Vishwavani Editorial: ನಕಲಿ ವೈದ್ಯರ ಹಾವಳಿ ತಪ್ಪಲಿ
ಮಂಡ್ಯ ಕೆ. ಆರ್ ತಾಲ್ಲೂಕಿನ ನಕಲಿ ವೈದ್ಯರೊಬ್ಬರು ಕೇವಲ ಎಸ್ಸೆಸ್ಸೆಲ್ಸಿ ಮುಗಿಸಿ ಕಳೆದ 15 ವರ್ಷ ಗಳಿಂದ ಕ್ಲಿನಿಕ್ ನಡೆಸುತ್ತಿದ್ದರು. ಇತ್ತೀಚೆಗೆ ತಮ್ಮ ಕ್ಲಿನಿಕ್ ನೋಂದಣಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಯನ್ನು ಪುರಸ್ಕರಿಸಲು ನಿರಾಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ರಾಜ್ಯದಲ್ಲಿ ನಕಲಿ ವೈದ್ಯರ ವಿರುದ್ಧ ಕಠಣ ಕ್ರಮ ಜರುಗಿಸಲು ಆದೇಶ ನೀಡಿದ್ದಾರೆ.


ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ನಕಲಿ ವೈದ್ಯನೊಬ್ಬ 15 ರೋಗಿಗಳಿಗೆ ಹೃದಯ ಶಸ ಚಿಕಿತ್ಸೆ ನಡೆಸಿ ಏಳು ರೋಗಿಗಳ ಸಾವಿಗೆ ಕಾರಣನಾದ ಘಟನೆ ಆಘಾತಕಾರಿ. ಸುಳ್ಳು ಪ್ರಮಾಣ ಪತ್ರ ನೀಡಿ ಈ ವೈದ್ಯ ಸರಕಾರಿ ಆಸ್ಪತ್ರೆ ಸೇವೆಗೆ ಸೇರಿದ್ದ ಎನ್ನುವುದೇ ನಮ್ಮ ವ್ಯವಸ್ಥೆಯ ಬಗ್ಗೆ ಹತ್ತಾರು ಪ್ರಶ್ನೆಗಳನ್ನು ಮುಂದಿಡುತ್ತದೆ. ಈ ನಡುವೆ ರಾಜ್ಯದಲ್ಲಿ ವೈದ್ಯ ಪದವಿಯನ್ನು ಪಡೆಯದೇ ಕ್ಲಿನಿಕ್ ನಡೆಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇವರ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ಹೈಕೋರ್ಟ್ ಆದೇಶ ನೀಡಿದೆ. ಮಂಡ್ಯ ಕೆ. ಆರ್ ತಾಲ್ಲೂಕಿನ ನಕಲಿ ವೈದ್ಯರೊಬ್ಬರು ಕೇವಲ ಎಸ್ಸೆಸ್ಸೆಲ್ಸಿ ಮುಗಿಸಿ ಕಳೆದ 15 ವರ್ಷಗಳಿಂದ ಕ್ಲಿನಿಕ್ ನಡೆಸುತ್ತಿದ್ದರು. ಇತ್ತೀಚೆಗೆ ತಮ್ಮ ಕ್ಲಿನಿಕ್ ನೋಂದಣಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಲು ನಿರಾಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ರಾಜ್ಯದಲ್ಲಿ ನಕಲಿ ವೈದ್ಯರ ವಿರುದ್ಧ ಕಠಣ ಕ್ರಮ ಜರುಗಿಸಲು ಆದೇಶ ನೀಡಿದ್ದಾರೆ.
ಇದನ್ನೂ ಓದಿ: Vishwavani Editorial: ವಂಚಕರಿಗೆ ಇನ್ನು ಉಳಿಗಾಲವಿಲ್ಲ
ಆರೋಗ್ಯ ಇಲಾಖೆ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ ಕಳೆದ ಒಂದೂವರೆ ವರ್ಷದಲ್ಲಿ ಕರ್ನಾಟಕದ ನಾನಾ ಜಿಗಳಲ್ಲಿ 967 ಮಂದಿ ನಕಲಿ ವೈದ್ಯರನ್ನು ಪತ್ತೆ ಹಚ್ಚಲಾಗಿದೆ. 228 ಕ್ಲಿನಿಕ್ ಗಳಿಗೆ ಬೀಗ ಜಡಿಯಲಾಗಿದೆ. 450 ವೈದ್ಯರಿಗೆ ನೋಟಿಸ್ ನೀಡಲಾಗಿದೆ. ಆದರೆ ಈ ವೈದ್ಯರಿಂದ ಸಂತ್ರಸ್ತ ರೋಗಿಗಳು ಮತ್ತವರ ಸಂಬಂಧಿಕರು ಅನುಭವಿಸಿದ ನೋವಿಗೆ ಪರಿಹಾರವಿದೆಯೆ? ರಾಜ್ಯದ ಬೀದರ್ (213), ಕೋಲಾರ (115) ಮತ್ತು ತುಮಕೂರು (112) ಜಿಲ್ಲೆಗಳಲ್ಲಿ ಅತಿ ಹೆಚ್ಚು ನಕಲಿ ವೈದ್ಯರನ್ನು ಪತ್ತೆ ಮಾಡಲಾಗಿದೆ.
ಇವು ಗಡಿ ಜಿಲ್ಲೆಗಳಾಗಿರುವ ಕಾರಣ ಬೇರೆ ರಾಜ್ಯದ ನಕಲಿ ವೈದ್ಯರು ಇಲ್ಲಿ ಚಿಕಿತ್ಸೆ ಹೆಸರಿನಲ್ಲಿ ತಳವೂರಿದ್ದಾರೆ ಎನ್ನಲಾಗಿದೆ. ಸದ್ಯ ಕೆಪಿಎಂಇ ಕಾಯದೆ ಪ್ರಕಾರ ಮೊದಲ ಬಾರಿಗೆ ಸಿಕ್ಕಿ ಬೀಳುವ ನಕಲಿ ವೈದ್ಯರಿಗೆ 25 ಸಾವಿರ ರೂ. ದಂಡ, 2ನೇ ಬಾರಿ ಸಿಕ್ಕಿ ಬಿದ್ದರೆ 2.50 ಲಕ್ಷ ರೂ. ದಂಡ ಮತ್ತು 1 ವರ್ಷ ಜೈಲು ಶಿಕ್ಷೆ, 3ನೇ ಬಾರಿ ಸಿಕ್ಕಿಬಿದ್ದರೆ 5 ಲಕ್ಷ ರೂ. ದಂಡ ಮತ್ತು 3 ವರ್ಷ ಜೈಲು ಶಿಕ್ಷೆ ವಿಧಿಸ ಲಾಗುತ್ತದೆ.
ಜನರ ಜೀವದ ಚೆಲ್ಲಾಟ ಆಡುವ ನಕಲಿ ವೈದ್ಯರಿಗೆ ಈ ಶಿಕ್ಷೆ ಏನೇನೂ ಅಲ್ಲ. ವೈದ್ಯ ವೃತ್ತಿಯಂತಹ ಪವಿತ್ರ ವೃತ್ತಿಗೆ ಕಳಂಕ ತರುವ, ಜನರ ನಂಬಿಕೆಯೊಂದಿಗೆ ಚೆಲ್ಲಾಟ ಆಡುವ, ಇಂತಹ ನಕಲಿ ವೈದ್ಯರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಬೇಕು.