Mohsin Naqvi: ಏಷ್ಯಾ ಕಪ್ ಟ್ರೋಫಿಯನ್ನು ಭಾರತಕ್ಕೆ ಹಸ್ತಾಂತರಿಸಲು ಮೊಹ್ಸಿನ್ ನಖ್ವಿ ನಿರಾಕರಣೆ
ಟ್ರೋಫಿ ಹಸ್ತಾಂತರದ ಬಿಕ್ಕಟ್ಟು ವಿಚಾರವಾಗಿ ಮಾತನಾಡಿರುವ ನಾಯಕ ಸೂರ್ಯಕುಮಾರ್, "14 ಆಟಗಾರರು ಮತ್ತು 10-12 ಸಹಾಯಕ ಸಿಬ್ಬಂದಿ. ಅದು ನಿಜವಾದ ಟ್ರೋಫಿ. ತಂಡದ ಆದ್ಯತೆ ಕ್ರಿಕೆಟ್ ಆಡುವುದಾಗಿತ್ತು ಮತ್ತು ಎಲ್ಲರು ಆಟದ ಮೇಲೆ ಕೇಂದ್ರೀಕರಿಸಿ ಪಂದ್ಯಾವಳಿಯನ್ನು ಗೆದ್ದೆವು" ಎಂದು ಹೇಳಿದರು.

-

ಲಾಹೋರ್: 2025ರ ಏಷ್ಯಾ ಕಪ್(2025 Asia Cup) ಪಂದ್ಯಾವಳಿಯ ನಂತರ ವಿವಾದವೊಂದು ಭುಗಿಲೆದ್ದಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಮೊಹ್ಸಿನ್ ನಖ್ವಿ(Mohsin Naqvi) ಬಿಸಿಸಿಐ ಉಪಾಧ್ಯಕ್ಷರಿಗೆ ಟ್ರೋಫಿಯನ್ನು ಹಸ್ತಾಂತರಿಸಲು ನಿರಾಕರಿಸಿದ್ದಾರೆ. ಪಾಕಿಸ್ತಾನದ ಸಚಿವರೂ ಆಗಿರುವ ನಖ್ವಿ, ಭಾರತದ ನಾಯಕ ಸೂರ್ಯ ಕುಮಾರ್ ಯಾದವ್ ಟ್ರೋಫಿಯನ್ನು ಪಡೆಯಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ಗೆ ಭೇಟಿ ನೀಡಬೇಕು ಎಂದು ಹೇಳಿದ್ದಾರೆ.
ಭಾನುವಾರ ನಡೆದ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಮೊಹ್ಸಿನ್ ನಖ್ವಿ ಏಷ್ಯಾ ಕಪ್ ಟ್ರೋಫಿ ಮತ್ತು ಪದಕಗಳೊಂದಿಗೆ ಓಡಿಹೋದ ನಂತರ ಗೊಂದಲ ಉಂಟಾಯಿತು. ಪಾಕಿಸ್ತಾನದೊಂದಿಗಿನ ಭಾರತದ ಭೌಗೋಳಿಕ ಮತ್ತು ರಾಜಕೀಯ ಸಂಬಂಧವು ಹದಗೆಟ್ಟಿರುವುದರಿಂದ, ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿಯನ್ನು ತೆಗೆದುಕೊಳ್ಳುವುದಿಲ್ಲ ಎಂದು ಭಾರತೀಯ ತಂಡ ಹೇಳಿತ್ತು. ಮತ್ತು ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಉಪಾಧ್ಯಕ್ಷರು ಟ್ರೋಫಿಯನ್ನು ಹಸ್ತಾಂತರಿಸುವಂತೆ ವಿನಂತಿಸಿತ್ತು.
ಆದಾಗ್ಯೂ, ನಖ್ವಿ ಈ ವಿನಂತಿಯನ್ನು ನಿರಾಕರಿಸಿದರು ಮತ್ತು ಭಾರತವು ತನ್ನಿಂದ ಟ್ರೋಫಿಯನ್ನು ಪಡೆಯಲೇಬೇಕು ಎಂಬ ದೃಢವಾಗಿ ನಿಂತರು. ಕೊನೆಗೆ ಭಾರತೀಯ ಆಟಗಾರರು ಕಾಲ್ಪನಿಕ ಟ್ರೋಫಿ ಎತ್ತಿ ಹಿಡಿದಂತೆ ಸಂಭ್ರಮಿಸಿ ಫೋಟೊ ಶೂಟ್ ಮಾಡಿಸಿದರು. ಈ ವೇಳೆ ಎಸಿಸಿ ಅಧಿಕಾರಿಗಳಲ್ಲಿ ಒಬ್ಬರು ಟ್ರೋಫಿಯನ್ನು ಮೈದಾನದಿಂದ ತೆಗೆದುಕೊಂಡು ಹೋಗು ನಖ್ವಿ ಅವರ ಹೊಟೇಲ್ ರೂಮ್‌ನಲ್ಲಿ ಇರಿಸಿದರು.
ಟ್ರೋಫಿ ಹಸ್ತಾಂತರದ ಬಿಕ್ಕಟ್ಟು ವಿಚಾರವಾಗಿ ಮಾತನಾಡಿರುವ ನಾಯಕ ಸೂರ್ಯಕುಮಾರ್, "14 ಆಟಗಾರರು ಮತ್ತು 10-12 ಸಹಾಯಕ ಸಿಬ್ಬಂದಿ. ಅದು ನಿಜವಾದ ಟ್ರೋಫಿ. ತಂಡದ ಆದ್ಯತೆ ಕ್ರಿಕೆಟ್ ಆಡುವುದಾಗಿತ್ತು ಮತ್ತು ಎಲ್ಲರು ಆಟದ ಮೇಲೆ ಕೇಂದ್ರೀಕರಿಸಿ ಪಂದ್ಯಾವಳಿಯನ್ನು ಗೆದ್ದೆವು" ಎಂದು ಹೇಳಿದರು.