ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishwavani Editorial: ಸಂಕಟದ ವೇಳೆಯೂ ಸುಂಕವೇ?

ಗೋರಖಪುರದ ಗೀತಾ ಪ್ರೆಸ್ ಇದು ನಿಜಕ್ಕೂ ಮನಸ್ಸನ್ನು ವಿಹ್ವಲಗೊಳಿಸುವ ಸಂಗತಿ. ಹುಬ್ಬಳ್ಳಿ ಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಮಹಿಳೆಯೊಬ್ಬರ ಶವವನ್ನು ಅವರ ಕುಟುಂಬಿಕರಿಗೆ ಪ್ಯಾಕ್ ಮಾಡಿಕೊಡಲು ಐವರು ಹೊರಗುತ್ತಿಗೆ ಸಿಬ್ಬಂದಿ ನಾಚಿಕೆ ಬಿಟ್ಟು ಹಣವಸೂಲಿ ಮಾಡಿದ್ದರು ಎಂಬ ಸುದ್ದಿ ಇದಕ್ಕೆ ಕಾರಣ.

Vishwavani Editorial: ಸಂಕಟದ ವೇಳೆಯೂ ಸುಂಕವೇ?

-

Ashok Nayak
Ashok Nayak Feb 14, 2026 8:54 AM

ಗೋರಖಪುರದ ಗೀತಾ ಪ್ರೆಸ್ ಇದು ನಿಜಕ್ಕೂ ಮನಸ್ಸನ್ನು ವಿಹ್ವಲಗೊಳಿಸುವ ಸಂಗತಿ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಮಹಿಳೆಯೊಬ್ಬರ ಶವವನ್ನು ಅವರ ಕುಟುಂಬಿಕರಿಗೆ ಪ್ಯಾಕ್ ಮಾಡಿಕೊಡಲು ಐವರು ಹೊರಗುತ್ತಿಗೆ ಸಿಬ್ಬಂದಿ ನಾಚಿಕೆ ಬಿಟ್ಟು ಹಣವಸೂಲಿ ಮಾಡಿದ್ದರು ಎಂಬ ಸುದ್ದಿ ಇದಕ್ಕೆ ಕಾರಣ.

ಈ ಅಮಾನವೀಯ ಕೃತ್ಯದಿಂದ ರೋಸಿಹೋದ ಮೃತರ ಕುಟುಂಬಸ್ಥರು ಆಕ್ರೋಶವನ್ನು ಹೊರ ಹಾಕಿದ ಬಳಿಕ ಸದರಿ ನೌಕರರನ್ನು ಅಮಾನತು ಮಾಡಲಾಗಿದೆಯಂತೆ. ಪುರಂದರ ದಾಸರು ಬರೆದಿರುವ ‘ಅಂತಕನ ದೂತರಿಗೆ ಕಿಂಚಿತ್ತೂ ಭಯವಿಲ್ಲ’ ಎಂಬ ಕೀರ್ತನೆಯನ್ನು ನೀವು ಕೇಳಿರಬಹುದು.

ಇದನ್ನೂ ಓದಿ: Vishwavani Editorial: ಇನ್ನೂ ಎಷ್ಟು ಬಲಿಯಾಗಬೇಕು?

ಯಮದೂತರು ಮನುಷ್ಯ ಒಡ್ಡುವ ಹಣ ಮುಂತಾದ ಆಮಿಷಗಳಿಗೆ ಮಣಿಯದೆ, ಸಮಯ ಬರುತ್ತಿದ್ದಂತೆ ಯಾವುದೇ ದಯೆ-ದಾಕ್ಷಿಣ್ಯ ತೋರದೆ ಅವನ ಪ್ರಾಣವನ್ನು ಕರೆದೊಯ್ಯು ತ್ತಾರೆ ಎಂಬ ಸೂಚ್ಯರ್ಥವನ್ನು ಹೊಂದಿರುವ ಮತ್ತು ಜೀವನದ ನಶ್ವರತೆಯನ್ನು ಸಾರುವ ಕೀರ್ತನೆಯಿದು.

ಇಲ್ಲಿ ಕಾಣಬರುವುದು ಯಮದೂತರ ಕರ್ತವ್ಯಪ್ರಜ್ಞೆಯೇ ವಿನಾ, ಹಿಂಸಾವಿನೋದವಲ್ಲ. ಆದರೆ ಮೇಲೆ ಉಲ್ಲೇಖಿಸಿರುವ ಐವರು ಸಿಬ್ಬಂದಿಗಳು, ಅದಾಗಲೇ ಸಾವಿನ ಸಂಕಟದಲ್ಲಿ ರುವ ಕುಟುಂಬಿಕರಲ್ಲೂ ಹಣವನ್ನು ಹೀಗೆ ಕಿತ್ತಿದ್ದಕ್ಕೆ ಏನನ್ನುವುದು? ಇದು ‘ಕಲ್ಲು ಹೃದಯ’ ಎಂಬ ರೂಪಕವನ್ನೂ ಮೀರಿಸುವ ಅಮಾನವೀಯತೆಗೆ ದ್ಯೋತಕ ಎಂದಷ್ಟೇ ಹೇಳಬಹುದು.

ವ್ಯಕ್ತಿಯೊಬ್ಬರು ಅಸ್ವಸ್ಥಗೊಂಡು ಆಸ್ಪತ್ರೆಯ ಪಾಲಾದಾಗಲೇ ಅವರ ಕುಟುಂಬಿಕರ ಸಾಕಷ್ಟು ಮನೋಸ್ಥೈರ್ಯ ಕುಸಿದಿರುತ್ತದೆ; ಇನ್ನು ಸಾವು ಸಂಭವಿಸಿದರಂತೂ ಕೇಳುವುದೇ ಬೇಡ. ಇಂಥ ನೋವಿನ ಗಳಿಗೆಯಲ್ಲೇ ತಮ್ಮ ಬಯಕೆಯ ಬೇಳೆ ಬೇಯಿಸಿಕೊಳ್ಳಲು ಮುಂದಾಗುವ ಇಂಥ ಭ್ರಷ್ಟ ಮತ್ತು ನಿರ್ಲಜ್ಜ ಸಿಬ್ಬಂದಿಗಳಿಗೆ ಧಿಕ್ಕಾರವಿರಲಿ...