Daily Horoscope: ಮಂಗಳವಾರದ ಈ ದಿನ ಆರ್ದ್ರಾ ನಕ್ಷತ್ರದಿಂದ ಯಾರಿಗೆ ಶುಭ ಫಲ!
ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಕೃಷ್ಣ ಪಕ್ಷದ ದಶಮಿ ತಿಥಿ, ಆರ್ದ್ರಾ ನಕ್ಷತ್ರದ ಸೆಪ್ಟೆಂಬರ್ 16ನೇ ತಾರೀಖಿನ ಮಂಗಳವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ..

Horoscope -

ಬೆಂಗಳೂರು: ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಕೃಷ್ಣ ಪಕ್ಷದ ದಶಮಿ ತಿಥಿ, ಮೃಗಶಿರ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಇಂದು ಮೇಷ ರಾಶಿ ಅವರಿಗೆ ಉತ್ತಮವಾದ ಗೋಚರದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇರಲಿದ್ದು ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಎಲ್ಲ ರೀತಿಯಿಂದಲೂ ನೀವು ಎಲ್ಲವನ್ನು ಗೆಲ್ಲಲಿದ್ದೀರಿ. ಅಣ್ಣ ತಮ್ಮಂದಿರಿಂದ ನಿಮಗೆ ಸುಖ ಸಂತೋಷ ತುಂಬಿ ಬರಲಿದೆ. ಎಲ್ಲದರಲ್ಲೂ ಸುಖ ಪ್ರಾಪ್ತಿಯಾಗುತ್ತದೆ.
ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಸಂಸಾರದ ವಿಚಾರದಲ್ಲಿ ಸ್ವಲ್ಪ ಜವಾಬ್ದಾರಿಗಳು ಹೆಚ್ಚಾಗಿ ಇರುತ್ತವೆ. ನಿಮ್ಮ ಮನೆಯ ಕುಟುಂಬಸ್ಥರ ನಡುವೆಯೇ ಅನುಮಾನಗಳು ಹೆಚ್ಚಾಗಿ ನಿಮಗೆ ಬರುವ ಸಾದ್ಯತೆ ಇರುತ್ತದೆ. ಇದೆಲ್ಲವೂ ನಿಜವಾಗಲೂ ಸಾಧ್ಯವಿಲ್ಲ. ಎರಡು ದಿನಗಳ ಬಳಿಕ ಎಲ್ಲವೂ ಸರಿಯಾಗುವ ಸಾಧ್ಯತೆ ಇರುತ್ತದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ನಿಮ್ಮ ರಾಶಿಯಲ್ಲಿ ಚಂದ್ರ ಇರುವುದರಿಂದ ಮನಸ್ಸಿಗೆ ಬಹಳಷ್ಟು ನೆಮ್ಮದಿ ಇರುತ್ತದೆ. ಬಹಳ ದೊಡ್ಡದಾದ ಸಮಸ್ಯೆಯೊಂದು ಬಹಳ ಸರಳವಾಗಿ ಇಂದು ಬಗೆಹರಿಯಲಿದೆ.
ಕಟಕ ರಾಶಿ: ಕಟಕ ರಾಶಿ ಅವರಿಗೆ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಅಷ್ಟು ಅಷ್ಟೊಂದು ಒಳ್ಳೆಯ ದಿನ ಆಗುವುದಿಲ್ಲ. ನಿಮ್ಮ ಮಿತೃತ್ವಗಳಲ್ಲಿ ಒಡಕು ಉಂಟಾಗಬಹುದು. ಎಲ್ಲದಕ್ಕೂ ಬಹಳ ತಾಳ್ಮೆ ಯಿಂದ ಕಾಯಬೇಕು. ಎಲ್ಲದಕ್ಕೂ ಕೂಡ ಪರಿಹಾರ ಸಿಗಲಿದೆ.
ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಇಂದು ಬಹಳ ಉತ್ತಮವಾದ ದಿನ ಆಗಲಿದ್ದು ಮನಸ್ಸಿಗೆ ನೆಮ್ಮದಿ ಸಿಗಲಿದೆ. ಇಂದಿನ ದಿನ ನಿಮಗೆ ಅತ್ಯುತ್ತಮವಾಗಿದೆ. ಮಿತ್ರರಿಂದ ಮನಸ್ಸಿಗೆ ನೆಮ್ಮದಿ ಮತ್ತು ಧನಾಗಮನ ಕೂಡ ಆಗಲಿದೆ
ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ನಿಮ್ಮ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಆದರೂ ಕೂಡ ಜವಾಬ್ದಾರಿಗಳು ಹೆಚ್ಚಾಗಿ ಇರುತ್ತವೆ. ದೊಡ್ಡದಾದ ಪ್ರಾಜೆಕ್ಟ್ ವೊಂದು ನಿಮ್ಮ ಕೈ ಸೇರಲಿದ್ದು ಉತ್ತಮ ಲಾಭ ಉಂಟಾಗಲಿದೆ. ಆದರೆ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಜವಾಬ್ದಾರಿಗಳು ಇದ್ದು ಏನೇ ಸಮಸ್ಯೆ ಬರದಂತೆ ಗಮನ ವಹಿಸುವುದು ಮುಖ್ಯವಾಗಲಿದೆ.
ತುಲಾ ರಾಶಿ: ತುಲಾ ರಾಶಿಯವರಿಗೆ ಭಾಗ್ಯ ಸ್ಥಾನದಲ್ಲಿ ಚಂದ್ರ ಬರುವುದರಿಂದ ಭಾಗ್ಯೋದಯ ವಾದ ದಿನ ಆಗಲಿದೆ. ಆದರೆ ಹಿರಿಯರ ಆಶೀರ್ವಾದ ಮತ್ತು ವಿನಯತೆ ಇಲ್ಲದಿದ್ದರೆ ಯಾವ ಕಾರ್ಯ ಗಳು ಕೂಡ ಸಿದ್ದಿಯಾಗುವುದಿಲ್ಲ.
ಇದನ್ನು ಓದಿ:Vastu Tips: ಒಳ್ಳೆಯ ಉದ್ಯೋಗ ಪಡೆಯಬೇಕೆ? ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಅಷ್ಟಮದಲ್ಲಿ ಚಂದ್ರ ಬರುವುದರಿಂದ ನಾನಾ ರೀತಿಯ ಕ್ಷೇಷ ಬರಬಹುದು. ಆರೋಗ್ಯ ವಿಚಾರದಲ್ಲೂ ಬಹಳಷ್ಟು ಕಷ್ಟವಾಗುವ ಸಾಧ್ಯತೆ ಇರುತ್ತದೆ. ಮುಖ್ಯ ವಾದ ನಿರ್ಧಾರಗಳಿಗೆ ಈ ದಿನ ಒಳ್ಳೆಯದಲ್ಲ. ಧ್ಯಾನಧಿಗಳನ್ನು ಮಾಡುವ ಮೂಲಕ ದಿನ ಕಳೆಯಿರಿ
ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಈ ದಿನ ಬಹಳ ಉತ್ತಮ ದಿನವಾಗಿದೆ. ಎಲ್ಲರಿಂದಲೂ ನಿಮಗೆ ಸಹಕಾರ ಪ್ರಾಪ್ತಿಯಾಗುತ್ತದೆ. ನೀವು ಅಂದುಕೊಳ್ಳದ ರೀತಿಯಲ್ಲಿ ದೊಡ್ಡ ಸಂಪಾದನೆ ಯನ್ನು ಮಾಡಲಿದ್ದೀರಿ.
ಮಕರ ರಾಶಿ: ಮಕರ ರಾಶಿ ಅವರಿಗೆ ಈ ದಿನ ಉತ್ತಮವಾದ ದಿನ ಆಗಲಿದೆ. ಆದೇ ರೀತಿ ಆರೋಗ್ಯದಲ್ಲೂ ಸುಧಾರಣೆ ಕಂಡು ಬರಲಿದೆ. ಅತೀ ಉತ್ತಮವಾದ ದಿನ ನಿಮ್ಮದು ಆಗಲಿದೆ.
ಕುಂಭರಾಶಿ: ಕುಂಭ ರಾಶಿ ಅವರಿಗೆ ಈ ದಿನ ಸ್ವಲ್ಪ ಕಷ್ಟಕರವಾದ ದಿನ ಆಗಲಿದೆ. ಹಣಕಾಸಿನ ಖರ್ಚು ವೆಚ್ಚದಲ್ಲಿ ನಷ್ಟ ಆಗುವ ಸಾಧ್ಯತೆ ಇರುತ್ತದೆ. ನೀವು ಅಂದು ಕೊಳ್ಳುವ ರೀತಿಯಲ್ಲಿ ನಿಮಗೆ ಲಾಭ ಬಾರದೇ ಇರಬಹುದು. ಯಾರನ್ನು ಯಾವ ರೀತಿ ನಿಭಾಯಿಸಬೇಕು ಎಂದು ತಿಳಿದುಕೊಳ್ಳಿ
ಮೀನ ರಾಶಿ: ಮೀನ ರಾಶಿ ಅವರಿಗೆ ಈ ದಿನ ಆಸ್ತಿ ಪಾಸ್ತಿ ಮತ್ತು ನಾನಾ ವಿಚಾರದಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ. ಆದರೂ ಬಹಳ ಆತ್ಮ ವಿಶ್ವಾಸ ದಿಂದ ಕೆಲಸ ಮಾಡಲು ಮುಂದಾಗುತ್ತೀರಿ. ಐದು ವರ್ಷಗಳ ನಂತರ ಮೀನ ರಾಶಿಯವರಿಗೆ ಗುರು ಬಲ ಬರುವುದರಿಂದ ಹೆಚ್ಚಿನ ಯಶಸ್ಸು ಮುಂದಿನ ದಿನಗಳಲ್ಲಿ ಸಿಗಲಿದೆ.