BBK 12: ಫಿನಾಲೆ ಲಿಸ್ಟ್ನಿಂದ ಸ್ಪಂದನಾ ಔಟ್: ರಾಶಿಕಾಗೆ ಬಂಪರ್ ಚಾನ್ಸ್
ಈ ಮೊದಲು ಫಿನಾಲೆಯಲ್ಲಿ ಸ್ಪಂದನಾ ಸೋಮಣ್ಣ ಸ್ಥಾನ ಗಿಟ್ಟಿಸಿಕೊಂಡಿದ್ದರು. ಕಳೆದ ವಾರ ಪ್ರೇಕ್ಷಕರ ವೋಟಿಂಗ್ ಪ್ರಕಾರ, ಮಾಳು ನಿಪನಾಳ ಹಾಗೂ ಸ್ಪಂದನಾ ಸೋಮಣ್ಣ ಜಂಟಿ ಫೈನಲಿಸ್ಟ್‌ಗಳಾಗಿ ಆಯ್ಕೆಯಾಗಿದ್ದರು. ಆದರೀಗ ಸ್ಪಂದನಾ ಸೋಮಣ್ಣ ಮೂರನೇ ವಾರದ ಫಿನಾಲೆಯಲ್ಲಿ ಎಲಿಮಿನೇಶನ್‌ಗೆ ನಾಮಿನೇಟ್ ಆಗಿದ್ದಾರೆ

Rashika and Spandana -

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಮೊದಲ ಫಿನಾಲೆ ಇದೇ ಅಕ್ಟೋಬರ್ 18 ಹಾಗೂ 19 ರಂದು ನಡೆಯಲಿದೆ. ಸದ್ಯ ದೊಡ್ಮನೆಯಲ್ಲಿ 17 ಮಂದಿ ಇದ್ದು, ಇವರಲ್ಲಿ ಇಬ್ಬರು ಇಂದು ವಾರದ ಮಧ್ಯವೇ ಮನೆಯಿಂದ ಹೊರ ಹೋಗಲಿದ್ದಾರೆ. ಆ ಬಳಿಕ ವಾರಾಂತ್ಯದಲ್ಲಿ ನಾಲ್ಕರಿಂದ ಐದು ಜನ ಔಟ್ ಆಗಬಹುದು ಎಂದು ಹೇಳಲಾಗುತ್ತಿದೆ. ಈಗಾಗಲೇ ಫಿನಾಲೆಗೆ ಸ್ಪರ್ಧಿಗಳು ಯಾರು ಎಂಬುದು ಫೈನಲ್ ಆಗಿದೆ. ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ಮಾಳು ಹಾಗೂ ರಾಶಿಕಾ ಫಿನಾಲೆಯಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನೂ ಕೆಲವರು ಫಿನಾಲೆಯಲ್ಲಿ ಸ್ಥಾನ ಪಡೆಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಈ ಮೊದಲು ಫಿನಾಲೆಯಲ್ಲಿ ಸ್ಪಂದನಾ ಸೋಮಣ್ಣ ಸ್ಥಾನ ಗಿಟ್ಟಿಸಿಕೊಂಡಿದ್ದರು. ಕಳೆದ ವಾರ ಪ್ರೇಕ್ಷಕರ ವೋಟಿಂಗ್ ಪ್ರಕಾರ, ಮಾಳು ನಿಪನಾಳ ಹಾಗೂ ಸ್ಪಂದನಾ ಸೋಮಣ್ಣ ಜಂಟಿ ಫೈನಲಿಸ್ಟ್‌ಗಳಾಗಿ ಆಯ್ಕೆಯಾಗಿದ್ದರು. ಅದರೊಂದಿಗೆ ಮಾಳು ನಿಪನಾಳ ಹಾಗೂ ಸ್ಪಂದನಾಗೆ ಈ ವಾರಕ್ಕೆ ಇಮ್ಯೂನಿಟಿ ಕೂಡ ಸಿಕ್ಕಿತ್ತು. ಆದರೆ, ನಿನ್ನೆ ಬಿಗ್ ಬಾಸ್ ಇದರಲ್ಲೊಂದು ಟ್ವಿಸ್ಟ್ ಕೊಟ್ಟಿದ್ದರು.
ನಿನ್ನೆ ಬಿಗ್ ಬಾಸ್ ನಿಲುವು- ಗೆಲುವು ಎಂಬ ಒಂದು ಟಾಸ್ಕ್ ನೀಡಿದ್ದರು. ಈ ಟಾಸ್ಕ್‌ನಲ್ಲಿ ರಾಶಿಕಾ ಶೆಟ್ಟಿ ಗೆದ್ದಿದ್ದರು. ಮಾಸ್ ಎವಿಕ್ಷನ್‌ನಿಂದ ತಪ್ಪಿಸಿಕೊಳ್ಳಲು ರಾಶಿಕಾ ಶೆಟ್ಟಿ ಅವರು ಮುಂದಿನ ಟಾಸ್ಕ್ ಗೆದ್ದರೆ, ಇಮ್ಯುನಿಟಿ ಸಿಗುತ್ತಿತ್ತು. ಮುಂದಿನ ಚಾಲೆಂಜರ್ ಟಾಸ್ಕ್‌ನಲ್ಲಿ ಯಾವ ಫೈನಲಿಸ್ಟ್‌ಗೆ ಫೈನಲಿಸ್ಟ್ ಆಗಲು ಯೋಗ್ಯತೆ ಇಲ್ಲ ಎಂದು ಹೇಳಬೇಕಿತ್ತು, ಹಾಗೂ ಅವರ ಜೊತೆ ಆಟ ಆಡಬೇಕಿತ್ತು. ಆಗ ರಾಶಿಕಾ, ಸ್ಪಂದನಾ ಅವರನ್ನು ಆಯ್ಕೆ ಮಾಡಿದ್ದರು.
BBK 12: ಇಂದು ಮಿಡ್ ವೀಕ್ ಎಲಿಮಿನೇಷನ್: ಮಧ್ಯರಾತ್ರಿ ಆಯ್ತು ಸೈರನ್
ಮಂಜು ಭಾಷಿಣಿ, ಅಶ್ವಿನಿ ಎಸ್ ಎಸ್, ಅಭಿಷೇಕ್ ಶ್ರೀಕಾಂತ್ ಅವರು ಕೂಡ ಸ್ಪಂದನಾರನ್ನು ಆಯ್ಕೆ ಮಾಡಿ ಎಂದು ರಾಶಿಕಾಗೆ ಹೇಳಿದ್ದರು. ಅವರ ಮಾತು ಕೇಳಿ ರಾಶಿಕಾ, ಚಾಲೆಂಜರ್ ಟಾಸ್ಕ್‌ನಲ್ಲಿ ಸ್ಪಂದನಾ ಅವರನ್ನು ಆಯ್ಕೆ ಮಾಡಿ ಟಾಸ್ಕ್ ಆಡಿ ಗೆದ್ದಿದ್ದಾರೆ. ಹೀಗಾಗಿ ರಾಶಿಕಾ ಶೆಟ್ಟಿ ಈಗ ಫೈನಲಿಸ್ಟ್ ಆಗಿದ್ದಾರೆ. ಸೋತ ಸ್ಪಂದನಾ ಸೋಮಣ್ಣ ಮೂರನೇ ವಾರದ ಫಿನಾಲೆಯಲ್ಲಿ ಎಲಿಮಿನೇಶನ್‌ಗೆ ನಾಮಿನೇಟ್ ಆಗಿದ್ದಾರೆ.
ರಾಶಿಕಾಗೆ ಸಿಕ್ಕಿತು ಭರ್ಜರಿ ಸಪೋರ್ಟ್:
ಮmೊದಲು ನಡೆದ ಕಾವ್ಯಾ ವಿರುದ್ಧದ ಟಾಸ್ಕ್‌ನಲ್ಲಿ ಕೂಡ ರಾಶಿಕಾಗೆ ಭರ್ಜರಿ ಸಪೋರ್ಟ್ ಸಿಕ್ಕಿತು. ಅತ್ತ ಕಾವ್ಯಾಗೆ ಗಿಲ್ಲಿ ನಟ ಬಿಟ್ಟು ಮತ್ಯಾರ ಕಡೆಯಿಂದಲೂ ಹೇಳಿಕೊಳ್ಳುವಂತಹ ಸಪೋರ್ಟ್ ಬರಲಿಲ್ಲ. ಆದರೆ, ರಾಶಿಕಾಗೆ ಬಹುತೇಕರು ಪ್ರೋತ್ಸಾಹ ನೀಡುತ್ತಿದ್ದರು. ಗೆದ್ದ ನಂತರ ಕೂಡ ಕೆಲ ಸ್ಪರ್ಧಿಗಳು, ನೀನು ಚೆನ್ನಾಗಿ ಆಡಿದ್ದಿ- ವೋಟ್ನಿಂದ ನೀನು ಫಿನಾಲೆಗೆ ತಲುಪಿದ್ದಲ್ಲ ಬದಲಾಗಿ ಟಾಸ್ಕ್‌ನಲ್ಲಿ ಚೆನ್ನಾಗಿ ಆಡಿ ಈ ಸ್ಥಾನ ಪಡೆದುಕೊಂಡಿದ್ದು, ಖುಷಿ ಆಗಿದೆ ಎಂಬರ್ಥದಲ್ಲಿ ಮಾತನಾಡಿದ್ದಾರೆ.