ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಕರ್ಮ ನಿಮ್ಮನ್ನು ಬಿಡುವುದಿಲ್ಲʼ: ಬೆನ್‌ ಸ್ಟೋಕ್ಸ್‌ ವಿರುದ್ದ ಆರ್‌ ಅಶ್ವಿನ್‌ ಆಕ್ರೋಶ!

ಭಾರತ ತಂಡದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಅವರ ಗಾಯವನ್ನು ಹಾಸ್ಯಾಸ್ಪದ ಎಂದು ಗೇಲಿ ಮಾಡಿದ್ದ ಇಂಗ್ಲೆಂಡ್‌ ತಂಡದ ನಾಯಕ ಬೆನ್‌ ಸ್ಟೋಕ್ಸ್‌ ಅವರನ್ನು ಭಾರತೀಯ ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ ಟೀಕಿಸಿದ್ದಾರೆ. ಕರ್ಮ ಪ್ರತಿಫಲ ಹಿಂದೆಯೂ ಇರುತ್ತದೆ ಎಂದು ಅಶ್ವಿನ್‌ ಹೇಳಿದ್ದಾರೆ.

ʻಕರ್ಮ ನಿಮ್ಮ ಹಿಂದೆಯೇ ಇದೆʼ: ಬೆನ್‌ ಸ್ಟೋಕ್ಸ್‌ ವಿರುದ್ದ ಅಶ್ವಿನ್‌ ಕಿಡಿ!

ಬೆನ್‌ ಸ್ಟೋಕ್ಸ್‌ ವಿರುದ್ದ ಆರ್‌ ಅಶ್ವಿನ್‌ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

Profile Ramesh Kote Aug 6, 2025 7:51 PM

ನವದೆಹಲಿ: ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ (IND vs ENG) ನಡುವಣ ಐದು ಪಂದ್ಯಗಳ ಟೆಸ್ಟ್‌ ಸರಣಿ 2-2 ಅಂತರದಲ್ಲಿ ಸಮಬಲ ಕಂಡಿದೆ. ಆದರೆ, ಈ ಟೆಸ್ಟ್‌ ಸರಣಿಯ ನಾಲ್ಕು ಮತ್ತು ಐದನೇ ಪಂದ್ಯಗಳಲ್ಲಿ ಕ್ರಮವಾಗಿ ಭಾರತದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಹಾಗೂ ಇಂಗ್ಲೆಂಡ್‌ ಕ್ರಿಸ್‌ ವೋಕ್ಸ್‌ ವಿಭಿನ್ನ ಗಾಯಗಳಿಗೆ ತುತ್ತಾಗಿದ್ದರು. ಇದು ಎರಡೂ ತಂಡಗಳ ಮೇಲೆ ಗಂಭೀರ ಪರಿಣಾಮವನ್ನು ಬೀರಿತ್ತು. ಅಂದ ಹಾಗೆ ನಾಲ್ಕನೇ ಪಂದ್ಯದ ಬಳಿಕ ಇಂಗ್ಲೆಂಡ್‌ ತಂಡದ ನಾಯಕ ಬೆನ್‌ ಸ್ಟೋಕ್ಸ್‌ (Ben Stokes), ರಿಷಭ್‌ ಪಂತ್‌ ಅವರ ಗಾಯವನ್ನು ಹಾಸ್ಯಾಸ್ಪದ ಎಂದು ಗೇಲಿ ಮಾಡಿದ್ದರು. ಈ ಬಗ್ಗೆ ಆರ್‌ ಅಶ್ವಿನ್‌ (R Ashwin) ಪ್ರತಿಕ್ರಿಯೆ ನೀಡಿದ್ದಾರೆ ಹಾಗೂ ಬೆನ್‌ ಸ್ಟೋಕ್ಸ್‌ ಅವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಲ್ಕನೇ ಟೆಸ್ಟ್‌ ಪಂದ್ಯದ ಮೊದಲನೇ ದಿನ ರಿಷಭ್‌ ಪಂತ್‌ ಬಲಗಾಲಿನ ಪಾದದ ಗಾಯಕ್ಕೆ ತುತ್ತಾದರು ಹಾಗೂ ಮೈದಾನವನ್ನು ತೊರೆದಿದ್ದರು. ನಂತರ ಅವರು ಎರಡನೇ ದಿನ ಬ್ಯಾಟಿಂಗ್‌ಗೆ ಇಳಿದು ಅರ್ಧಶತಕವನ್ನು ಪೂರ್ಣಗೊಳಿಸಿದ್ದರು. ಕ್ರಿಸ್‌ ವೋಕ್ಸ್‌ ಎಸೆತದಲ್ಲಿ ರಿವರ್ಸ್‌ ಸ್ವೀಪ್‌ ಮಾಡಲು ಪ್ರಯತ್ನಿಸುವಾಗ ಸ್ಟೋಕ್ಸ್‌ ಚೆಂಡನ್ನು ತಮ್ಮ ಬಲಗಾಲಿನ ಪಾದಕ್ಕೆ ತಗುಲಿಸಿಕೊಂಡಿದ್ದರು. ಈ ಕಾರಣದಿಂದ ಅವರು ಐದನೇ ಟೆಸ್ಟ್‌ ಪಂದ್ಯದಿಂದ ಹೊರಗುಳಿದಿದ್ದರು.

ಶುಭಮನ್‌ ಗಿಲ್‌ ಔಟ್‌! IND vs ENG ಸಂಯೋಜನೆಯ ಪ್ಲೇಯಿಂಗ್‌ XI ಆರಿಸಿದ ಸ್ಟುವರ್ಟ್‌ ಬ್ರಾಡ್‌

ನಂತರ, ಇಂಗ್ಲೆಂಡ್‌ ತಂಡದ ಆಲ್‌ರೌಂಡರ್‌ ಕ್ರಿಸ್‌ ವೋಕ್ಸ್‌ ಅವರು ಐದನೇ ಟೆಸ್ಟ್‌ ಪಂದ್ಯದ ಮೊದಲನೇ ದಿನ ಬೌಂಡರಿ ಲೈನ್‌ ಬಳಿ ಚೆಂಡನ್ನು ತಡಯುವ ಭರದಲ್ಲಿ ಗಾಯಕ್ಕೆ ತುತ್ತಾಗಿದ್ದರು. ನಂತರ ಅವರು ಪ್ರಥಮ ಇನಿಂಗ್ಸ್‌ನಲ್ಲಿ ಬೌಲ್‌ ಮಾಡಿರಲಿಲ್ಲ. ನಂತರ ನಾಲ್ಕನೇ ಇನಿಂಗ್ಸ್‌ನಲ್ಲಿ ಗಾಯದ ಹೊರತಾಗಿಯೂ ಒಂದೇ ಕೈನಲ್ಲಿ ಬ್ಯಾಟ್‌ ಮಾಡಲು ಕ್ರೀಸ್‌ಗೆ ಬಂದಿದ್ದರು.

ಈ ಎರಡೂ ಘಟನೆಗಳಿಂದ ನಾಲ್ಕು ಮತ್ತು ಐದನೇ ಪಂದ್ಯಗಳಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು 10 ಮಂದಿ ಆಟಗಾರರೊಂದಿಗೆ ಆಡಿದ್ದವು. ಗಾಯಾಳು ಆಟಗಾರರ ಬದಲಿ ಸ್ಥಾನದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಈ ಬಗ್ಗೆ ರಿಷಭ್‌ ಪಂತ್‌ ಅವರ ಬದಲಿ ಸ್ಥಾನದ ಪ್ರಸ್ತಾವನೆಯನ್ನು ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್ ಮುಂದೆ ಮಾಡಲಾಗಿತ್ತು. ಆದರೆ, ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌, ರಿಷಭ್‌ ಪಂತ್‌ ಅವರ ಗಾಯ ಹಾಸ್ಯಾಸ್ಪದ ಎಂದು ಗೇಲಿ ಮಾಡಿದ್ದರು.

IND vs ENG: ಶುಭಮನ್‌ ಗಿಲ್‌ ಇನ್ನೂ ಕಲಿಯಬೇಕೆಂದಿದ್ದ ಕಪಿಲ್‌ ದೇವ್‌ಗೆ ಯೋಗರಾಜ್‌ ಸಿಂಗ್‌ ತಿರುಗೇಟು!

ಐದನೇ ಟೆಸ್ಟ್‌ ಪಂದ್ಯದ ವೇಳೆ ಕ್ರಿಸ್‌ ವೋಕ್ಸ್‌ ಗಾಯಕ್ಕೆ ತುತ್ತಾದ ಬಳಿಕ ಆರ್‌ ಅಶ್ವಿನ್‌, ಬೆನ್‌ ಸ್ಟೋಕ್ಸ್‌ಗೆ ತಿರುಗೇಟು ನೀಡಿದ್ದರು. ಎದುರಾಳಿ ತಂಡದ ಆಟಗಾರರ ಬಗ್ಗೆ ಸ್ವಲ್ಪ ಸಹಾನುಭೂತಿ ತೋರಿಸಬೇಕು ಎಂದಿದ್ದಾರೆ.

ತಮ್ಮ ಆಶ್‌ ಕಿ ಬಾತ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಆರ್‌ ಅಶ್ವಿನ್‌, "ಈ ಸರಣಿಯಲ್ಲಿ ನಾನು ಇನ್ನೊಂದು ಅಪೂರ್ಣತೆಯ ಬಗ್ಗೆ ಮಾತನಾಡಲು ಬಯಸುತ್ತೇನೆ. 'ನಿಮ್ಮ ಕರ್ಮವು ನಿಮ್ಮ ಮೇಲೆ ತಕ್ಷಣವೇ ಪರಿಣಾಮ ಬೀರುತ್ತದೆ' ಎಂದು ಸಡಿಲವಾಗಿ ಅನುವಾದಿಸುವ ಒಂದು ತಮಿಳು ಗಾದೆ ಇದೆ. ನೀವು ಏನು ಬಿತ್ತುತ್ತೀರೋ ಅದನ್ನೇ ನೀವು ಕೊಯ್ಯುತ್ತೀರಿ. ನಾನು ಸ್ಟೋಕ್ಸ್ ಅವರ ಕ್ರಿಕೆಟ್ ಸಾಮರ್ಥ್ಯಗಳು ಮತ್ತು ಅವರ ಮನೋಭಾವದ ದೊಡ್ಡ ಅಭಿಮಾನಿ. ಆದರೆ ಅವರು ಯೋಚಿಸಬಹುದು ಮತ್ತು ನಂತರ ಉತ್ತರಿಸಬಹುದು. ನಾನು ಹೇಳುತ್ತಿರುವುದು ಇಷ್ಟೇ: ಇತರ ತಂಡದ ಬಗ್ಗೆ ಸ್ವಲ್ಪ ಸಹಾನುಭೂತಿ ತೋರಿಸಿ. 'ತಮಾಷೆ' ಮತ್ತು 'ಹಾಸ್ಯಾಸ್ಪದ' ಪದಗಳನ್ನು ಬಳಸುವುದು ಗೌರವಯುತವಲ್ಲ. ಮಾತನಾಡುವ ಮೊದಲು ಯೋಚಿಸಿ. ಕರ್ಮ ತಕ್ಷಣವೇ ಪರಿಣಾಮ ಬೀರುತ್ತದೆ," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

IND vs ENG: ʻಒಂದು ವೇಳೆ ಬೆನ್‌ ಸ್ಟೋಕ್ಸ್‌ ಆಡಿದ್ರೆ ಇಂಗ್ಲೆಂಡ್‌ ಗೆಲ್ಲುತ್ತಿತ್ತುʼ-ಮೈಕಲ್‌ ವಾನ್‌!

ಕ್ರಿಸ್‌ ವೋಕ್ಸ್‌ಗೆ ಅಶ್ವಿನ್‌ ಮೆಚ್ಚುಗೆ

ಗಾಯದ ಹೊರತಾಗಿಯೂ ಐದನೇ ದಿನ ಮೈದಾನಕ್ಕೆ ಇಳಿದ ಕ್ರಿಸ್‌ ವೋಕ್ಸ್‌ ಅವರನ್ನು ಇದೇ ವೇಳೆ ಆರ್‌ ಅಶ್ವಿನ್‌ ಗುಣಗಾನ ಮಾಡಿದ್ದಾರೆ. "ಒಂದು ಕೈಯನ್ನು ಭುಜಕ್ಕೆ ನೇತು ಹಾಕಿಕೊಂಡು ಕ್ರಿಸ್‌ ವೋಕ್ಸ್‌ ಮೈದಾನಕ್ಕೆ ಬಂದಿದ್ದರು. ತಮ್ಮ ತಂಡಕ್ಕೆ ತಮ್ಮ ಪ್ರಾಣವನ್ನೇ ನೀಡುವ ಮನಸ್ಥಿತಿಯನ್ನು ಕ್ರಿಸ್‌ ವೋಕ್ಸ್‌ ತೋರಿಸಿದ್ದರು. ಇವರು ಮತ್ತೊಂದು ತುದಿಯಲ್ಲಿದ್ದ ಗಸ್‌ ಅಟ್ಕಿನ್ಸನ್‌ಗೆ ಹೆಚ್ಚಿನ ಸ್ಟ್ರೈಕ್‌ ನೀಡಿದ್ದರು. ಕ್ರಿಸ್‌ ವೋಕ್ಸ್‌ಗೆ ಹ್ಯಾಟ್ಸ್‌ ಆಫ್‌ ಹೇಳಬೇಕು," ಎಂದು ಆರ್‌ ಅಶ್ವಿನ್‌ ಶ್ಲಾಘಿಸಿದ್ದಾರೆ.