ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಏಷ್ಯಾ ಕಪ್ ಸೋಲು; ಆಟಗಾರರ ಎನ್‌ಒಸಿ ಅಮಾನತುಗೊಳಿಸಿದ ಪಾಕ್‌ ಕ್ರಿಕೆಟ್‌ ಮಂಡಳಿ

Pakistan Cricket Board: ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ತಂಡ ಭಾರತ ಮಾತ್ರವಲ್ಲದೆ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಕ್ರಿಕೆಟ್ ಮಾನದಂಡಗಳಲ್ಲಿನ ವ್ಯತ್ಯಾಸಗಳು ಕಂಡುಬರುತ್ತಿದ್ದವು. ಆಟದ ಎಲ್ಲಾ ವಿಭಾಗಗಳಲ್ಲಿ, ವಿಶೇಷವಾಗಿ ಬ್ಯಾಟಿಂಗ್‌ನಲ್ಲಿ ಕಳಪೆಯಾಗಿ ಕಂಡುಬಂದಿತು ಎಂದು ಅಹ್ಮದ್ ಸೈಯದ್ ಹೇಳಿದ್ದಾರೆ.

ಆಟಗಾರರ ಎನ್‌ಒಸಿ ಅಮಾನತುಗೊಳಿಸಿದ ಪಾಕ್‌ ಕ್ರಿಕೆಟ್‌ ಮಂಡಳಿ

-

Abhilash BC Abhilash BC Oct 1, 2025 9:10 AM

ಕರಾಚಿ: ಏಷ್ಯಾಕಪ್‌ ಫೈನಲ್‌ ಪಂದ್ಯದಲ್ಲಿ ಭಾರತ ವಿರುದ್ಧ ಸೋಲು(Asia Cup debacle) ಕಂಡ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು(Pakistan Cricket Board) ತನ್ನ ಕ್ರಿಕೆಟಿಗರು ವಿದೇಶಿ ಟಿ20 ಲೀಗ್‌ಗಳಲ್ಲಿ ಆಡುವುದನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಪಾಕಿಸ್ತಾನದ ಹೊರಗಿನ ಫ್ರಾಂಚೈಸಿ ಲೀಗ್‌ಗಳಲ್ಲಿ ಸ್ಪರ್ಧಿಸಲು ಬಯಸುವ ಆಟಗಾರರಿಗೆ ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು (ಎನ್‌ಒಸಿ) ನೀಡಲು ಮಂಡಳಿ ನಿರಾಕರಿಸಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಆಟಗಾರರಿಗೆ ಈ ಹಿಂದೆ ನೀಡಲಾಗಿದ್ದ ಎಲ್ಲಾ ಎನ್‌ಒಸಿಗಳನ್ನು ರದ್ದುಗೊಳಿಸಿದೆ. ಮೂಲಗಳ ಪ್ರಕಾರ, ಪಿಸಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಮೈರ್ ಅಹ್ಮದ್ ಸೈಯದ್ ಹೊರಡಿಸಿದ ಅಧಿಸೂಚನೆಯಲ್ಲಿ, ವಿದೇಶಿ ಲೀಗ್‌ಗಳು ಮತ್ತು ಪಂದ್ಯಾವಳಿಗಳಲ್ಲಿ ಭಾಗವಹಿಸಲು ಎಲ್ಲಾ ಎನ್‌ಒಸಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ತಡೆಹಿಡಿಯಲಾಗಿದೆ ಎಂದು ಹೇಳಲಾಗಿದೆ.

ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ತಂಡ ಭಾರತ ಮಾತ್ರವಲ್ಲದೆ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಕ್ರಿಕೆಟ್ ಮಾನದಂಡಗಳಲ್ಲಿನ ವ್ಯತ್ಯಾಸಗಳು ಕಂಡುಬರುತ್ತಿದ್ದವು. ಆಟದ ಎಲ್ಲಾ ವಿಭಾಗಗಳಲ್ಲಿ, ವಿಶೇಷವಾಗಿ ಬ್ಯಾಟಿಂಗ್‌ನಲ್ಲಿ ಕಳಪೆಯಾಗಿ ಕಂಡುಬಂದಿತು ಎಂದು ಅಹ್ಮದ್ ಸೈಯದ್ ಹೇಳಿದ್ದಾರೆ.