ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಭಾಗ್ಯನಗರ ಪಟ್ಟಣದ ಕುಡಿಯುವ ನೀರು ಸರಬರಾಜು ಯೋಜನೆಗಳಿಗೆ ಅಮೃತ್ 2 ಯೋಜನೆ ಸಹಕಾರಿ : ಸಚಿವ ಬೈರತಿ ಸುರೇಶ್

ನಾನು ಮತ್ತು ಶಾಸಕ ಎಸ್.ಎನ್ ಸುಬ್ಬಾರೆಡ್ಡಿಯವರ ನಿರಂತರ ಪರಿಶ್ರಮದಿಂದ ಗಂಟಲಮಲ್ಲಮ್ಮ ಡ್ಯಾಂ ಗೆ 189 ಕೋಟಿ ಯೋಜನೆಗೆ ಅನುಮೋದನೆ ಸಿಕ್ಕಿದೆ. ಹಾಗೇಯೆ ಶಾಸಕರು, ಬಾಗೇಪಲ್ಲಿಗೆ ಭಾಗ್ಯ ನಗರವೆಂದು ಮರುನಾಮಕರಣ ಮಾಡಲು ಬಹಳಷ್ಟು ಶ್ರಮ ಪಟ್ಟಿದ್ದಾರೆ. ಇನ್ನು ಈ ಭಾಗಕ್ಕೆ ಕೈಗಾರಿಕೆ ಗಳು ಶೀಘ್ರದಲ್ಲಿ  ಬರಲಿದ್ದು ೬೦೦ ಎಕರೆ ಪ್ರದೇಶದಲ್ಲಿ ಆರಂಭಿಸಲು ಅಂತಿಮವಾಗಲಿದ್ದು, ಇನ್ನೂ 500 ಎಕರೆ ಭೂಮಿಗೆ ಪ್ರಾಥಮಿಕ ಅನುಮೋಧನೆಯೂ ಸಿಕ್ಕಿದೆ

ಕುಡಿಯುವ ನೀರು ಸರಬರಾಜು ಯೋಜನೆಗಳಿಗೆ ಅಮೃತ್ 2 ಯೋಜನೆ ಸಹಕಾರಿ

ಭಾಗ್ಯನಗರಕ್ಕೆ ಬೇಕಾದಂತಹ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಮುಂದಿನ ದಿನಗಳಲ್ಲಿ ನೀಡಲಾಗುತ್ತದೆ. ಅದರ ಭಾಗವಾಗಿ ಕುಡಿಯುವ ನೀರಿಗೆ ಹೆಚ್ಚಿನ ಹೊತ್ತು ನೀಡಿ ಅಮೃತ್-೨  ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿಳಿಸಿದರು.

Ashok Nayak Ashok Nayak Jul 28, 2025 12:54 AM

ಬಾಗೇಪಲ್ಲಿ: ಭಾಗ್ಯನಗರಕ್ಕೆ ಬೇಕಾದಂತಹ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಮುಂದಿನ ದಿನಗಳಲ್ಲಿ ನೀಡಲಾಗುತ್ತದೆ. ಅದರ ಭಾಗವಾಗಿ ಕುಡಿಯುವ ನೀರಿಗೆ ಹೆಚ್ಚಿನ ಹೊತ್ತು ನೀಡಿ ಅಮೃತ್-2 ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿಳಿಸಿದರು.

ಕೇಂದ್ರ ಪುರಸ್ಕೃತ ಅಮೃತ್ ೨.೦ ಯೋಜನೆಯಡಿ ಚಿತ್ರಾವತಿ ಜಲಾಶಯದಿಂದ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಗೆ ಶನಿವಾರ ಸಂಜೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.

ಭಾಗ್ಯಗಳ ಸರದಾರ ಸಿದ್ಧರಾಮಯ್ಯರವರ ನೇತೃತ್ವದಲ್ಲಿ ಈ ಭಾಗಕ್ಕೆ ಶಿಕ್ಷಣ, ವೈಧ್ಯಕೀಯ ಕ್ಷೇತ್ರ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಮುಂದಿನ ದಿನಗಳಲ್ಲಿ ಒದಗಿಸಿ ಭಾಗ್ಯನಗರ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡುತ್ತೇವೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್ ರವರು ಮಾತನಾಡಿ, ನಾನು ಮತ್ತು ಶಾಸಕ ಎಸ್.ಎನ್ ಸುಬ್ಬಾರೆಡ್ಡಿಯವರ ನಿರಂತರ ಪರಿಶ್ರಮದಿಂದ ಗಂಟಲಮಲ್ಲಮ್ಮ ಡ್ಯಾಂ ಗೆ 189 ಕೋಟಿ ಯೋಜನೆಗೆ ಅನುಮೋದನೆ ಸಿಕ್ಕಿದೆ. ಹಾಗೆಯೇ ಶಾಸಕರು, ಬಾಗೇಪಲ್ಲಿಗೆ ಭಾಗ್ಯನಗರವೆಂದು ಮರು ನಾಮಕರಣ ಮಾಡಲು ಬಹಳಷ್ಟು ಶ್ರಮ ಪಟ್ಟಿದ್ದಾರೆ. ಇನ್ನು ಈ ಭಾಗಕ್ಕೆ ಕೈಗಾರಿಕೆಗಳು ಶೀಘ್ರದಲ್ಲಿ ಬರಲಿದ್ದು 600 ಎಕರೆ ಪ್ರದೇಶದಲ್ಲಿ ಆರಂಭಿಸಲು ಅಂತಿಮವಾಗಲಿದ್ದು, ಇನ್ನೂ 500 ಎಕರೆ ಭೂಮಿಗೆ ಪ್ರಾಥಮಿಕ ಅನುಮೋದನೆಯೂ ಸಿಕ್ಕಿದೆ ಎಂದು ತಿಳಿಸಿದರು.

ಇದನ್ನೂ ಓದಿ: Chikkaballapur News: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಕಾನೂನಿನ ಅರಿವು ಅಗತ್ಯ

ಚಿತ್ರಾವತಿ ಡ್ಯಾಂ ಗೆ ಎಸ್.ಎಂ ಕೃಷ್ಣ ಹೆಸರು

ಇದೇ ವೇಳೆ ಸಚಿವ ಡಾ.ಎಂ.ಸಿ.ಸುಧಾಕರ್ ರವರು ಚಿತ್ರಾವತಿ ಡ್ಯಾಂ ನ್ನು ನೆರೆಯ ಅಖಂಡ ಆಂಧ್ರಪ್ರದೇಶದ ವಿರೋಧದ ನಡುವೆಯೂ ಆಗಿನ ಮುಖ್ಯಮಂತ್ರಿ ಎಸ್.ಎಂ ಕೃಷ್ಣರವರ ನೇತೃತ್ವ ಸಲ್ಲಿ ನಿರ್ಮಿಸಲಾಗಿದೆ.ಹಾಗಾಗಿ ಅವರ ಹೆಸರನ್ನು ಈ ಡ್ಯಾಂಗೆ ಇಡಲು ತಾರ್ಕಿಕವಾಗಿ ಚರ್ಚಿಸ ಲಾಗಿದೆ. ಅದೂ ಕೂಡ ಅಂತಿಮವಾಗಲಿದೆ ಎಂದು ತಿಳಿಸಿದರು.

ಇದೇ ವೇಳೆ ಸಂಸದ ಡಾ.ಕೆ ಸುಧಾಕರ್ ರವರು ಮಾತನಾಡಿ, ದೇಶದ ಪ್ರತಿಯೊಂದು ಮನೆಗೂ ನಲ್ಲಿ ಮೂಲಕ ನೀರು ಕೊಡುವಂತಹ ಮಹದಾಸೆಯನ್ನು ಹೊಂದಿರುವಂತಹ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡುತ್ತಿದ್ದು, ಅದರ ಭಾಗವಾಗಿಯೇ ಜಲಜೀವನ್ ಮಿಷನ್ ಯೋಜನೆ ಹಾಗೂ ಅಮೃತ್ 2.0 ಯೋಜನೆಯನ್ನು ಅನುಷ್ಟಾನಗೊಳಿಸಲಾಗಿದೆ ಎಂದು ತಿಳಿಸಿದರು.

ಕೇಂದ್ರ,ರಾಜ್ಯ ಹಾಗೂ ಸ್ಥಳೀಯ ಸರಕಾರಗಳ ಸಹಭಾಗಿತ್ವ

ಈ ಯೋಜನೆಗೆ ಕೇಂದ್ರ ಸರಕಾರದಿಂದ ಶೇ.50ರಷ್ಟು, ರಾಜ್ಯ ಸರಕಾರದಿಂದ ಶೇ.40 ಹಾಗೂ ಸ್ಥಳೀಯ ಸಂಸ್ಥೆಗಳಿಂದ ಶೇ.10ರಷ್ಟು ಅನುದಾನ ಒದಗಿಸಲಾಗುತ್ತಿದೆ. ನಗರ ಭಾಗಗಳಲ್ಲಿ ಮೂಲ ಭೂತ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಲೋಕಸಭಾ ಚುನಾವಣೆ ಸಮಯದಲ್ಲಿ ನಾನೂ ಸಹ ನೀರು ಒದಗಿಸುವ ಯೋಜನೆಯನ್ನು ತರುತ್ತೇನೆ ಎಂದು ಭರವಸೆ ನೀಡಿದ್ದೆ,ಅದರಂತೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಸುಮಾರು 300 ಕೋಟಿಯಷ್ಟು ಅನುದಾನವನ್ನು ಕೇಂದ್ರ ಸರಕಾರದಿಂದ ಕುಡಿಯುವ ನೀರಿನ ಯೋಜನೆಗೆ ನೀಡಿದೆ. ಈ ಯೋಜನೆಯನ್ನು ಒಂದೂ ವರೆ ವರ್ಷದೊಳಗೆ ಮುಗಿಸುತ್ತೇವೆ. ಜನರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇನ್ನೂ ಈ ಯೋಜನೆಗೆ ಸ್ಥಳೀಯ ಸಚಿವರು, ಶಾಸಕರು ಬೆಂಬಲ ಹಾಗೂ ಸಹಕಾರ ನೀಡಿದ್ದಾರೆ ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದರು.