ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ʻಪಂಜಾಬ್‌ ಕಿಂಗ್ಸ್‌ನಲ್ಲಿ ಸಿಕ್ಕಿದ್ದ ಬೆಂಬಲ ಕೆಕೆಆರ್‌ನಲ್ಲಿ ಸಿಕ್ಕಿರಲಿಲ್ಲʼ-ಶ್ರೇಯಸ್‌ ಅಯ್ಯರ್!

ಕಳೆದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಪಂಜಾಬ್‌ ಕಿಂಗ್ಸ್‌ ನಾಯಕತ್ವ ವಹಿಸಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಶ್ರೇಯಸ್‌ ಅಯ್ಯರ್‌, ಹಿಂದಿನ ಫ್ರಾಂಚೈಸಿ ಕೋಲ್ಕತಾ ನೈಟ್‌ ರೈಡರ್ಸ್‌ ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳ ನಡುವಣ ವ್ಯತ್ಯಾಸವನ್ನು ಹಂಚಿಕೊಂಡಿದ್ದಾರೆ.

ಪಂಜಾಬ್‌- ಕೋಲ್ಕತಾ ಫ್ರಾಂಚೈಸಿ ನಡುವಿನ ವ್ಯತ್ಯಾಸ ತಿಳಿಸಿದ ಅಯ್ಯರ್‌!

ಪಂಜಾಬ್‌ vs ಕೋಲ್ಕತಾ ಫ್ರಾಂಚೈಸಿ ನಡುವಣ ವ್ಯತ್ಯಾಸವನ್ನು ತಿಳಿಸಿದ ಶ್ರೇಯಸ್‌ ಅಯ್ಯರ್‌. -

Profile Ramesh Kote Sep 9, 2025 8:46 PM

ದುಬೈ: ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್ (Shreyas Iyer) ಪ್ರಸ್ತುತ ವೈಟ್ಟ್‌ಬಾಲ್‌ ಕ್ರಿಕೆಟ್‌ನ ಸ್ಟಾರ್‌ ಆಟಗಾರರಾಗಿದ್ದಾರೆ. ಕಳೆದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ಕೊಲ್ಕತ್ತಾ ನೈಟ್‌ ರೈಡರ್ಸ್‌ ತಂಡವನ್ನು ಬಿಟ್ಟು ಪಂಜಾಬ್‌ ಕಿಂಗ್ಸ್‌ ಪರ ಆಡಿದ್ದರು ಮತ್ತು ಪಂಜಾಬ್‌ ಕಿಂಗ್ಸ್‌ (Punjab Kings) ರನ್ನರ್‌ ಅಪ್‌ ಆಗಲು ಪ್ರಮುಖ ಪಾತ್ರವನ್ನು ವಹಿಸಿದ್ದರು. 2025ರ ಮಾರ್ಚ್‌ನಲ್ಲಿ ಭಾರತ ತಂಡದ ಪರ ಅತ್ಯುತ್ತಮ ಪ್ರದರ್ಶನ ತೋರಿ ಟೀಮ್‌ ಇಂಡಿಯಾ ಚಾಂಪಿಯನ್ಸ್‌ ಟ್ರೋಫಿ ಗೆಲ್ಲಲು ನೆರವು ನೀಡಿದ ಬಳಿಕ ಶ್ರೇಯಸ್‌ ಅಯ್ಯರ್‌ ಎಲ್ಲರ ಗಮನ ಸೆಳೆದಿದ್ದರು. 2022ರ ಐಪಿಎಲ್ ಮೆಗಾ ಹರಾಜಿನಲ್ಲಿ ಕೆಕೆಆರ್‌ ತಂಡ ಸೇರಿದ್ದ ಅಯ್ಯರ್‌ 2024ರಲ್ಲಿ ಕೆಕೆಆರ್‌ ತಂಡ ಮೂರನೇ ಬಾರಿ ಐಪಿಎಲ್‌ ಟ್ರೋಫಿ ಎತ್ತಿ ಹಿಡಿಯಲು ಮುಖ್ಯ ಪಾತ್ರ ವಹಿಸಿದ್ದರು.

ನಂತರ 2025ರ ಐಪಿಎಲ್‌ ಸೀಸನ್‌ನ ಮೆಗಾ ಹರಾಜಿನಲ್ಲಿ 26.75ಕೋಟಿ ರೂ.ಗೆ ಪಂಜಾಬ್‌ ಪಾಲಾಗಿದ್ದ ಅಯ್ಯರ್‌, ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ತೋರಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಆದರೆ, ಇದೀಗ ಶ್ರೇಯಸ್‌ ಅಯ್ಯರ್‌ ಎರಡು ತಂಡಗಳ ವ್ಯತ್ಯಾಸದ ಬಗ್ಗೆ ಮಾತನಾಡಿದ್ದಾರೆ. ಪಂಜಾಬ್‌ ಕಿಂಗ್ಸ್‌ ಫ್ರಾಂಚೈಸಿ ತಂಡವನ್ನು ಮುನ್ನಡೆಸಲು ಅಗತ್ಯವಾದ ಮುಕ್ತ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ತಂಡಕ್ಕೆ ಅಗತ್ಯವಿರುವ ಎಲ್ಲಾ ಬೇಡಿಕೆಗಳನ್ನು ಫ್ರಾಂಚೈಸಿ ಉತ್ಸುಕವಾಗಿ ನೆರವೇರಿಸುತ್ತಿದೆ ಎಂದಿದ್ದಾರೆ.

ಏಷ್ಯಾ ಕಪ್‌ ಭಾರತ ತಂಡದಲ್ಲಿ ಶ್ರೇಯಸ್‌ ಅಯ್ಯರ್‌ಗೆ ಸ್ಥಾನ ನೀಡದೆ ಇರಲು ಕಾರಣ ತಿಳಿಸಿದ ಮಾಂಟಿ ಪನೇಸರ್‌!

ಜಿಕ್ಯೂ ಜೊತೆ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಶ್ರೇಯಸ್‌ ಅಯ್ಯರ್‌, " ನಾನು ಸಂಭಾಷಣೆಯ ಭಾಗವಾಗಿದ್ದೆ, ಆದರೆ ಸಂಪೂರ್ಣವಾಗಿ ಮಿಶ್ರಣದಲ್ಲಿ ಇರಲಿಲ್ಲ. ನಾನು ಈಗಿರುವ ಸ್ಥಾನಕ್ಕೆ ಬರಲು ನಾನು ನನ್ನ ರೀತಿಯಲ್ಲಿ ಕೆಲಸ ಮಾಡಬೇಕಾಗಿತ್ತು," ಎಂದು ಅಯ್ಯರ್ ತಿಳಿಸಿದ್ದಾರೆ. ಇದರ ಜೊತೆಗೆ ಅವರ ಹಿಂದಿನ ಮತ್ತು ಪ್ರಸ್ತುತ ತಂಡದ ನಡುವಣ ವ್ಯತ್ಯಾಸವನ್ನು ಬಹಿರಂಗಪಡಿಸಿದ್ದಾರೆ.

"ಭಾರತ ಚಾಂಪಿಯನ್ಸ್‌ ಟ್ರೋಫಿ ಗೆಲ್ಲಲು ಸಹಾಯ ಮಾಡಿದ್ದರಿಂದ ನಾನು ತುಂಬಾ ಉತ್ಸುಕನಾಗಿದ್ದೆ. ಆದ್ದರಿಂದ ಪಂಜಾಬ್ ಕಿಂಗ್ಸ್‌ನ ಎಲ್ಲಾ ಪಾಲುದಾರರು ನನ್ನ ಮಾತನ್ನು ಕೇಳಲು ಮತ್ತು ಅರ್ಥಪೂರ್ಣವಾಗಿ ಕೊಡುಗೆ ನೀಡಲು ಉತ್ಸುಕರಾಗಿದ್ದರು. ಇದು ಮೈದಾನದಲ್ಲಿ ಮತ್ತು ಹೊರಗೆ ನಿರ್ಣಾಯಕವಾಗಿರಲು ನನಗೆ ಅವಕಾಶ ಮಾಡಿಕೊಟ್ಟಿತ್ತು," ಎಂದು ಅವರು ವಿವರಿಸಿದ್ದಾರೆ.

2025ರಲ್ಲಿ ಶ್ರೇಯಸ್‌ ಅಯ್ಯರ್ ಅಂತಿಮವಾಗಿ ರನ್ನರ್-ಅಪ್ ಆದ ಪಂಜಾಬ್ ಕಿಂಗ್ಸ್ ತಂಡಕ್ಕೆ ತಮ್ಮ ನಾಯಕತ್ವದ ಮೂಲಕ ಅಮೂಲ್ಯವಾದ ಕೊಡುಗೆ ನೀಡಿದರು. 2014ರಿಂದ ಪ್ಲೇಆಫ್ ಸ್ಥಾನವನ್ನು ಪಡೆಯಲು ವಿಫಲವಾದ ಫ್ರಾಂಚೈಸಿಗೆ, ಅವರು ಮುಂಚೂಣಿಯಲ್ಲಿ ನಿಂತು ಮುನ್ನಡೆಸಿ ತಂಡವನ್ನು ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಕೊಂಡೊಯ್ದರು. ವಿಶೇಷವಾಗಿ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಅಯ್ಯರ್‌ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದರು. ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಕೇವಲ 41 ಎಸೆತಗಳಲ್ಲಿ 87 ರನ್ ಗಳಿಸಿ ಅಜೇಯರಾಗಿ ಉಳಿದು ಪಂದ್ಯ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Asia Cup 2025: ಶ್ರೇಯಸ್‌ ಅಯ್ಯರ್‌ಗೆ ಸ್ಥಾನ ನೀಡದ ಬಗ್ಗೆ ಸಂಜಯ್‌ ಮಾಂಜ್ರೇಕರ್‌ ಪ್ರತಿಕ್ರಿಯೆ!

ಮುಂದುವರೆದು ಮಾತನಾಡಿದ ಅವರು, "ನಾಯಕ ಮತ್ತು ಆಟಗಾರನಾಗಿ ನಾನು ಉತ್ತಮ ಪ್ರದರ್ಶನ ನೀಡುತ್ತೇನೆ. ನನಗೆ ಗೌರವ ಸಿಕ್ಕರೆ, ಏನು ಬೇಕಾದರೂ ಸಾಧಿಸಬಹುದು. ಪಂಜಾಬ್‌ನಲ್ಲಿ ನಡೆದದ್ದು ಇದೇ. ತರಬೇತುದಾರರು, ನಿರ್ವಹಣೆ ಅಥವಾ ಆಟಗಾರರು ಇರಲಿ, ಅವರು ನನಗೆ ಬೇಕಾದ ಎಲ್ಲಾ ಬೆಂಬಲವನ್ನು ನೀಡಿದರು" ಎಂದು ಅವರು ಹೇಳಿದ್ದಾರೆ.

ನಾಯಕತ್ವದ ಜೊತೆಗೆ ಉತ್ತಮ ಪ್ರದರ್ಶನ ನೀಡಿದ ಅವರು, ತಮ್ಮ ಹಿಂದಿನ ಫ್ರಾಂಚೈಸಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಕೇವಲ 111 ರನ್‌ಗಳನ್ನು ಗಳಿಸಿ ಅಸಾಧಾರಣ ಪ್ರದರ್ಶನ ನೀಡಿದರು. ಅಯ್ಯರ್ ಫೈನಲ್‌ ಪಂದ್ಯದಲ್ಲಿ ತಂಡವನ್ನು ಗೆಲ್ಲಿಸುವಲ್ಲಿ ವಿಫಲರಾದರೂ, ಫ್ರಾಂಚೈಸಿ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ 2026ರ ಐಪಿಎಲ್‌ ಸೀಸನ್‌ನಲ್ಲಿ ಅವರು ನಾಯಕನಾಗಿ ಪಂಜಾಬ್‌ ತಂಡವನ್ನು ಚಾಂಪಿಯನನ್‌ಷಿಪ್‌ಗೆ ಕೊಂಡೊಯ್ಯಲು ಈಗಲೇ ತಂತ್ರಗಾರಿಕೆ ಮಾಡುತ್ತಿದ್ದಾರೆ.