Asia Cup 2025: ಏಷ್ಯಾ ಕಪ್‌ಗೆ ಆಫ್ಘಾನ್ ಸಂಭಾವ್ಯ ತಂಡ ಪ್ರಕಟ; ರಶೀದ್ ಖಾನ್ ನಾಯಕ
ರಶೀದ್ ಖಾನ್ ತಂಡವನ್ನು ಮುನ್ನಡೆಸಲಿದ್ದು, ಅಜ್ಮತುಲ್ಲಾ ಒಮರ್‌ಜೈ, ರಹಮಾನಲ್ಲಾ ಗುರ್ಬಾಜ್, ಫಜಲ್ಹಕ್ ಫಾರೂಕಿ ಮತ್ತು ಮೊಹಮ್ಮದ್ ನಬಿ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ತ್ರಿಕೋನ ಸರಣಿಗೂ ಮುನ್ನ ತಂಡವು ಎರಡು ವಾರಗಳ ತರಬೇತಿ ಶಿಬಿರವನ್ನು ಹೊಂದಿರಲಿದ್ದು, ನಂತರ ಯುಎಇ ಹಾಗೂ ಪಾಕಿಸ್ತಾನದ ನಡುವೆ ಟಿ–20 ತ್ರಿಕೋನ ಸರಣಿ ಜರುಗಲಿದೆ.


ಕಾಬುಲ್: ಮುಂಬರುವ ಏಷ್ಯಾ ಕಪ್(Asia Cup 2025) ಟ್ರೋಫಿ ಪಂದ್ಯಾವಳಿಗಾಗಿ ಅಫ್ಘಾನಿಸ್ತಾನ ಸಂಭಾವ್ಯ ತಂಡ(Afghanistan preliminary squad) ಪ್ರಕಟಗೊಂಡಿದೆ. 22 ಸದಸ್ಯರ ತಂಡದಲ್ಲಿ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಿದ್ದ ತಂಡದ ಪ್ರಮುಖ ಹಿರಿಯ ಆಟಗಾರ ಜತೆ ದೇಶಿ ಟೂರ್ನಿಯಲ್ಲಿ ಮಿಂಚಿದ ಯುವ ಆಟಗಾರರು ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಏಷ್ಯಾ ಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ ತಂಡವು 'ಬಿ' ಗುಂಪಿನಲ್ಲಿದೆ. ಹಾಂಕಾಂಗ್, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ವಿರುದ್ಧ ಗುಂಪು ಹಂತದಲ್ಲಿ ಆಡಲಿದೆ.
ಏಷ್ಯಾಕಪ್‌ಗೂ ಮುನ್ನ ಪಾಕಿಸ್ತಾನ, ಯುಎಇ ಜತೆ ನಡೆಯುವ ತ್ರಿಕೋನ ಸರಣಿಯಲ್ಲಿ ಅಫಘಾನಿಸ್ತಾನ ತಂಡ ಇದೇ ತಂಡದ ಸದಸ್ಯರೊಂದಿಗೆ ಆಡಲಿದೆ. ರಶೀದ್ ಖಾನ್ ತಂಡವನ್ನು ಮುನ್ನಡೆಸಲಿದ್ದು, ಅಜ್ಮತುಲ್ಲಾ ಒಮರ್‌ಜೈ, ರಹಮಾನಲ್ಲಾ ಗುರ್ಬಾಜ್, ಫಜಲ್ಹಕ್ ಫಾರೂಕಿ ಮತ್ತು ಮೊಹಮ್ಮದ್ ನಬಿ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ತ್ರಿಕೋನ ಸರಣಿಗೂ ಮುನ್ನ ತಂಡವು ಎರಡು ವಾರಗಳ ತರಬೇತಿ ಶಿಬಿರವನ್ನು ಹೊಂದಿರಲಿದ್ದು, ನಂತರ ಯುಎಇ ಹಾಗೂ ಪಾಕಿಸ್ತಾನದ ನಡುವೆ ಟಿ–20 ತ್ರಿಕೋನ ಸರಣಿ ಜರುಗಲಿದೆ.
"ರಶೀದ್ ಖಾನ್ ಅವರ ಲಯದ ಕುರಿತು ನಾವು ಚಿಂತಿಸುವುದಿಲ್ಲ. ಅವರು ತಂಡಕ್ಕಾಗಿ ಆಡುತ್ತಾರೆ, ಏಷ್ಯಾ ಕಪ್‌ನಲ್ಲಿ ಅವರು ಮಿಂಚುವ ವಿಶ್ವಾಸವಿದೆ. ಮತ್ತು ತಂಡವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಲಿದ್ದಾರೆ" ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್(ಎಸಿಬಿ) ತಿಳಿಸಿದೆ. ರಶೀದ್ ಖಾನ್, 18ನೇ ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್ ಪರ 9.34 ಸರಾಸರಿಯಲ್ಲಿ ಕೇವಲ 9 ವಿಕೆಟ್ ಪಡೆದಿದ್ದರು
ಅಫ್ಘಾನಿಸ್ತಾನ ಏಷ್ಯಾಕಪ್ ಸಂಭಾವ್ಯ ತಂಡ
ರಶೀದ್ ಖಾನ್ (ನಾಯಕ), ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್), ಸೇದಿಕುಲ್ಲಾ ಅಟಲ್, ವಫಿವುಲ್ಲಾ ತಾರಖಿಲ್, ಇಬ್ರಾಹಿಂ ಜದ್ರಾನ್, ದರ್ವಿಶ್ ರಸೂಲಿ, ಮೊಹಮ್ಮದ್ ಇಶಾಕ್, ಮೊಹಮ್ಮದ್ ನಬಿ, ನಂಗ್ಯಾಲ್ ಕರೋತಿ, ಅಶ್ರಫ್ ಕರೋತಿ, ಒಮರ್‌ಝೈ, ಗುಲ್ಬದಿನ್ ನೈಬ್, ಮುಜೀಬ್ ಜದ್ರಾನ್, ನೂರ್ ಅಹ್ಮದ್, ಫಝಲ್ ಹಕ್ ಫಾರೂಕಿ, ನವೀನ್ ಉಲ್ ಹಕ್, ಫರೀದ್ ಮಲಿಕ್, ಸಲೀಮ್ ಸಫಿ, ಅಬ್ದುಲ್ಲಾ ಅಹ್ಮದ್ಝೈ, ಬಶೀರ್ ಅಹ್ಮದ್.
ಇದನ್ನೂ ಓದಿ Asia Cup 2025: ಏಷ್ಯಾ ಕಪ್‌ಗೆ ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್ ಆಯ್ಕೆ ಸಾಧ್ಯತೆ!