Astro Tips: ಮಂಗಳವಾರ ಆಂಜನೇಯನ ಈ ಮಂತ್ರಗಳನ್ನು ಪಠಿಸುವುದರಿಂದ ನಿಮ್ಮ ಜೀವನವೇ ಬದಲಾಗುವುದು..!
Tuesdya Hanuman Manthra: ಹಿಂದೂ ಧರ್ಮದಲ್ಲಿ ಅತಿ ಹೆಚ್ಚಾಗಿ ಪೂಜಿಸುವ ದೇವರುಗಳಲ್ಲಿ ಆಂಜನೇಯ ಅಥವಾ ಹನುಮಾನ್ ದೇವರು ಒಬ್ಬರು. ಆಂಜನೇಯ ಆರಾಧನೆಯು ಭಕ್ತರ ಎಲ್ಲಾ ಸಂಕಷ್ಟಗಳನ್ನು ದೂರಾಗಿಸುತ್ತದೆ ಹಾಗೂ ಆ ವ್ಯಕ್ತಿಗೆ ಜೀವನದಲ್ಲಿ ಯಶಸ್ಸನ್ನು ತಂದುಕೊಡುವಲ್ಲಿ ಸಹಕಾರಿಯಾಗಿದೆ. ಇದರೊಂದಿಗೆ ಮಂಗಳವಾರ ಕೆಲ ಮಂತ್ರಗಳನ್ನು ಪಠಿಸುವುದರಿಂದ ಸಕಲ ಇಷ್ಟಾರ್ಥಗಳು ನೆರವೇರುತ್ತದೆ. ಹಾಗಾದ್ರೆ ನಾವು ಮಂಗಳವಾರ ಜಪಿಸಬೇಕಾದ ಹನುಮಂತನ ಮಂತ್ರಗಳಾವುವು..? ಆ ಮಂತ್ರಗಳನ್ನು ಪಠಿಸುವುದರಿಂದ ಏನು ಪ್ರಯೋಜನ..? ಇಲ್ಲಿದೆ ಮಾಹಿತಿ
ಮಂಗಳವಾರ ಆಂಜನೇಯನ ಈ ಮಂತ್ರಗಳನ್ನು ಪಠಿಸುವುದರಿಂದ ಒಲಿತು -
ಸನಾತನ ಧರ್ಮ(Sanatana Dharma)ದಲ್ಲಿ, ವಾರದ ಏಳು ದಿನಗಳನ್ನು ಒಂದು ಅಥವಾ ಇನ್ನೊಂದು ದೇವರು ಅಥವಾ ದೇವತೆಗಳಿಗೆ ಮೀಸಲಿಡಲಾಗಿದೆ. ಮಂಗಳವಾರ(Tuesday)ದಂದು ವಾಯುಪುತ್ರ ರಾಮಭಕ್ತ ಹನುಮಂತನ(Hanumantha) ಆರಾಧನೆಗೆ ಶ್ರೇಷ್ಠ ದಿನವಾಗಿದ್ದು, ಆಂಜನೇಯನನ್ನು ಪೂಜಿಸುವುದರಿಂದ ಭಕ್ತರ ಎಲ್ಲಾ ತೊಂದರೆಗಳು ಮತ್ತು ಅಡೆತಡೆಗಳು ದೂರವಾಗುತ್ತವೆ. ಮಂಗಳವಾರದಂದು ಆಂಜನೇಯನ ಪೂಜೆ ಮಾಡುವುದರಿಂದ ಆತನ ವಿಶೇಷ ಅನುಗ್ರಹ ಸಿಗಲಿದ್ದು, ಶಕ್ತಿಯ ಸಂಕೇತವಾಗಿರುವ ಈ ವಾಯುಪುತ್ರನನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸುವುದರಿಂದ ನಿಮ್ಮ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ. ಅಲ್ಲದೇ ದುಃಖವನ್ನು ದೂರ ಮಾಡಿ, ಆರೋಗ್ಯ ಸಮಸ್ಯೆಯನ್ನು ನಿವಾರಿಸುವುದರೊಂದಿಗೆ ನಿಮ್ಮ ಬದುಕಿನಲ್ಲಿ ಧನಾತ್ಮಕ ಫಲಿತಾಂಶಗಳನ್ನು ನೀಡುತ್ತಾನೆ ಎಂಬ ನಂಬಿಕೆ ಇದೆ.
ಹೀಗೆ ಮಂಗಳವಾರದಂದು ಸಂಕಟಮೋಚನ ಹನುಮನ ಪೂಜೆ ಪುನಾಸ್ಕಾರಗಳೊಂದಿಗೆ, ಕೆಲ ಮಂತ್ರಗಳನ್ನು(Hanuman Mantra) ಪಠಿಸುವುದು ಬಹಳ ಶ್ರೇಷ್ಠವಾಗಿದ್ದು, ನಿಮ್ಮ ಬದುಕಿನಲ್ಲಿರುವ ಎಲ್ಲಾ ವಿಘ್ನಗಳನ್ನು ದೂರ ಮಾಡಿ ನೆಮ್ಮದಿ ತರುತ್ತಾನೆ ಎಂಬ ನಂಬಿಕೆಯೂ ಇದೆ. ಇಂದು ಭಜರಂಗಿಯನ್ನು ಪೂಜಿಸಿದ ಬಳಿಕ ಮಂತ್ರಗಳನ್ನು ಜಪಿಸಿದರೆ, ಆತನ ಭಕ್ತರಿಗೆ ಎದುರಾಗುವ ಸಂಕಷ್ಟಗಳನ್ನು ಬಗೆಹರಿಸುತ್ತಾನೆ ಮತ್ತು ಜೀವನದಲ್ಲಿ ಸಂತೋಷವು ಬರುತ್ತದೆ ಎಂದು ಹೇಳಲಾಗುತ್ತದೆ.
ಹಾಗಾಗಿ ನಾವು ನಿಮಗೆ ಆಂಜನೇಯ ವಿಶೇಷ ಮಂತ್ರಗಳ ಬಗ್ಗೆ ಹೇಳುತ್ತಿದ್ದೇವೆ. ಅವುಗಳನ್ನು ಜಪಿಸುವುದರಿಂದ ನಿಮ್ಮ ಜೀವನದಲ್ಲಿ ಎಲ್ಲಾ ಕೆಲಸಗಳು ಪರಿಪೂರ್ಣತೆಯನ್ನು ಕಂಡುಕೊಳ್ಳುತ್ತದೆ ಮತ್ತು ಆ ವ್ಯಕ್ತಿಯು ಪುಣ್ಯ ಫಲವನ್ನು ಪಡೆದುಕೊಳ್ಳಲು ಪ್ರಾರಂಭಿಸುತ್ತಾನೆ. ಮಂಗಳವಾರ ನೀವು ಪಠಿಸಬೇಕಾದ ಮಂತ್ರಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.
ಈ ಸುದ್ದಿಯನ್ನು ಓದಿ: Astro Tips: ಬೆಳಗ್ಗೆ ಎದ್ದಾಗ ಅಪ್ಪಿ ತಪ್ಪಿಯೂ ಈ ವಸ್ತುಗಳನ್ನು ನೋಡಬಾರದು; ಸಮಸ್ಯೆಗಳು ಎದುರಾಗಬಹುದು ಎಚ್ಚರ
''ಓಂ ಹ್ರಾಂ ಹ್ರೀಂ ಹ್ರೀಂ ಹ್ರಂ ಹ್ರೈಂ ಹ್ರೌಂ ಹ್ರಃ||
ಹಂ ಹನುಮತೇ ರುದ್ರಾತ್ಮಕಾಯ ಹುಂ ಫಟ್
ಮಂಗಳವಾರದಂದು ಆಂಜನೇಯ ಸ್ವಾಮಿಯ ಈ ಮಂತ್ರವನ್ನು ಪಠಿಸುವುದರಿಂದ ಭಕ್ತಿಯಿಂದ ನಕಾರಾತ್ಮಕ ಶಕ್ತಿ ದೂರ ಆಗಲಿದ್ದು, ಇದು ಅತ್ಯಂತ ಶಕ್ತಿಶಾಲಿ ಮಂತ್ರವಾಗಿದೆ. ಇದನ್ನು ನಿಯಮಿತವಾಗಿ ಜಪಿದುವುದರಿಂದ ಮನೆ-ಮನಸ್ಸಿನಲ್ಲಿ ಶಾಂತಿ - ನೆಮ್ಮದಿ ಮೂಡಲಿದ್ದು, ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಜೊತೆಗೆ ಶತ್ರುಗಳ ಕಾಟದಿಂದಲ್ಲೂ ಈ ಮಂತ್ರ ರಕ್ಷಣೆ ನೀಡಲಿದ್ದು, ಯಾವುದೇ ಅಡಚಣೆಗಳು ಬರದಂತೆ ತಡೆದು ನೀವು ಮಾಡುವ ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ದೊರೆಯುವಂತೆ ಮಾಡುತ್ತದೆ.
ಓಂ ದಕ್ಷಿಣಮುಖಾಯ ಪಚ್ಚಮುಖ ಹನುಮತೇ ಕರಾಳಬದನಾಯ
ಆಂಜನೇಯನ ಈ ಮಂತ್ರವನ್ನು ಪರಿಣಾಮಕಾರಿ ಮಂತ್ರ ಎಂದು ಪರಿಗಣಿಸಲಾಗಿದ್ದು, ಆಂಜನೇಯ ಸ್ವಾಮಿಗೆ ಸಮರ್ಪಿತವಾದ ಈ ಅದ್ಭುತ ಮಂತ್ರವನ್ನು ಮಂಗಳವಾರದಂದು ಭಕ್ತಿಯಿಂದ ಪಠಿಸಿದರೆ, ದುಷ್ಟ ಹಾಗೂ ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆ ದೊರೆಯುತ್ತದೆ. ಜೊತೆಗೆ ವ್ಯಕ್ತಿಯ ಮನಸ್ಸಿನಲ್ಲಿನ ಋಣಾತ್ಮಕ ಚಿಂತನೆಗಳು ದೂರವಾಗಿ ಧನಾತ್ಮಕ ಶಕ್ತಿಗಳು, ಶಾಂತಿ ಮತ್ತು ಆತ್ಮವಿಶ್ವಾಸ ಬರುತ್ತದೆ. ಆದ್ದರಿಂದ ಜೀವನದಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವದಿಂದ ಹೊರಬರಲು ಇಚ್ಛಿಸುವವರು ಮಂಗಳವಾರದಂದು ಈ ಮಂತ್ರವನ್ನು ನಿಷ್ಠೆಯಿಂದ ಪಠಿಸಬೇಕು.
ಮರ್ಕಟೇಶ ಮಹೋತ್ಸಾಹ ಸರ್ವಶೋಕ ವಿನಾಶನ
ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು ಈ ಮಂತ್ರವನ್ನು ಜಪಿಸುವುದರಿಂದ ನಿಮ್ಮ ಎಲ್ಲಾ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತವೆ ಎಂದು ಹೇಳಲಾಗುತ್ತದೆ. ಮಂಗಳವಾರದಂದು ಕನಿಷ್ಠ 108 ಬಾರಿ ಈ ಮಂತ್ರವನ್ನು ಪಠಿಸುವುದರಿಂದ ಇದರಿಂದ ಕಾರ್ಯಕ್ಷೇತ್ರದಲ್ಲಿ ಎದುರಾಗುವ ಅಡೆತಡೆಗಳೆಲ್ಲಾ ನಿವಾರಣೆಯಾಗಿ ಯಶಸ್ಸು ಸಿಗುತ್ತದೆ.