಭ ರಾಶಿ: ವೃಷಭ ರಾಶಿ ಅವರಿಗೆ ಮಧ್ಯಾಹ್ನ ವರೆಗೂ ಸ್ವಲ್ಪ ತೊಂದರೆಗಳು ಬರಬಹುದು. ಹಣಕಾಸಿನ ವಿಚಾರ ಹಾಗೂ ವೈಯಕ್ತಿಕ ವಿಚಾರದಲ್ಲಿ ತೊಂದರೆಗಳು ಬರಬಹುದು. ಮಧ್ಯಾಹ್ನ ನಿಮ್ಮ ಬುದ್ದಿವಂತಿಕೆಯ ಮೂಲಕ ನಿಮಗೆ ಒಳಿತು ಆಗಲಿದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಮಧ್ಯಾಹ್ನ ವರೆಗೂ ಸಂಸಾರದ ತಾಪತ್ರ ಯಗಳು, ಮನೆಯ ಜವಾಬ್ದಾರಿ ಎಲ್ಲವೂ ಕಾಡಬಹುದು. ಮಧ್ಯಾಹ್ನ ಬಳಿಕ ನಿಮ್ಮ ಬುದ್ದಿವಂತಿಕೆ ಯಿಂದ ಬೇರೆ ಚಟುವಟಿಕೆಯಲ್ಲಿ ಪಾಲ್ಗೊಳ್ಳಬಹುದು.
ಕಟಕ ರಾಶಿ: ಕಟಕ ರಾಶಿ ಅವರಿಗೆ ಮಧ್ಯಾಹ್ನ ವರೆಗೂ ಬಹಳ ಉತ್ತಮವಾದ ದಿನವಾಗಿದೆ. ಮಧ್ಯಾಹ್ನ ಬಳಿಕ ಬಂಧುಗಳ ಜೊತೆ ಇರಿಸು ಮುರಿಸು ಉಂಟಾಗಬಹುದು. ಮನೆಯ ವಿಚಾರ,ಆಸ್ತಿ ಪಾಸ್ತಿ ವಿಚಾರವಾಗಿ ಸ್ವಲ್ಪ ಯೋಚನೆಗಳು ಕಾಡಬಹುದು
ಇದನ್ನು ಓದಿ:Vastu Tips: ಆರ್ಥಿಕ ಸಮೃದ್ಧಿಗಾಗಿ ಸರಿಯಾದ ದಿಕ್ಕಿನಲ್ಲಿ ದೀಪ ಬೆಳಗಿಸಿ
ಸಿಂಹ ರಾಶಿ: ಸಿಂಹ ರಾಶಿ ಅವರು ಮಧ್ಯಾಹ್ನ ವರೆಗೂ ಕೆಲಸ ಕಾರ್ಯದಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಬೇಕಾಗುತ್ತದೆ. ಮಧ್ಯಾಹ್ನ ಬಳಿಕ ಬಂಧು ಬಾಂಧವರೆಲ್ಲ ಒಟ್ಟಿಗೆ ಸೇರಿ ನೆಮ್ಮದಿ ಕಾಣುತ್ತೀರಿ.
ಕನ್ಯಾ ರಾಶಿ: ಕನ್ಯಾ ರಾಶಿ ಅವರು ಮಧ್ಯಾಹ್ನ ವರೆಗೂ ನಿಮ್ಮಲ್ಲೆ ಸಮಾಧಾನವನ್ನು ಕಾಣು ತ್ತಿರುತ್ತೀರಿ.ಮಧ್ಯಾಹ್ನ ಬಳಿಕ ಕುಟುಂಬದ ಜೊತೆ ನೀವು ಸಮಯ ಕಳೆಯಬಹುದು.
ತುಲಾ ರಾಶಿ: ತುಲಾ ರಾಶಿಯಲ್ಲಿ ಇರುವವರಿಗೆ ಮಧ್ಯಾಹ್ನ ವರೆಗೂ ಮನಸ್ಸಿಗೆ ನಾನಾ ಕ್ಷೇಷ ಇರಬಹುದು. ಮಧ್ಯಾಹ್ನ ಬಳಿಕ ಮನಸ್ಸು ತಿಳಿಯಾಗಿ ಸಮಾಧಾನ ತರಬಹುದು.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಮಧ್ಯಾಹ್ನವರೆಗೆ ಅತೀ ಉತ್ತಮವಾದ ದಿನವಾಗಿದ್ದು ಸಂತೋಷದಾಯಕ ದಿನವಾಗಿದೆ. ಗುಂಪು ಕೆಲಸದಿಂದ ಮಿತ್ರರಿಂದ ಅತೀ ಹೆಚ್ಚಿನ ಸಂತಸ ಸಿಗಲಿದೆ. ಮಧ್ಯಾಹ್ನ ಬಳಿಕ ಯಾವುದೇ ಮುಖ್ಯ ನಿರ್ಧಾರ ಕೈಗೊಳ್ಳಲು ಹೋಗಬೇಡಿ.
ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಮಧ್ಯಾಹ್ನ ವರೆಗೂ ಕಾರ್ಯ ಕ್ಷೇತ್ರದಲ್ಲಿ ಜವಾಬ್ದಾರಿಗಳು ಹೆಚ್ಚಾಗಬಹುದು. ಮಧ್ಯಾಹ್ನ ಬಳಿಕ ಮಿತ್ರ ರೊಂದಿಗೆ ಸಂತಸ ಸಿಗಲಿದೆ.
ಮಕರ ರಾಶಿ: ಮಕರ ರಾಶಿ ಅವರಿಗೆ ಮಧ್ಯಾಹ್ನ ವರೆಗೂ ಸ್ವಲ್ಪ ಅಡೆತಡೆಗಳು ಕಾಡ ಬಹುದು. ಮಧ್ಯಾಹ್ನ ಬಳಿಕ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಮುಂದುವರಿಯಬಹುದು.
ಕುಂಭರಾಶಿ: ಕುಂಭ ರಾಶಿಯವರಿಗೆ ಮಧ್ಯಾಹ್ನ ವರೆಗೂ ಸ್ವಲ್ಪ ಮನಸ್ಸಿಗೆ ಕ್ಷೇಷ ಉಂಟಾಗುವ ದಿನವಾಗಿದೆ. ಮಧ್ಯಾಹ್ನ ಬಳಿಕ ಭಾಗ್ಯೋದಯವಾದ ದಿನ ವಾಗಲಿದೆ. ಇದರಿಂದ ಭಗವಂತನ ಆಶೀರ್ವಾದ ಕೂಡ ಪ್ರಾಪ್ತಿ ಯಾಗುತ್ತದೆ.
ಮೀನ ರಾಶಿ: ಮೀನ ರಾಶಿ ಅವರಿಗೆ ಮಧ್ಯಾಹ್ನ ವರೆಗೂ ಸಂತಸ ಸಿಗಲಿದೆ. ಮಧ್ಯಾಹ್ನ ಬಳಿಕ ಮನಸ್ಸಿಗೆ ಕ್ಷೇಷ ಆಗಬಹುದು. ಧಾನ್ಯಧಿಗಳನ್ನು ಮಾಡಿ ಸಮಯ ಕಳೆದರೆ ಉತ್ತಮ..