Vastu Tips: ಬಾಡಿಗೆ ಮನೆಯಲ್ಲಿ ಮಾಡುವ ಈ ತಪ್ಪುಗಳಿಂದಲೂ ಉಂಟಾಗುತ್ತದೆ ವಾಸ್ತು ಸಮಸ್ಯೆ
ಬಾಡಿಗೆ ಮನೆಗಳಲ್ಲಿ ವಾಸಿಸುವ ಹೆಚ್ಚಿನ ಜನರು ವಾಸ್ತು ನಿಯಮಗಳನ್ನು (Vastushastra) ಪಾಲಿಸುಲು ಅಷ್ಟಾಗಿ ಒಲವು ತೋರುವುದಿಲ್ಲ. ಯಾಕೆಂದರೆ ಅದು ಅವರ ಸ್ವಂತ ಮನೆಯಲ್ಲ. ಹೀಗಾಗಿ ಕೆಲವರು ಬಾಡಿಗೆ ಮನೆಯಲ್ಲಿ ವಾಸಿಸುವಾಗ ತಿಳಿದೋ ಅಥವಾ ತಿಳಿಯದೆಯೋ ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ. ಇದು ಅವರ ಮನೆಯಲ್ಲಿ ವಾಸ್ತು ದೋಷ ಉಂಟು ಮಾಡಲು ಪ್ರಾರಂಭಿಸುತ್ತದೆ.


ಉದ್ಯೋಗ, ಶಿಕ್ಷಣ, ಅನಿವಾರ್ಯ ಕಾರಣಗಳಿಂದ ಒಂದು ಊರು ಬಿಟ್ಟು ಇನ್ನೊಂದು ಊರಿನಲ್ಲಿ ಹೋಗಿ ನೆಲೆಯಾದ ಸ್ವಂತ ಮನೆ ಹೊಂದಿರುವವರಿಗಿಂತ ಹೆಚ್ಚಿನ ಮಂದಿ ಇಂದು ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ. ಬಾಡಿಗೆ ಮನೆ ಎಂದ ಮೇಲೆ ನಮಗೆ ಅದರ ಮೇಲೆ ಹೆಚ್ಚು ಪ್ರೀತಿ ಏನು ಇರುವುದಿಲ್ಲ. ಇಂದಲ್ಲ ನಾಳೆ ಅದನ್ನು ಬಿಟ್ಟು ಹೋಗಲೇಬೇಕು. ಹೀಗಾಗಿ ನಾವು ಮನೆ ಚೆನ್ನಾಗಿದೆಯೇ ಎಂದಷ್ಟೇ ನೋಡುತ್ತೇವೆ. ಅದರ ವಾಸ್ತು ಕುರಿತು ಅದರಲ್ಲಿ ವಾಸ್ತು ನಿಯಮ ಪರಿಪಾಲನೆಯ ಕುರಿತು ಹೆಚ್ಚು ಯೋಚಿಸುವುದಿಲ್ಲ.
ನಾವು ಬಾಡಿಗೆ ಮನೆಯಲ್ಲಿ ಇದ್ದರೂ ಕೆಲವೊಂದು ವಾಸ್ತು ನಿಯಮಗಳನ್ನು ಪಾಲಿಸಬೇಕು. ಆದರೆ ಬಾಡಿಗೆ ಮನೆಗಳಲ್ಲಿ ವಾಸಿಸುವ ಹೆಚ್ಚಿನ ಜನರು ವಾಸ್ತು ನಿಯಮಗಳನ್ನು ಪಾಲಿಸುಲು ಅಷ್ಟಾಗಿ ಒಲವು ತೋರುವುದಿಲ್ಲ. ಯಾಕೆಂದರೆ ಅದು ಅವರ ಸ್ವಂತ ಮನೆಯಲ್ಲ. ಹೀಗಾಗಿ ಕೆಲವರು ಬಾಡಿಗೆ ಮನೆಯಲ್ಲಿ ವಾಸಿಸುವಾಗ ತಿಳಿದೋ ಅಥವಾ ತಿಳಿಯದೆಯೋ ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ. ಇದು ಅವರ ಮನೆಯಲ್ಲಿ ವಾಸ್ತು ದೋಷ ಉಂಟು ಮಾಡಲು ಪ್ರಾರಂಭಿಸುತ್ತದೆ. ಇದರಿಂದ ಸ್ವಂತ ಮನೆಯನ್ನು ನಿರ್ಮಿಸುವ ಕನಸು ನನಸಾಗುವುದರ ಮೇಲೆ ಪರಿಣಾಮ ಬೀರುತ್ತದೆ.
ಬಾಡಿಗೆ ಮನೆಯಲ್ಲಿ ವಾಸಿಸುವಾಗ ಅನೇಕ ಬಾರಿ ನಾವು ಮಾಡುವ ವಾಸ್ತು ಸಂಬಂಧಿತ ಕೆಲವು ತಪ್ಪುಗಳಿಂದಾಗಿ ಸ್ವಂತ ಮನೆಯ ನಿರ್ಮಾಣ ಕಾರ್ಯ ವಿಳಂಬವಾಗುತ್ತದೆ. ಇದಕ್ಕೆ ಅನೇಕ ಅಡೆತಡೆಗಳು ಎದುರಾಗುತ್ತದೆ. ಹೀಗಾಗಿ ಬಾಡಿಗೆ ಮನೆಯಲ್ಲಿ ವಾಸ ಮಾಡುವವರು ಕೆಲವೊಂದು ವಿಷಯಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು ಎನ್ನುತ್ತಾರೆ ವಾಸ್ತು ತಜ್ಞರಾದ ರಾಧಾಕಾಂತ್ ವತ್ಸ್.

ಬಾಡಿಗೆ ಮನೆಗಳಲ್ಲಿ ವಾಸಿಸುವಾಗ ಮನೆಯ ಮಾಲೀಕರು, ಸ್ನೇಹಿತರು, ಬಂಧುಗಳು ನಿಮ್ಮೊಂದಿಗೆ ವಾಸಿಸುತ್ತಿದ್ದರೆ ಇಂತಹ ಸಂದರ್ಭದಲ್ಲಿ ವಾಸ್ತು ದೋಷವು ನಿಮ್ಮ ತಪ್ಪಿನಿಂದ ಮಾತ್ರವಲ್ಲ ಅವರಿಂದಲೂ ಉಂಟಾಗಬಹುದು. ಇದರಿಂದಾಗಿ ನಿಮಗೆ ಮಾತ್ರವಲ್ಲ ಅವರಿಗೂ ನಷ್ಟಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಬಾಡಿಗೆ ಮನೆಗಳಲ್ಲಿ ಒಬ್ಬರು ಮತ್ತು ಅವರ ಕುಟುಂಬ ಮಾತ್ರ ವಾಸಿಸುವುದು ಒಳ್ಳೆಯದು.
ಬಾಡಿಗೆ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರೆ ವಾಸ್ತುವಿಗೆ ಸಂಬಂಧಿಸಿದ ವಸ್ತುಗಳ ಬಗ್ಗೆ ಗಮನಹರಿವುದು ನಿಮ್ಮ ಜವಾಬ್ದಾರಿಯಾಗಿದೆ. ಯಾಕೆಂದರೆ ಆ ಮನೆ ಬೇರೆಯವರಿಗೆ ಸೇರಿದ್ದರೂ ಅದರಲ್ಲಿ ಇರಿಸಲಾಗಿರುವ ವಸ್ತುಗಳನ್ನು ನೀವು ಬಳಸುತ್ತೀರಿ. ಬಾಡಿಗೆ ಮನೆಯಲ್ಲಿ ಮರದ ಬಾಗಿಲುಗಳು ಎಂದಿಗೂ ಇರಬಾರದು. ಉಕ್ಕಿನ ಲೋಹದಿಂದ ಮಾಡಿದ ಬಾಗಿಲನ್ನು ಸ್ಥಾಪಿಸಬೇಕು. ಇಲ್ಲವಾದರೆ ಅದು ಮನೆಯ ಸಮೃದ್ಧಿಯನ್ನು ನಿಲ್ಲಿಸುತ್ತದೆ.
ಬಾಡಿಗೆ ಮನೆಗಳಲ್ಲಿ ಹಾಕಿರುವ ಮರದ ಬಾಗಿಲು, ಕಿಟಕಿಗಳು ಹಾನಿಗೊಳಗಾಗಿದ್ದರೆ ಅಥವಾ ಗೆದ್ದಲುಗಳಿಂದ ಮುತ್ತಿಕೊಂಡಿದ್ದರೆ ಅದರಿಂದ ನಕಾರಾತ್ಮಕ ಶಕ್ತಿಯನ್ನು ಮನೆಗೆ ಪ್ರವೇಶಿಸುತ್ತದೆ ಮತ್ತು ಸಕಾರಾತ್ಮಕತೆಗೆ ಅಡ್ಡಿಯನ್ನು ಉಂಟು ಮಾಡುತ್ತದೆ. ಆದ್ದರಿಂದ ಬಾಡಿಗೆ ಮನೆಗಳಲ್ಲಿ ಉಕ್ಕಿನ ಬಾಗಿಲುಗಳನ್ನು ಸ್ಥಾಪಿಸುವುದನ್ನು ಶುಭ ಎಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: Vastu Tips: ಮನೆಯೊಳಗೆ ಮಹಡಿ ಮೆಟ್ಟಿಲು ನಿರ್ಮಾಣ ಪಾಲಿಸಲೇಬೇಕು ವಾಸ್ತು ನಿಯಮ
ಬಾಡಿಗೆ ಮನೆಗಳು ಸುಲಭವಾಗಿ ದುಷ್ಟ ಶಕ್ತಿಗಳ ಪ್ರಭಾವಕ್ಕೆ ಒಳಗಾಗುತ್ತದೆ. ಹೀಗಾಗಿ ಮುಸ್ಸಂಜೆಯಲ್ಲಿ ಕರ್ಪೂರ ಅಥವಾ ಧೂಪವನ್ನು ಸುಟ್ಟು ಅದರ ಹೊಗೆಯನ್ನು ಮನೆಯ ಪ್ರತಿಯೊಂದು ಭಾಗದಲ್ಲೂ ಹರಡವುದು ಒಳ್ಳೆಯದು.
ಸ್ವಂತ ಮನೆಯಲ್ಲಿ ಮುರಿದ ವಸ್ತುಗಳನ್ನು ಇಡುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಆದರೆ ಬಾಡಿಗೆ ಮನೆಯಲ್ಲಿ ಮುರಿದ ವಸ್ತುಗಳನ್ನು ಇಡುವುದು ಇನ್ನೂ ಹೆಚ್ಚಿನ ಹಾನಿಯನ್ನು ಉಂಟು ಮಾಡುತ್ತದೆ. ಬಾಡಿಗೆ ಮನೆಯಲ್ಲಿ ಸೋರುವ ನಲ್ಲಿಯನ್ನು ತಕ್ಷಣ ದುರಸ್ತಿ ಮಾಡಬೇಕು. ಇಲ್ಲವಾದರೆ ಅದು ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ. ಬಾಡಿಗೆ ಮನೆಯ ಮುಖ್ಯ ದ್ವಾರವನ್ನು ಖಾಲಿ ಬಿಡಬೇಡಿ. ಅಲ್ಲಿ ಯಾವುದಾದರೂ ಒಂದು ಶುಭ ಚಿಹ್ನೆಯನ್ನು ಮಾಡಬೇಕು. ಅಂದರೆ ದ್ವಾರದ ಮುಂದೆ ರಂಗೋಲಿ, ದ್ವಾರಕ್ಕೆ ನಿತ್ಯ ಹೂವು ಇಟ್ಟು ಪೂಜೆ ಮಾಡುವುದರಿಂದ ಮನೆಯಲ್ಲಿ ವಾಸ ಮಾಡುವವರ ಅರೋಗ್ಯ ಕ್ಷೇಮವಾಗಿರುವುದು, ಮನೆ ಮಂದಿಯಲ್ಲಿ ಆರ್ಥಿಕ ಸಮೃದ್ಧಿ ಉಂಟಾಗುವುದು. ಜೀವನದಲ್ಲಿ ಎದುರಾಗುವ ಅಡೆತಡೆಗಳು ದೂರವಾಗುವುದು.