Abhinav Tejrana: ದ್ವಿಶತಕ ಬಾರಿಸಿ ಅಪರೂಪದ ದಾಖಲೆ ಬರೆದ ಗೋವಾ ಬ್ಯಾಟ್ಸ್‌ಮನ್!
ಚಂಡೀಗಢ ವಿರುದ್ಧದ 2025-26ರ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಗೋವಾ ತಂಡದ ಬ್ಯಾಟ್ಸ್‌ಮನ್ ಅಭಿನವ್ ತೃಜ್ರಾಣ ಅವರು ದ್ವಿಶತಕವನ್ನು ಬಾರಿಸಿದ್ದಾರೆ. ತಮ್ಮ ರಣಜಿ ಟ್ರೋಫಿ ಪದಾರ್ಪಣೆ ಪಂದ್ಯದಲ್ಲಿಯೇ ದ್ವಿಶತಕ ಗಳಿಸಿದ ಗೋವಾದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಬರೆದಿದ್ದಾರೆ.

ರಣಜಿ ಟ್ರೋಫಿಯಲ್ಲಿ ತನ್ನ ಚೊಚ್ಚಲ ಪಂದ್ಯದಲ್ಲಿ ಅಭಿನವ್ ತೇಜ್ರಾಣ ಶತಕ. -

ನವದೆಹಲಿ: ರಣಜಿ ಟ್ರೋಫಿ (Ranji Trophy 2025-26) ಪದಾರ್ಪಣೆ ಪಂದ್ಯದಲ್ಲಿಯೇ ಗೋವಾ ತಂಡದ ಬ್ಯಾಟ್ಸ್‌ಮನ್ ಅಭಿನವ್ ತೇಜ್ರಾಣ (Abhinav Tejrana) ಅವರು ದ್ವಿಶತಕ ಬಾರಿಸಿ ನೂತನ ಮೈಲುಗಲ್ಲು ತಲುಪಿದ್ದಾರೆ. ಆ ಮೂಲಕ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಸುನೀಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್ ಅಥವಾ ವಿರಾಟ್ ಕೊಹ್ಲಿಯಿಂದ (Goa) ಸಾಧ್ಯವಾಗದ ದಾಖಲೆಯನ್ನು ಗೋವಾ ಬ್ಯಾಟರ್ ಬರೆದಿದ್ದಾರೆ. ಗೋವಾ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಚಂಡೀಗಢ ವಿರುದ್ದ ತಮ್ಮ ಮೊದಲನೇ ಪಂದ್ಯದಲ್ಲಿ ಅಭಿನವ್ ತೇಜ್ರಾಣ ಈ ಸಾಧನೆಗೈದಿದ್ದಾರೆ.
ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಅಭಿನವ್, ಪಂದ್ಯದ ಮೊದಲನೇ ದಿನವೇ ಮೂರಂಕಿ ವೈಯಕ್ತಿಕ ಮೊತ್ತವನ್ನು ಕಲೆ ಹಾಕಿದರು. ಪ್ರಥಮ ದರ್ಜೆ ಕ್ರಿಕೆಟ್‌ನ ಪದಾರ್ಪಣೆ ಪಂದ್ಯದಲ್ಲಿಯೇ ಶತಕ ಬಾರಿಸಿದ ಗೋವಾದ ಮೂರನೇ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಕೂಡ ಅಭಿನವ್ ತೃಜ್ರಾಣ ಬರೆದಿದ್ದಾರೆ. ಆ ಮೂಲಕ ಅರ್ಜುನ್ ತೆಂಡೂಲ್ಕರ್ ಒಳಗೊಂಡ ಎಲೈಟ್ ಲಿಸ್ಟ್‌ಗೆ ಸೇರಿದ್ದಾರೆ. ಅರ್ಜುನ್ ತೆಂಡೂಲ್ಕರ್ ಅವರು 2022ರಲ್ಲಿ ತಮ್ಮ ಪದಾರ್ಪಣೆ ಪಂದ್ಯದಲ್ಲಿಯೇ ಶತಕವನ್ನು ಸಿಡಿಸಿದ್ದರು. ರಾಜಸ್ಥಾನ್ ರಾಯಲ್ಸ್ ವಿರುದ್ಧದ ತಮ್ಮ ಪದಾರ್ಪಣೆ ಪಂದ್ಯದಲ್ಲಿ ಅವರು 120 ರನ್‌ಗಳನ್ನು ಕಲೆ ಹಾಕಿದ್ದರು.
ತಮಿಳುನಾಡು ವಿರುದ್ಧ ಶತಕ ಬಾರಿಸಿ ಬಿಸಿಸಿಐಗೆ ಸಂದೇಶ ರವಾನಿಸಿದ ಇಶಾನ್ ಕಿಶನ್!
ಮೊದಲನೇ ದಿನದಾಟದ ಅಂತ್ಯಕ್ಕೆ ಅಜೇಯ 130 ರನ್‌ಗಳನ್ನು ಕಲೆ ಹಾಕಿದ್ದ ಅಭಿನವ್, ಎರಡನೇ ದಿನ 70 ರನ್‌ಗಳನ್ನು ಹೆಚ್ಚುವರಿಯಾಗಿ ಸೇರಿಸಿದರು. ಅವರು ತಮ್ಮ ಚೊಚ್ಚಲ ದ್ವಿಶತಕವನ್ನು ಪೂರ್ಣಗೊಳಿಸಲು 301 ಎಸೆತಗಳನ್ನು ತೆಗೆದುಕೊಂಡಿದ್ದಾರೆ. ರಣಜಿ ಟ್ರೋಫಿ ಪದಾರ್ಪಣೆ ಪಂದ್ಯದಲ್ಲಿ ಚೊಚ್ಚಲ ದ್ವಿಶತಕ ಬಾರಿಸಿದ ಗೋವಾದ ಮೊದಲ ಬ್ಯಾಟ್ಸ್‌ಮಮ್ ಎನಿಸಿಕೊಂಡಿದ್ದಾರೆ. ಅಮೋಲ್ ಮುಝುಂದರ್ ಹಾಗೂ ಗುಂಡಪ್ಪ ವಿಶ್ವನಾಥ್ ಬಳಿಕ ಈ ಸಾಧನೆ ಮಾಡಿದ ಭಾರತದ 13ನೇ ಬ್ಯಾಟ್ಸ್‌ಮನ್ ಆಗಿದ್ದಾರೆ.
ಅಸ್ಸಾಂ ವಿರುದ್ಧದ ಪಂದ್ಯದಲ್ಲಿ ಸೌರಾಷ್ಟ್ರ ಪರ 246 ಎಸೆತಗಳಲ್ಲಿ 227 ರನ್ ಗಳಿಸುವ ಮೂಲಕ ಜೇ ಗೋಹಿಲ್ ಈ ಮೈಲುಗಲ್ಲು ತಲುಪಿದ ಕೊನೆಯ ಬ್ಯಾಟ್ಸ್‌ಮನ್ ಆಗಿದ್ದರು. ಈ ಪಂದ್ಯದಲ್ಲಿ ಅವರು ಭಾರತದ ಹಿರಿಯ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಅವರ ಸ್ಥಾನದಲ್ಲಿ ಆಡಿದ್ದರು. ಪೂಜಾರ ರಾಷ್ಟ್ರೀಯ ತಂಡದ ಕರ್ತವ್ಯದ ಕಾರಣದಿಂದಾಗಿ ಪಂದ್ಯದಿಂದ ತಪ್ಪಿಸಿಕೊಂಡಿದ್ದರು.
KAR vs SAU: ಕರ್ನಾಟಕ ತಂಡಕ್ಕೆ ಕರುಣ್, ಪಡಿಕ್ಕಲ್ ಅರ್ಧಶತಕಗಳ ಬಲ!
ಅಂಶುಮಾನ್ ಪಾಂಡೆ, ಮನ್‌ಪ್ರೀತ್ ಜುಜೇಜಾ, ಜಿವಂಜೋತ್ ಸಿಂಗ್, ಅಭಿಷೇಕ್ ಗುಪ್ತಾ, ಅಜಯ್ ರೊಹೇರಾ, ಮಯಾಂಕ್ ರಾಘವ್, ಅರ್ಸಾಲ್ ಖಾನ್, ಸಕಿಬುಲ್ ಗನಿ, ಪವನ್ ಸಿಂಗ್ ಹಾಗೂ ಸವೇದ್ ಪರ್ಕಾರ್ ಅವರು ಈ ಸಾಧನೆ ಮಾಡಿದ ಇತರೆ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ.
ತೇಜ್ರಾಣ 320 ಎಸೆತಗಳಲ್ಲಿ 21 ಬೌಂಡರಿ ಮತ್ತು ನಾಲ್ಕು ಬೌಂಡರಿಗಳ ನೆರವಿನಿಂದ 205 ರನ್ ಗಳಿಸಿದರು. ಲಲಿತ್ ಯಾದವ್ ಜೊತೆಗಿನ ನಾಲ್ಕನೇ ವಿಕೆಟ್ ಪಾಲುದಾರಿಕೆಯಲ್ಲಿ 309 ರನ್ ಗಳಿಸಿದ ತೇಜ್ರಾಣಗೆ, ಈ ಹಿಂದೆ ರಾಹುಲ್ ಕೇಣಿ ಮತ್ತು ಅಜಯ್ ರಾತ್ರಾ ಹೆಸರಿನಲ್ಲಿದ್ದ ಗೋವಾ ತಂಡದ ದಾಖಲೆಯನ್ನು ಮೀರಲು ಕೇವಲ ಒಂದು ರನ್ ಅಗತ್ಯವಿತ್ತು. ಅಭಿನವ್ ತೇಜ್ರಾಣ ಅವರ ಜೊತೆಗೆ ಡೆಲ್ಲಿ ತಂಡದ ಆಯುಷ್ ದೊಸೇಜಾ ಅವರು ಕೂಡ ಹೈದರಾಬಾದ್ ವಿರುದ್ದದ ಪಂದ್ಯದಲ್ಲಿ ದ್ವಿಶತಕವನ್ನು ಬಾರಿಸಿದ್ದಾರೆ.