ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಾಮನ್‌ವೆಲ್ತ್‌ ಸಮಾರೋಪ ಸಮಾರಂಭದಲ್ಲಿ ಜೈಸ್ಮಿನ್ ಲಂಬೋರಿಯಾ ಭಾರತದ ಧ್ವಜಧಾರಿ

Commonwealth Games 2026: ಭಾರತ ಈ ಬಾರಿ 39 ಪದಕಗಳನ್ನು ಜಯಿಸಿತು. 13 ಚಿನ್ನ, 17 ಬೆಳ್ಳಿ ಮತ್ತು ಒಂಬತ್ತು ಕಂಚು ಗೆದ್ದಿತು. ಬಾಕ್ಸಿಂಗ್ ತಂಡವು ಗರಿಷ್ಠ ಏಳು ಚಿನ್ನ ಸೇರಿದಂತೆ 10 ಪದಕಗಳನ್ನು ಗೆದ್ದು ಪದಕಗಳಲ್ಲಿ ಸಿಂಹಪಾಲು ಗಳಿಸಿತು. ಒಟ್ಟಾರೆ ಪದಕ ಪಟ್ಟಿಯಲ್ಲಿ ಭಾರತ 4ನೇ ಸ್ಥಾನ ಪಡೆಯಿತು. 163 ಪದಕ ಗೆದ್ದ ಆಸ್ಟ್ರೇಲಿಯಾ ಅಗ್ರಸ್ಥಾನ ಪಡೆಯಿತು.

ಕಾಮನ್‌ವೆಲ್ತ್‌ ಸಮಾರೋಪ ಸಮಾರಂಭ; ಜೈಸ್ಮಿನ್ ಧ್ವಜಧಾರಿ

Jaismine Lamboria -

Abhilash BC
Abhilash BC Aug 2, 2026 8:49 PM

ನವದೆಹಲಿ, ಆ. 2: ಮಹಿಳೆಯರ 57 ಕೆಜಿ ತೂಕದ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಬಾಕ್ಸರ್ ಜೈಸ್ಮಿನ್ ಲಂಬೋರಿಯಾ ಅವರನ್ನು ಕಾಮನ್‌ವೆಲ್ತ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಿ ಆಯ್ಕೆ ಮಾಡಲಾಗಿದೆ. ಸೋಮವಾರ ನಸುಕಿನ 1:30 ಕ್ಕೆ ಸಮಾರೋಪ ಸಮಾರಂಭ ಪ್ರಾರಂಭವಾಗಲಿದ್ದು, 2030 ರಲ್ಲಿ ಮುಂದಿನ ಆವೃತ್ತಿಗೆ ಅಹಮದಾಬಾದ್‌ಗೆ ಬ್ಯಾಟನ್ ಹಸ್ತಾಂತರಿಸಲಾಗುವುದು.

ಭಾರತ ಈ ಬಾರಿ 39 ಪದಕಗಳನ್ನು ಜಯಿಸಿತು. 13 ಚಿನ್ನ, 17 ಬೆಳ್ಳಿ ಮತ್ತು ಒಂಬತ್ತು ಕಂಚು ಗೆದ್ದಿತು. ಬಾಕ್ಸಿಂಗ್ ತಂಡವು ಗರಿಷ್ಠ ಏಳು ಚಿನ್ನ ಸೇರಿದಂತೆ 10 ಪದಕಗಳನ್ನು ಗೆದ್ದು ಪದಕಗಳಲ್ಲಿ ಸಿಂಹಪಾಲು ಗಳಿಸಿತು. ಒಟ್ಟಾರೆ ಪದಕ ಪಟ್ಟಿಯಲ್ಲಿ ಭಾರತ 4ನೇ ಸ್ಥಾನ ಪಡೆಯಿತು. 163 ಪದಕ ಗೆದ್ದ ಆಸ್ಟ್ರೇಲಿಯಾ ಅಗ್ರಸ್ಥಾನ ಪಡೆಯಿತು.

ಭಾನುವಾರ ನಸುಕಿನ ಜಾವ ನಡೆದ ಗುಲ್ವೀರ್ ಸಿಂಗ್ 5000 ಮೀಟರ್ ಓಟದಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದರು. ಉಳಿದಂತೆ ಯಾವುದೇ ಪದಕ ಜಯಿಸಲಿಲ್ಲ. ಜುಲೈ 28 ರಂದು 10,000 ಮೀಟರ್ ಓಟದಲ್ಲಿ ಬೆಳ್ಳಿ ಗೆದ್ದಿದ್ದ ಹಾಲಿ ಏಷ್ಯನ್ ಚಾಂಪಿಯನ್ ಗುಲ್ವೀರ್, ಅಥ್ಲೆಟಿಕ್ಸ್ ಸ್ಪರ್ಧೆಯ ಕೊನೆಯ ದಿನದಂದು 5000 ಮೀಟರ್ ಓಟದಲ್ಲಿ 13 ನಿಮಿಷ 24.95 ಸೆಕೆಂಡುಗಳಲ್ಲಿ ಮೂರನೇ ಸ್ಥಾನ(ಕಂಚಿನ ಪದಕ) ಪಡೆದು ಐತಿಹಾಸಿಕ ಅವಳಿ ಪದಕ ಗೆದ್ದ ಸಾಧನೆ ಮಾಡಿದರು. ಕೀನ್ಯಾದ ಕಾರ್ನೆಲಿಯಸ್ ಕೆಂಬೊಯ್‌ಗಿಂತ ಕೇವಲ 0.04 ಅಂತರದಲ್ಲಿ ಕಂಚು ಗೆದ್ದರು.

ಶ್ರೀಲಂಕಾ ಟೆಸ್ಟ್‌ನಿಂದ ಬುಮ್ರಾ ಔಟ್: ಬದಲಿ ಸ್ಥಾನಕ್ಕೆ 3 ವೇಗಿಗಳ ಪೈಪೋಟಿ

ಕೀನ್ಯಾದ ಮ್ಯಾಥ್ಯೂ ಕಿಪ್ಚುಂಬಾ ಕಿಪ್ಸಾಂಗ್ 13:23.61 ಸಮಯದೊಂದಿಗೆ ಚಿನ್ನ ಗೆದ್ದರು, ಆದರೆ ಈ ಹಿಂದೆ 10,000 ಮೀಟರ್ ಓಟದಲ್ಲಿ ಚಿನ್ನ ಗೆದ್ದಿದ್ದ ಆಸ್ಟ್ರೇಲಿಯಾದ ಕೈ ರಾಬಿನ್ಸನ್ 13:24.70 ಸಮಯದೊಂದಿಗೆ ಬೆಳ್ಳಿ ಗೆದ್ದರು.

ಬೆಳ್ಳಿ ಪದಕ ಗೆದ್ದ ಬಾಕ್ಸಿಂಗ್‌ ತಾರೆ, ಲವ್ಲಿನಾ ಬೊರ್ಗೊಹೈನ್, ಬಾಕ್ಸಿಂಗ್ ತಂಡಕ್ಕೆ ಆಯೋಜಿಸಲಾಗಿದ್ದ ಸಂಭ್ರಮಾಚರಣೆಯ ಭೋಜನಕೂಟದಲ್ಲಿ ಜನಪ್ರಿಯ ಭಾರತೀಯ ರೆಸ್ಟೋರೆಂಟ್ ಭಾರತದ ತಪ್ಪಾದ ನಕ್ಷೆಯನ್ನು ಪ್ರದರ್ಶಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಇದೀಗ ರೆಸ್ಟೋರೆಂಟ್ ಮಾಲೀಕರು ಲವ್ಲಿನಾಗೆ ಕ್ಷಮೆಯಾಚಿಸಿದೆ. ಹೀಗಾಗಿ ಈ ವಿವಾದ ಸುಖಾಂತ್ಯ ಕಂಡಿದೆ.

ರೆಸ್ಟೋರೆಂಟ್‌ನ ಕರವಸ್ತ್ರದ (ಹ್ಯಾಂಡ್​ ಕರ್ಚೀಫ್​) ಮೇಲೆ ಮುದ್ರಿಸಲಾಗಿದ್ದ ಭಾರತದ ನಕ್ಷೆಯಲ್ಲಿ ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ, ಉಳಿದೆಲ್ಲ ರಾಜ್ಯಗಳ ಭೂಪಟ ಇರುವುದು ಬೊರ್ಗೊಹೈನ್​ ಅವರ ಗಮನಕ್ಕೆ ಬಂದಿತ್ತು. ಈ ವಿಷಯಕ್ಕೆ ಅವರು ಮಾಲೀಕರ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.