ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bash League season: ಸಿಡ್ನಿ ಥಂಡರ್ಸ್‌ ಪರ ಬಿಗ್‌ಬ್ಯಾಷ್‌ ಆಡುವುದನ್ನು ಖಚಿತಪಡಿಸಿದ ಆರ್‌ ಅಶ್ವಿನ್!

ಮುಂಬರುವ ಆವೃತ್ತಿಯ ಬಿಗ್‌ಬ್ಯಾಷ್‌ ಲೀಗ್‌ ಟೂರ್ನಿಯಲ್ಲಿ ಸಿಡ್ನಿ ಥಂಡರ್ಸ್‌ ಪರ ಆಡುತ್ತೇನೆಂದು ಭಾರತೀಯ ಸ್ಪಿನ್‌ ದಿಗ್ಗಜ ಆರ್‌ ಅಶ್ವಿನ್‌ ಖಚಿತಪಡಿಸಿದ್ದಾರೆ. ಇಂಟರ್‌ನ್ಯಾಷನಲ್‌ ಲೀಗ್‌ ಟಿ-20 ಆಟಗಾರರ ಹರಾಜಿನಲ್ಲಿ ಅನ್‌ಸೋಲ್ಡ್‌ ಆದ ಬಳಿಕ ಆರ್‌ ಅಶ್ವಿನ್‌, ಸಿಡ್ನಿ ಥಂಡರ್ಸ್‌ ಪರ ಪೂರ್ಣ ಆವೃತ್ತಿಗೆ ಲಭ್ಯರಾಗುತ್ತೇನೆಂದು ತಿಳಿಸಿದ್ದಾರೆ.

ಸಿಡ್ನಿ ಥಂಡರ್ಸ್‌ ಪರ ಬಿಗ್‌ಬ್ಯಾಷ್‌ ಲೀಗ್‌ ಆಡುತ್ತೇನೆಂದ ಆರ್‌ ಅಶ್ವಿನ್‌!

ಸಿಡ್ನಿ ಥಂಡರ್ಸ್‌ ಪರ ಆಡುವ ಬಗ್ಗೆ ಆರ್‌ ಅಶ್ವಿನ್‌ ಖಚಿತಪಡಿಸಿದ್ದಾರೆ. -

Profile Ramesh Kote Oct 10, 2025 10:03 PM

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ ಸೇರಿದಂತೆ ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳಿದ ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ (R Ashwin) ಅವರು, ವಿಶ್ವದಾದ್ಯಂತ ಫ್ರಾಂಚೈಸಿ ಲೀಗ್‌ ಆಡಲು ಬಯಸಿದ್ದರು. ಅದರಂತೆ ಅವರು ಇಂಟರ್‌ನ್ಯಾಷನಲ್‌ ಲೀಗ್‌ ಟಿ-20 (ILT-20) ಟೂರ್ನಿಯ ಆಟಗಾರರ ಹರಾಜಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಆದರೆ, ಅವರು ಹರಾಜಿನಲ್ಲಿ ಅನ್‌ಸೋಲ್ಡ್‌ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಡ್ನಿ ಥಂಡರ್ಸ್‌ (Sydney Thunders) ಪರ ಬಿಗ್‌ಬ್ಯಾಷ್‌ ಲೀಗ್‌ (Bigbash League) ಟೂರ್ನಿಯನ್ನು ಸಂಪೂರ್ಣವಾಗಿ ಮುಗಿಸುವುದಾಗಿ ಆರ್‌ ಅಶ್ವಿನ್‌ ಅವರು ಖಚಿತಪಡಿಸಿದ್ದಾರೆ.

ಅಶ್ವಿನ್ ಐಎಲ್‌ಟಿ20 ಹರಾಜಿನಲ್ಲಿ ಭಾಗವಹಿಸಲು ಬದ್ಧರಾಗಿದ್ದರು ಆದರೆ ಅವರ ಮೂಲ ಬೆಲೆಯಾದ 120,000 ಯುಎಸ್‌ ಡಾಲರ್‌ಗೆ ಯಾವುದೇ ಖರೀದಿದಾರರು ಸಿಗದ ಕಾರಣ ಹರಾಜಿನಿಂದ ಹಿಂದೆ ಸರಿಯಲು ನಿರ್ಧರಿಸಿದರು. ಅವರು ಹರಾಜಿನಿಂದ ಹಿಂದೆ ಸರಿದು ಬಿಗ್‌ಬ್ಯಾಷ್‌ ಲೀಗ್‌ ಅನ್ನು ಪೂರ್ಣಗೊಳಿಸಲು ತೀರ್ಮಾನ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಅವರೇ ಖಚಿತಪಡಿಸಿದ್ದಾರೆ. ಅವರು ತಮ್ಮ ಮೂಲ ಬೆಲೆಯನ್ನು ಕಡಿಮೆ ಮಾಡಲು ಇಷ್ಟವಿರಲಿಲ್ಲ, ಇದು ಅಂತಿಮವಾಗಿ ಮುಂಬರುವ ಬಿಗ್ ಬ್ಯಾಷ್ ಲೀಗ್ ಋತುವಿನಲ್ಲಿ ಸಿಡ್ನಿ ಥಂಡರ್‌ಗೆ ಅವರ ಸಂಪೂರ್ಣ ಬದ್ಧತೆಗೆ ಕಾರಣವಾಗಿದೆ.

IND vs PAK: ʻಆಂಡಿ ಪೈಕ್ರಾಫ್ಟ್‌ ಸ್ಕೂಲ್‌ ಟೀಚರ್‌ ಅಲ್ಲʼ-ಪಾಕಿಸ್ತಾನವನ್ನು ಟೀಕಿಸಿದ ಆರ್‌ ಅಶ್ವಿನ್‌!

"ಸಿಡ್ನಿ ಥಂಡರ್ ಒಪ್ಪಂದದ ಕಾರಣದಿಂದಾಗಿ ನಾನು ಹರಾಜಿಗೂ ಕೆಲವು ದಿನಗಳ ಮುನ್ನ ಅದರಿಂದ ಹೊರಬರಬೇಕೆಂದು ಬಯಸಿದ್ದೆ. ಆದರೆ ನಾನು ಈಗಾಗಲೇ ಐಎಲ್‌ಟಿ20 ಹರಾಜಿನಲ್ಲಿ ಭಾಗವಹಿಸುವುದಾಗಿ ಬದ್ಧನಾಗಿದ್ದರಿಂದ, ನಾನು ನನ್ನ ಮಾತನ್ನು ಗೌರವಿಸಿದೆ. ಆದಾಗ್ಯೂ, ನನ್ನ ಮೂಲ ಬೆಲೆಯನ್ನು ಕಡಿಮೆ ಮಾಡಲು ನನಗೆ ಇಷ್ಟವಿರಲಿಲ್ಲ," ಎಂದು ಅಶ್ವಿನ್ ಹೇಳಿದ್ದಾರೆ ಎಂದು ಕ್ರಿಕ್‌ಬಜ್ ವರದಿ ಮಾಡಿದೆ.



ಕಳೆದ ವರ್ಷ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗ ಆರ್‌ ಅಶ್ವಿನ್‌ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್‌ ವಿದಾಯ ಹೇಳಿದ್ದರು. ನಂತರ ಈ ವರ್ಷ ಆಗಸ್ಟ್‌ನಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ವೃತ್ತಿ ಜೀವನಕ್ಕೂ ನಿವೃತ್ತಿ ಘೋಷಿಸಿದ್ದರು. ಆ ಮೂಲಕ ಬಿಗ್‌ಬ್ಯಾಷ್‌ ಲೀಗ್‌ ಆಡಲು ಮುಂದಾಗಿದ್ದಾರೆ. ಇದರೊಂದಿಗೆ ಬಿಗ್‌ಬ್ಯಾಷ್‌ ಆಡುವ ಮೊದಲ ಭಾರತ ಪ್ರತಿನಿಧಿಸಿದ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಲಿದ್ದಾರೆ. ಅಂತಾರಾಷ್ಟ್ರೀಯ ಹಾಗೂ ದೇಶಿ ಕ್ರಿಕೆಟ್‌ ಆಡುತ್ತಿರುವ ಆಟಗಾರರು ವಿದೇಶಿ ಲೀಗ್‌ ಆಡುವುದಕ್ಕೆ ಬಿಸಿಸಿಐ ಅನುಮತಿ ನೀಡಿಲ್ಲ. ಆದರೆ, ನಿವೃತ್ತಿ ಹೊಂದಿದ ಆಟಗಾರರ ಮಾತ್ರ ಆಡಬಹುದು.

ಡಿಸೆಂಬರ್‌ 16 ರಂದು ದಿ ಹುರಿಕೇನ್ಸ್‌ ವಿರುದ್ಧದ ಪಂದ್ಯದ ಮೂಲಕ ಆರ್‌ ಅಶ್ವಿನ್‌ ಬಿಗ್‌ಬ್ಯಾಷ್‌ ಲೀಗ್‌ಗೆ ಅಧಿಕೃತವಾಗಿ ಪದಾರ್ಪಣೆ ಮಾಡಲಿದ್ದಾರೆ. ಡಿಸೆಂಬರ್‌ 20 ರಂದು ಸಿಡ್ನಿ ಸ್ಮಾಷ್‌ ವಿರುದ್ಧ ತವರು ಅಂಗಣವಾದ ಇಂಗಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯವನ್ನು ಸಿಡ್ನಿ ಥಂಡರ್ಸ್‌ ತಂಡ ಆಡಲಿದೆ.