ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತ vs ಅಫ್ಘಾನಿಸ್ತಾನ ಟೆಸ್ಟ್‌ಗೆ ನೆಟ್‌ ಬೌಲರ್‌ ಆಗಿ ಆಯ್ಕೆಯಾದ ಔಕಿಬ್ ನಬಿ

IND vs AFG One-off Test: 2025-26ರಲ್ಲಿ ಜಮ್ಮು ಮತ್ತು ಕಾಶ್ಮೀರ ತನ್ನ ಮೊದಲ ರಣಜಿ ಟ್ರೋಫಿ ಪ್ರಶಸ್ತಿಯನ್ನು ಗೆಲ್ಲುವಲ್ಲಿ ನಬಿ ಪ್ರಮುಖ ಪಾತ್ರ ವಹಿಸಿದ್ದರು. ಸ್ವಿಂಗ್ ಬೌಲರ್ 17 ಇನ್ನಿಂಗ್ಸ್‌ಗಳಲ್ಲಿ 12.65 ಸರಾಸರಿಯಲ್ಲಿ 60 ವಿಕೆಟ್‌ಗಳನ್ನು ಗಳಿಸುವ ಮೂಲಕ ಟೂರ್ನಮೆಂಟ್‌ನ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದರು. ಕಳೆದ ಎರಡು ರಣಜಿ ಟ್ರೋಫಿ ಋತುಗಳಲ್ಲಿ, ಅವರು 104 ವಿಕೆಟ್‌ಗಳನ್ನು ಪಡೆದಿದ್ದಾರೆ.

ಭಾರತ vs ಅಫ್ಘಾನಿಸ್ತಾನ ಟೆಸ್ಟ್‌ಗೆ ಔಕಿಬ್ ನಬಿ ನೆಟ್‌ ಬೌಲರ್‌

Auqib Nabi -

Abhilash BC
Abhilash BC Jun 2, 2026 4:22 PM

ನವದೆಹಲಿ, ಜೂ.2: ಜಮ್ಮು ಮತ್ತು ಕಾಶ್ಮೀರದ ಸೀಮರ್ ಔಕಿಬ್ ನಬಿ(Auqib Nabi) ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಭಾರತದ ಏಕೈಕ ಟೆಸ್ಟ್(IND vs AFG One-off Test) ಪಂದ್ಯಕ್ಕೆ ನೆಟ್ ಬೌಲರ್‌ ಆಗಿ ಆಯ್ಕೆಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ರಣಜಿ ಟ್ರೋಫಿ ಗೆಲುವಿನಲ್ಲಿ ಅವರ ಅಭೂತಪೂರ್ವ ಪ್ರದರ್ಶನದ ಹೊರತಾಗಿಯೂ ಅವರಿಗೆ ಭಾರತ ಟೆಸ್ಟ್‌ ತಂಡದಲ್ಲಿ ಸ್ಥಾನ ನೀಡದ ಬಗ್ಗೆ ಬಿಸಿಸಿಐ ವಿರುದ್ಧ ಟೀಕೆಗಳು ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಬಿಸಿಸಿಐ ಅವರನ್ನು ನೆಟ್‌ ಬೌಲರ್‌ ಆಗಿ ಆಯ್ಕೆ ಮಾಡಿಕೊಂಡಿದೆ.

ಔಕಿಬ್ ನಬಿ ಜತೆ ಗುರ್ಜಪ್ನೀತ್ ಸಿಂಗ್, ಪ್ರಿನ್ಸ್ ಯಾದವ್, ಸರಾಂಶ್ ಜೈನ್, ಜೀಶನ್ ಅನ್ಸಾರಿ ಮತ್ತು ಶಿವಾಂಗ್ ಕುಮಾರ್ ಕೂಡ ನೆಟ್‌ ಬೌಲರ್‌ಗಳಾಗಿ ಆಯ್ಕೆಯಾಗಿದ್ದಾರೆ. ಹರ್ಷಿತ್ ರಾಣಾ ಮತ್ತು ಆಕಾಶ್ ದೀಪ್ ಗಾಯಗೊಂಡಿದ್ದರಿಂದ ಮತ್ತು ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿರುವುದರಿಂದ, ನಬಿಗೆ ಮೊದಲ ಟೆಸ್ಟ್ ಕರೆ ಸಿಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆಯ್ಕೆದಾರರು ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಅವರಿಗೆ ಸಹಾಯ ಮಾಡಲು ಗುರ್ನೂರ್ ಬ್ರಾರ್ ಅವರನ್ನು ಬ್ಯಾಕ್-ಅಪ್ ವೇಗಿಯಾಗಿ ಆಯ್ಕೆ ಮಾಡಿದರು.



2025-26ರಲ್ಲಿ ಜಮ್ಮು ಮತ್ತು ಕಾಶ್ಮೀರ ತನ್ನ ಮೊದಲ ರಣಜಿ ಟ್ರೋಫಿ ಪ್ರಶಸ್ತಿಯನ್ನು ಗೆಲ್ಲುವಲ್ಲಿ ನಬಿ ಪ್ರಮುಖ ಪಾತ್ರ ವಹಿಸಿದ್ದರು. ಸ್ವಿಂಗ್ ಬೌಲರ್ 17 ಇನ್ನಿಂಗ್ಸ್‌ಗಳಲ್ಲಿ 12.65 ಸರಾಸರಿಯಲ್ಲಿ 60 ವಿಕೆಟ್‌ಗಳನ್ನು ಗಳಿಸುವ ಮೂಲಕ ಟೂರ್ನಮೆಂಟ್‌ನ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದರು. ಕಳೆದ ಎರಡು ರಣಜಿ ಟ್ರೋಫಿ ಋತುಗಳಲ್ಲಿ, ಅವರು 104 ವಿಕೆಟ್‌ಗಳನ್ನು ಪಡೆದಿದ್ದಾರೆ. ಭಾರತ vs ಅಫ್ಘಾನಿಸ್ತಾನ ಟೆಸ್ಟ್ ಜೂನ್ 6 ರಂದು ನ್ಯೂ ಚಂಡೀಗಢದಲ್ಲಿ ಪ್ರಾರಂಭವಾಗಲಿದೆ. ಈ ಟೆಸ್ಟ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿರುವುದಿಲ್ಲ.

ಭಾರತ ಟೆಸ್ಟ್ ತಂಡ: ಶುಭಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್ (ಉಪನಾಯಕ), ಸಾಯಿ ಸುದರ್ಶನ್, ರಿಷಭ್ ಪಂತ್ (ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್. ಸಿರಾಜ್, ಪ್ರಸಿದ್ಧ್ ಕೃಷ್ಣ, ಮಾನವ್ ಸುತಾರ್, ಗುರ್ನೂರ್ ಬ್ರಾರ್, ಹರ್ಷ್ ದುಬೆ, ಧ್ರುವ್ ಜುರೆಲ್ (ವಿಕೆಟ್ ಕೀಪರ್).