Subroto Cup (U-15): ಫೈನಲ್‌ಗೇರಿದ ಮಿನರ್ವಾ ಪಬ್ಲಿಕ್ ಸ್ಕೂಲ್-ವಿದ್ಯಾಚಲ್ ಇಂಟರ್ ನ್ಯಾಷನಲ್ ಸ್ಕೂಲ್!
ಬೆಂಗಳೂರಿನಲ್ಲಿ ನಡೆಯುತ್ತಿರುವ 64ನೇ ಸುಬ್ರ೦ತೋ ಕಪ್ ಅಂತಾರಾಷ್ಟ್ರೀಯ ಫುಟ್ಬಾಲ್ ಸಬ್ ಜೂನಿಯರ್ ಟೂರ್ನಿಯ ಫೈನಲ್‌ಗೆ ಮಿನರ್ವಾ ಪಬ್ಲಿಕ್ ಸ್ಕೂಲ್ (CISCE) ಹಾಗು ವಿದ್ಯಾಚಲ್ ಇಂಟರ್ ನ್ಯಾಷನಲ್ ಸ್ಕೂಲ್ (ಬಿಹಾರ) ತಂಡಗಳು ಪ್ರವೇಶ ಪಡೆದಿವೆ. ಮಂಗಳವಾರ ಈ ಎರಡೂ ತಂಡಗಳು ಪ್ರತ್ಯೇಕ ಸೆಮಿಫೈನಲ್ ಪಂದ್ಯಗಳಲ್ಲಿ ಗೆಲುವು ಪಡೆಯುವ ಮೂಲಕ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿವೆ.

ಸುಬ್ರೋತೋ ಸಬ್ ಜೂನಿಯರ್ ಫುಟ್ಬಾಲ್ ಟೂರ್ನಿಯ ಫೈನಲ್‌ಗೆ ಮಿನರ್ವಾ-ವಿದ್ಯಾಚಲ್. -

ಬೆಂಗಳೂರು: 64ನೇ ಸುಬ್ರೊತೋ ಕಪ್ (Subroto Cup U-15) ಅಂತಾರಾಷ್ಟ್ರೀಯ ಫುಟ್‌ಬಾಲ್ ಟೂರ್ನಿಯ ಸಬ್ ಜೂನಿಯರ್ ಬಾಲಕರ (U-15) ಸೆಮಿಫೈನಲ್ ಹಂತವು ಬೆಂಗಳೂರಿನಲ್ಲಿ ಎರಡು ಉತ್ಸಾಹಭರಿತ ಪಂದ್ಯಗಳು ಮಂಗಳವಾರ (ಸೆ. 9) ನಡೆದವು. ಮಿನರ್ವಾ ಪಬ್ಲಿಕ್ ಸ್ಕೂಲ್ (CISCE) ಹಾಗು ವಿದ್ಯಾಚಲ್ ಇಂಟರ್ ನ್ಯಾಷನಲ್ ಸ್ಕೂಲ್ (ಬಿಹಾರ) ತಂಡಗಳು ತಮ್ಮ-ತಮ್ಮ ಪ್ರತ್ಯೇಕ ಸೆಮಿಫೈನಲ್ ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿವೆ. ಫೈನಲ್ ಪಂದ್ಯ ಸೆಪ್ಟಂಬರ್ 11 ರಂದು ಗುರುವಾರ ಯಲಹಂಕದಲ್ಲಿ ನಡೆಯಲಿದೆ.
ಮಂಗಳವಾರ ಬೆಳಗ್ಗೆ ನಡೆದಿದ್ದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮಿನರ್ವಾ ಪಬ್ಲಿಕ್ ಸ್ಕೂಲ್ (CISCE) ತಮ್ಮ ಸಮಗ್ರ ಶಕ್ತಿ ತೋರಿಸಿ ಸೇಂಟ್ ಜಾನ್ ಹೈಸ್ಕೂಲ್ (ಜಾರ್ಖಂಡ್) ವಿರುದ್ಧ 6-1 ಅಂತರದಲ್ಲಿ ದೊಡ್ಡ ಗೆಲುವು ಪಡೆಯಿತು. ಬಿಕ್ಸನ್ ಎರಡು ಬಾರಿ (3, 50+2) ಗೋಲು ಗಳಿಸಿದರೆ, ಮಹೇಶ್ (8), ಕಿಪ್ಗೆನ್ (20), ರೆಮೋಸನ್ (45), ಮತ್ತು ಹಾವೋಕಿಪ್ (50+3’) ಗೋಲು ಗಳಿಸಿದರು. ಜಾರ್ಖಂಡ್ ತಂಡವು ಕಠಿಣ ಹೋರಾಟ ನಡೆಸಿ 48ನೇ ನಿಮಿಷದಲ್ಲಿ ಏಕೈಕ ಗೋಲು ಗಳಿಸುವಲ್ಲಿ ಯಶಸ್ವಿಯಾಯಿತು. ಆದರೂ ಸೋಲಿನೊಂದಿಗೆ ತನ್ನ ಟೂರ್ನಿಯ ಅಭಿಯಾನವನ್ನು ಮುಗಿಸಿತು.
ರೋಚಕ ಕ್ವಾರ್ಟರ್ ಫೈನಲ್ ಪಂದ್ಯ; ಯುವ ಪ್ರತಿಭೆಗಳ ಆಟಕ್ಕೆ ಸಾಕ್ಷಿಯಾದ ಸುಬ್ರೋತೋ ಕಪ್
ಮಂಗಳವಾರ ಸಂಜೆ ನಡೆದಿದ್ದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಬಿಹಾರದ ವಿದ್ಯಾಚಲ್ ಇಂಟರ್ನ್ಯಾಷನಲ್ ಸ್ಕೂಲ್ ತಂಡವು ಮಧ್ಯ ಪ್ರದೇಶದ ರಿವರ್ ಸೈಡ್ ನ್ಯಾಚುರಲ್ ಸ್ಕೂಲ್ ತಂಡವನ್ನು 4-1 ಗೋಲುಗಳಿಂದ ಮಣಿಸಿತು. ರೋಹಿತ್ (18’), ಪ್ರಭಾತ್ (34’), ಕುನಾಲ್ (49’), ಮತ್ತು ಶಿವಂ (50+2’) ಎಲ್ಲರೂ ಗೋಲು ಗಳಿಸಿದರು. ಲೋಕೇಶ್ ಮಧ್ಯಪ್ರದೇಶದ ಪರ ಸ್ಟಾಪೇಜ್ ಸಮಯದಲ್ಲಿ (50+3’) ಗೋಲು ಗಳಿಸಿದರು.
64ನೇ ಸುಬ್ರೋತೋ ಕಪ್ ನವದೆಹಲಿಯಲ್ಲಿ ಆರಂಭ
ಮಿನರ್ವಾ ಪಬ್ಲಿಕ್ ಸ್ಕೂಲ್ ಮತ್ತು ಬಿಹಾರ್ ತಂಡಗಳು ಫೈನಲ್ ಪ್ರವೇಶಿಸಿದ್ದು, ಸೆಪ್ಟೆಂಬರ್ 11, 2025 ರಂದು ಬೆಂಗಳೂರಿನ ಯಲಹಂಕದ ವಾಯುಪಡೆ ನಿಲ್ದಾಣದಲ್ಲಿ ನಡೆಯುವ ಫೈನಲ್ ಪಂದ್ಯ ಮತ್ತಷ್ಟು ರೋಚಕವಾಗಿರಲಿದೆ.