ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Editorial: ಮಹಿಳೆಯ ಅಪಮಾನ ಸಲ್ಲದು

ಉದಯನಿಧಿ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆಗಾಗಿ ಕರೆದೊಯ್ದು ಬಳಿಕ ಬಿಡುಗಡೆ ಆಗಿದ್ದಾರೆ. ಈ ಕುರಿತು ಕಾನೂನು ಹೋರಾಟ ನಡೆಯಬಹುದು. ಅದರಲ್ಲಿ ಉದಯನಿಧಿ ತಮ್ಮನ್ನು ಸಮರ್ಥಿಸಿಕೊಳ್ಳಬಹುದು, ಆ ಮಾತು ಬೇರೆ. ಆದರೆ ಈ ಕೀಳು ಮಾತಿಗಾಗಿ ಇದುವರೆಗೂ ಒಂದು ಕ್ಷಮೆ ಯನ್ನೂ ಅವರು ಕೇಳಿಲ್ಲ

Vishwavani Editorial: ಮಹಿಳೆಯ ಅಪಮಾನ ಸಲ್ಲದು

-

Profile
Ashok Nayak Aug 6, 2026 7:50 AM

ಮಹಿಳೆಯರನ್ನು ಅಪಮಾನಿಸುವಂತೆ ನಡೆದುಕೊಳ್ಳುವ ಘಟನೆಗಳು ಜನಸಾಮಾನ್ಯರಲ್ಲಿ ಬಿಡಿ, ರಾಜಕಾರಣಿಗಳಲ್ಲೇ ಹೆಚ್ಚುತ್ತಿರುವುದಕ್ಕೆ ಇತ್ತೀಚಿನ ದಿನಗಳಲ್ಲಿ ನಾವು ಸಾಕ್ಷಿ ಆಗುತ್ತಿದ್ದೇವೆ. ತಮಿಳು ನಾಡಿನ ಮಾಜಿ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್, ಈಗಿನ ಮುಖ್ಯಮಂತ್ರಿ ವಿಜಯ್ ಅವರ ಆಪ್ತರದ ನಟಿ ತ್ರಿಶಾ ಬಗ್ಗೆ ಕೀಳು ಮಾತೊಂದನ್ನು ತುಂಬಿದ ಸಭೆಯಲ್ಲಿ ಕಾರ್ಯಕರ್ತರ ಸಮ್ಮುಖ ದಲ್ಲಿ ಆಡಿದ್ದರು. ಇದಕ್ಕೆ ಪ್ರತಿಭಟನೆ ನಡೆದಿದೆ.

ಉದಯನಿಧಿ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆಗಾಗಿ ಕರೆದೊಯ್ದು ಬಳಿಕ ಬಿಡುಗಡೆ ಆಗಿದ್ದಾರೆ. ಈ ಕುರಿತು ಕಾನೂನು ಹೋರಾಟ ನಡೆಯಬಹುದು. ಅದರಲ್ಲಿ ಉದಯನಿಧಿ ತಮ್ಮನ್ನು ಸಮರ್ಥಿಸಿಕೊಳ್ಳಬಹುದು, ಆ ಮಾತು ಬೇರೆ. ಆದರೆ ಈ ಕೀಳು ಮಾತಿಗಾಗಿ ಇದುವರೆಗೂ ಒಂದು ಕ್ಷಮೆಯನ್ನೂ ಅವರು ಕೇಳಿಲ್ಲ. ಇದು ನಮ್ಮ ರಾಜಕಾರಣ ಎಂದು ಅಧೋಗತಿಗೆ ಇಳಿದಿದೆ ಎಂಬುದನ್ನು ಸೂಚಿಸುತ್ತಿದೆ.

ಇದನ್ನೂ ಓದಿ: Vishwavani Editorial: ನಶೆಯ ವಿರುದ್ಧ ಸಮರ

ಎದುರಾಳಿಯನ್ನು ಸೋಲಿಸಲು ಸಾಧ್ಯವಾಗದೆ ಹೋದಾಗ, ಅವರನ್ನು ಅಪಮಾನಿಸಲು ಅವರ ಮನೆಯ ಅಥವಾ ಆಪ್ತ ಮಹಿಳೆಯ ವಿಚಾರ ಎಳೆದು ತರುವುದು ಅತಿ ಹೀನ ಸಂಸ್ಕೃತಿ. ಈ ಹಿಂದೆ ಯೂ ಉದಯನಿಧಿ ತನ್ನ ನಾಲಿಗೆಯನ್ನು ನಾನಾ ವಿಚಾರಗಳಲ್ಲಿ ಹರಿಬಿಟ್ಟಿದ್ದಾರೆ. ಉದಾ ಹರಣೆಗೆ ಸನಾತನ ಧರ್ಮದ ಬಗ್ಗೆ ಅವರು ಆಡಿದ ಕೀಳು ಮಾತುಗಳು. ಅವು ಕೂಡ ಕ್ಷಮಾರ್ಹ ಆಗಿರಲಿಲ್ಲ.

ಉದಯನಿಧಿ ಸೇರಿದಂತೆ ತಮಿಳುನಾಡಿನ ಅನೇಕ ರಾಜಕಾರಣಿಗಳಿಗೆ ಇದೊಂದು ಚಾಳಿ. ದ್ರಾವಿಡ ಸಂಸ್ಕೃತಿಯ ಹೆಸರಿನಲ್ಲಿ ಸನಾತನ ಧರ್ಮದ ಮೇಲಿನ ದಾಳಿ ಇಲ್ಲಿ ಸಾಮಾನ್ಯ. ಆದರೆ ಅದು ಮಹಿಳೆಯರ ಕುರಿತಾದ ಹೊಲಸು ಮಾತಿಗೂ ಮೂಲವಾಗುತ್ತದೆ ಎಂದರೇನರ್ಥ? ಈ ಹಿಂದಿನ ದೃಷ್ಟಾಂತ ನೆನೆಯಬಹುದಾದರೆ- ಅದು ಕೂಡ ತಮಿಳುನಾಡಿನದ್ದೇ- ಮಹಿಳೆಯನ್ನು ಅಪಮಾ ನಿಸಿದ ಪಕ್ಷವೇ ನಾಶವಾಗುವ ಹಂತಕ್ಕೆ ಬಂದಿತ್ತು.

ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಘೆರಾವ್ ಮಾಡಿ, ಹೊಸಲು ಮಾತುಗಳಲ್ಲಿ ನಿಂದಿಸಿ, ವಿಧಾನಸಭೆಯಲ್ಲೇ ಅವರ ಸೀರೆ ಎಳೆದು ಅಪಮಾನ ಮಾಡಲಾಗಿತ್ತು. ಇದನ್ನೆಸಗಿದ ಡಿಎಂಕೆ ಪಕ್ಷವೇ ಮುಂದೆ ನಾಶವಾಗುವ ಹಂತ ತಲುಪಿ, ಪಾಠ ಕಲಿಯಬೇಕಾಗಿ ಬಂದಿತ್ತು.

ಉದಯನಿಧಿ ಕೂಡ ಆ ಹಂತದಲ್ಲಿದ್ದಾರೋ ಎಂಬ ಭಾವನೆ ಬರುತ್ತಿದೆ. ಮಹಿಳೆಯರಿಗೆ ರಾಜಕಾರಣ ದಲ್ಲಿ ಶೇ.33 ಸ್ಥಾನ ಕಲ್ಪಿಸುವ ಕಾಯಿದೆ ಇನ್ನೂ ರೂಪುಗೊಳ್ಳದೆ ಹಿಂದುಳಿಯಲು ಅಡಚಣೆ ಯಾಗಿರುವ ರಾಜಕಾರಣಿಗಳ ಪ್ರವೃತ್ತಿಗೂ ಇಂಥ ಹೀನ ನಡವಳಿಕೆಗೂ ಖಂಡಿತ ಸಂಬಂಧ ಇದೆ. ಇಂಥ ನಡವಳಿಕೆಗಳು ರಾಜಕಾರಣಿಗಳಿಗೆ ಮಾತ್ರವಲ್ಲ, ಯಾರಿಗೂ ಶೋಭೆಯಲ್ಲ.