Daily Horoscope: ದಿನ ಭವಿಷ್ಯ- ಷಷ್ಠಿ ತಿಥಿಯ ಈ ದಿನ ಯಾವ ರಾಶಿಗೆ ಅದೃಷ್ಟ ಒಲಿದು ಬರಲಿದೆ?
ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಕೃಷ್ಣ ಪಕ್ಷದ, ಷಷ್ಠಿ ತಿಥಿ, ಮೃಗಶಿರಾ ನಕ್ಷತ್ರ, ಅಕ್ಟೋಬರ್ 12 ನೇ ತಾರೀಖಿನ ಭಾನುವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ.

Daily Horoscope -

ಬೆಂಗಳೂರು: ಇಂದು ವಿಶ್ವವಸುನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಕೃಷ್ಣ ಪಕ್ಷದ, ಷಷ್ಠಿ ತಿಥಿ, ಅಕ್ಟೋಬರ್ 12ನೇ ತಾರೀಖಿನ ಭಾನುವಾರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಮೃಗಶಿರಾ ನಕ್ಷತ್ರದ ಅಧಿಪತಿ ಕುಜ ಆಗಿದ್ದಾನೆ. ಹೀಗಾಗಿ ಎಲ್ಲ ರಾಶಿಗೆ ಪರಿಣಾಮ ಬೀರುತ್ತದೆ. ಮೇಷ ರಾಶಿಯವರಿಗೆ ಅತ್ಯುತ್ತಮ ದಿನವಾಗಿದ್ದು ಈ ದಿನವನ್ನು ಬಹಳಷ್ಟು ಖುಷಿ ಯಾಗಿ ಇಟ್ಟುಕೊಳ್ಳಿ. ಈ ದಿನ ನಿಮಗೆ ಅನುಕೂಲಕವಾಗಿದೆ. ಮಾತಿನಿಂದ ಎಲ್ಲರನ್ನು ಇಂದು ಗೆಲ್ಲುತ್ತೀರಿ. ಸೋಷಿಯಲ್ ಮೀಡಿಯಾ, ಟಿವಿ, ಪತ್ರಿಕೋದ್ಯಮದಲ್ಲಿ ಇರುವವರಿಗೆ ಉತ್ತಮ ದಿನ ಆಗಿರುತ್ತದೆ..
ವೃಷಭ ರಾಶಿ: ವೃಷಭ ರಾಶಿ ಅವರಿಗೆ ಇಂದು ಮನೆಯಲ್ಲಿ ಸ್ವಲ್ಪ ಕಿರಿ ಕಿರಿ ಆಗಬಹುದು. ಮನೆಯವರೊಂದಿಗೆ ಜಗಳ ಆಗಬಹುದು. ಹಾಗಾಗಿ ಮಾತುಕತೆ ಕಡಿಮೆ ಮಾಡಿದರೆ ಒಳಿತು.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಒಳ್ಳೆಯ ದಿನ ಆಗಿದೆ. ಚಂದ್ರ ನಿಮ್ಮ ರಾಶಿ ಯಲ್ಲಿ ಇರುವುದರಿಂದ ಉತ್ತಮ ಯೋಗ ಪ್ರಾಪ್ತಿಯಾಗುತ್ತದೆ. ಹಾಗಾಗಿ ಬಹಳನೇ ಶಾಂತಿ ಯುತವಾಗಿ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬಹುದು. ನಿಮಗೆ ಅತೀ ಹೆಚ್ಚಿನ ಉತ್ಸಾಹ ಎಲ್ಲದರಲ್ಲೂ ಇರುವುದರಿಂದ ಎಲ್ಲವೂ ಒಳ್ಳೆದಾಗಲಿದೆ.
ಕಟಕ ರಾಶಿ: ಕಟಕ ರಾಶಿ ಅವರಿಗೆ ಇಂದು ಕ್ಲಿಷ್ಟಕರವಾದ ದಿನವಾಗಿದೆ. ಮನಸ್ಸಿಗೆ ಅಷ್ಟಾಗಿ ನೆಮ್ಮದಿ ಇರುವುದಿಲ್ಲ. ಕೋಪ ಹೆಚ್ಚಾಗಿ ಜಗಳ, ಕಲಹ ಉಂಟಾಗಬಹುದು.
ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಅತ್ಯುತ್ತಮವಾದ ದಿನವಾಗಿದೆ. ಹಿಂದಿನ ಎರಡು ಮೂರು ದಿನಗಳ ಕ್ಷೇಷ ಎಲ್ಲ ಮಯವಾಗಲಿದೆ. ಗುಂಪು ಕೆಲಸದಿಂದ ಇಷ್ಟಾರ್ಥ ಸಿದ್ದಿ ಯಾಗಲಿದೆ...
ಕನ್ಯಾ ರಾಶಿ: ಕನ್ಯಾ ರಾಶಿ ಅವರು ಕಾರ್ಯ ಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡಬೇಕಾಗಿ ಬರಬಹುದು. ಅದೇ ರೀತಿ ಹೆಚ್ಚಿನ ಜವಾಬ್ದಾರಿಗಳು ನಿಮಗೆ ಬರಬಹುದು.
ತುಲಾ ರಾಶಿ: ತುಲಾ ರಾಶಿಯಲ್ಲಿ ಇರುವವರಿಗೆ ಭಾಗ್ಯೊದಯವಾಗಲಿದೆ. ಆದರೂ ಕೂಡ ಎಲ್ಲವೂ ನಿಮಗೆ ಬೇಕಾದಂತೆ ತಕ್ಷಣಕ್ಕೆ ನಡೆಯುವುದಿಲ್ಲ. ಹಿರಿಯರು ನಿಮನ್ನು ಟೀಕಿಸಬಹುದು. ಹಾಗಾಗಿ ಯಾವುದೇ ಕೆಲಸವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕು.
ಇದನ್ನು ಓದಿ:Vastu Tips: ಮನೆ ಸಮೀಪ ತಾಳೆ ಮರವಿದ್ದರೆ ಎದುರಾಗುವುದೇ ಸಮಸ್ಯೆ?
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಕಷ್ಟಕರವಾದ ದಿನವಾಗಿದೆ. ಮುಖ್ಯವಾದ ಕೆಲಸ ಕಾರ್ಯದಲ್ಲಿ ಯಾವುದೇ ನಿರ್ಧಾರ ಬೇಡ. ಯಾವುದೇ ಭಾವುಕತೆಗಳು ಇಂದು ಬೇಡ. ಮನಸ್ಸಿಗೆ ಕ್ಷೇಷ ಉಂಟಾಗುವ ಸಾಧ್ಯತೆ ಇದೆ.
ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಉತ್ತಮವಾದ ದಿನ ವಾಗಿದೆ. ಹಿಂದಿನ ಎರಡು ಮೂರು ದಿನಗಳ ವರೆಗೆ ಇದ್ದ ತೊಂದರೆಗಳು ಪರಿಹಾರವಾಗುತ್ತದೆ. ಪಾರ್ಟ್ನರ್ ಶೀಪ್ ವ್ಯವಹಾರದಲ್ಲಿ ನೆಮ್ಮದಿ ಸಿಗಲಿದೆ. ಎಲ್ಲರಿಂದಲೂ ನಿಮಗೆ ಸಹಕಾರ ಅಕ್ಕರೆ ಪ್ರಾಪ್ತಿ ಯಾಗಲಿದೆ.
ಮಕರ ರಾಶಿ: ಮಕರ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಸಾಮಾಜಿಕ ಕೆಲಸದಲ್ಲಿ ಜಯ ಪ್ರಾಪ್ತಿ ಯಾಗುತ್ತದೆ. ಶತ್ರುಗಳನ್ನು ಹೆಮ್ಮೆಟ್ಟುತ್ತೀರಿ. ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ.
ಕುಂಭರಾಶಿ: ಕುಂಭ ರಾಶಿ ಯವರಿಗೆ ಯಾರೆಲ್ಲ ಆರ್ಟ್ ಕೆಲಸದಲ್ಲಿ ಇರುತ್ತೀರಿ ಅವರಿಗೆ ಅತೀ ಹೆಚ್ಚಿನ ಪರಿಣಾಮ ಬೀರಲಿದೆ. ಇವತ್ತು ಯಾರಿಂದಲೂ ಗೌರವ, ಹೊಗಳಿಗೆ ಯಾರಿಂದಲೂ ನಿಮಗೆ ಬರುವುದಿಲ್ಲ. ಇದಕ್ಕಾಗಿ ಎರಡು ದಿನ ನೀವು ಕಾಯಬೇಕಾಗುತ್ತದೆ.
ಮೀನ ರಾಶಿ: ಮೀನ ರಾಶಿ ಅವರಿಗೆ ಮನೆಯ ಜವಾಬ್ದಾರಿ ಹೆಚ್ಚು ಇರುತ್ತದೆ. ಮನೆಯವರಿಗೆ ನೀವು ಹೆಚ್ಚಿನ ಗಮನ ನೀಡ ಬೇಕಾಗುತ್ತದೆ. ಅದೇ ರೀತಿ ಕೋರ್ಟ್ ,ಕಛೇರಿ ವ್ಯವಹಾರ ಮಾಡುವವರೂ ಜಾಗೃತೆ ವಹಿಸಿ. ಇನ್ನು ಈ ರಾಶಿಯವರು ತಾಯಿಯ ಆರೋಗ್ಯ ಬಗ್ಗೆ ಹೆಚ್ಚು ಗಮನ ವಹಿಸ ಬೇಕಾಗುತ್ತದೆ.