IND vs ENG 1st Test: ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್
Ben Stokes: ಜಸ್‌ಪ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯಗಳಲ್ಲಿ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ. ಇಂಗ್ಲೆಂಡ್ ವಿರುದ್ಧ ಆಡಿರುವ 14 ಪಂದ್ಯಗಳಲ್ಲಿ ಅವರು 60 ವಿಕೆಟ್‌ಗಳನ್ನು ಪಡೆದಿದ್ದಾರೆ. ಇಂಗ್ಲೆಂಡ್‌ನಲ್ಲಿ 9 ಟೆಸ್ಟ್ ಪಂದ್ಯಗಳನ್ನು ಆಡಿರುವ ಬುಮ್ರಾ 26.27 ರ ಸರಾಸರಿಯಲ್ಲಿ 37 ವಿಕೆಟ್‌ಗಳನ್ನು ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧ ಅವರ ಒಟ್ಟಾರೆ ಸರಾಸರಿ 22.16 ಆಗಿದೆ.


ಲೀಡ್ಸ್: ಪ್ರವಾಸಿ ಭಾರತ ಮತ್ತು ಇಂಗ್ಲೆಂಡ್ ನಡುವಣ ಮೊದಲ(IND vs ENG 1st Test) ಟೆಸ್ಟ್ ಪಂದ್ಯ ಲೀಡ್ಸ್(Leeds) ಹೇಡಿಂಗ್ಲೆಯಲ್ಲಿ ಆರಂಭಗೊಳ್ಳಲಿದೆ. ಪಂದ್ಯಕ್ಕೂ ಮುನ್ನವೇ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್(Ben Stokes) ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ್ದು, ತಮ್ಮ ತಂಡ ಜಸ್‌ಪ್ರೀತ್ ಬುಮ್ರಾ(Jasprit Bumrah) ದಾಳಿಗೆ ಹೆದರುವುದಿಲ್ಲ ಎಂದು ಹೇಳಿದ್ದಾರೆ.
ಪಂದ್ಯದ ಪೂರ್ವಸಿದ್ಧತಾ ಕಾರ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ಟೋಕ್ಸ್, ಬುಮ್ರಾ ವಿಶ್ವ ದರ್ಜೆಯ ಬೌಲರ್ ಆಗಿದ್ದರೂ, ಭಾರತಕ್ಕೆ ಟೆಸ್ಟ್ ಸರಣಿಯನ್ನು ಏಕಾಂಗಿಯಾಗಿ ಗೆಲ್ಲುವ ಸಾಮರ್ಥ್ಯ ಹೊಂದಿಲ್ಲ. ಹೀಗಾಗಿ ಅವರ ಬೌಲಿಂಗ್ ಬಗ್ಗೆ ನಮ್ಮ ತಂಡ ಹೆದರುವುದಿಲ್ಲ ಎಂದಿದ್ದಾರೆ.
"ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ತಂಡವು ಯಾವಾಗಲೂ ಗುಣಮಟ್ಟದ ಪ್ರತಿರೋಧ ಎದುರಿಸುತ್ತದೆ ಮತ್ತು ತಮ್ಮ ಪ್ರತಿಸ್ಪರ್ಧಿಗಳನ್ನು ಗೌರವಿಸುತ್ತದೆ. ಆದರೆ ಅವರಿಗೆ ಭಯಪಡುವ ಪ್ರಶ್ನೆಯೇ ಇಲ್ಲ ಎಂದು ಸ್ಟೋಕ್ಸ್ ಒತ್ತಿ ಹೇಳಿದರು. ಇದೇ ವೇಳೆ ತಂಡದ ಆಟಗಾರರಿಗೂ ಆತ್ಮವಿಶ್ವಾಸ ತುಂಬುವ ಕಾರ್ಯ ಮಾಡಿದ್ದಾರೆ.
"ಭಯಪಡಬೇಡಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ, ನೀವು ಯಾವಾಗಲೂ ಗುಣಮಟ್ಟದ ಎದುರಾಳಿಗಳನ್ನು ಎದುರಿಸಬೇಕಾಗುತ್ತದೆ. ಎರಡೂ ತಂಡಗಳಿಗೆ ಒಬ್ಬ ಬೌಲರ್ ಮಾತ್ರ ಸರಣಿ ಗೆಲ್ಲುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಎಲ್ಲಾ 11 ಆಟಗಾರರು ಎದ್ದು ನಿಲ್ಲಬೇಕು. ಎರಡೂ ತಂಡಗಳಲ್ಲಿ ಯಶಸ್ಸಿನ ಕೀಲಿಯನ್ನು ಹಿಡಿದಿರುವ ಒಬ್ಬ ವ್ಯಕ್ತಿ ಮಾತ್ರ ಇದ್ದಾರೆ ಎಂದು ನಾನು ಭಾವಿಸುವುದಿಲ್ಲ" ಎಂದು ಹೇಳುವ ಮೂಲಕ ತನ್ನ ತಂಡದ ಆಟಗಾರರ ಆತ್ಮವಿಶ್ವಸ ಹೆಚ್ಚಿಸಿದ್ದಾರೆ.
ಇದನ್ನೂ ಓದಿ IND vs ENG 1st Test: ಲೀಡ್ಸ್ ಟೆಸ್ಟ್‌ನ ಪಿಚ್ ರಿಪೋರ್ಟ್, ಭಾರತ ಸಂಭಾವ್ಯ ಆಡುವ ಬಳಗ ಹೇಗಿದೆ?
ಬುಮ್ರಾ ಅದ್ಭುತ ದಾಖಲೆ
ಜಸ್‌ಪ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯಗಳಲ್ಲಿ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ. ಇಂಗ್ಲೆಂಡ್ ವಿರುದ್ಧ ಆಡಿರುವ 14 ಪಂದ್ಯಗಳಲ್ಲಿ ಅವರು 60 ವಿಕೆಟ್‌ಗಳನ್ನು ಪಡೆದಿದ್ದಾರೆ. ಇಂಗ್ಲೆಂಡ್‌ನಲ್ಲಿ 9 ಟೆಸ್ಟ್ ಪಂದ್ಯಗಳನ್ನು ಆಡಿರುವ ಬುಮ್ರಾ 26.27 ರ ಸರಾಸರಿಯಲ್ಲಿ 37 ವಿಕೆಟ್‌ಗಳನ್ನು ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧ ಅವರ ಒಟ್ಟಾರೆ ಸರಾಸರಿ 22.16 ಆಗಿದೆ.