ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Astro Tips: ಸೋಮವಾರ ಶಿವನ ಜೊತೆ ಈ ದೇವರನ್ನು ಪೂಜಿಸಿದರೆ ಸಿಗುತ್ತದೆ ವಿಶೇಷ ಫಲ!

ಸೋಮವಾರ ಶಿವನ ಆರಾಧನೆಗೆ ಅತ್ಯಂತ ಪವಿತ್ರ ದಿನ. ಶಿವನೊಂದಿಗೆ ಚಂದ್ರದೇವ, ಗಂಗಾಮಾತೆ, ನಂದಿ, ಬಿಲ್ವಪತ್ರೆ ಮತ್ತು ಪಾರ್ವತಿ ದೇವಿಯನ್ನು ಪೂಜಿಸಿದರೆ ಮಾನಸಿಕ ಶಾಂತಿ, ದಾಂಪತ್ಯ ಸುಖ ಹಾಗೂ ಇಷ್ಟಾರ್ಥ ಸಿದ್ಧಿ ಲಭಿಸುತ್ತದೆ. ಹಾಗಾದ್ರೆ ಸೋಮವಾರ ಶಿವನೊಂದಿಗೆ ಯಾವ ದೇವರುಗಳನ್ನು ಪೂಜಿಸಬೇಕು..? ಈ ಬಗ್ಗೆ ಜ್ಯೋತಿಷ್ಯ ಶಾಸ್ತ್ರದ ಸಲಹೆ ಏನು..? ಇಲ್ಲಿದೆ ಮಾಹಿತಿ

ಸೋಮವಾರ ಶಿವನ ಜೊತೆ ಈ ದೇವರ ಪೂಜೆ ಶುಭ ತರುತ್ತದೆ

ಶಿವ ಪೂಜೆ -

Profile
Sushmitha Jain Apr 20, 2026 8:32 AM

ಬೆಂಗಳೂರು: ಧಾರ್ಮಿಕ ಹಾಗೂ ಆಧ್ಯಾತ್ಮಿಕ ದೃಷ್ಟಿಯಿಂದ ಸೋಮವಾರವು ಪರಮಶಿವನ ಆರಾಧನೆಗೆ ಅತ್ಯಂತ ಪವಿತ್ರ ದಿನವೆಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಸೋಮವಾರಗಳು ಇನ್ನಷ್ಟು ಮಹತ್ವ ಪಡೆದಿವೆ. ಈ ದಿನ ಶಿವನನ್ನು ಲಿಂಗ ರೂಪದಲ್ಲಿ ಪೂಜಿಸುವುದರಿಂದ ಭಕ್ತರ ಕಷ್ಟಗಳು ದೂರವಾಗಿ, ಜೀವನದಲ್ಲಿ ಶಾಂತಿ ಹಾಗೂ ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆ ಇದೆ. ಆದರೆ ಸೋಮವಾರದಂದು ಶಿವನನ್ನಷ್ಟೇ ಅಲ್ಲ, ಶಿವನೊಂದಿಗೆ ಸಂಬಂಧ ಹೊಂದಿರುವ ಕೆಲವು ದೇವತೆಗಳನ್ನೂ ಪೂಜಿಸುವುದು ವಿಶೇಷ ಫಲ ನೀಡುತ್ತದೆ. ಹಾಗಾದ್ರೆ ಸೋಮವಾರ ಶಿವನೊಂದಿಗೆ ಯಾವ ದೇವರುಗಳನ್ನು ಪೂಜಿಸಬೇಕು..? ಈ ಬಗ್ಗೆ ಜ್ಯೋತಿಷ್ಯ ಶಾಸ್ತ್ರದ ಸಲಹೆ (Astro Tips) ಏನು..? ಇಲ್ಲಿದೆ ಮಾಹಿತಿ.

ಚಂದ್ರದೇವ

ಚಂದ್ರದೇವನು ಶಿವನ ಜಟೆಯಲ್ಲಿ ಸ್ಥಾನ ಪಡೆದವನು. ಚಂದ್ರನು ಮನಸ್ಸಿನ ಸಂಕೇತವಾಗಿರುವುದರಿಂದ ಸೋಮವಾರದಂದು ಶಿವನೊಂದಿಗೆ ಚಂದ್ರದೇವನ ಪೂಜೆಯೂ ಮಹತ್ವದ್ದಾಗಿದೆ. ಇದರಿಂದ ಮನಸ್ಸಿಗೆ ಶಾಂತಿ, ತಾಳ್ಮೆ ಹಾಗೂ ಜಾತಕದಲ್ಲಿನ ಚಂದ್ರನ ಬಲ ಹೆಚ್ಚುತ್ತದೆ ಎಂದು ನಂಬಲಾಗುತ್ತದೆ.

ಗಂಗಾ ಮಾತೆ

ಗಂಗಾ ಮಾತೆ ಶಿವನ ಜಟೆಯಲ್ಲಿ ನೆಲೆಸಿರುವವಳು. ಗಂಗೆಯ ಉಗ್ರ ಪ್ರವಾಹವನ್ನು ಶಿವನು ತನ್ನ ಜಟೆಯಲ್ಲಿ ಹಿಡಿದು ಭೂಮಿಯನ್ನು ರಕ್ಷಿಸಿದ ಕಥೆ ಪ್ರಸಿದ್ಧವಾಗಿದೆ. ಆದ್ದರಿಂದ ಸೋಮವಾರದಂದು ಶಿವಲಿಂಗಕ್ಕೆ ಗಂಗಾಜಲದಿಂದ ಅಭಿಷೇಕ ಮಾಡುವುದು ಬಹಳ ಶುಭಕರವೆಂದು ಹೇಳಲಾಗುತ್ತದೆ.

Astro Tips: ಸಂಜೆ ಸಮಯದಲ್ಲಿ ಈ ಕೆಲಸಗಳನ್ನು ಮಾಡಬೇಡಿ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ!

ನಂದಿ

ನಂದಿ ಶಿವನ ವಾಹನವಾಗಿದ್ದು, ಅವನಿಗೆ ಅತ್ಯಂತ ಪ್ರಿಯನು. ದೇವಸ್ಥಾನದಲ್ಲಿ ಶಿವನ ದರ್ಶನದ ನಂತರ ನಂದಿಯನ್ನು ಪೂಜಿಸಿ, ಅವನ ಕಿವಿಯಲ್ಲಿ ತಮ್ಮ ಮನದಾಸೆಗಳನ್ನು ಹೇಳಿದರೆ, ನಂದಿ ಅವನ್ನು ಶಿವನಿಗೆ ತಲುಪಿಸುತ್ತಾನೆ ಎಂಬ ನಂಬಿಕೆ ಇದೆ.

ಬಿಲ್ವಪತ್ರೆ

ಬಿಲ್ವಪತ್ರೆ ಶಿವನಿಗೆ ಅತ್ಯಂತ ಪ್ರಿಯವಾದ ಅರ್ಪಣೆ. ಬಿಲ್ವಪತ್ರೆಯಿಲ್ಲದೆ ಶಿವಪೂಜೆ ಅಪೂರ್ಣವೆಂದು ಹೇಳಲಾಗುತ್ತದೆ. ಸೋಮವಾರದಂದು ಶಿವಲಿಂಗಕ್ಕೆ ಅಭಿಷೇಕ ಮಾಡಿ ಮೂರು ದಳವುಳ್ಳ ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ಶಿವನ ಕೃಪೆ ಸುಲಭವಾಗಿ ದೊರೆಯುತ್ತದೆ.

ಪಾರ್ವತಿ ದೇವಿ

ಪಾರ್ವತಿ ದೇವಿ ಶಿವನ ಅರ್ಧಾಂಗಿನಿ. ಶಿವನೊಂದಿಗೆ ಪಾರ್ವತಿ ದೇವಿಯನ್ನೂ ಪೂಜಿಸುವುದರಿಂದ ದಾಂಪತ್ಯ ಜೀವನ ಸುಖಕರವಾಗುತ್ತದೆ. ವಿವಾಹಿತ ಮಹಿಳೆಯರು ಶಿವ–ಪಾರ್ವತಿಯನ್ನು ಆರಾಧಿಸಿದರೆ ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ. ಅವಿವಾಹಿತ ಯುವತಿಯರು ಪೂಜಿಸಿದರೆ ಉತ್ತಮ ಜೀವನ ಸಂಗಾತಿ ದೊರೆಯುತ್ತಾನೆ ಎಂಬ ನಂಬಿಕೆ ಇದೆ.