ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ದಿನ ಭವಿಷ್ಯ- ದುರ್ಗಾಷ್ಟಮಿಯ ಈ ದಿನ ದೇವಿಯ ಅನುಗ್ರಹ ಯಾರಿಗೆ ಇರಲಿದೆ?

ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಶುಕ್ಷ ಪಕ್ಷದ, ಅಷ್ಟಮಿ ತಿಥಿ, ಮತ್ತು ಈ ದಿನ ದುರ್ಗಾಷ್ಟಮಿ ಆಗಿದೆ.‌ ಸೆಪ್ಟೆಂಬರ್ 30ನೇ ತಾರೀ ಖಿನ ಮಂಗಳವಾರದ ಈ ದಿನ ನವರಾತ್ರಿಯ ಒಂಭತ್ತನೆ ದಿನವಾಗಿದೆ. ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ..

ಇಂದು ಈ ರಾಶಿಗೆ ದೇವಿಯ ಅನುಗ್ರಹ!

-

Profile Pushpa Kumari Sep 29, 2025 7:51 AM

ಬೆಂಗಳೂರು: ಇಂದು ವಿಶ್ವ ವಸುನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಶುಕ್ಷ ಪಕ್ಷದ, ಅಷ್ಟಮಿ ತಿಥಿ, ಸೆಪ್ಟೆಂಬರ್ 30ನೇ ತಾರೀಖಿನ ಮಂಗಳವಾರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾ ಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಇಂದು ದುರ್ಗಾಷ್ಟಮಿ ಇದ್ದು, ದೇವಿಯ ಆರಾಧನೆ ಮಾಡಿದರೆ ಎಲ್ಲರಿಗೂ ಒಳ್ಳೆಯದು ಆಗುತ್ತದೆ.‌ ಇಂದು ಪೂರ್ವಾಷಡ ನಕ್ಷತ್ರ ಇದ್ದು ಇದರ ಅಧಿಪತಿ ಶುಕ್ರ ಆಗಿದ್ದಾನೆ. ಆದ್ದರಿಂದ ಎಲ್ಲ ರಾಶಿಯವರಿಗೂ ಅತೀ ಹೆಚ್ಚಾಗಿ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಮೇಷ ರಾಶಿ ಯವರಿಗೆ ಇಂದು ಭಾಗ್ಯೋದಯವಾದ ದಿನವಾಗಲಿದ್ದು ಉತ್ತಮವಾದ ದಿನವೂ ಆಗಲಿದೆ.‌ ಹಿಂದಿನ ಮೂರು ನಾಲ್ಕು ದಿನಗಳಲ್ಲಿ ಇದ್ದ ಕ್ಷೇಷ ಮಯವಾಗುವ ದಿನವಾಗುತ್ತದೆ.‌

ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಇಂದು ಕ್ಲೇಷಕರವಾದ ದಿನ ಆಗುತ್ತದೆ.‌ ಮನಸ್ಸಿಗೆ ನೋವು ಇರಬಹುದು, ಅಷ್ಟಾಗಿ ಇಂದು ನೆಮ್ಮದಿ ಇರುವುದಿಲ್ಲ. ಅದೇ ರೀತಿ ಮುಖ್ಯವಾದ ವಿಚಾರದಲ್ಲಿ ಯಾವುದೇ ಪ್ರತಿಫಲ ಸಿಗುವುದಿಲ್ಲ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಅತ್ಯುತ್ತಮ ವಾದ ದಿನವಾಗಿದೆ. ಎಲ್ಲರೀತಿ ಯಿಂದಲೂ ಮನಸ್ಸಿಗೆ ಅತೀ ಹೆಚ್ಚಿನ ನೆಮ್ಮದಿ ಸಿಗುತ್ತದೆ. ಬೇರೆಯವರಿಂದ ಸಹಕಾರ ನೆಮ್ಮದಿ ಸಿಗುತ್ತದೆ.‌ ದಾಂಪತ್ಯ ಜೀವನದಲ್ಲೂ ನೆಮ್ಮದಿ ಇರುತ್ತದೆ.

ಕಟಕ ರಾಶಿ: ಕಟಕ ರಾಶಿ ಅವರಿಗೆ ಇಂದು ಅತ್ಯುತ್ತಮವಾದ ದಿನ ವಾಗುತ್ತದೆ. ಸಾಮಾಜಿಕ ವ್ಯವ ಹಾರದಲ್ಲಿ ಅತೀ ಹೆಚ್ಚಿನ ನೆಮ್ಮದಿ ಪಡೆಯುತ್ತೀರಿ.‌ ಬಹಳ ಒಳ್ಳೆ ರೀತಿಯಲ್ಲಿ ಎಲ್ಲ ಕೆಲಸಗಳನ್ನು ನಿಭಾಯಿಸಿ ಕೊಳ್ಳಬಹುದು.‌

ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಇಂದು ಕ್ಷೇಷವಾದ ದಿನ. ಬಿಸೆನೆಸ್ ವ್ಯವಹಾರದಲ್ಲಿ ಯಾವುದೇ ಲಾಭ ಇಲ್ಲ. ಇವತ್ತು ಮಕ್ಕಳ ಬಗ್ಗೆ ಪೋಷಕರಿಗೆ ಹೆಚ್ಚಿನ ಜವಾಬ್ದಾರಿ ಬೇಕು.

ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ತಾಯಿ ಮತ್ತು ಸಂಸಾರದ ವಿಚಾರದಲ್ಲಿ ಅನೇಕ ನೋವುಗಳು ಕಾಡಬಹುದು. ಆದರೆ ಧ್ಯಾನಧಿಗಳನ್ನು ಮಾಡುವ ಮೂಲಕ ನಿಮ್ಮ ಸಮಯವನ್ನು ಕಳೆಯಬೇಕು. ಕೋರ್ಟ್ ವ್ಯವಹಾರದಲ್ಲಿ ಇರುವವರು ಬಹಳ ಜಾಗೃತೆಯಿಂದ ಕೆಲಸ ಮಾಡಬೇಕು.

ತುಲಾ ರಾಶಿ: ತುಲಾ ರಾಶಿಯವರಿಗೆ ಅತ್ಯುತ್ತಮ ವಾದ ದಿನ‌. ಮನಸ್ಸಿಗೆ ನೆಮ್ಮದಿ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಸೋಷಿಯಲ್ ಮೀಡಿಯಾ ಬಳಕೆದಾರರಿಗೆ, ಮಾಧ್ಯಮ ಇತ್ಯಾದಿ ಕೆಲಸ ಮಾಡೋರಿಗೆ ಉತ್ತಮವಾದ ದಿನ.

ಇದನ್ನು ಓದಿ:Vastu Tips: ಮನೆಯ ಸುಖ, ಶಾಂತಿ ಮೇಲೆ ಪ್ರಭಾವ ಬೀರುವ ಗಿಡಗಳ ಬಗ್ಗೆ ತಿಳಿದಿರಲಿ

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಸಂಸಾರದ ವಿಚಾರದ ಬಗ್ಗೆ ಕ್ಲೇಷ ಉಂಟಾಗಬಹುದು.‌ ಮನೆಯ ಕುಟುಂಬದ ಬಗ್ಗೆ ನಿಮ್ಮ ಮಾರ್ಗದರ್ಶನ ಅಗತ್ಯ ಎನ್ನುವುದನ್ನು ಮರೆಯಬಾರದು.

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಇಂದು ನಿಮ್ಮ ರಾಶಿಗೆ ಚಂದ್ರ ಬಂದಿರುವುದರಿಂದ ಹಿಂದಿನ‌ ಎರಡು ಮೂರು ದಿನಗಳ ಮನಸ್ಸಿನ ಕ್ಷೇಷ ದೂರವಾಗುತ್ತದೆ. ಮನಸ್ಸಿಗೆ ಬಹಳಷ್ಟು ನೆಮ್ಮದಿ ಇರುತ್ತದೆ.

ಮಕರ ರಾಶಿ: ಮಕರ ರಾಶಿ ಅವರಿಗೆ ಕಷ್ಟಕರವಾದ ದಿನವಾಗಿದೆ. ಆದರೂ ಇಂದು ಮುಖ್ಯವಾದ ಕೆಲಸ ಗಳನ್ನು ಮಾಡಲು ಅನಿರ್ವಾಯ ದಿನ ಆಗಬಹುದು.‌ ಆದರೆ ಇಂದು ಒಳ್ಳೆಯ ದಿನ ಆಗುವುದಿಲ್ಲ.‌ ಇಂದು ಯಾರದೇ ಸಹಕಾರ ಸಿಗುವುದಿಲ್ಲ.ಮಿತ್ರರು ಕೂಡ ದೂರವಾಗಬಹುದು.

ಕುಂಭರಾಶಿ: ಕುಂಭ ರಾಶಿಯವರಿಗೆ ಉತ್ತಮ ದಿನ. ಮನಸ್ಸಿಗೆ ನೆಮ್ಮದಿ ಇದ್ದು ಮಿತ್ರರಿಂದ ಧನ ಆಗಮನ ಆಗಲಿದೆ. ಇಷ್ಟಾರ್ಥ ನೇರ ವೇರಲಿದ್ದು ಗುಂಪು ಕೆಲಸಗಳಿಂದ ಅಭಿವೃದ್ಧಿ ಸಿಗಲಿದೆ

ಮೀನ ರಾಶಿ: ಮೀನ ರಾಶಿ ಅವರಿಗೆ ಅತ್ಯುತ್ತಮವಾದ ದಿನ‌ ಆಗಿದ್ದು ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ.‌ ಹಿಂದಿನ ದಿನದಲ್ಲಿ ಇದ್ದ ಕ್ಷೇಷ ಮಯವಾಗಲಿದೆ. ದುರ್ಗಾಷ್ಟಮಿ ಈ ದಿನ ಎಲ್ಲ ರಾಶಿಯವರು ದೇವಿಯ ಆರಾಧನೆ ಮಾಡಿ.