Vishwavani Editorial: ಅಯೋಧ್ಯೆೆಯಲ್ಲಿ ನಂಬಿಕೆದ್ರೋಹ
ಉತ್ತರ ಪ್ರದೇಶದ ಅಯೋಧ್ಯೆ ಶ್ರೀರಾಮ ಮಂದಿರ ದೇವಾಲಯದಲ್ಲಿ ದೊಡ್ಡ ಪ್ರಮಾಣದ ಹಣಕಾಸಿನ ಅವ್ಯವಹಾರ ನಡೆದಿದೆ. ದೇವಾಲಯದ ನಿರ್ಮಾಣ ಮತ್ತು ನಿರ್ವಹಣೆಗೆ ಹರಿದು ಬಂದ ಕೊಟ್ಯಂತರ ರೂಪಾಯಿ ದೇಣಿಗೆಯಲ್ಲಿ ಅವ್ಯವಹಾರ ನಡೆದಿದ್ದು, ಈ ಕುರಿತು ತನಿಖೆಗೆ ರಾಜ್ಯ ಸರಕಾರ ಎಸ್‌ಐಟಿ ರಚಿಸಿದೆ. ಆರೋಪವನ್ನು ಸಾಬೀತುಪಡಿಸುವ ಅಂಶಗಳು, ಸಿಸಿಟಿವಿ ಫೂಟೇಜ್ ಗಳು ಪತ್ತೆಯಾಗಿವೆ.
-
ಉತ್ತರ ಪ್ರದೇಶದ ಅಯೋಧ್ಯೆ ಶ್ರೀರಾಮ ಮಂದಿರ ದೇವಾಲಯದಲ್ಲಿ ದೊಡ್ಡ ಪ್ರಮಾಣದ ಹಣಕಾಸಿನ ಅವ್ಯವಹಾರ ನಡೆದಿದೆ. ದೇವಾಲಯದ ನಿರ್ಮಾಣ ಮತ್ತು ನಿರ್ವಹಣೆಗೆ ಹರಿದು ಬಂದ ಕೊಟ್ಯಂತರ ರೂಪಾಯಿ ದೇಣಿಗೆಯಲ್ಲಿ ಅವ್ಯವಹಾರ ನಡೆದಿದ್ದು, ಈ ಕುರಿತು ತನಿಖೆಗೆ ರಾಜ್ಯ ಸರಕಾರ ಎಸ್‌ಐಟಿ ರಚಿಸಿದೆ. ಆರೋಪವನ್ನು ಸಾಬೀತುಪಡಿಸುವ ಅಂಶಗಳು, ಸಿಸಿಟಿವಿ ಫೂಟೇಜ್ ಗಳು ಪತ್ತೆಯಾಗಿವೆ. ಆದರೂ 45 ದಿನಗಳ ಹಿಂದಿನ ಸಿಸಿಟಿವಿ ಫೂಟೇಜ್‌ಗಳು ಅಳಿಸಿ ಹೋಗಿದ್ದು, ಉದ್ದೇಶಪೂರ್ವಕವಾಗಿಯೇ ಅದನ್ನು ಅಳಿಸಿರುವ ಶಂಕೆಯನ್ನು ಎಸ್‌ಐಟಿ ಎತ್ತಿದೆ.
ಕಳೆದ ಹತ್ತು ತಿಂಗಳಲ್ಲಿ ಭದ್ರತೆಗಾಗಿಯೇ ಸುಮಾರು ಹತ್ತು ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಆದರೂ ಇಂತಹ ಭಾರಿ ಕಳ್ಳತನ ನಡೆದಿರುವುದರಿಂದ ಸಿಬ್ಬಂದಿಯ ಕೈವಾಡ ಇರುವುದು ನಿಶ್ಚಿತ. ಭಕ್ತರು ನಗದು ಮಾತ್ರವಲ್ಲದೆ ಚಿನ್ನ ಬೆಳ್ಳಿಗಳ ರೂಪದಲ್ಲಿ ದೇಣಿಗೆ ನೀಡಿದ್ದು, ಅವುಗಳ ಲೆಕ್ಕವೂ ಸರಿಯಾದ ಪ್ರಮಾಣದಲ್ಲಿ ಇಲ್ಲ. ರಾಮಮಂದಿರ ಟ್ರಸ್ಟ್ ಸದಸ್ಯರು, ಆಡಳಿತ ಮಂಡಳಿಯ ಪದಾಧಿಕಾರಿಗಳು, ಸಿಬ್ಬಂದಿಗಳು ಯಾರನ್ನೂ ಅಯೋಧ್ಯೆೆ ಬಿಟ್ಟು ಹೋಗದಂತೆ ಎಸ್‌ಐಟಿ ಸೂಚಿಸಿದೆ.
ಇದನ್ನೂ ಓದಿ: Vishwavani Editorial: ಪೊಲೀಸ್ ಇಲಾಖೆಗೆ ಬೇಕು ಸುಧಾರಣೆ
ಅಯೋಧ್ಯೆ ರಾಮಮಂದಿರದಂಥ ದೇಶದ ಜನತೆಯ ಭಾವಭಕ್ತಿಗಳ ಕೇಂದ್ರದಲ್ಲೇ ಹೀಗಾದರೆ ಇತರ ಧರ್ಮಕ್ಷೇತ್ರಗಳ, ಸರಕಾರಿ ಆಡಳಿತದ ದೇವಾಲಯಗಳ ಕತೆಯೇನು ಎಂದು ಜನತೆ ಪ್ರಶ್ನಿಸು ವಂತಾಗಿದೆ. ಅಯೋಧ್ಯೆೆಯ ಮಂದಿರ ನಿರ್ಮಾಣಕ್ಕೆ ದೇಶದ ಜನತೆ ಕೋಟ್ಯಂತರ ಸಂಖ್ಯೆಯಲ್ಲಿ ಧರ್ಮ ಜಾತಿ ಭೇದಗಳಿಲ್ಲದೆ ತಮ್ಮ ತನು ಮನ ಧನ ನೀಡಿದ್ದರು. ಆಡ್ವಾಣಿಯವರ ರಥಯಾತ್ರೆಯ ದಿನಗಳಿಂದ ಹಿಡಿದು, ವಿವಾದಿತ ಕಟ್ಟಡ ಕೆಡವಿದ ಕಾಲವನ್ನೂ ಸೇರಿಸಿ, ನಂತರದ ಕಟ್ಟಡ ನಿರ್ಮಾಣ ಇತ್ಯಾದಿ ಹಂತಗಳಲ್ಲೂ ದೇಶದ ಭಾವುಕ ಜನತೆಯ ಪಾಲ್ಗೊಳ್ಳುವಿಕೆ ಈ ಮಂದಿರ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದೆ. ಸುಪ್ರೀಂ ಕೋರ್ಟೇ ಈ ಜಾಗದ ವಿವಾದದ ವಿಚಾರ ವನ್ನು ಇತ್ಯರ್ಥಪಡಿಸುವ ಸಂದರ್ಭದಲ್ಲಿ, ಕಾನೂನಾತ್ಮಕ ಅಂಶಗಳಿಗಿಂತಲೂ ಹೆಚ್ಚಾಗಿ, ಬಹು ಸಂಖ್ಯಾತ ಜನತೆಯ ನಂಬಿಕೆಯ ಕುರಿತ ಮಾತುಗಳನ್ನು ಎತ್ತಿಕೊಂಡಿತ್ತು. ಅದಕ್ಕನುಗುಣವಾಗಿಯೇ ತೀರ್ಪು ನೀಡಿತ್ತು. ಜನತೆ ಬಿಜೆಪಿಯನ್ನು ಗೆಲ್ಲಿಸಿದ್ದು ರಾಮಮಂದಿರ ನಿರ್ಮಾಣಕ್ಕಾಗಿಯೇ ಎಂದು ಬಿಜೆಪಿ ಹೇಳಿಕೊಂಡಿತ್ತು. ಈಗ ನಡೆದಿರುವ ಜನತೆಯ ನಂಬಿಕೆದ್ರೋಹ. ಭಕ್ತಿಯ ಮೇಲಿನ ಹಲ್ಲೆೆ. ಇದಕ್ಕೆೆ ಬಿಜೆಪಿ, ಕೇಂದ್ರ ಹಾಗೂ ಉತ್ತರಪ್ರದೇಶ ರಾಜ್ಯಸರಕಾರಗಳು ಉತ್ತರ ನೀಡಬೇಕು. ತಪ್ಪಿತಸ್ಥ ರಿಗೆ ಶಿಕ್ಷೆಯಾಗಬೇಕು. ಜನತೆಯ ಭಕ್ತಿಯ ಹಣವನ್ನು ಧರ್ಮದ್ರೋಹಿಗಳು ‘ಭುಕ್ತಿ’ಗಾಗಿ ಬಳಸಿಕೊಳ್ಳಲು ಬಿಡಕೂಡದು. ಶ್ರದ್ಧಾಕೇಂದ್ರಗಳು ಅಕಳಂಕಿತವಾಗಿರಬೇಕು. ಶ್ರದ್ಧೆೆಗೆ ದ್ರೋಹ ವಾದರೆ ಅದಕ್ಕೆ ಪ್ರಾಯಶ್ಚಿತ್ತವಿಲ್ಲ.