2026ರ ಏಷ್ಯನ್ ಗೇಮ್ಸ್ ಕಬಡ್ಡಿ; ಆತಿಥೇಯ ಜಪಾನ್ ವಿರುದ್ಧ ಭಾರತಕ್ಕೆ 49-24 ಅಂತರದ ಜಯ
Asian Games 2026 kabaddi: ಎಂಟು ಬಾರಿ ಚಾಂಪಿಯನ್ ಆಗಿರುವ ತಂಡವು ಆಟ ಪುನರಾರಂಭಗೊಂಡ ಕೆಲವೇ ಹೊತ್ತಿನಲ್ಲಿ ತಮ್ಮ ಮುನ್ನಡೆಯನ್ನು 40-12ಕ್ಕೆ ವಿಸ್ತರಿಸಿತು. ನಂತರ, ಅಂತಿಮ ಹಂತದಲ್ಲಿ ಜಪಾನ್ ತಂಡವು ಪ್ರಬಲ ಪೈಪೋಟಿ ನೀಡಿತು. ಅಂತಿಮವಾಗಿ ಭಾರತವು 25 ಅಂಕಗಳ ಅಂತರದಿಂದ ಜಯಗಳಿಸಿತಾದರೂ, ದ್ವಿತೀಯಾರ್ಧದಲ್ಲಿ 18-15ರ ಅಂತರದ ಪೈಪೋಟಿ ಕಂಡುಬಂದಿತು.
Indian men’s kabaddi team -
ನಗೋಯಾ, ಸೆ.21: ಭಾರತೀಯ ಪುರುಷರ ಕಬಡ್ಡಿ ತಂಡವು ಸೋಮವಾರ ಆತಿಥೇಯ ಜಪಾನ್ ವಿರುದ್ಧ 49-24 ಅಂತರದ ಗೆಲುವಿನೊಂದಿಗೆ ಏಷ್ಯನ್ ಗೇಮ್ಸ್ 2026ರಲ್ಲಿ ತನ್ನ ಪ್ರಶಸ್ತಿ ಉಳಿಸಿಕೊಳ್ಳುವ ಅಭಿಯಾನವನ್ನು ಆರಂಭಿಸಿತು.
ಐಚಿಯ ಟೊಕೈ ಸಿಟಿಜನ್ ಜಿಮ್ನಾಷಿಯಂನಲ್ಲಿ ನಡೆದ 'ಎ' ವಿಭಾಗದ ಪಂದ್ಯದಲ್ಲಿ ಆರಂಭಿಕ ಸುತ್ತಿನ ವಿರಾಮದ ವೇಳೆಗೆ ಭಾರತವು 31-9 ಅಂಕಗಳ ಮುನ್ನಡೆ ಸಾಧಿಸಿತ್ತು. ಆದರೆ ದ್ವಿತಿಯಾರ್ಧದಲ್ಲಿ ಭಾರತ ಉದ್ದೇಶಪೂರ್ವಕವಾಗಿಯೇ ಆಟದ ವೇಗವನ್ನು ತಗ್ಗಿಸಿದರು ಎಂದು ನಾಯಕ ಸುನಿಲ್ ಕುಮಾರ್ ಹೇಳಿದರು.
ಎಂಟು ಬಾರಿ ಚಾಂಪಿಯನ್ ಆಗಿರುವ ತಂಡವು ಆಟ ಪುನರಾರಂಭಗೊಂಡ ಕೆಲವೇ ಹೊತ್ತಿನಲ್ಲಿ ತಮ್ಮ ಮುನ್ನಡೆಯನ್ನು 40-12ಕ್ಕೆ ವಿಸ್ತರಿಸಿತು. ನಂತರ, ಅಂತಿಮ ಹಂತದಲ್ಲಿ ಜಪಾನ್ ತಂಡವು ಪ್ರಬಲ ಪೈಪೋಟಿ ನೀಡಿತು. ಅಂತಿಮವಾಗಿ ಭಾರತವು 25 ಅಂಕಗಳ ಅಂತರದಿಂದ ಜಯಗಳಿಸಿತಾದರೂ, ದ್ವಿತೀಯಾರ್ಧದಲ್ಲಿ 18-15ರ ಅಂತರದ ಪೈಪೋಟಿ ಕಂಡುಬಂದಿತು.
ಭಾರತ ಪರ ಅಶು ಅವರ ಮೂರು ಅಂಕಗಳ 'ಸೂಪರ್ ರೈಡ್' ಪಂದ್ಯದ ಗತಿಯನ್ನು ನಿರ್ಧರಿಸಲು ನೆರವಾಯಿತು. ಹಾಲಿ ಚಾಂಪಿಯನ್‌ಗಳು ಆರಂಭಿಕ ಹಂತದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿ, ಜಪಾನ್‌ನ ರೈಡರ್‌ಗಳನ್ನು ನಿಯಂತ್ರಣದಲ್ಲಿರಿಸಿದರು.
ಏಷ್ಯನ್ ಗೇಮ್ಸ್: ಭಾರತ ಮಹಿಳಾ ತಂಡಕ್ಕೆ ಮತ್ತೊಂದು ಭರ್ಜರಿ ಜಯ
ಭಾರತೀಯರು ಆತಿಥೇಯ ತಂಡವನ್ನು ಮೂರು ಬಾರಿ 'ಆಲ್-ಔಟ್' ಮಾಡುವ ಮೂಲಕ, ವಿರಾಮದ ವೇಳೆಗೆ 31-9 ಅಂಕಗಳ ಮುನ್ನಡೆ ಸಾಧಿಸಿದರು. ಆರಂಭಿಕ ಅವಧಿಯಲ್ಲಿ ಜಪಾನ್ ಕೇವಲ ಐದು 'ಟಚ್ ಪಾಯಿಂಟ್'ಗಳನ್ನು ಗಳಿಸಲಷ್ಟೇ ಶಕ್ತವಾಯಿತು ಮತ್ತು ತಮ್ಮ ಅಂಕಗಳಿಕೆಗೆ ನಾಲ್ಕು 'ಬೋನಸ್ ಪಾಯಿಂಟ್'ಗಳನ್ನಷ್ಟೇ ಅವಲಂಬಿಸಬೇಕಾಯಿತು.
ದ್ವಿತೀಯಾರ್ಧದಲ್ಲಿ ಭಾರತ ತಂಡವು ವ್ಯಾಪಕ ಬದಲಾವಣೆಗಳನ್ನು ಮಾಡಿಕೊಂಡಿತು. ಪಂದ್ಯವನ್ನು ಆರಂಭಿಸಿದ ಏಳು ಆಟಗಾರರ ಪೈಕಿ ಐವರನ್ನು ಬದಲಾಯಿಸಲಾಯಿತು.
"ನಾವು ವಾಸ್ತವವಾಗಿ ಹೊಸದೇನನ್ನೂ ಪ್ರಯತ್ನಿಸುತ್ತಿರಲಿಲ್ಲ. ಆದರೆ ಜಪಾನ್‌ನ ಮನೋಸ್ಥೈರ್ಯ ಕುಸಿಯಬಾರದು ಎಂಬ ಉದ್ದೇಶವಷ್ಟೇ ಅದಾಗಿತ್ತು," ಎಂದು ನಾಯಕ ಸುನಿಲ್ ತಿಳಿಸಿದರು.
"ನಾವು ಅತಿಯಾದ ದೊಡ್ಡ ಅಂತರದಿಂದ ಗೆಲ್ಲಲು ಬಯಸಲಿಲ್ಲ. ಅದಕ್ಕಾಗಿಯೇ ನಾವು ಕೊಂಚ ಸಡಿಲವಾಗಿ ಆಡಿದೆವು. ಏಕೆಂದರೆ ಪಂದ್ಯಗಳು ಅವರ ದೇಶದಲ್ಲೇ ನಡೆಯುತ್ತಿವೆ ಮತ್ತು ಅವರ ಅಭಿಮಾನಿಗಳು ಪಂದ್ಯ ವೀಕ್ಷಿಸಲು ಬಂದಿರುತ್ತಾರೆ" ಎಂದು ಸುನಿಲ್ ಹೇಳಿದರು.