Indian cricket team: ಹಲವು ಗಂಟೆಗಳ ವಿಮಾನ ವಿಳಂಬ; ತಡರಾತ್ರಿ ಪರ್ತ್ ತಲುಪಿದ ಭಾರತೀಯ ತಂಡ
ದೆಹಲಿಯಲ್ಲಿ ವಿಮಾನ ವಿಳಂಬವಾದ ಕಾರಣ ಸಿಂಗಾಪುರದಲ್ಲಿಯೂ ವೇಳಾಪಟ್ಟಿ ಬದಲಾವಣೆ ಮಾಡಲಾಯಿತು. ಇದರ ಪರಿಣಾಮವಾಗಿ ಭಾರತೀಯ ತಂಡವು ಅಕ್ಟೋಬರ್ 16 ರ ಬೆಳಗಿನ ಜಾವ ಪರ್ತ್ ತಲುಪಿತು. ಭಾರತೀಯ ಆಟಗಾರರ ಮೊದಲ ಬ್ಯಾಚ್ ಪರ್ತ್‌ಗೆ ಆಗಮಿಸಿದಾಗ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಭ್‌ಮನ್ ಗಿಲ್ ಮತ್ತು ಕೆಎಲ್ ರಾಹುಲ್ ಹಾಜರಿದ್ದರು.

-

ಪರ್ತ್: ಹಲವಾರು ಗಂಟೆಗಳ ವಿಮಾನ ವಿಳಂಬದ ನಂತರ ಭಾರತೀಯ ಕ್ರಿಕೆಟ್ ತಂಡ(Indian cricket team) ಪರ್ತ್‌ಗೆ(Perth) ಆಗಮಿಸಿತು. ಅಕ್ಟೋಬರ್ 15 ರಂದು ಮುಂಜಾನೆ ದೆಹಲಿ ವಿಮಾನ ನಿಲ್ದಾಣಕ್ಕೆ ಪ್ರವೇಶಿಸಿದ ಶುಭಮನ್ ಗಿಲ್ ನೇತೃತ್ವದ ಭಾರತ ತಂಡವು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಪರ್ತ್ ತಲುಪಿತು ಎಂದು ವರದಿಯಾಗಿದೆ. ಆಸೀಸ್ ಮಾಧ್ಯಮಗಳ ವರದಿಗಳ ಪ್ರಕಾರ ದೆಹಲಿಯಲ್ಲಿ ವಿಮಾನವು ನಿಗದಿತ ನಿರ್ಗಮನದ ಸಮಯಕ್ಕೆ ಸುಮಾರು ನಾಲ್ಕು ಗಂಟೆಗಳ ನಂತರ ಹೊರಟಿದ್ದರಿಂದ ಆಗಮನ ವಿಳಂಬವಾಗಿದೆ ಎಂದು ಹೇಳಿದೆ.
ದೆಹಲಿಯಲ್ಲಿ ವಿಮಾನ ವಿಳಂಬವಾದ ಕಾರಣ ಸಿಂಗಾಪುರದಲ್ಲಿಯೂ ವೇಳಾಪಟ್ಟಿ ಬದಲಾವಣೆ ಮಾಡಲಾಯಿತು. ಇದರ ಪರಿಣಾಮವಾಗಿ ಭಾರತೀಯ ತಂಡವು ಅಕ್ಟೋಬರ್ 16 ರ ಬೆಳಗಿನ ಜಾವ ಪರ್ತ್ ತಲುಪಿತು. ಭಾರತೀಯ ಆಟಗಾರರ ಮೊದಲ ಬ್ಯಾಚ್ ಪರ್ತ್‌ಗೆ ಆಗಮಿಸಿದಾಗ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಭ್‌ಮನ್ ಗಿಲ್ ಮತ್ತು ಕೆಎಲ್ ರಾಹುಲ್ ಹಾಜರಿದ್ದರು. ಅಕ್ಟೋಬರ್ 19 ರಂದು ಸರಣಿ ಪ್ರಾರಂಭವಾಗಲಿದ್ದು, ಭಾರತವು ಮಿಚೆಲ್ ಮಾರ್ಷ್ ನೇತೃತ್ವದ ತಂಡವನ್ನು 3 ಏಕದಿನ ಮತ್ತು 5 ಟಿ20 ಪಂದ್ಯಗಳಲ್ಲಿ ಎದುರಿಸಲಿದೆ.
ಪರ್ತ್ ತಲುಪಿದ ಟೀಮ್ ಇಂಡಿಯಾ ಅಟಗಾರರು
Finally, they saw, they came and they slept. What a journey from Delhi to Perth pic.twitter.com/GnCZNaaq1r
— Vimal कुमार (@Vimalwa) October 15, 2025
ರಾತ್ರಿ ಸಾಕಷ್ಟು ತಡವಾಗಿದ್ದರಿಂದ, ದಣಿದ ಭಾರತೀಯ ಆಟಗಾರರು ಹೋಟೆಲ್ ಹೊರಗೆ ಕಾಯುತ್ತಿದ್ದ ಅಭಿಮಾನಿಗಳಿಗೆ ಹೆಚ್ಚಿನ ಫೋಟೋ-ಆಪ್ ನೀಡದೆ ನೇರವಾಗಿ ತಮ್ಮ ಹೋಟೆಲ್ ಕೋಣೆಗಳಿಗೆ ಭೇಟಿ ನೀಡಿದರು. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡವು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಪ್ರಮುಖ ಆಕರ್ಷಣೆಗಳಾಗಲಿದ್ದಾರೆ.
ಇದನ್ನೂ ಓದಿ ಐಪಿಎಲ್ ತಂಡದ ಕೋಟಿ-ಕೋಟಿ ಮೊತ್ತದ ದೊಡ್ಡ ಡೀಲ್ ನಿರಾಕರಿಸಿದ ಪ್ಯಾಟ್ ಕಮಿನ್ಸ್, ಟ್ರಾವಿಸ್ ಹೆಡ್!
ಭಾರತ ಏಕದಿನ ತಂಡ
ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಅಕ್ಸರ್ ಪಟೇಲ್, ಕೆಎಲ್ ರಾಹುಲ್ (ವಿ.ಕೀ.), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್. ಸಿರಾಜ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಧ್ರುವ್ ಜುರೆಲ್ (ವಿ.ಕೀ.), ಯಶಸ್ವಿ ಜೈಸ್ವಾಲ್.