35 ವರ್ಷಗಳ ಬಳಿಕ ಮ್ಯಾಂಚೆಸ್ಟರ್‌ನಲ್ಲಿ ಭಾರತ ಪರ ಟೆಸ್ಟ್ ಶತಕ
IND vs ENG 4th Test: ಒಟ್ಟಾರೆಯಾಗಿ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ 10 ಟೆಸ್ಟ್ ಪಂದ್ಯಗಳಲ್ಲಿ 11 ಭಾರತೀಯರು ಶತಕ ಸಿಡಿಸಿದ್ದಾರೆ. ಮುಷ್ತಾಕ್ ಅಲಿ ಅವರು ಈ ಮೈದಾನದಲ್ಲಿ ಮೊದಲ ಟೆಸ್ಟ್ ಶತಕ ಬಾರಿಸಿದ ಭಾರತೀಯ. 1936 ರಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ಅವರು ಈ ಸಾಧನೆಗೈದಿದ್ದರು.


ಮ್ಯಾಂಚೆಸ್ಟರ್: ಅತ್ಯಂತ ಕುತೂಹಲ ಕೆರಳಿಸಿದ್ದ ಇಂಗ್ಲೆಂಡ್(IND vs ENG 4th Test) ಎದುರಿನ ನಾಲ್ಕನೇ ಟೆಸ್ಟ್ ಪಂದ್ಯವನ್ನು ಭಾರತ ಡ್ರಾ(IND vs ENG 4th Test Match drawn) ಮಾಡಿಕೊಳ್ಳುವಲ್ಲಿ ಯಶಸ್ಸು ಸಾಧಿಸಿದೆ. ಈ ಪಂದ್ಯದಲ್ಲಿ ಮೂವರು ಭಾರತೀಯ ಬ್ಯಾಟರ್‌ಗಳು ಶತಕ ಬಾರಿಸಿದ್ದು ಪಂದ್ಯದ ಪ್ರಮುಖ ಹೈಲೆಟ್ಸ್ ಆಗಿತ್ತು. ಇದರೊಂದಿಗೆ 35 ವರ್ಷಗಳ ಶತಕದ ಬರ ಕೂಡ ನೀಗಿತು.
ಹೌದು, ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ದಿಗ್ಗಜ ಸಚಿನ್ ತೆಂಡೂಲ್ಕರ್ 1990 ರಲ್ಲಿ ಶತಕ ಬಾರಿಸಿದ್ದರು. ವಿಶೇಷ ಎಂದರೆ ಅದು ಸಚಿನ್ ಬಾರಿಸಿದ ಮೊದಲ ಅಂತಾರಾಷ್ಟ್ರೀಯ ಶತಕವಾಗಿತ್ತು. ಆಗಿನ್ನೂ ಅವರಿಗೆ 17 ವರ್ಷ. ನಾಲ್ಕನೇ ಇನ್ನಿಂಗ್ಸ್ ನಲ್ಲಿ ಸಚಿನ್ ಈ ಶತಕದ ಆಟವಾಡಿದ್ದರು. ಇದಾದ ಬಳಿಕ ಭಾರತ ಇಲ್ಲಿ ಹಲವು ಟೆಸ್ಟ್ ಪಂದ್ಯ ಆಡಿದ್ದರೂ ಯಾರಿಂದಲೂ ಶತಕ ಬಾರಿಸಲು ಸಾಧ್ಯವಾಗಿರಲಿಲ್ಲ. ಇದೀಗ ಬರೋಬ್ಬರಿ 35 ವರ್ಷಗಳ ಬಳಿಕ ಭಾರತ ಪರ ಮೂರು ಶತಕ ದಾಖಲಾಗಿದೆ. ಸಾರಸ್ಯವೆಂದರೆ ಸಚಿನ್ ಹೆಸರಿನ ಚೊಚ್ಚಲ ಸರಣಿಯಲ್ಲೇ ಈ ಶತಕ ಮೂಡಿಬಂದದ್ದು.
Special comeback 👏
— BCCI (@BCCI) July 27, 2025
Resolute batting performance ✨
An incredible effort from #TeamIndia batters in the 2nd innings in Manchester 🙌 #ENGvIND pic.twitter.com/OsEXhghmV6
ಒಟ್ಟಾರೆಯಾಗಿ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ 10 ಟೆಸ್ಟ್ ಪಂದ್ಯಗಳಲ್ಲಿ 11 ಭಾರತೀಯರು ಶತಕ ಸಿಡಿಸಿದ್ದಾರೆ. ಮುಷ್ತಾಕ್ ಅಲಿ ಅವರು ಈ ಮೈದಾನದಲ್ಲಿ ಮೊದಲ ಟೆಸ್ಟ್ ಶತಕ ಬಾರಿಸಿದ ಭಾರತೀಯ. 1936 ರಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ಅವರು ಈ ಸಾಧನೆಗೈದಿದ್ದರು.
ಮ್ಯಾಂಚೆಸ್ಟರ್‌ನಲ್ಲಿ ಶತಕ ಬಾರಿಸಿದ ಭಾರತೀಯರು(ಟೆಸ್ಟ್‌ನಲ್ಲಿ)
ಮುಷ್ತಾಕ್ ಅಲಿ-112 ರನ್ (1936)
ವಿಜಯ್ ಮರ್ಚಂಟ್-114 ರನ್ (1936)
ಪಾಲಿ ಉಮ್ರಿಗರ್-112 ರನ್ (1959)
ಅಬ್ಬಾಸ್ ಅಲಿ ಬೇಗ್- 118 ರನ್ (1959)
ಸುನಿಲ್ ಗವಾಸ್ಕರ್-101 ರನ್ (1974)
ಸಂದೀಪ್ ಪಾಟೀಲ್-129 ರನ್ (1982)
ಮೊಹಮ್ಮದ್ ಅಜರುದ್ದೀನ್-179 ರನ್ (1982)
ಸಚಿನ್ ತೆಂಡೂಲ್ಕರ್-119* ರನ್ (1990)
ಶುಭಮನ್ ಗಿಲ್-103 ರನ್ (2025)
ರವೀಂದ್ರ ಜಡೇಜಾ-107*ರನ್ (2025)
ವಾಷಿಂಗ್ಟನ್ ಸುಂದರ್-101*ರನ್ (2025)
ಇದನ್ನೂ ಓದಿ ಆಂಗ್ಲರ ಸೊಕ್ಕು ಮುರಿದ ಭಾರತ; ಡ್ರಾದಲ್ಲಿ ಅಂತ್ಯ ಕಂಡ 4ನೇ ಟೆಸ್ಟ್