Daily Horoscope: ದಿನ ಭವಿಷ್ಯ- ಪಂಚಮಿ ತಿಥಿಯ ಈ ದಿನ ಈ ರಾಶಿಯವರಿಗೆ ಭಾರೀ ಒಳಿತು!
ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಶುಕ್ಷ ಪಕ್ಷದ, ಪಂಚಮಿ ತಿಥಿ, ರೋಹಿಣಿ ನಕ್ಷತ್ರ ಅಕ್ಟೋಬರ್ 11 ನೇ ತಾರೀಖಿನ ಶನಿವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ.

Daily Horoscope -

ಬೆಂಗಳೂರು: ಇಂದು ವಿಶ್ವ ವಸುನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಶುಕ್ಷ ಪಕ್ಷದ, ಪಂಚಮಿ ತಿಥಿ, ಅಕ್ಟೋಬರ್ 11ನೇ ತಾರೀಖಿನ ಶನಿವಾರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಮೇಷ ರಾಶಿಯವರಿಗೆ ಕುಟುಂಬದಲ್ಲಿ ಅತೀ ಹೆಚ್ಚಿನ ಸಂತಸ ಸಿಗಲಿದ್ದು ಮನಸ್ಸಿಗೂ ಅತೀ ಹೆಚ್ಚಿನ ನೆಮ್ಮದಿ ಸಿಗಲಿದೆ. ಕುಟುಂಬದಲ್ಲಿ ಕೂಡ ಒಳ್ಳೆಯ ಶುಭ ಸಮಾರಂಭ ಇರಬಹುದು. ಆದರೆ ಅತೀ ಹೆಚ್ಚಿನ ಭಾವುಕತೆ ಯಿಂದ ನಿಮಗೆ ಸಿಗುವ ಸಂತಸವೂ ನೋವುಂಟು ಮಾಡಬಹುದು. ಹಾಗಾಗಿ ಇಂದಿನ ದಿನ ಸುಖಮಯವಾಗಿ ಕಳೆಯಿರಿ.
ವೃಷಭ ರಾಶಿ: ವೃಷಭ ರಾಶಿ ಅವರಿಗೆ ಇಂದು ಉತ್ತಮವಾದ ದಿನ ಆಗಲಿದೆ. ಮನಸ್ಸಿಗೆ ಬಹಳಷ್ಟು ನೆಮ್ಮದಿ ಇದ್ದು ನೀವು ಅಂದು ಕೊಂಡದ್ದೆಲ್ಲ ನೇರವೆರಲಿದೆ. ನಿಮ್ಮ ದೊಡ್ಡ ಸಮಸ್ಯೆಗೆ ಇಂದು ಪರಿಹಾರ ಪ್ರಾಪ್ತಿಯಾಗಲಿದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಮನಸ್ಸಿಗೆ ಸ್ವಲ್ಪ ಕ್ಷೇಷ ಆಗುವ ಸಾಧ್ಯತೆ ಇದೆ. ಆದ್ದರಿಂದ ಮಿತ್ರರೊಡನೆ ಇಂದು ವಿವೇಕವಾಗಿ ವ್ಯವಹಾರ ಮಾಡಬೇಕು.
ಕಟಕ ರಾಶಿ: ಕಟಕ ರಾಶಿ ಅವರಿಗೆ ಇಂದು ಉತ್ತಮವಾದ ದಿನವಾಗಿದ್ದು ಅತ್ಯುತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಇಷ್ಟಾರ್ಥ ಸಿದ್ದಿ ಕೂಡ ಆಗಲಿದೆ. ಧನ ಆಗಮನ ಕೂಡ ನಿಮಗೆ ಆಗಲಿದೆ.
ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ನಿಮ್ಮ ಕೆಲಸ ಕಾರ್ಯದಲ್ಲಿ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಈ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಿದಾಗ ಎಲ್ಲವೂ ಸರಿಯಾಗಲಿದೆ. ಇಲ್ಲದೆ ಹೋದರೆ ತೊಂದರೆಗಳು ಉಂಟಾಗಬಹುದು.
ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಅತ್ಯುತ್ತಮವಾದ ದಿನವಾಗಿದೆ. ಇಂದು ಭಾಗ್ಯೋದಯವಾದ ದಿನವಾಗಿದ್ದು ನಿಮ್ಮ ಗೌರವ ಉಳಿಸಿಕೊಳ್ಳಲು ಕೆಲವು ಪ್ರಯತ್ನ ಮಾಡಬೇಕಾಗುತ್ತದೆ. ಅದೇ ರೀತಿ ಇಂದು ಹಿರಿಯರ ಆಶೀರ್ವಾದ ಪಡೆದುಕೊಳ್ಳುವುದು ಕೂಡ ಮುಖ್ಯವಾಗುತ್ತದೆ.
ಇದನ್ನು ಓದಿ:Vastu Tips: ಹೊಸ ಫ್ಲಾಟ್ ಖರೀದಿ ಯೋಚನೆಯೇ? ಹಾಗಿದ್ದರೆ ಇವು ತಿಳಿದಿರಲಿ
ತುಲಾ ರಾಶಿ: ತುಲಾ ರಾಶಿಯಲ್ಲಿ ಇರುವವರಿಗೆ ಕಷ್ಟಕರವಾದ ದಿನ ವಾಗಿದ್ದು ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಮನದಲ್ಲಿ ಅತೀ ಹೆಚ್ಚಿನ ವ ಆತಂಕ ಇರುತ್ತದೆ. ಹಾಗಾಗಿ ಧ್ಯಾನಧಿಗಳನ್ನು ಮಾಡುವ ಮೂಲಕ ಸಮಯ ಕಳೆಯಬೇಕು.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಉತ್ತಮವಾದ ದಿನ ವಾಗಿದೆ.. ಬೇರೆಯವರಿಂದ ನಿಮಗೆ ಬಹಳಷ್ಟು ಸಹಕಾರ ಪ್ರಾಪ್ತಿಯಾಗುತ್ತದೆ. ಅದೇ ರೀತಿ ದಾಂಪತ್ಯದಲ್ಲೂ ನೆಮ್ಮದಿ ಸಿಗಲಿದೆ. ಪಾರ್ಟ್ನರ್‌ಶಿಪ್ ವ್ಯವಹಾರದಲ್ಲೂ ಯಶಸ್ಸು ಸಿಗಲಿದೆ.
ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಉತ್ತಮವಾದ ದಿನ ವಾಗಿದೆ. ಸಾಮಾಜಿಕ ವಿಚಾರದಲ್ಲಿ ಮುನ್ನಡೆ ಸಿಗಲಿದ್ದು ಶತ್ರುಗಳು ನಿಮ್ಮನ್ನು ಹಿಮ್ಮೆಟ್ಟಬಹುದು. ಆರೋಗ್ಯದಲ್ಲೂ ಕೂಡ ಸುಧಾರಣೆ ಕಾಣಬಹುದು.
ಮಕರ ರಾಶಿ: ಮಕರ ರಾಶಿ ಅವರಿಗೆ ಬುದ್ದಿವಂತಿಕೆ ಯಿಂದ ಕೆಲಸದಲ್ಲಿ ಸಾಧಿಸಬಹುದು. ಆದರೆ ಮಕ್ಕಳು ಇರುವ ಪೋಷಕರಿಗೆ ತೊಂದರೆ ಆಗಬಹುದು. ಪೋಷಕರಿಗೆ ಮಕ್ಕಳ ಜವಾಬ್ದಾರಿ ಹೆಚ್ಚಾಗಿ ಇರಬಹುದು. ಷೇರು ಮಾರುಕಟ್ಟೆಗಳಲ್ಲಿ ಸ್ವಲ್ಪ ನಷ್ಟ ವಾಗಬಹುದು.
ಕುಂಭರಾಶಿ: ಕುಂಭ ರಾಶಿ ಯವರಿಗೆ ನಿಮ್ಮ ಮನೆ ಆಸ್ತಿ ಪಾಸ್ತಿ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಬೇಕಾಗಿ ಬರಬಹುದು. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಇರುವವರಿಗೆ ಇಂದು ಕೆಲಸ ಹೆಚ್ಚು ಇರುತ್ತದೆ.
ಮೀನ ರಾಶಿ: ಮೀನ ರಾಶಿ ಅವರಿಗೆ ಉತ್ತಮ ದಿನವಾಗಿದೆ. ಯಾರೆಲ್ಲ ಸೋಷಿಯಲ್ ಮೀಡಿಯಾ, ಪತ್ರಿಕೋದ್ಯಮದಲ್ಲಿ ಇದ್ದಾರೋ ಅಂತವರಿಗೆ ಉತ್ತಮ ದಿನ. ಬರಹ ಗಾರರು, ಭಾಷಣಕಾರರಿಗೆ ಅತ್ಯುತ್ತಮ ದಿನವಾಗಿದೆ. ಕೆಲಸ ಕಾರ್ಯದಲ್ಲಿ ಪ್ರಗತಿ ಕೂಡ ಹೆಚ್ಚಾಗಲಿದೆ.