IND vs ENG: ಟೀಕೆಗಳಿಗೆ ಗುರಿಯಾಗಿರುವ ಜಸ್‌ಪ್ರೀತ್ ಬುಮ್ರಾಗೆ ಸಚಿನ್ ತೆಂಡೂಲ್ಕರ್ ವಿಶೇಷ ಸಂದೇಶ!
ಜಸ್‌ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಭಾರತ ತಂಡ, ಇಂಗ್ಲೆಂಡ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದಿದ್ದು ಕೇವಲ ಕಾಕತಾಳೀಯ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬುಮ್ರಾ ಅವರನ್ನು ಅಸಾಧಾರಣ ಬೌಲರ್ ಎಂದು ಬಣ್ಣಿಸಿರುವ ಅವರು, ಅವರ ಬೌಲಿಂಗ್ ಮಟ್ಟ ನಂಬಲಾಗದು ಎಂದು ಹೇಳಿದ್ದಾರೆ.

ಜಸ್‌ಪ್ರೀತ್ ಬುಮ್ರಾಗೆ ಕ್ರಿಕೆಟ್ ದೇವರಿಂದ ಬೆಂಬಲ.

ನವದೆಹಲಿ: ಭಾರತ ಹಾಗೂ ಇಂಗ್ಲೆಂಡ್ ತಂಡಗಳ (IND vs ENG) ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿ 2-2 ಅಂತರದಲ್ಲಿ ಡ್ರಾನಲ್ಲಿ ಅಂತ್ಯವಾಗಿದೆ. ಈ ಸರಣಿಯಲ್ಲಿ ಭಾರತ ತಂಡ ಎರಡರಲ್ಲಿ ಗೆಲುವು ಪಡೆದಿದ್ದರೆ, ಇಂಗ್ಲೆಂಡ್ ತಂಡ ಅಷ್ಟೇ ಪಂದ್ಯಗಳಲ್ಲಿ ಗೆಲುವು ಪಡೆದಿದೆ. ಇನ್ನುಳಿದ ಒಂದು ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು. ಈ ಸರಣಿಯಲ್ಲಿ ಜಸ್‌ಪ್ರೀತ್ ಬುಮ್ರಾ (Jasprit Bumrah) ಆಡಿದ ಒಂದು ಪಂದ್ಯದಲ್ಲಿಯೂ ಭಾರತ ಗೆದ್ದಿಲ್ಲ. ಬುಮ್ರಾ ಆಡಿದ ಎರಡರಲ್ಲಿ ಸೋಲು ಅನುಭವಿಸಿದ್ದರೆ, ಇನ್ನೊಂದು ಡ್ರಾನಲ್ಲಿ ಅಂತ್ಯ ಕಂಡಿತ್ತು. ಈ ಹಿನ್ನೆಲೆಯಲ್ಲಿ ಜಸ್‌ಪ್ರೀತ್ ಬುಮ್ರಾ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದಾರೆ. ಇದರ ನಡುವೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar), ಹಿರಿಯ ವೇಗಿ ಜಸ್‌ಪ್ರೀತ್ ಬುಮ್ರಾಗೆ ಬೆಂಬಲ ಸೂಚಿಸಿದ್ದಾರೆ.
ಜಸ್‌ಪ್ರೀತ್ ಬುಮ್ರಾ ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಸಲುವಾಗಿ ಮೂರು ಪಂದ್ಯಗಳಲ್ಲಿ ಮಾತ್ರ ಆಡಿದ್ದರು ಹಾಗೂ 14 ವಿಕೆಟ್‌ಗಳನ್ನು ಕಬಳಿಸಿದ್ದರು. ರೆಡ್ಡಿಟ್ ಅಪ್‌ಲೋಡ್ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ಸಚಿನ್ ತೆಂಡೂಲ್ಕರ್, "ಜಸ್‌ಪ್ರೀತ್ ಬುಮ್ರಾ ಈ ಸರಣಿಯನ್ನು ನಿಜವಾಗಿಯೂ ಚೆನ್ನಾಗಿ ಪ್ರಾರಂಭಿಸಿದ್ದರು. ಮೊದಲನೇ ಟೆಸ್ಟ್‌ನಲ್ಲಿ (ಪ್ರಥಮ ಇನಿಂಗ್ಸ್) ಐದು ವಿಕೆಟ್‌ಗಳನ್ನು ಪಡೆದರು. ಅವರು ಎರಡನೇ ಟೆಸ್ಟ್ ಆಡಲಿಲ್ಲ ಆದರೆ ಮೂರನೇ ಮತ್ತು ನಾಲ್ಕನೇ ಟೆಸ್ಟ್‌ಗಳಲ್ಲಿ ಆಡಿದ್ದರು. ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಅವರು ಐದು ವಿಕೆಟ್ ಸಾಧನೆ ಮಾಡಿದ್ದರು. ಇವರು ಆಡಿದ ಮೂರು ಪಂದ್ಯಗಳಲ್ಲಿ ಎರಡು ಬಾರಿ 5 ವಿಕೆಟ್ ಸಾಧನೆಯನ್ನು ಮಾಡಿದ್ದಾರೆ. ಬುಮ್ರ ಆಡದ ಪಂದ್ಯಗಳಲ್ಲಿ ಭಾರತ ಗೆಲುವು ಪಡೆದಿದೆ ಎಂದು ಜನರು ಚರ್ಚೆಗಳನ್ನು ನಡೆಸುತ್ತಿದ್ದಾರೆಂದು ನನಗೆ ತಿಳಿದಿದೆ. ಇದರ ಬಗ್ಗೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಇದು ಕಾಕತಾಳೀಯ," ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶುಭಮನ್ ಗಿಲ್ ಔಟ್! IND vs ENG ಸಂಯೋಜನೆಯ ಪ್ಲೇಯಿಂಗ್ XI ಆರಿಸಿದ ಸ್ಟುವರ್ಟ್ ಬ್ರಾಡ್
"ಜಸ್‌ಪ್ರೀತ್ ಬುಮ್ರಾ ಅವರ ಬೌಲಿಂಗ್ ಅಸಾಧಾರಣವಾಗಿದೆ. ಅವರು ಇಲ್ಲಿಯವರೆಗೆಲ ಸಾಧಿಸಿರುವುದು ನಂಬಲಸಾಧ್ಯ. ಅವರು ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಮತ್ತು ನಾನು ಅವರನ್ನು ಇತರ ಯಾವುದೇ ಬೌಲರ್‌ಗಿಂತ ಉತ್ತಮವೆಂದು ಪರಿಗಣಿಸುತ್ತೇನೆ," ಎಂದು ಕ್ರಿಕೆಟ್ ದೇವರು ಗುಣಗಾನ ಮಾಡಿದ್ದಾರೆ.
ಬುಮ್ರಾ ಅನುಪಸ್ಥಿತಿಯಲ್ಲಿ ಮಿಂಚಿದ ಸಿರಾಜ್
ಜಸ್‌ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಸಿರಾಜ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ್ದಾರೆ ಹಾಗೂ ಐದೂ ಪಂದ್ಯಗಳಲ್ಲಿ ಆಡಿದ್ದಾರೆ. ಅದರಲ್ಲಿ ಅವರು 185.3 ಓವರ್‌ಗಳನ್ನು ಬೌಲ್ ಮಾಡಿ 23 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಂಕಿಅಂಶಗಳ ವಿಷಯದಲ್ಲಿ ಬುಮ್ರಾ, ಸಿರಾಜ್‌ಗಿಂತ ಬಹಳ ಮುಂದಿದ್ದಾರೆ. ಅವರು 48 ಟೆಸ್ಟ್ ಪಂದ್ಯಗಳಲ್ಲಿ 219 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಮತ್ತು ಸಿರಾಜ್ 41 ಪಂದ್ಯಗಳಲ್ಲಿ 123 ವಿಕೆಟ್‌ಗಳನ್ನು ಪಡೆದಿದ್ದಾರೆ.
IND vs ENG: ಶುಭಮನ್ ಗಿಲ್ ಇನ್ನೂ ಕಲಿಯಬೇಕೆಂದಿದ್ದ ಕಪಿಲ್ ದೇವ್‌ಗೆ ಯೋಗರಾಜ್ ಸಿಂಗ್ ತಿರುಗೇಟು!
ವಾಷಿಂಗ್ಟನ್ ಸುಂದರ್‌ಗೆ ಸಚಿನ್ ಮೆಚ್ಚುಗೆ
ಪಂದ್ಯದುದ್ದಕ್ಕೂ ತಂಡದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ಸಚಿನ್ ತೆಂಡೂಲ್ಕರ್ ಶ್ಲಾಘಿಸಿದ್ದಾರೆ. "ಅವರು ಆಡಿದಾಗಲೆಲ್ಲಾ ಅವರು ಕೊಡುಗೆ ನೀಡಿದ್ದಾರೆ. ನೀವು ಎರಡನೇ ಟೆಸ್ಟ್ ಪಂದ್ಯವನ್ನು ನೋಡಿದರೆ, ನಾಲ್ಕನೇ ಇನಿಂಗ್ಸ್‌ನಲ್ಲಿ ಐದನೇ ದಿನದ ಊಟದ ಮೊದಲು ಅವರು ಅದ್ಭುತ ಬೌಲಿಂಗ್‌ನೊಂದಿಗೆ ಬೆನ್ ಸ್ಟೋಕ್ಸ್ ಅವರನ್ನು ಔಟ್ ಮಾಡಿದರು. ಇದು 'ಟರ್ನಿಂಗ್ ಪಾಯಿಂಟ್' ಎಂದು ನಾನು ಭಾವಿಸುತ್ತೇನೆ," ಎಂದು ಅವರು ಹೇಳಿದ್ದಾರೆ.