ಏಕೈಕ ಟೆಸ್ಟ್; ಆಸ್ಟ್ರೇಲಿಯಾ ವಿರುದ್ಧ ಭಾರತ ಮಹಿಳಾ ತಂಡಕ್ಕೆ 10 ವಿಕೆಟ್ ಹೀನಾಯ ಸೋಲು
AUS-W vs IND-W: ಚೇಸಿಂಗ್ ವೇಳೆ ಆಸ್ಟ್ರೇಲಿಯಾದ ಆರಂಭಿಕ ಆಟಗಾರ್ತಿಯರಾದ ಜಾರ್ಜಿಯಾ ವೋಲ್(16*) ಮತ್ತು ಫೋಬೆ ಲಿಚ್‌ಫೀಲ್ಡ್(11*) ಜೋಡಿ 25 ರನ್‌ಗಳನ್ನು ಕೇವಲ 4.3 ಓವರ್‌ಗಳಲ್ಲಿ ಬಾರಿಸಿದರು. ಭಾರತ ಪರ ಪ್ರತಿಕಾ ರಾವಲ್ ಹೊರತುಪಡಿಸಿ ಉಳಿದವರು ವಿಫಲರಾದರು.
Australia Women won by 10 wkts -
ಪರ್ತ್, ಮಾ.8: ಕಳೆದ ಮೂರು ದಿನಗಳಲ್ಲಿ ತನ್ನ ಅಗಾಧ ಪ್ರಾಬಲ್ಯವನ್ನು ಪ್ರದರ್ಶಿಸಿದ ಆಸ್ಟ್ರೇಲಿಯಾ(AUS-W vs IND-W), ಪರ್ತ್‌ನಲ್ಲಿ ನಡೆದ ಏಕೈಕ ಮಹಿಳಾ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಭಾರತದ ವಿರುದ್ಧ 10 ವಿಕೆಟ್‌ಗಳ ಜಯ ಸಾಧಿಸಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಮೊದಲ ಮೊದಲ ಇನಿಂಗ್ಸ್‌ನಲ್ಲಿ 198 ರನ್‌ಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ 323 ರನ್ ಬಾರಿಸಿ ಇನಿಂಗ್ಸ್ ಮುನ್ನಡೆ ಸಾಧಿಸಿತು. ದ್ವಿತೀಯ ಇನಿಂಗ್ಸ್‌ನಲ್ಲಿ ಮತ್ತೆ ಬ್ಯಾಟಿಂಗ್ ವೈಫಲ್ಯ ಕಂಡ ಭಾರತ 149 ರನ್‌ಗೆ ಸರ್ವಪತನ ಕಂಡಿತು. ಗೆಲುವಿಗೆ 25 ರನ್ ಬೆನ್ನಟ್ಟಿದ ಆಸ್ಟ್ರೇಲಿಯಾ ಈ ಮೊತ್ತವನ್ನು ಅಜೇಯವಾಗಿ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು. ವಿದಾಯದ ಪಂದ್ಯವನ್ನಾಡಿದ ನಾಯಕಿ ಅಲಿಸಾ ಹೀಲಿಗೆ ಈ ಗೆಲುವು ಸ್ಮರಣೀಯವಾಯಿತು.
ಭಾರತ ತಂಡ ಮೂರನೇ ದಿನವನ್ನು ಆರು ವಿಕೆಟ್ ನಷ್ಟಕ್ಕೆ 105 ರನ್‌ಗಳಿಂದ ಆರಂಭಿಸಿತು. ಪ್ರತೀಕಾ ರಾವಲ್ (63) ಮತ್ತು ಸ್ನೇಹ್ ರಾಣಾ (30) ಭಾರತವನ್ನು 132 ರನ್‌ಗಳ ಗಡಿ ದಾಟಿಸಿದರು. ಗಾರ್ಡ್ನರ್ ಮತ್ತು ಪಂದ್ಯಶ್ರೇಷ್ಠ ಆಟಗಾರ್ತಿ ಅನ್ನಾಬೆಲ್ ಸದರ್ಲ್ಯಾಂಡ್ ಅವರ ಸಂಯೋಜನೆಯು ಭಾರತದ ಇನ್ನಿಂಗ್ಸ್ ಅನ್ನು ಸೂಕ್ತವಾಗಿ ಕೊನೆಗೊಳಿಸಿತು. ಸದರ್ಲ್ಯಾಂಡ್(129) ಶತಕದ ಜತೆಗೆ ಒಟ್ಟು 6 ವಿಕೆಟ್ ಕಿತ್ತು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಚೇಸಿಂಗ್ ವೇಳೆ ಆಸ್ಟ್ರೇಲಿಯಾದ ಆರಂಭಿಕ ಆಟಗಾರ್ತಿಯರಾದ ಜಾರ್ಜಿಯಾ ವೋಲ್(16*) ಮತ್ತು ಫೋಬೆ ಲಿಚ್‌ಫೀಲ್ಡ್(11*) ಜೋಡಿ 25 ರನ್‌ಗಳನ್ನು ಕೇವಲ 4.3 ಓವರ್‌ಗಳಲ್ಲಿ ಬಾರಿಸಿದರು. ಭಾರತ ಪರ ಪ್ರತಿಕಾ ರಾವಲ್ ಹೊರತುಪಡಿಸಿ ಉಳಿದವರು ವಿಫಲರಾದರು.
ಮಾರ್ಚ್ 25-27ರ ದೋಹಾ ಸಭೆಯನ್ನು ಮುಂದೂಡಿದ ಐಸಿಸಿ
ಸೋಲಿನ ಬಳಿಕ ಮಾತನಾಡಿದ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, “ನಾವು ಟಿ20ಐಗಳಲ್ಲಿ ಸರಣಿ ಗೆಲುವಿನೊಂದಿಗೆ ಉತ್ತಮವಾಗಿ ಪ್ರಾರಂಭಿಸಿದೆವು, ಆದರೆ ಏಕದಿನ ಮತ್ತು ಟೆಸ್ಟ್‌ಗಳಲ್ಲಿ ಉತ್ತಮ ಕೆಲಸವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ ಆದರೆ ಆಸ್ಟ್ರೇಲಿಯಾದಲ್ಲಿ ಪೂರ್ಣ ಸರಣಿಯನ್ನು ಆಡುವುದು ಉತ್ತಮ ಅನುಭವವಾಗಿತ್ತು. ಪಿಂಕ್ ಬಾಲ್ ಟೆಸ್ಟ್ ವಿಭಿನ್ನ ಸವಾಲಾಗಿತ್ತು ”ಎಂದು ಹೇಳಿದರು.