Solar Eclipse: ಸೆ. 21ರಂದು ಸೂರ್ಯಗ್ರಹಣ: ಈ ರಾಶಿಯವರು ಜಾಗರೂಕರಾಗಿರಿ
ಸೆ. 21ರಂದು ಸೂರ್ಯಗ್ರಹಣ ಸಂಭವಿಸಲಿದ್ದು, ಈ ಮೂರು ರಾಶಿಯವರ ಬದುಕಿನಲ್ಲಿ ಮಹತ್ತರ ಬದಲಾವಣೆಗಳು ಆಗಲಿವೆ. ಹೀಗಾಗಿ ಅತ್ಯಂತ ಎಚ್ಚರಿಕೆಯಿಂದ ಇರುವಂತೆ ಜೋತಿಷ್ಯಶಾಸ್ತ್ರಜ್ಞರು ಹೇಳುತ್ತಾರೆ. ಈ ಬಾರಿಯ ಸೂರ್ಯಗ್ರಹಣವು ಈ ಮೂರು ರಾಶಿಯವರ ಸಂಬಂಧಗಳು, ವ್ಯವಹಾರಗಳು, ಹಣಕಾಸಿನ ಪರಿಸ್ಥಿತಿಗಳ ಮೇಲೆ ಪ್ರಭಾವ ಬೀರಲಿದೆ.

-

ಬೆಂಗಳೂರು: ಈ ಬಾರಿ ಸೆ. 21ರಂದು ಸಂಭವಿಸಲಿರುವ ಸೂರ್ಯಗ್ರಹಣವು (Solar Eclipse 2025) ಮೂರು ರಾಶಿಯ ಮೇಲೆ ಬಲವಾದ ಪ್ರಭಾವ ಬೀರಲಿದೆ. ಹೀಗಾಗಿ ಈ ಮೂರು ರಾಶಿಯವರು ಅತ್ಯಂತ ಎಚ್ಚರಿಕೆಯಿಂದ ಇರುವಂತೆ ಜೋತಿಷ್ಯಶಾಸ್ತ್ರಜ್ಞರು ಎಚ್ಚರಿಸಿದ್ದಾರೆ. ಮಿಥುನ, ಕನ್ಯಾ ಮತ್ತು ಧನು ರಾಶಿಯವರಿಗೆ (Gemini, Virgo, Sagittarius) ಈ ಬಾರಿಯ ಸೂರ್ಯಗ್ರಹಣವು (Solar Eclipse) ಅಶುಭ ಪರಿಣಾಮವನ್ನು ಬೀರಲಿದೆ. ಈ ರಾಶಿಯವರ ಜೀವನದಲ್ಲಿ ಮಹತ್ತರವಾದ ಬದಲಾವಣೆಗಳು ಉಂಟಾಗಲಿದೆ. ಆದ್ದರಿಂದ ಈ ಮೂರು ರಾಶಿಯವರು ತಾಳ್ಮೆ ಮತ್ತು ಎಚ್ಚರಿಕೆಯಿಂದ ಇರುವುದು ಬಹುಮುಖ್ಯ.
ಸೆಪ್ಟೆಂಬರ್ 21ರಂದು ಸಂಭವಿಸಲಿರುವ ಸೂರ್ಯಗ್ರಹಣವು ಮಿಥುನ, ಕನ್ಯಾ ಮತ್ತು ಧನು ರಾಶಿಯವರ ಸಂಬಂಧಗಳು, ಅರೋಗ್ಯ, ಹಣಕಾಸು, ವೃತ್ತಿ ಬದುಕಿನ ಮೇಲೆ ಪರಿಣಾಮ ಬಿರಲಿದೆ. ಆದ್ದರಿಂದ ಈ ಮೂರು ರಾಶಿಯವರು ತಾಳ್ಮೆ ಮತ್ತು ಎಚ್ಚರಿಕೆ ವಹಿಸಬೇಕು ಎನ್ನುತ್ತಾರೆ ಜ್ಯೋತಿಷಿಗಳು.
ಈ ವರ್ಷದ ಎರಡನೇ ಸೂರ್ಯಗ್ರಹಣವು ಪಿತೃ ಪಕ್ಷದ ಅಮಾವಾಸ್ಯೆಯಂದು ಅಂದರೆ ಸೆಪ್ಟೆಂಬರ್ 21ರಂದು ಸಂಭವಿಸಲಿದೆ. ಈ ವೇಳೆ ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರನು ನೇರ ರೇಖೆಯಲ್ಲಿ ಬರುತ್ತಾನೆ. ಇದು ಕೆಲವು ರಾಶಿಗಳಿಗೆ ಅಶುಭವನ್ನು ಉಂಟು ಮಾಡಲಿದೆ. ಇದರ ಪರಿಣಾಮ ಮುಂದಿನ ಆರು ತಿಂಗಳ ಕಾಲ ಈ ಮೂರು ರಾಶಿಯವರು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಮಿಥುನ ರಾಶಿ
ಈ ರಾಶಿಯವರು ಬಹಳ ಜಾಗರೂಕರಾಗಿರಬೇಕು. ಮನೆಯಲ್ಲಿ ಮಡದಿಯೊಂದಿಗೆ ಜಗಳ ಉಂಟಾಗಬಹುದು. ಇದರಿಂದ ತಪ್ಪು ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಮಾತಿನ ಮೇಲೆ ಸಂಯಮ ಇರಲಿ. ಹೂಡಿಕೆಯಲ್ಲಿ ನಷ್ಟ ಉಂಟಾಗುವ ಸಾಧ್ಯತೆ ಇರುವುದರಿಂದ ಮಾನಸಿಕ ಒತ್ತಡ ಹೆಚ್ಚಾಗಬಹುದು. ಸದ್ಯಕ್ಕೆ ಹೊಸ ಕೆಲಸವನ್ನು ಪ್ರಾರಂಭಿಸದೇ ಇರುವುದು ಒಳ್ಳೆಯದು. ಸಾಧ್ಯವಾದಷ್ಟು ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಿ. ಪರಿಸ್ಥಿತಿ ಉತ್ತಮವಾಗಿದ್ದರೂ ಹೆಚ್ಚು ಜವಾಬ್ದಾರಿ ಮತ್ತು ಎಚ್ಚರಿಕೆಯಿಂದ ವರ್ತಿಸಬೇಕು.
ಕನ್ಯಾ ರಾಶಿ
ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾದ ಸಮಯವಿದು. ಈಗ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳದೇ ಇರುವುದು ಒಳ್ಳೆಯದು. ಮಕ್ಕಳ ಭವಿಷ್ಯದ ಚಿಂತೆ ಹೆಚ್ಚಾಗುತ್ತದೆ. ಆರ್ಥಿಕ ತೊಂದರೆಗಳು ಎದುರಾಗಬಹುದು. ಹೀಗಾಗಿ ಈಗ ತಾಳ್ಮೆ ಮತ್ತು ಧೈರ್ಯವನ್ನು ತೋರಿಸಬೇಕಾದ ಸಮಯ. ಯಾವುದೇ ರೀತಿಯಲ್ಲಿ ಸಾಲ ಮಾಡಲು ಹೋಗಬೇಡಿ. ಯಾಕೆಂದರೆ ಇದು ನಿಮ್ಮನ್ನು ಬಹುದೊಡ್ಡ ಸಂಕಷ್ಟದಲ್ಲಿ ಸಿಲುಕಿಸಬಹುದು.
ಇದನ್ನೂ ಓದಿ: Vaishno Devi Yatra: ಪ್ರತಿಕೂಲ ಹವಾಮಾನದಿಂದ ಸ್ಥಗಿತಗೊಂಡಿದ್ದ ವೈಷ್ಣೋ ದೇವಿ ಯಾತ್ರೆ ಪುನರಾರಂಭಕ್ಕೆ ಮುಹೂರ್ತ ನಿಗದಿ
ಧನು ರಾಶಿ
ಉದ್ಯೋಗದಲ್ಲಿ ಸವಾಲುಗಳನ್ನು ಎದುರಿಸಬೇಕಾದ ಸಮಯ. ಆದರೆ ಇದಕ್ಕೆ ಭಯಪಡುವ ಬದಲು ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ. ಹೊಸ ಜನರ ಭೇಟಿಯಾಗುವ ಸಾಧ್ಯತೆ ಇದೆ. ಇವರು ನಿಮ್ಮ ಮೇಲೆ ಪ್ರಭಾವ ಬೀರಬಹುದು. ಉದ್ಯೋಗದಲ್ಲಿ ಈಗ ಹೆಚ್ಚಿನ ಶ್ರಮ ಅಗತ್ಯವಾಗಿದೆ. ಯಶಸ್ಸನ್ನು ಸಾಧಿಸಬೇಕಾದರೆ ಪ್ರಯತ್ನ ಮಾಡಬೇಕು. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ.