IND vs UAE: ಏಷ್ಯಾ ಕಪ್ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI ವಿವರ!
ಭಾರತ ಹಾಗೂ ಯುಎಇ ತಂಡಗಳು ಸೆಪ್ಟಂಬರ್ 10 ರಂದು ದುಬೈನ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ 2025ರ ಏಷ್ಯಾ ಕಪ್ ಟೂರ್ನಿಯ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯಕ್ಕೆ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್ XI ಅನ್ನು ಪ್ರಕಟಿಸಲಾಗಿದೆ.

ಭಾರತ vs ಯುಎಇ ಏಷ್ಯಾ ಕಪ್ ಪಂದ್ಯ -

ನವದೆಹಲಿ: ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡ, ಸೆಪ್ಟಂಬರ್ 10 ರಂದು ದುಬೈನ ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯುವ 2025ರ ಏಷ್ಯಾ ಕಪ್ (Asia Cup 2025) ಟೂರ್ನಿಯ ಪಂದ್ಯದಲ್ಲಿ (IND vs UAE) ಯುಎಇ ವಿರುದ್ದ ತನ್ನ ಮೊದಲನೇ ಪಂದ್ಯದಲ್ಲಿ ಕಾದಾಟ ನಡೆಸಲಿದೆ. ಆ ಮೂಲಕ ಏಷ್ಯಾ ಕಪ್ ಟೂರ್ನಯಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ. ಈ ಪಂದ್ಯದ ಬಳಿಕ ಟೀಮ್ ಇಂಡಿಯಾ ಸೆಪ್ಟಂಬರ್ 14 ರಂದು ಇದೇ ಅಂಗಣದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಕಾದಾಟ ನಡೆಸಲಿದೆ. 7 ತಿಂಗಳ ಬಳಿಕ ಭಾರತ ಅಂತಾರಾಷ್ಟ್ರೀಯ ಟಿ20ಐ ಕ್ರಿಕೆಟ್‌ಗೆ ಮರಳುತ್ತಿದೆ.
ಉಪ ನಾಯಕ ಶುಭಮನ್ ಗಿಲ್ ಅವರು ದೀರ್ಘಾವಧಿಯ ಬಳಿಕ ಭಾರತ ಟಿ20ಐ ತಂಡಕ್ಕೆ ಮರಳಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಜು ಸ್ಯಾಮ್ಸನ್ ಅವರಿಗೆ ಪ್ಲೇಯಿಂಗ್ xiನಲ್ಲಿ ಅವಕಾಶ ಸಿಗುವುದು ಅನುಮಾನ. ಇವರ ಬದಲು ಮಧ್ಯಮ ಕ್ರಮಾಂಕದಲ್ಲಿ ಮ್ಯಾಚ್ ಫಿನಿಷರ್ ಆಗಿರುವ ಜಿತೇಶ್ ಶರ್ಮಾ ವಿಕೆಟ್ ಕೀಪರ್ ಆಗಿ ಆಡುವ ಸಾಧ್ಯತೆ ಇದೆ. ಇವರಿಗೆ 6 ಅಥವಾ 7ನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಇದೆ.
ನಂತರ ಮಧ್ಯಮ ಕ್ರಮಾಂಕದಲ್ಲಿ ನಾಯಕ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಆಡಿದರೆ ಆಲ್‌ರೌಂಡರ್‌ಗಳಾಗಿ ಹಾರ್ದಿಕ್ ಪಾಂಡ್ಯ ಹಾಗೂ ಅಕ್ಷರ್ ಪಟೇಕ್ ಆಡಬಹುದು. ಮ್ಯಾಚ್ ಫಿನಿಷರ್ ಆಗಿ ರಿಂಕು ಸಿಂಗ್‌ಗೆ ಅವಕಾಶ ಸಿಗಬಹುದು. ಇನ್ನು ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಅವರು ಪಾರ್ಟ್ ಟೈಮ್ ಸ್ಪಿನ್ ಬೌಲ್ ಮಾಡಬಹುದು.
Asia Cup 2025: ಯುಎಇ ವಿರುದ್ದದ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ XI ಆರಿಸಿದ ಕೆ ಶ್ರೀಕಾಂತ್!
ಬೌಲಿಂಗ್ ವಿಭಾಗದಲ್ಲಿ ಜಸ್‌ಪ್ರೀತ್ ಬುಮ್ರಾ ಹಾಗೂ ಅರ್ಷದೀಪ್ ಸಿಂಗ್ ಅವರು ಪೂರ್ಣ ಪ್ರಮಾನದ ವೇಗದ ಬೌಲರ್‌ಗಳಾಗಿ ಆಡಲಿದ್ದಾರೆ. ಇನ್ನು ಪೂರ್ಣ ಪ್ರಮಾಣದ ಸ್ಪಿನ್ನರ್ ಆಗಿ ವರುಣ್ ಚಕ್ರವರ್ತಿ ಆಡಬಹುದು. ಈ ಹಿನ್ನೆಲೆಯಲ್ಲಿ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನು ಕೈ ಬಿಡುವ ಸಾಧ್ಯತೆ ಇದೆ. ಏಷ್ಯಾ ಕಪ್ ಟೂರ್ನಿಯು ಆರಂಭವಾದ ದಿನದಿಂದಲೂ ಭಾರತ ತಂಡ ಅತ್ಯಂತ ಯಶಸ್ವಿ ತಂಡವಾಗಿದೆ. ಟೀಮ್ ಇಂಡಿಯಾ ಒಟ್ಟು 8 ಬಾರಿ ಚಾಂಪಿಯನ್ ಆಗಿದೆ.
ದುಬೈ ಪಿಚ್ ರಿಪೋರ್ಟ್
ದುಬೈ ಇಟರ್‌ನ್ಯಾಷನಲ್ ಕ್ರೀಡಾಂಗಣದ ಪಿಚ್‌ನಲ್ಲಿ ಬೌನ್ಸ್ ಹೆಚ್ಚಿಗೆ ಇರುವ ಕಾರಣ ಬ್ಯಾಟ್ಸ್‌ಮನ್‌ಗಳಿಗೆ ನೆರವು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ 170 ರಿಂದ 180 ರನ್‌ಗಳನ್ನು ಕಲೆ ಹಾಕುವ ಸಾಧ್ಯತೆ ಇದೆ. ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳು ಪರಿಣಾಮಕಾರಿಯಾಗುವ ಸಾಧ್ಯತೆ ಇದೆ. ಸಂಜೆಯ ನಂತರ ಇಬ್ಬರಿ ಬೀಳುವ ಸಾಧ್ಯತೆ ಇದ್ದು, ಇದು ಚೇಸಿಂಗ್ ತಂಡಗಳಿಗೆ ನೆರವು ನೀಡಲಿದೆ. ಆರಂಭದಲ್ಲಿ ವೇಗದ ಬೌಲರ್‌ಗಳು ಸ್ವಿಂಗ್ ಪಡೆಯಲಿದ್ದಾರೆ. ಒಟ್ಟಾರೆ ಇಲ್ಲಿನ ಪಿಚ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡಕ್ಕೂ ಅತ್ಯುತ್ತಮ ಸಂಯೋಜನೆಯನ್ನು ತಂದುಕೊಡಲಿದೆ.
Asia Cup 2025: ನಾಳೆಯಿಂದ ಏಷ್ಯಾಕಪ್ ಕ್ರಿಕೆಟ್; ಪ್ರಶಸ್ತಿಗಾಗಿ 8 ತಂಡಗಳ ಕಾದಾಟ
ಯುಎಇ ವಿರುದ್ಧದ ಏಷ್ಯಾ ಕಪ್ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ xi
ಶುಭಮನ್ ಗಿಲ್(ಉಪ ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿ.ಕೀ), ಜಸ್‌ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್
ಭಾರತ ವಿರುದ್ಧದ ಏಷ್ಯಾ ಕಪ್ ಪಂದ್ಯಕ್ಕೆ ಯುಎಇ ಸಂಭಾವ್ಯ ಪ್ಲೇಯಿಂಗ್ XI
ಮುಹಮ್ಮದ್ ಝೋಹೈದ್, ಮುಹಮ್ಮದ್ ವಸೀಮ್ (ನಾಯಕ), ಆಸೀಫ್ ಖಾನ್, ಆಲಿಸನ್ ಶರಿಫು, ರಾಹುಲ್ ಶರ್ಮಾ, ಎಥಾನ್ ಡಿಸೌಝಾ, ಧ್ರುವ್ ಪರಶರ್, ಸಂಘಿರ್ ಖಾನ್, ಹೈದರ್ ಅಲಿ, ಜುನೈದ್ ಸಿದ್ದಕಿ, ಮುಹಮ್ಮದ್ ಝವದುಲ್ಹಾ
Asia Cup 2025: ಏಷ್ಯಾ ಕಪ್‌ನಲ್ಲಿ ಭಾರತ ಅತ್ಯಂತ ಯಶಸ್ವಿ ತಂಡ; ಅತ್ಯಧಿಕ 8 ಸಲ ಚಾಂಪಿಯನ್ ಆದ ಹೆಗ್ಗಳಿಕೆ
2025ರ ಏಷ್ಯಾ ಕಪ್ ಗುಂಪುಗಳು
ಗುಪು ʻಎʼ: ಭಾರತ, ಪಾಕಿಸ್ತಾನ, ಯುನೈಟೆಡ್ ಅರಬ್ ಎಮಿರೇಟ್ಸ್, ಒಮಾನ್
ಗುಂಪು ʻಬಿʼ: ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಹಾಂಕಾಂಗ್
ಪಂದ್ಯದ ವಿವರ
ಭಾರತ vs ಯುಎಇ
2025ರ ಏಷ್ಯಾ ಕಪ್
ಎ ಗುಂಪಿನ ಪಂದ್ಯ
ದಿನಾಂಕ: ಸೆಪ್ಟಂಬರ್ 10
ಸಮಯ: ರಾತ್ರಿ 08: 00
ಸ್ಥಳ: ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣ, ದುಬೈ