ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಹೊಸ ಫ್ಲಾಟ್ ಖರೀದಿ ಯೋಚನೆಯೇ? ಹಾಗಿದ್ದರೆ ಇವು ತಿಳಿದಿರಲಿ

ಸ್ವಂತದ್ದು ಒಂದು ಮನೆ ಹೊಂದಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಹೀಗಾಗಿ ಸಾಲಸೋಲ ಮಾಡಿಯಾದರೂ ಚಿಂತೆ ಇಲ್ಲ ಒಂದು ಫ್ಲಾಟ್ ಖರೀದಿ ಮಾಡೋಣ ಎಂದುಕೊಂಡರೆ ಕೆಲವೊಂದು ವಾಸ್ತು ಸಲಹೆಗಳನ್ನು ಪಾಲಿಸುವುದು ಬಹಳ ಮುಖ್ಯ. ಇದರಿಂದ ಮನೆಯಲ್ಲಿ ಸಕಾರಾತ್ಮಕತೆ ಉಳಿಯುತ್ತದೆ. ಇಲ್ಲವಾದರೆ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು.

ಹೊಸ ಫ್ಲಾಟ್ ಖರೀದಿ: ವಾಸ್ತು ಏನು ಹೇಳುತ್ತದೆ ಗೊತ್ತೇ?

-

ಬೆಂಗಳೂರು: ಹೊಸ ಫ್ಲಾಟ್ (New flat) ಖರೀದಿಸುವ ಯೋಚನೆ ಇದ್ದರೆ ಇದರಲ್ಲಿ ಸಕಾರಾತ್ಮಕ ಅಂಶಗಳು ಇವೆಯೇ ಎಂದು ಪರಿಶೀಲಿಸುವುದು ಬಹಳ ಮುಖ್ಯ. ಯಾಕೆಂದರೆ ಇದರಿಂದ ಮನೆಯಲ್ಲಿ (Vastu tips for home) ಸುಖ, ಶಾಂತಿ, ಸಮೃದ್ಧಿಯನ್ನು ಕಾಣಬಹುದು. ಇಲ್ಲವಾದರೆ ನಾನಾ ರೀತಿಯ ತೊಂದರೆಗಳನ್ನು ಅನುಭವಿಸಬೇಕಾಗಬಹುದು. ವ್ಯವಹಾರ ಮತ್ತು ಮನೆಯ (Vastu for apartment) ಅಗತ್ಯಗಳಿಗಾಗಿ ನಾವು ವಾಸ್ತು ಶಾಸ್ತ್ರದ (Vastu shastra) ಪಾಲನೆ ಮಾಡಬೇಕು. ಇಲ್ಲವಾದರೆ ವಿವಿಧ ಸಮಸ್ಯೆಗಳಿಗೆ ಕಾರಣವಾಗಬಹುದು ಎನ್ನುತ್ತಾರೆ ಜ್ಯೋತಿಷಿ ಮತ್ತು ವಾಸ್ತು ತಜ್ಞ ರಿದ್ಧಿ ಬಹ್ಲ್.

ಸ್ವಂತದ್ದು ಒಂದು ಮನೆ ಹೊಂದಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಹೀಗಾಗಿ ಕೈಗೆಟಕುವ ದರದಲ್ಲಿ ಸಿಗುವ ಫ್ಲಾಟ್ ಆದರೂ ಸಾಕು ಎಂದುಕೊಂಡು ನಾವು ಖರೀದಿ ಮಾಡುವ ಫ್ಲಾಟ್‌ನಲ್ಲಿ ವಾಸ್ತು ಸಲಹೆಗಳನ್ನು ಪಾಲಿಸುವುದು ಬಹಳ ಮುಖ್ಯ. ಅವುಗಳು ಯಾವುದು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

ಡ್ರಾಯಿಂಗ್ ರೂಮ್

ಮನೆಯಲ್ಲಿ ನಾವು ಮೊದಲು ನೋಡುವ ಕೋಣೆ ಡ್ರಾಯಿಂಗ್ ರೂಮ್. ಕುಟುಂಬ ಮತ್ತು ಇತರ ಸದಸ್ಯರಲ್ಲಿ ಸಕಾರಾತ್ಮಕ ಭಾವನೆಗಳನ್ನು ಪ್ರೇರೇಪಿಸುವ ಈ ರೂಮ್ ಅನ್ನು ಎಲ್ಲರೂ ಸುಂದರವಾಗಿ ಅಲಂಕರಿಸುತ್ತಾರೆ. ವಾಸ್ತು ಪ್ರಕಾರ ಡ್ರಾಯಿಂಗ್ ರೂಮ್ ವಾಯುವ್ಯ, ದಕ್ಷಿಣ ಅಥವಾ ಪಶ್ಚಿಮ ದಿಕ್ಕುಗಳಲ್ಲಿರಬೇಕು. ಅಪಾರ್ಟ್‌ಮೆಂಟ್‌ನಲ್ಲಿ ಈ ದಿಕ್ಕುಗಳಲ್ಲಿ ಡ್ರಾಯಿಂಗ್ ರೂಮ್ ಇಲ್ಲದಿದ್ದರೆ ಆ ಕೋಣೆಯ ವಾಸ್ತುವನ್ನು ಪೀಠೋಪಕರಣಗಳು ಮತ್ತು ಅಲಂಕಾರಿಕ ವಸ್ತುಗಳೊಂದಿಗೆ ಸರಿಪಡಿಸಬೇಕಾಗುತ್ತದೆ. ಇದಕ್ಕಾಗಿ ಡ್ರಾಯಿಂಗ್ ರೂಮಿನ ನೈಋತ್ಯ ದಿಕ್ಕಿನಲ್ಲಿ ಪೀಠೋಪಕರಣಗಳನ್ನು ಇರಿಸಿ. ಇದು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ವೃದ್ಧಿಸುತ್ತದೆ.

ಬೆಡ್ ರೂಮ್

ಮಲಗುವ ಕೋಣೆಯಲ್ಲಿ ಸ್ಫಟಿಕ ಅಥವಾ ರಾಧಾ ಮತ್ತು ಕೃಷ್ಣನ ಚಿತ್ರವನ್ನು ಇರಿಸುವುದು ವಾಸ್ತುವಿನ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಸಕಾರಾತ್ಮಕ ಶಕ್ತಿಯು ಉಳಿಯುತ್ತದೆ. ಈ ಕೋಣೆಯಲ್ಲಿ ವಾಸಿಸುವವರ ಮನಸ್ಸು ಶಾಂತ ಮತ್ತು ಸಂಯಮದಿಂದ ಕೂಡಿರುತ್ತದೆ.

ಅಡುಗೆ ಮನೆ

ಕುಟುಂಬ ಸದಸ್ಯರ ಆರೋಗ್ಯಕ್ಕೆ ವಿಶೇಷ ಕೊಡುಗೆ ನೀಡುವ ಸ್ಥಳ ಅಡುಗೆ ಮನೆ. ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯು ನೈಋತ್ಯ ದಿಕ್ಕಿನಲ್ಲಿರಬೇಕು. ಯಾವಾಗಲೂ ಅಡುಗೆ ಮನೆಯನ್ನು ಸ್ವಚ್ಛ ಮತ್ತು ಸುಂದರವಾಗಿ ಇಟ್ಟು ಕೊಳ್ಳಬೇಕು. ಇದರಿಂದ ಮನೆಯ ಶಕ್ತಿ ಸಮತೋಲನದಲ್ಲಿರುವುದು ಎನ್ನುತ್ತಾರೆ ವಾಸ್ತು ತಜ್ಞರು.

ಇದನ್ನೂ ಓದಿ: Vastu Tips: ಮನೆಯ ಮೆಟ್ಟಿಲು ಯಾವ ರೀತಿ ಇರಬೇಕು?

ಸ್ನಾನಗೃಹ

ಫ್ಲಾಟ್‌ನಲ್ಲಿ ಸ್ನಾನಗೃಹವು ಸರಿಯಾದ ದಿಕ್ಕಿನಲ್ಲಿಲ್ಲದಿದ್ದರೆ ಅಲ್ಲಿ ಸ್ವಲ್ಪ ಉಪ್ಪನ್ನು ಇಡಬಹುದು. ಇದರಿಂದ ಸ್ನಾನಗೃಹದ ವಾಸ್ತು ದೋಷ ನಿವಾರಣೆಯಾಗುತ್ತದೆ. ನಕಾರಾತ್ಮಕ ಶಕ್ತಿ ದೂರವಾಗುತ್ತದೆ.