Vishwavani Editorial: ನೂರು ದಿನದ ಆಡಳಿತ
ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ನೂರು ದಿನಗಳನ್ನು ಪೂರೈಸಿದ್ದಾರೆ. ಈ ಅವಧಿಯಲ್ಲಿ ಸಿಹಿ- ಕಹಿ ಎರಡೂ ಅವರಿಗೆ ಎದುರಾಗಿವೆ. ಅಧಿಕಾರ ಹಸ್ತಾಂತರ ಆದನಂತರ ಸಂಪುಟ ರಚನೆ, ಪುನಾರಚನೆಗೆ ಅವರು ಸಾಕಷ್ಟು ಸಮಯ ವ್ಯಯಿಸಿದರು. ಇದಕ್ಕಾಗಿ ಹೈಕಮಾಂಡ್ ಆಣತಿಗಾಗಿ ಅವರು ಕಾಯಬೇಕಾಗಿ ಬಂತು. ಸಂಪುಟ ವಿಸ್ತರಣೆಯಲ್ಲಿ ಸಹೋ ದ್ಯೋಗಿಗಳ ಮುನಿಸು ಎದುರಿಸಿದರೂ ಅದನ್ನು ಜಾಣ್ಮೆಯಿಂದ ಶಮನ ಮಾಡಿಕೊಂಡರು.
-
ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ನೂರು ದಿನಗಳನ್ನು ಪೂರೈಸಿದ್ದಾರೆ. ಈ ಅವಧಿಯಲ್ಲಿ ಸಿಹಿ- ಕಹಿ ಎರಡೂ ಅವರಿಗೆ ಎದುರಾಗಿವೆ. ಅಧಿಕಾರ ಹಸ್ತಾಂತರ ಆದನಂತರ ಸಂಪುಟ ರಚನೆ, ಪುನಾರಚನೆಗೆ ಅವರು ಸಾಕಷ್ಟು ಸಮಯ ವ್ಯಯಿಸಿದರು. ಇದಕ್ಕಾಗಿ ಹೈಕಮಾಂಡ್ ಆಣತಿಗಾಗಿ ಅವರು ಕಾಯಬೇಕಾಗಿ ಬಂತು. ಸಂಪುಟ ವಿಸ್ತರಣೆಯಲ್ಲಿ ಸಹೋ ದ್ಯೋಗಿಗಳ ಮುನಿಸು ಎದುರಿಸಿದರೂ ಅದನ್ನು ಜಾಣ್ಮೆಯಿಂದ ಶಮನ ಮಾಡಿಕೊಂಡರು. ಅವರ ಸಂಪುಟದ ಹಲವರು ಖಾತೆಯ ಕೆಲಸವನ್ನು ಚುರುಕಾಗಿ ಮಾಡುತ್ತಿದ್ದಾರೆ.
ಮುಖ್ಯವಾಗಿ ರಾಜಧಾನಿ ಬೆಂಗಳೂರಿನ ಮೇಲೆ ಸಂಪೂರ್ಣ ಹಿಡಿತ ಹೊಂದಿರುವ ಡಿಕೆಶಿ, ರಾಜಧಾನಿ ಯ ಮತ್ತಷ್ಟು ಆಧುನೀಕರಣದತ್ತ ಹೆಚ್ಚಿನ ಲಕ್ಷ್ಯ ಹರಿಸಿದಂತಿದೆ. ಸುರಂಗ ಮಾರ್ಗ, ಸಾರ್ವಜನಿಕ ಸ್ಥಳಗಳ ಗರಿಷ್ಠ ಬಳಕೆ, ಮೂಲಸೌಕರ್ಯಕ್ಕೆ ಒತ್ತು ಇತ್ಯಾದಿಗಳ ಮೂಲಕ ಅದು ವ್ಯಕ್ತವಾಗಿದೆ.
ಇದನ್ನೂ ಓದಿ: Vishwavani Editorial: ಬರಗಾಲದ ಭೀಕರತೆ
ರಾಜ್ಯದ ಆಡಳಿತದ ಸುಗಮತೆಗಾಗಿ ಕೇಂದ್ರ ಸರಕಾರದೊಂದಿಗೆ ಸಮನ್ವಯ ಮುಖ್ಯಮಂತ್ರಿಗೆ ಅಗತ್ಯ. ಆ ನಿಟ್ಟಿನಲ್ಲಿ, ತಮ್ಮ ಪಕ್ಷ ಕೇಂದ್ರದಲ್ಲಿ ಇಲ್ಲದೇ ಹೋದರೂ ಬಿಜೆಪಿ ನಾಯಕರ ಜೊತೆಗೆ ಒಂದು ಬಗೆಯ ಸೌಹಾರ್ದ ಸಮನ್ವಯವನ್ನು ಅವರು ಸಾಽಸಿರುವುದು ಗಣನೀಯ ಸಾಧನೆಯೇ ಹೌದು.
ಪ್ರತಿಪಕ್ಷ ಬಿಜೆಪಿ ಕೂಡ ಹೋರಾಟ ಕೈಗೆತ್ತಿಕೊಂಡರೂ, ಮುಖ್ಯಮಂತ್ರಿಗಳ ವರ್ಚಸ್ಸನ್ನು ಮಂಕಾ ಗಿಸಲು ಸಾಧ್ಯವಾಗಿಲ್ಲ. ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ರಾಜ್ಯದ ಎಲ್ಲಾ ಪಂಚಾಯಿತಿ ವಾರ್ಡ್‌ಗಳಲ್ಲಿ ಭಾರತ ಜೋಡೋ ಯುವಕರ ಸಂಘ ಸ್ಥಾಪನೆ, ಬಿಯಿಂದ ಎ ಖಾತಾ ಪರಿವರ್ತನೆ, ಸಾರ್ವಜನಿಕರ ಕುಂದುಕೊರತೆ ಆಲಿಸಲು ‘ಪ್ರಜಾಸೇವೆ’ ಸಚಿವಾಲಯ ಆರಂಭ ಸೇರಿದಂತೆ ಅವರ ಕಾರ್ಯಕ್ರಮಗಳು ಗಮನ ಸೆಳೆದಿವೆ. ಆದರೆ ಸವಾಲುಗಳೂ ಕಾಡಿವೆ.
ಬರಗಾಲ ತಾಂಡವ ಆಡುತ್ತಿದ್ದು, ಮುಂದಿನ ದಿನಗಳು ಕಷ್ಟಕರವಾಗಲಿವೆ. ಕಾವೇರಿ ನೀರಿನ ತಗಾದೆ ಇನ್ನಷ್ಟು ಉಲ್ಬಣಿಸುವಂತಿದೆ. ಬಿಡದಿ ಟೌನ್‌ಶಿಪ್, ನೈಸ್ ರಸ್ತೆ ತಗಾದೆ ಇತ್ಯಾದಿಗಳು ತಗುಲಿ ಕೊಂಡಿವೆ. ಇದನ್ನೆಲ್ಲ ನಿವಾರಿಸಿಕೊಂಡು ರಾಜ್ಯದ ಹಿತಚಿಂತನೆಯಲ್ಲಿ ಮುನ್ನಡೆದರೆ, ಇನ್ನೊಂದು ವರ್ಷದಲ್ಲಿ ಆಗಮಿಸಲಿರುವ ವಿಧಾನಸಭೆ ಚುನಾವಣೆಯಲ್ಲೂ ಮತದಾರರು ಡಿಕೆಶಿ ಕೈಹಿಡಿಯ ಬಹುದು.